ಜನರ ಬಳಿ ಆಡಳಿತ ಸೇವೆ

ಬೆಳ್ತಂಗಡಿ: ಸರಕಾರದ ಯೋಜನೆಗಳು ಜನರಿಗೆ ಪಾರದರ್ಶಕವಾಗಿ ಸಿಗಬೇಕು ಎಂಬ ಕಲ್ಪನೆಯಿಂದ ಜನರ ಬಳಿ ಆಡಳಿತ ಸೇವೆ ಎಂಬ ಹೊಸ ಕಲ್ಪನೆಯಂತೆ ತಾಲೂಕಿನಲ್ಲಿ ಅನುಷ್ಠಾನ ಮಾಡುತ್ತಿದ್ದು, ಇದರ ಪ್ರಾರಂಭಿಕವಾಗಿ ರಾಜ್ಯದಲ್ಲೇ ಪ್ರಪ್ರಥಮಬಾರಿಗೆ ಅಕ್ರಮ ಸಕ್ರಮ ಅರ್ಜಿ ವಿಲೇವಾರಿಯನ್ನು ಗ್ರಾಮ ಪಂಚಾಯತ್ ಮಟ್ಟದಲ್ಲೇ ಮಾಡಲಾಗುತ್ತಿದ್ದು ನವೆಂಬರ್ 23ರಂದು ಇದಕ್ಕೆ ಚಾಲನೆ ನೀಡಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು ನವೆಂಬರ್ 14ರಂದು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದುವರೆಗೆ ಒಟ್ಟು 32ಸಾವಿರ ಅರ್ಜಿಗಳು ಬಂದಿದ್ದು, ಇದರಲ್ಲಿ ಕುಮ್ಕಿ […]
ಚಂದ್ರಶೇಖರ ಆತ್ಮಹತ್ಯೆ ಪ್ರಕರಣ: ಪ್ರಮುಖ ಆರೋಪಿ ಯೋಗೀಶ್ ಬಂಧನ

ಬೆಳ್ತಂಗಡಿ: ಸ್ವ ಸಹಾಯ ಸಂಘದ ಸಾಲ ಕಟ್ಟುವ ವಿಚಾರವಾಗಿ ಜೀವ ಬೆದರಿಕೆ ಹಾಕಿದ ಕಾರಣಕ್ಕೆ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಚಂದ್ರಶೇಖರ ಅವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ತೋಟತ್ತಾಡಿ ಗ್ರಾಮದ ಯೋಗೀಶ್ (34) ಎಂಬಾತನೆಂದು ಗುರುತಿಸಲಾಗಿದೆ.ತಾಲೂಕಿನ ತೋಟತ್ತಾಡಿ ಗ್ರಾಮದ ನೆಲ್ಲಿಗುಡ್ಡೆ ನಿವಾಸಿ ಚಂದ್ರಶೇಖರ್ (24) ಎಂಬವರಿಗೆ ಸ್ವ ಸಹಾಯ ಸಂಘದ ಸಾಲ ಕಟ್ಟುವ ವಿಚಾರದಲ್ಲಿ ಅದೇ ಸಂಘದ ನಾಲ್ಕು ಜನ ಇತರ ಸದಸ್ಯರು ಜೀವ ಬೆದರಿಕೆ ಹಾಕಿದ್ದರೆಂಬುದು […]
ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಶಾಖೆ ಮಡಂತ್ಯಾರಿನಲ್ಲಿ ಉದ್ಘಾಟನೆ

ಬೆಳ್ತಂಗಡಿ: 2021-22ನೇ ಸಾಲಿನಲ್ಲಿ 506 ಕೋಟಿ 59 ಲಕ್ಷ ರೂಪಾಯಿ ವ್ಯವಹಾರ ನಡೆಸಿ, ದಾಖಲೆಯ 1ಕೋಟಿ 20ಲಕ್ಷ ರೂಪಾಯಿ ಲಾಭಾಂಶಗಳಿಸಿರುವ ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ 13ನೇ ಶಾಖೆಯು ನವೆಂಬರ್ 14ರಂದು ಮಡಂತ್ಯಾರು ಪೊಂಪೈ ಸಂಕೀರ್ಣದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸಹಕಾರಿ ಸಂಘದ ಅಧ್ಯಕ್ಷ ಸವಣೂರು ಸೀತಾರಾಮ ರೈ ಹೇಳಿದರು.ಬೆಳ್ತಂಗಡಿಯ ಪ್ರೆಸ್‌ಕ್ಲಬ್‌ನಲ್ಲಿ ನವೆಂಬರ್ 7ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬಗ್ಗೆ ವಿವರ ನೀಡಿದರು.ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಧಾನ ಪರಿಷತ್ […]
ಕೋಮಾ ಸ್ಥಿತಿಯಲ್ಲಿದ್ದ ಯಾತ್ರಾರ್ಥಿಗೆ ಸಕಾಲದಲ್ಲಿ ಚಿಕಿತ್ಸೆ-ಅಪಾಯದಿಂದ ಪಾರು

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಪಶು ವೈದ್ಯ ಆಸ್ಪತ್ರೆಯ ಜಗಲಿಯಲ್ಲಿ ಯಾತ್ರಾರ್ಥಿಯೊಬ್ಬರು ಕೋಮಾ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡ ತಾಲೂಕು ಜಾನುವಾರು ಅಭಿವೃದ್ಧಿ ಅಧಿಕಾರಿ ಜಯಕೀರ್ತಿ ಜೈನ್, ತಕ್ಷಣ 108 ಆಂಬ್ಯುಲೆನ್ಸ್‌ಗೆ ಫೋನ್ ಕರೆಮಾಡಿ ಕರೆಯಿಸಿದ ಘಟನೆ ನವೆಂಬರ್ 7ರಂದು ವರದಿಯಾಗಿದೆ. ಸ್ಥಳಕ್ಕೆ ಧಾವಿಸಿದ 108 ಆ್ಯಂಬುಲೆನ್ಸ್ ಸಿಬ್ಬಂದಿಗಳು ಕೋಮಾ ಸ್ಥಿತಿಯಲ್ಲಿದ್ದ ಯಾತ್ರಾರ್ಥಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು ಎನ್ನಲಾಗಿದೆ. ಕೋಮಾ ಸ್ಥಿತಿಯಲ್ಲಿ ಬಿದ್ದಿದ್ದ ಯಾತ್ರಾರ್ಥಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದು, […]
ಮಹತೋಭಾರ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ: ನ.6ರ ಸಂಜೆ ತಲುಪಲಿದೆ ನೂತನ ಧ್ವಜಸ್ತಂಭ.

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಧರ್ಮೋತ್ಥಾನ ಟ್ರಸ್ಟ್‌ನಿಂದ ನವೀಕರಣಗೊಳ್ಳುತ್ತಿರುವ ಮೂಡುಬಿದಿರೆ ತಾಲೂಕು ದರೆಗುಡ್ಡೆಯ ಮಹತೋಭಾರ ಇಟಲ ಶ್ರೀ ಸೋಮನಾಥೇಶ್ವರ ದೇವಾಲಯದ ನೂತನ ಧ್ವಜಸ್ತಂಭವು ಸಿದ್ಧಗೊಂಡಿದ್ದು ಇಂದು ಅಕ್ಟೋಬರ್ 4ರ ಶುಕ್ರವಾರ ಅಪರಾಹ್ನ ಸುಳ್ಯ ತಾಲೂಕಿನ ಗೂನಡ್ಕದಿಂದ ಹೊರಡಲಿರುವ ಧ್ವಜಸ್ತಂಭವು ರಾತ್ರಿವೇಳೆಗೆ ಮೂಡುಬಿದಿರೆ ತಲುಪಿ, ಇಲ್ಲಿನ ಜೈನ ಪದವಿ ಪೂರ್ವ ಕಾಲೇಜಿನಲ್ಲಿ ತಂಗಿ ಅಕ್ಟೋಬರ್ 6ರ ಭಾನುವಾರ ಭವ್ಯ ಮರವಣಿಗೆಯ ಮೂಲಕ ಸಾಗಿ ಸಂಜೆ ಇಟಲ ಶ್ರೀ ಸೋಮನಾಥೇಶ್ವರ ದೇವಸ್ಥಾನ […]
ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾದರೂ ಸಂವಿಧಾನ ಸಂಪೂರ್ಣವಾಗಿ ಜಾರಿಯಾಗಿಲ್ಲ.

ಬೆಳ್ತಂಗಡಿ: ಸಂವಿಧಾನವೆಂದರೆ ದೇಶದ ಜನರಿಗೆ ಬದುಕಲು ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟು ಹೋದ ಹಕ್ಕುಪತ್ರ. ಇಂದು ಈ ಸಂವಿಧಾನವೇ ಅಪಾಯದಲ್ಲಿದೆ. ನಮ್ಮನ್ನಾಳುವ ಸರ್ಕಾರಗಳು ಸಂವಿಧಾನ ಜ್ಯಾರಿ ಆಗಿದೆ ಎಂದು ಹೇಳುತ್ತಿವೆ. ಆದರೆ ಸಂವಿಧಾನವು ಸಂಪೂರ್ಣವಾಗಿ ಜಾರಿಯಾಗಿಲ್ಲ.ಕೇವಲ 15% ಇರುವಂಥ ಕೆಲವೇ ಜನರ ಹಿತರಕ್ಷಣೆಗಾಗಿ ಎಷ್ಟು ಬೇಕೋ ಅಷ್ಟು ಮಾತ್ರ ಸಂವಿಧಾನ ಜ್ಯಾರಿಯಾಗಿದೆ ಎಂದು ಬಹುಜನ ಸಮಾಜ ಪಾರ್ಟಿ(ಬಿಎಸ್‌ಪಿ) ಕರ್ನಾಟಕ ರಾಜ್ಯ ಸಂಯೋಜಕರು ಎಂ. ಗೋಪಿನಾಥ್ ಹೇಳಿದರು.ಬಹುಜನ ಸಮಾಜ ಪಕ್ಷ ಸಂವಿಧಾನದ ಸಂರಕ್ಷಣೆಗಾಗಿ ಕರ್ನಾಟಕ ರಾಜ್ಯ ವ್ಯಾಪ್ತಿ ಸಂಚರಿಸುತ್ತಿರುವ […]
ಪರಿಶಿಷ್ಟ ಕೊರಗಪ್ಪರಿಂದ ವಿಶಿಷ್ಟ ಪ್ರತಿಭಟನೆ ಮತ್ತು ಮನವಿ

ಮೂಡುಬಿದಿರೆ: ಪರಿಶಿಷ್ಟ ಜಾತಿಗೆ ಮೀಸಲಿರುವ ಮೂಡುಬಿದಿರೆ ಪುರಸಭೆಯ 16ನೇ ವಾರ್ಡಿಗೆ ಸೂಕ್ತ ಅನುದಾನವನ್ನು ಒದಗಿಸದೆ ಪರಿಶಿಷ್ಟರನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿರಿರುವ ಪರಿಶಿಷ್ಟರ ನಾಯಕ ಪುರಸಭಾ ಸದಸ್ಯ ಕೊರಗಪ್ಪ ಅವರು ಶರ್ಟ್ ಬಿಚ್ಚಿ ವಿನೂತನ ಪ್ರತಿಭಟನೆ ನಡೆಸುವ ಜೊತೆಗೆ, ಸ್ವರಾಜ್ಯ ಮೈದಾನದ ಹಿಂಭಾಗದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಉದ್ಯಾನವನಕ್ಕೆ ಇತ್ತೀಚೆಗೆ ನಿಧನರಾಗಿರುವ ಗುರುಸ್ಬಾಮಿ ರಮೇಶ ಶಾಂತಿಯವರ ಹೆಸರಿಡುವಂತೆ ಪುರಸಭಾ ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.ಇಂದು (ಅ. 31ರಂದು) ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಪರಿಶಿಷ್ಟರನ್ನು ಪುರಸಭಾಡಳಿತ […]
ಮೇಲ್ಮನವಿಗಳೆಲ್ಲವೂ ತಿರಸ್ಕೃತ – ನ್ಯಾಯಾಲಯಕ್ಕೆ ಶರಣಾದ ಸೋಮನಾಥ ನಾಯಕ್

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಮತ್ತು ಕ್ಷೇತ್ರದ ಸಂಸ್ಥೆಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಮತ್ತು ಅವಮಾನಕರ ಬರವಣಿಗೆ ಮತ್ತು ಹೇಳಿಕೆ ನೀಡಿದ ಪ್ರಕರಣ ಸಂಬಂಧ ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಸೋಮನಾಥ್ ನಾಯಕ್ ಅವರಿಗೆ ಮೂರು ತಿಂಗಳ ಸಜೆ ಹಾಗೂ 4.5 ಲಕ್ಷ ರೂಪಾಯಿ ಪರಿಹಾರ ನೀಡಲು ಬೆಳ್ತಂಗಡಿ ನ್ಯಾಯಾಲಯ ಈ ಹಿಂದೆ ಆದೇಶ ಮಾಡಿದ್ದು; ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ಸೋಮನಾಥ ನಾಯಕ್ ರಾಜ್ಯ ಉಚ್ಛ […]
ಮಿಡ್‌ಟೌನ್ ರೋಟರಿಯಿಂದ ಶಿಕ್ಷಕರ ದಿನಾಚರಣೆ

ಮೂಡುಬಿದಿರೆ: ಇಲ್ಲಿನ ಪ್ರತಿಷ್ಠಿತ ರೋಟರಿ ಕ್ಲಬ್ ಆಫ್ ಮೂಡುಬಿದಿರೆ ಮಿಡ್‌ಟೌನ್ ಇದರ ವತಿಯಿಂದ ಅಕ್ಟೋಬರ್ 28ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕ್ಲಬ್ ಸದಸ್ಯರೆಲ್ಲಾ ಜೊತೆ ಸೇರಿ ದೀಪಾವಳಿ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಸಮಾಜಮಂದಿರ ಸಭಾಭವನದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ನಡೆದ ಸಮಾರಂಭದಲ್ಲಿ ಯೋಗ ಗುರು, ನಿವೃತ್ತ ಶಿಕ್ಷಕಿ ಪ್ರಫುಲ್ಲಾ ಎಂ. ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. ಪ್ರಫುಲ್ಲಾ ಎಂ. ಶೆಟ್ಟಿಯವರು ತಮ್ಮ ಅನುಭವವನ್ನು ಹಂಚಿಕೊಂಡರು. ಕ್ಲಬ್ ಅಧ್ಯಕ್ಷ ಪುಷ್ಪರಾಜ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ […]
ಡಯಾಲಿಸಿಸ್ ಕೇಂದ್ರದಲ್ಲಿ ಅವ್ಯವಸ್ಥೆ-ರೋಗಿಗಳ ದೂರು

ಬೆಳ್ತಂಗಡಿ: ಆಸ್ಪತ್ರೆಯಲ್ಲಿ ರೋಗಿಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂಬ ದೂರು ರೋಗಿಗಳಿಂದ ಬೆಳ್ತಂಗಡಿ ತಹಶೀಲ್ದಾರ್‌ಗೆ ಬಂದ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಂದು ದಿಢೀರ್ ಆಸ್ಪತ್ರೆಗೆ ಭೇಟಿ ನೀಡಿ, ಡಯಾಲಿಸಿಸ್ ವಿಭಾಗದಲ್ಲಿ ಅವ್ಯವಸ್ಥೆಯನ್ನು ಕಣ್ಣಾರೆ ಕಂಡು, ಕರ್ತವ್ಯದಲ್ಲಿದ್ದ ತಹಶೀಲ್ದಾರ್ ಪೃಥ್ವಿ ಸಾನಿಕಾಂ ತರಾಟೆಗೆ ತೆಗೆದುಕೊಂಡರು.ತಾಲೂಕು ಆರೋಗ್ಯ ಕೇಂದ್ರ ಬೆಳ್ತಂಗಡಿ ಇಲ್ಲಿಯ ಡಯಾಲಿಸಿಸ್ ವಿಭಾಗದಲ್ಲಿ ಇನ್‌ವರ್ಟರ್ ಸಮಸ್ಯೆಯಿಂದ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ದೂರು ರೋಗಿಗಳಿಂದ ಬೆಳ್ತಂಗಡಿ ತಹಶೀಲ್ದಾರ್ ಕಚೇರಿಗೆ ಬಂದಿತ್ತು. ಅಕ್ಟೋಬರ್ 29ರಂದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಾಂ […]