ಮೆಸ್ಕಾಂಗೆ ದಾಕ್ಷಿಣ್ಯವೇ ಮುಳುವಾಯಿತೇ…?

ಬೆಳ್ತಂಗಡಿ: ಸಾಕಷ್ಟು ಬಾರಿ ಎಚ್ಚರಿಸಿದರೂ ಕೆಲ ಮಂದಿ ಇಂದಿಗೂ ವಿದ್ಯುತ್ ಕಂಬಗಳಿಗೆ ಫ್ಲೆಕ್ಸ್ ಅಳವಡಿಸುವುದನ್ನು ಬಿಟ್ಟಿಲ್ಲ. ಇದಕ್ಕೆ ಮೆಸ್ಕಾಂ ಅಧಿಕಾರಿಗಳು ತೋರುವ ಅತಿಯಾದ ಮಾನವೀಯತೆ ಹಾಗೂ ದಾಕ್ಷಿಣ್ಯವೇ ಕಾರಣ ಎಂಬುವುದು ಜನಸಾಮಾನ್ಯರ ಅಭಿಪ್ರಾಯ. ಕಾನೂನಿಗೇ ಸವಾಲಾಗಿ ಈ ರೀತಿಯಾಗಿ ವಿದ್ಯುತ್ ಕಂಬಗಳಲ್ಲಿ ಫ್ಲೆಕ್ಸ್ ಅಳವಡಿಸುವ ಸಮಾಜಘಾತುಕರಿಗೆ ಸರಕಾರಿ ಸೊತ್ತು ದುರ್ಬಳಕೆ ಕಾಯ್ದೆದಡಿ ಪ್ರಕರಣ ದಾಖಲಿಸಿ ದಂಡ ವಸೂಲಿಗೆ ಮೆಸ್ಕಾಂ ಅಧಿಕಾರಿಗಳು ಮುಂದಾದರೆ ಮಾತ್ರ ಇಂತಹ ಘಾತಕ ಶಕ್ತಿಗಳಿಗೆ ಮೂಗುದಾರ ಹಾಕಲು ಸಾಧ್ಯ. ಇಂದಿನ ರಾಜಕಾರಣಿಗಳ ಒತ್ತಡದ ನಡುವೆ […]

ಮಂಗದ ಮೃತದೇಹ ಪತ್ತೆಮಾಹಿತಿ ನೀಡಿದರೂ ಪಂ. ಅಧಿಕಾರಿಗಳ ನಿರ್ಲಕ್ಷ.

ಬೆಳ್ತಂಗಡಿ: ತಾಲೂಕಿನಲ್ಲಿ ಎಲ್ಲಿ ಮಂಗನ ಮೃತದೇಹ ಕಂಡರೂ ಜನಸಾಮಾನ್ಯರಲ್ಲಿ ಮಂಗನ ಕಾಯಿಲೆ ಸಾಂಕ್ರಾಮಿಕ ರೋಗದ ಬಗ್ಗೆ ಭಯ ಮೂಡುವುದು ಸಹಜ. ಅಳದಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಂಗಿಲಬೈಲು ಎಂಬಲ್ಲಿ ಡಿಸೆಂಬರ್ 23ರ ಸಂಜೆಯ ವೇಳೆಗೆ ಮಂಗನ ಮೃತದೇಹವನ್ನು ಕಂಡ ಸ್ಥಳೀಯರು, ಸಹಜ ಭಯದಿಂದ ವಿಚಾರವನ್ನು ಅಳದಂಗಡಿ ಗ್ರಾಮ ಪಂಚಾಯತ್‌ಗೆ ತಿಳಿಸಿದರೂ ಇಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಸಡ್ಡೆಯಿಂದ ಗ್ರಾಮಸ್ಥರು ತೀವ್ರ ಅಸಮಾಧಾನಗೊಂಡಿದ್ದಾರೆ.ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ ಇಲ್ಲಿ ಕಂಡುಬಂದ ಮಂಗನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಲಿಲ್ಲ. ಮಂಗನ […]

ವರದಿಯ ಫಲಶ್ರುತಿ – ತೆರವುಗೊಂಡ ಫ್ಲೆಕ್ಸ್ ಹಾಗೂ ಅಲಂಕಾರಿಕ ಲೈಟ್‌ಗಳ ವಯರ್

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳಿಗೆ ಕಾನೂನುಬಾಹಿರವಾಗಿ ಅಳವಡಿಸಲಾದ ಅಲಂಕಾರಿಕ ಲೈಟ್ ಹಾಗೂ ಹೈಮಾಸ್ಟ್ ದಾರಿದೀಪದ ಕಂಬಕ್ಕೆ ಅಳವಡಿಸಲಾದ ಫ್ಲೆಕ್ಸ್ ಬಗ್ಗೆ ‘ಇನ್ನೆಷ್ಟು ಬಲಿ ಬೇಕು ಮೆಸ್ಕಾಂಗೆ ರಾಮಾ…’ ಶಿರೋನಾಮೆಯಲ್ಲಿ ಇಂದು (ಡಿಸೆಂಬರ್ 21) ಬೆಳಿಗ್ಗೆ ವರದಿ ಮಾಡಲಾಗಿತ್ತು.ವರದಿ ನೋಡಿದ ತಕ್ಷಣ ಕಾರ್ಯಕ್ರಮ ಸಂಘಟಕರನ್ನು ಸಂಪರ್ಕಿಸಿದ ಬೆಳ್ತಂಗಡಿ ಮೆಸ್ಕಾಂ ಅಧಿಕಾರಿಗಳು ಹೈಮಾಸ್ಟ್ ಬೀದಿದೀಪದ ಕಂಬಕ್ಕೆ ಅಳವಡಿಸಲಾಗಿದ್ದ ಫ್ಲಕ್ಸ್‌ನ್ನು ಮತ್ತು ವಿದ್ಯುತ್ ಕಂಬಗಳಿಗೆ ಕಟ್ಟಲಾಗಿದ್ದ ಅಲಂಕಾರಿಕ ಬಲ್ಬ್‌ಗಳ ವಯರನ್ನು ಸಂಘಟಕರಿಂದಲೇ ತೆರವುಗೊಳಿಸಿದರು. ಮೆಸ್ಕಾಂ […]

ಇನ್ನೆಷ್ಟು ಬಲಿ ಬೇಕು ಮೆಸ್ಕಾಂಗೆ ರಾಮಾ….

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳಲ್ಲಿ ಅಲಂಕಾರಿಕ ವಿದ್ಯುತ್ ಸಣ್ಣ ಎಲ್‌ಇಡಿ ಬಲ್ಬುಗಳ ಮಾಲೆಗಳನ್ನು ಕಟ್ಟುವ ಮೂಲಕ ಕಾರ್ಮಿಕರು ಅಪಾಯವನ್ನು ಆಹ್ವಾನಿಸಿದ್ದಾರೆ. ಅಂತೆಯೇ ಬೆಳ್ತಂಗಡಿಯ ಶ್ರೀ ಅಯ್ಯಪ್ಪ ದೇವಸ್ಥಾನದ ಎದುರುಗಡೆ ಇರುವ ಹೈಮಾಸ್ಟ್ ಬೀದಿ ದೀಪದ ಕಂಬಕ್ಕೇ ಫ್ಲೆಕ್ಸ್ ಬಿಗಿಯುವ ಮೂಲಕ ಕಾನೂನು ವ್ಯವಸ್ಥೆಗೇ ಸವಾಲು ಹಾಕಿದ್ದಾರೆ. ಇದು ಡಿಸೆಂಬರ್ 21ರ ಬೆಳಗ್ಗೆ ಬೆಳ್ತಂಗಡಿಯಲ್ಲಿ‌ ಕಂಡುಬಂದ ದೃಶ್ಯ. ಇದನ್ನು ಕಂಡ ನನ್ನ ಮನಸ್ಸಲ್ಲಿ ಮೂಡಿದ್ದು ‘ಇನ್ನಷ್ಟು ಬಲಿ ಬೇಕು ಮೆಸ್ಕಾಂಗೆ ರಾಮಾ…’.ಫ್ಲೆಕ್ಸ್ […]

ನ. 27 ರಂದು ಗುರುವಾಯನಕೆರೆಯಲ್ಲಿ ಲಯನ್ಸ್ ಪ್ರಾಂತ್ಯ ಸಮ್ಮೇಳನ

ಬೆಳ್ತಂಗಡಿ: ಲಯನ್ಸ್ ಜಿಲ್ಲೆ 317 ಡಿ’ ಯ ಪ್ರಾಂತ್ಯ 5 ರ ಪ್ರಾಂತೀಯ ಸಮ್ಮೇಳನವು ನವೆಂಬರ್ 27ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ಜರಗಲಿದೆ. ಸಮ್ಮೇಳನದಲ್ಲಿ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್ ಸಂತೋಷ್ ಹೆಗ್ಡೆ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಪ್ರಾಂತ್ಯ ಸಮ್ಮೇಳನ‌ ಸಮಿತಿ ಅಧ್ಯಕ್ಷ ರಾಜು ಶೆಟ್ಟಿ ಬೆಂಗೆತ್ಯಾರು ಮತ್ತು ಪ್ರಾಂತ್ಯಾಧ್ಯಕ್ಷ ವಸಂತ ಶೆಟ್ಟಿ ಹೇಳಿದರು. ಲಯನ್ ವಸಂತ ಶೆಟ್ಟಿ ಅವರು ಈ ವರ್ಷದ ಪ್ರಾಂತೀಯ ಅಧ್ಯಕ್ಷರು. ಬೆಳ್ತಂಗಡಿ ಲಯನ್ಸ್ ಕ್ಲಬ್ ಗೌರವ ಸದಸ್ಯ […]

7 ನೇ ವೇತನ ಆಯೋಗ ರಚನೆಗೆ ಸರಕಾರದ ಅನುಮೋದನೆ – ಸಿಎಂಗೆ ಜಯಕೀರ್ತಿ ಜೈನ್ ಅಭಿನಂದನೆ

ಬೆಳ್ತಂಗಡಿ: ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ. ಸುಧಾಕರ ರಾವ್ ಅಧ್ಯಕ್ಷತೆಯಲ್ಲಿ 7ನೇ ವೇತನ ಆಯೋಗ ರಚನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಮೋದನೆ ನೀಡಿದ್ದಾರೆ.ನಿವೃತ್ತ ಐಎಎಸ್ ಅಧಿಕಾರಿ ಪಿ.ಬಿ. ರಾಮಮೂರ್ತಿ, ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ನಿವೃತ್ತ ಪ್ರಧಾನ ನಿರ್ದೇಶಕರಾದ ಶ್ರೀಕಾಂತ್ ಬಿ. ವನಹಳ್ಳಿ ಅವರನ್ನು ಆಯೋಗದ ಸದಸ್ಯರನ್ನಾಗಿ ನೇಮಕ ಮಾಡಲಾಗಿದ್ದು, ಮೂಲಸೌಕರ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.7ನೇ ವೇತನ ಆಯೋಗವು ಸರ್ಕಾರಿ ನೌಕರರು, […]

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ‘ಸಿರಿ’ ಸಂಸ್ಥೆಯ ಮಾರಾಟ ಮಳಿಗೆ ಉದ್ಘಾಟನೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದ ಬಳಿ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಶಾಶ್ವತ ಮಾರಾಟ ಮಳಿಗೆ ನವೆಂಬರ್ 19ರಂದು ಉದ್ಘಾಟನೆಗೊಂಡಿತು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭೆಯ ಸದಸ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತುಹೆಗ್ಗಡೆಯವರವ ಮೊಮ್ಮಗಳು ಮಾನ್ಯಾ ದೀಪ ಪ್ರಜ್ವಲಿಸಿ ಉದ್ಘಾಟನೆ ನೆರವೇರಿಸಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ| ಎಲ್.ಎಚ್. ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಆಡಳಿತ ನಿರ್ದೇಶಕ ಕೆ. ಎನ್. […]

ಯಕ್ಷಗಾನ ಬಯಲಾಟದ ಆಮಂತ್ರಣ ಬಿಡುಗಡೆ

ಬೆಳ್ತಂಗಡಿ: ಯಕ್ಷ ಬಳಗ ಬೆಳ್ತಂಗಡಿಯ ಆಶ್ರಯದಲ್ಲಿ ಯಕ್ಷ ಬಳಗ ಅಳದಂಗಡಿ ವಲಯ ಸಮಿತಿಯ ಸಹಕಾರದಲ್ಲಿ ಮೂಲಕ್ಷೇತ್ರ ಶ್ರೀ ಕ್ಷೇತ್ರ ಗೆಜ್ಜೆಗಿರಿ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯವರು ನವೆಂಬರ್ 28ರಂದು ಸಂಜೆ ಗಂಟೆ 6-00ರಿಂದ ಅಳದಂಗಡಿಯ ಬಸ್ ನಿಲ್ದಾಣದ ಬಳಿ ಆಡಿ ತೋರಿಸಲಿರುವ ‘ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ’ ಎಂಬ ಕಥಾನಕದ ಕಾಲಮಿತಿಯ ಯಕ್ಷಗಾನ ಬಯಲಾಟದ ಆಮಂತ್ರಣ ಪತ್ರಿಕೆಯನ್ನು ನವೆಂಬರ್ 17ರಂದು ಅಳದಂಗಡಿ ಅರಮನೆಯ ವಠಾರದಲ್ಲಿ ಡಾ| ಪದ್ಮಪ್ರಸಾದ್ ಅಜಿಲರು ಬಿಡುಗಡೆಗೊಳಿಸಿ, […]

ಶ್ರೀ ಪರಶುರಾಮ ದೇಗುಲದಲ್ಲಿ ದೀಪೋತ್ಸವ

ಟೊಬೆಳ್ತಂಗಡಿ: ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ವಾರ್ಷಿಕ ದೀಪೋತ್ಸವ ನವೆಂಬರ್ 13ರಂದು ಜರಗಿತು.ಶ್ರೀ ಪರಶುರಾಮ, ಸಿದ್ಧಿ ವಿನಾಯಕ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸೇವೆಗಳು, ಶ್ರೀ ದೇವರಿಗೆ ಅಡಕೆ, ತೆಂಗು ಹಾಗೂ ಇತರ ಕೃಷಿ ಉತ್ಪನ್ನಗಳ ಸಹಿತ ರಾಶಿ ಪೂಜೆ, ಮಹಾಪೂಜೆ, ಸಂಜೆ ದೇವರ ಉತ್ಸವ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ಜರಗಿತು.ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಪುಟಾಣಿ ಮಕ್ಕಳಿಂದ ಮನರಂಜನೆ, ಸುಧಾಕರ ದೇವಾಡಿಗ ಮತ್ತು ಬಳಗದವರಿಂದ ಸ್ಯಾಕ್ಸೋಫೋನ್ ವಾದನ, ಯಕ್ಷಗಾನ ಮೊದಲಾದ ಕಾರ್ಯಕ್ರಮಗಳು ಜರಗಿದವು.ಶಾಸಕ ಹರೀಶ್ […]

ಸಹಕಾರಿ ಚಟುವಟಿಕೆಯಿಂದ ಗ್ರಾಮದ ಅಭಿವೃದ್ಧಿ: ಮಡಂತ್ಯಾರಿನಲ್ಲಿ ಆದರ್ಶ ಸೊಸೈಟಿಯ 13ನೇ ಶಾಖೆ ಉದ್ಘಾಟಿಸಿ ಶಾಸಕ ಪೂಂಜ

 ಬೆಳ್ತಂಗಡಿ: ಜನಸಾಮಾನ್ಯರ ಆರ್ಥಿಕ ವ್ಯವಹಾರ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ  ಸಹಕಾರ ಸಂಘಗಳ ಕ್ಷಿಪ್ರ ನೆರವು ಪ್ರಮುಖ ಕಾರಣವಾಗಿದೆ. ಸಹಕಾರ ಸಂಘಗಳು ಸಹಕಾರಿ  ತತ್ವದಡಿ ಜನಸಾಮಾನ್ಯರ ಅವಶ್ಯಕತೆ ಹಾಗೂ ಬೇಡಿಕೆಗಳಿಗೆ ತಕ್ಷಣ ಸ್ಪಂದಿಸಿ ಆರ್ಥಿಕ ಶಕ್ತಿ ನೀಡುತ್ತಿವೆ. ತುಳುನಾಡಿನ ಮಣ್ಣಿನಲ್ಲಿ ಆರ್ಥಿಕ ಶಕ್ತಿ ಅಡಗಿದ್ದು ಜಿಲ್ಲೆಯಲ್ಲಿ ಸಹಕಾರ ಸಂಘಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನುಡಿದರು.    ಅವರು ನವೆಂಬರ್ 14ರಂದು ಮಡಂತ್ಯಾರಿನಲ್ಲಿ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 13ನೇ ಶಾಖೆಯನ್ನು ಪೊಂಪೈ ವಾಣಿಜ್ಯ ಸಂಕೀರ್ಣದಲ್ಲಿ ದೀಪ ಪ್ರಜ್ವಲಿಸಿ […]