ಅತಿಕ್ರಮಿತ ಡಿಸಿ ಮನ್ನಾ ಜಮೀನಿನಲ್ಲಿಯೇ ಪ್ರತಿಭಟನಾ ಸಭೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಪರಿಶಿಷ್ಠ ಜಾತಿ/ಪಂಗಡಕ್ಕೆ ಮೀಸಲಿಟ್ಟ ಡಿ.ಸಿ. ಮನ್ನಾ ಭೂಮಿಯನ್ನು ಸ್ಥಳೀಯ ಭೂಮಾಲೀಕರೊರ್ವರು ಅತಿಕ್ರಮಣ ಮಾಡಿಕೊಂಡಿದ್ದನ್ನು ವಿರೋಧಿಸಿ ಅದೇ ಜಮೀನಿನಲ್ಲಿ ಸಮಾಲೋಚನಾ ಸಭೆಯನ್ನು ಅಕ್ಟೋಬರ್ 11ರಂದು ನಡೆಸಲಾಯಿತು.ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಳೆಂಜ ಗ್ರಾಮ ಶಾಖೆಯ ನೇತೃತ್ವದಲ್ಲಿ ನಡೆದ ಕೊಕ್ಕಡ ವಲಯ ಮಟ್ಟದ ‘ನಮ್ಮ ಭೂಮಿ ನಮ್ಮ ಹಕ್ಕು’ ಹಕ್ಕೊತ್ತಾಯ ಸಭೆ ನಡೆಸಲಾಯಿತು. ಸಭೆಯನ್ನು ಉದ್ದೇಶಿಸಿ ದಸಂಸ (ಅಂಬೇಡ್ಕರ್ ವಾದ) ತಾಲೂಕು ಪ್ರಧಾನ ಸಂಚಾಲಕ ಕೆ. ನೇಮಿರಾಜ್ ಕಿಲ್ಲೂರು […]

ಬಿಜೆಪಿಯ ಗೂಂಡಾ ರಾಜಕೀಯಕ್ಕೆ ಅನಧಿಕೃತ ಟೋಲ್ ಹಣದ ದುರ್ಬಳಕೆ – ಅಭಯಚಂದ್ರ ಜೈನ್

ಮೂಡುಬಿದಿರೆ: ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯವರು ತಮ್ಮ ದುರಾಡಳಿತದ ವಿರುದ್ಧ ಹೋರಾಟ ನಡೆಸುವವರನ್ನು ಗೂಂಡಾಗಿರಿಯ ಮೂಲಕ ದಮನಿಸುವ ಕೆಲಸ ಮಾಡುತ್ತಿದ್ದಾರೆ. ಅನಧಿಕೃತ ಟೋಲ್ ಮತ್ತಿತರ ಅನಧಿಕೃತ ಮೂಲಗಳಿಂದ ಸಂಗ್ರಹಿಸಿರುವ ಹಣವನ್ನು ತಮ್ಮ ಕ್ರಿಮಿನಲ್ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ ಎಂದು ಮಾಜಿ ಸಚಿವ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕೆ. ಅಭಯಚಂದ್ರ ಜೈನ್ ಗಂಭೀರ ಆರೋಪ ಮಾಡಿದರು.ಅಕ್ಟೋಬರ್ 18ರಂದು ಹಮ್ಮಿಕೊಳ್ಳಲಾಗಿರುವ ಐತಿಹಾಸಿಕ ಸುರತ್ಕಲ್ ಟೋಲ್ ತೆರವು ಹೋರಾಟದ ಸಿದ್ಧತೆಗಾಗಿ ಮೂಡುಬಿದಿರೆಯ ಸಮಾಜಮಂದಿರದಲ್ಲಿ ಅಕ್ಟೋಬರ್ 10ರಂದು ಕರೆಯಲಾಗಿದ್ದ […]

ವಿಭಾಗಮಟ್ಟದ ವಾಲಿಬಾಲ್ ಪಂದ್ಯಾಟಸತತ 10ನೇ ಬಾರಿ ಗೆದ್ದು ಬೀಗಿದ ಬಂದಾರು ಶಾಲೆ

ಬೆಳ್ತಂಗಡಿ: ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ 14ರ ವಯೋಮಾನದ ಬಾಲಕಿಯರ ವಿಭಾಗ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಬೆಳ್ತಂಗಡಿ ತಾಲೂಕು ಬಂದಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರು ಗೆದ್ದು ಬೀಗಿರುವುದಲ್ಲದೇ; ಸತತ 10ನೇ ಬಾರಿ ರಾಜ್ಯ ಮಟ್ಟದ ಪಂದ್ಯಾಟದಲ್ಲಿ ಆಡಲು ಆಯ್ಕೆಯಾಗಿದ್ದಾರೆ. ಆ ಮೂಲಕ ಇಲ್ಲಿನ ಪ್ರತಿಭಾನ್ವಿತ ಆಟಗಾರರು ಶಾಲೆಗೆ, ಊರಿಗೆ ಮಾತ್ರವಲ್ಲ; ಬೆಳ್ತಂಗಡಿ ತಾಲೂಕಿಗೇ ಕೀರ್ತಿ ತಂದಿದ್ದಾರೆ.

ನೇತಾಜಿ ಬ್ರಿಗೇಡ್: 3ನೇ ವರ್ಷದ ವಾರ್ಷಿಕೋತ್ಸವ

ಮೂಡುಬಿದಿರೆ: ಮೂಡುಬಿದಿರೆ ಪೇಟೆಯ ಸ್ವಚ್ಛತೆಗಾಗಿ ಕಳೆದ ಮೂರು ವರ್ಷಗಳಿಂದ ನಿರಂತರ ಸೇವೆಗೈಯುತ್ತಾ ಬಂದಿರುವ ಮೂಡುಬಿದಿರೆಯ ರಾಹುಲ್ ಕುಲಾಲ್ ನೇತ್ರತ್ವದ ನೇತಾಜಿ ಬ್ರಿಗೇಡ್‌ (ರಿ.) ಸಂಸ್ಥೆ 3ನೇ ವಾರ್ಷಿಕೋತ್ಸವವನ್ನು ಅಕ್ಟೋಬರ್ 9ರಂದು ಅದ್ದೂರಿಯಾಗಿ ಆಚರಿಸಿತು.ಇಲ್ಲಿನ ಸಮಾಜಮಂದಿರ ಸಭಾಭವನದಲ್ಲಿ ನಡೆದ ಸಂಸ್ಥೆಯ 3ನೇ ವಾರ್ಷಿಕೋತ್ಸವ ಸಮಾರಂಭವನ್ನು ಶಾಸಕ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಮಾತನಾಡಿ, ಇಲ್ಲಿನ ನೇತಾಜಿ ಬ್ರಿಗೇಡ್‌ ಸಂಸ್ಥೆ […]

ಅ.9 ರಿಂದ 15 ಯೋಗಾಸನ-ಪ್ರಾಣಾಯಾಮ ಧ್ಯಾನ ಶಿಬಿರ

ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಗಿನ್ನೆಸ್ ದಾಖಲೆ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಮೂಡುಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಅಕ್ಟೋಬರ್ 9ರಿಂದ 15ರವರೆಗೆ ನಗರ ಮತ್ತು ಹಳ್ಳಿ ಹಳ್ಳಿಗಳಲ್ಲಿ 80ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ಅನುಭವೀ ಯೋಗ ಶಿಕ್ಷಕರಿಂದ ಸಾರ್ವಜನಿಕರಿಗೆ ಯೋಗಾಸನ-ಪ್ರಾಣಾಯಾಮ ಮತ್ತು ಧ್ಯಾನ […]

ಯುವ ತೇಜಸ್ಸು ಟ್ರಸ್ಟ್‌ನಿಂದ ಮಾದರಿ ಕಾರ್ಯದೇಣಿಗೆಯಿಂದ ನಿರ್ಮಿಸಿದ ಕಿರುಸೇತುವೆ ಲೋಕಾರ್ಪಣೆ

ಬೆಳ್ತಂಗಡಿ: ಯುವ ತೇಜಸ್ಸು ಟ್ರಸ್ಟ್‌ನ ಯುವ ಸದಸ್ಯರು ಮಾಡುತ್ತಿರುವ ಸಮಾಜ ಸೇವಾ ಕಾರ್ಯ ಎಲ್ಲರಿಗೂ ಮಾದರಿಯಾಗಿದೆ.  ಯುವಕರ ತಂಡವನ್ನು ಕಟ್ಟುವಾಗ ಪ್ರತಿ ಸದಸ್ಯನೂ  ಜವಾಬ್ದಾರಿ ವಹಿಸಿಕೊಂಡು ಕೆಲಸ ಮಾಡಿದರೆ ಯಾವುದೇ  ಸಮಸ್ಯೆಗಳು ಎದುರಾಗುವುದಿಲ್ಲ. ಜನರ ಸಂಕಷ್ಟಗಳಿಗೆ ಸ್ಪಂದಿಸುವ ತಂಡಗಳು ರಚನೆಗೊಂಡರೆ ಗ್ರಾಮಗ್ರಾಮಗಳಲ್ಲಿ ಅಭಿವೃದ್ಧಿ ಕಾಣಬಹುದು. ಯುವಜನತೆ ದಾರಿತಪ್ಪುತ್ತಿರುವ ಇಂದಿನ ದಿನಗಳಲ್ಲಿ ತಂಡದ ಯುವಕರು ಇತರರಿಗೆ ಸ್ಪೂರ್ತಿ ಹಾಗೂ ಪ್ರೇರಣೆಯಾಗುವ  ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಸಾಮಾಜಿಕ ಕಾರ್ಯಕರ್ತ ರವಿ ಕಟಪಾಡಿ ಹೇಳಿದರು.ಅವರು ಅಕ್ಟೋಬರ್ 3ರಂದು  ಬೆಳ್ತಂಗಡಿ ತಾಲೂಕು ಮಿತ್ತಬಾಗಿಲು ಗ್ರಾಮದ ಕಲ್ಲಂಡ ಎಂಬಲ್ಲಿ ಯುವ […]

ಪ್ರಕೃತಿ ಚಿಕಿತ್ಸಾ ಕಾಲೇಜಿನ ವಿದ್ಯಾರ್ಥಿಗಳಿಂದ ರಕ್ತದಾನ

ಬೆಳ್ತಂಗಡಿ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ಅಕ್ಟೋಬರ್ 1ರಂದು ‘ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನ’ ದ ಪ್ರಯುಕ್ತ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಪ್ರಾದೇಶಿಕ ರಕ್ತ ಪೂರಣ ಕೇಂದ್ರದ ಸಹಯೋಗದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಿಂದ ರಕ್ತ ದಾನ ಶಿಬಿರ ನಡೆಯಿತು.ಕಾಲೇಜು ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿಯವರು ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವೆನ್ಲೋಕ್ ರಕ್ತಬ್ಯಾಂಕ್‌ನ ಅಧಿಕಾರಿಗಳಾದ ಅಶೋಕ್, […]

ಭಾರತ ಸರಕಾರದ ಅಡಿಷನಲ್ ಸಾಲಿಸಿಟರ್ ಜನರಲ್ ನಟರಾಜ್ ಅಳದಂಗಡಿ ಅರಮನೆಗೆ ಭೇಟಿ

ಭಾರತ ಸರಕಾರದ ಅಡಿಷನಲ್ ಸಾಲಿಸಿಟರ್ ಜನರಲ್‌ ರಾದ ಶ್ರೀ ಕೆ ಎಮ್ ನಟರಾಜ್ ಅಕ್ಟೋಬರ್ 3ರಂದು ಅಳದಂಗಡಿ ಅರಮನೆಗೆ ಭೇಟಿ ನೀಡಿದರು ಈ ಸಂಧರ್ಭದಲ್ಲಿ ಅಳದಂಗಡಿ ಅರಮನೆಯ ಡಾ| ಪದ್ಮ ಪ್ರಸಾದ್ ಅಜಿಲ, ಶ್ರೀ ಸತ್ಯದೇವತಾ ದೈವಸ್ಥಾನದ ಆಡಳಿತದಾರ ಶಿವಪ್ರಸಾದ್ ಅಜಿಲ, ಬೆಳ್ತಂಗಡಿಯ ನ್ಯಾಯವಾದಿ ಅಜಿತ್ ನಾವರ, ನಿವೃತ್ತ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಶೇಖರ ಶೆಟ್ಟಿ ಮತ್ತಿತರರು ಹಾಜರಿದ್ದು; ಭಾರತ ಸರಕಾರದ ಅಡಿಷನಲ್ ಸಾಲಿಸಿಟ್ ಜನರಲ್ ಕೆ. ಎಮ್. ನಟರಾಜ್‌ರನ್ನು ಆತ್ಮೀಯವಾಗಿ ಸ್ವಾಗತಿಸಿದರು

“ಯಕ್ಷಮಾರ್ಗಮುಕುರ” ಗ್ರಂಥ ಲೋಕಾರ್ಪಣೆ

ಬೆಳ್ತಂಗಡಿ: ಹಲವು ವರ್ಷಗಳ ನಿರಂತರ ಅಧ್ಯಯನ ಮತ್ತು ಸಂಶೋಧನೆಯೊಂದಿಗೆ ಖ್ಯಾತ ಕಲಾವಿದೆ ಹಾಗೂ ಲೇಖಕಿ ಡಾ. ಮನೋರಮಾ ಬಿ.ಎನ್. ಬರೆದ ‘ಯಕ್ಷಮಾರ್ಗಮುಕುರ’ವು ಯಕ್ಷಗಾನವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡುವವರಿಗೆ ದಾರಿದೀಪ ಹಾಗೂ ಅಧಿಕೃತ ಆಕರ ಗ್ರಂಥವಾಗಿದೆ ಎಂದು ಕರ್ಣಾಟಕ ಬ್ಯಾಂಕ್‍ನ ಆಡಳಿತ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಹೇಳಿದರು. ಅವರು ಸೆಪ್ಟೆಂಬರ್ 30ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ. ಮನೋರಮಾ ಬಿ.ಎನ್. ಬರೆದ ‘ಯಕ್ಷಮಾರ್ಗಮುಕುರ’ ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡುತ್ತಿದ್ದರು. ಈ ಗ್ರಂಥಕ್ಕೆ ಮುಕರ ಹಿಡಿದು […]

ಸಿರಿಯನ್ ಕ್ಯಾಥೊಲಿಕ್ ಸೊಸೈಟಿಯ ಕಾಯರ್ತಡ್ಕ ಶಾಖೆಯ ಉದ್ಘಾಟನೆ

ಬೆಳ್ತಂಗಡಿ: ಸಿರಿಯನ್ ಕ್ಯಾಥೊಲಿಕ್ ವಿವಿದೋದ್ದೇಶ ಸಹಕಾರಿ ಸಂಘದ ಕಾಯರ್ತಡ್ಕ ಶಾಖೆಯ ಉದ್ಘಾಟನಾ ಸಮಾರಂಭ ಅಕ್ಟೋಬರ್ 1ರಂದು ನಡೆಯಿತು.ಸೈಂಟ್ ಸೆಬಾಸ್ಟಿಯನ್ ಚರ್ಚ್ ಕಳೆಂಜದ ಧರ್ಮಗುರುಗಳಾದ ವಂದನೀಯ ಜೋಸೆಫ್ ವಾಳೂಕಾರನ್ ಅವರು ಆಶೀರ್ವಚನ ನೀಡಿ ಊರಿನ ಎಲ್ಲ ಜನರೂ ಸಹಕಾರದಿಂದ ವರ್ತಿಸಿದರೆ ಗ್ರಾಮ ಇನ್ನಷ್ಟು ಬೆಳವಣಿಗೆಯಾಗಲು ಸಾದ್ಯವಿದೆ.ಸಹಕಾರ ಸಂಘದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಸಂಸ್ಥೆಯ ಬೆಳವಣಿಗೆಗೆ ಸಹಕರಿಸಬೇಕು. ಉಳಿತಾಯದ ಮನೋಭಾವನೆಯನ್ನು ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು. ನೂತನ ಶಾಖೆಯನ್ನು ಉದ್ಘಾಟಿಸಿದ ಕಳೆಂಜ ಗ್ರಾಮಪಂಚಾಯತು ಅಧ್ಯಕ್ಷ ಪ್ರಸನ್ನ ಎ.ಪಿ. ಅವರು ಮಾತನಾಡುತ್ತಾ, […]