ಬಿದ್ದು ಸಿಕ್ಕಿದ ಚಿನ್ನದ ಸರ ವಾರೀಸುದಾರಿಗೆ ಹಸ್ತಾಂತರ

ಬೆಳ್ತಂಗಡಿ; ವಕೀಲರೊಬ್ಬರು ತಿಂಗಳುಗಳ ಹಿಂದೆ ಕಳೆದುಕೊಂಡಿದ್ದ ಚಿನ್ನದ ಸರ ಬಿದ್ದು ಸಿಕ್ಕಿರುವುದನ್ನು ಅದರ ವಾರೀಸುದಾರರಿಗೆ ಮರಳಿಸುವ ಮೂಲಕ ಬೆಳ್ತಂಗಡಿಯ ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಬಶೀರ್ ವಗ್ಗ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.ನ್ಯಾಯವಾದಿ ಶೈಲೇಶ್ ಠೋಸರ್ ಅವರು ತಿಂಗಳ ಹಿಂದೆ 1.5 ಲಕ್ಷ ರೂಪಾಯಿ ಮೌಲ್ಯದ ತನ್ನ ಚಿನ್ನದ ಸರ ಕಳೆದುಕೊಂಡಿದ್ದರು. ಹಲವೆಡೆ ಹುಡುಕಾಟ ನಡೆಸಿದ್ದರೂ ಸರ ಸಿಕ್ಕಿರಲಿಲ್ಲ. ಇದು ಇನ್ನು ಸಿಗುವುದು ಅನುಮಾನ ಎಂದುಕೊಂಡಿದ್ದರು. ಆದರೆ ಈ ಸರ ಮುಹಮ್ಮದ್ ಬಶೀರ್ ಅವರಿಗೆ ಸಿಕ್ಕಿತ್ತು. ಈ […]
ತಣ್ಣೀರುಪಂತ ಸೊಸೈಟಿ ಮಹಾಸಭೆ

ಬೆಳ್ತಂಗಡಿ: ತಣ್ಣೀರುಪಂತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಹಾಸಭೆಯು ಸೆಪ್ಟೆಂಬರ್ 10ರಂದು ಕಲ್ಲೇರಿಯ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬಿ. ನಿರಂಜನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, 20 21- 22 ನೇ ಸಾಲಿನಲ್ಲಿ ಸಂಘವು ರೂಪಾಯಿ 233ಕೋಟಿ ವ್ಯವಹಾರ ನಡೆಸಿ ರೂಪಾಯಿ 1.11ಕೋಟಿ ಲಾಭಗಳಿಸಿದೆ.ಸದಸ್ಯರಿಗೆ 12% ಡಿವಿಡೆಂಡ್ ನೀಡಲು ಆಡಳಿತ ಮಂಡಳಿಯಲ್ಲಿ ತೀರ್ಮಾನಿಸಲಾಗಿದೆ ಎಂದುಘೋಷಣೆ ಮಾಡಿದರು. ಬರುವ ಮಹಾಸಭೆಯ ಒಳಗೆ ಸಂಘದ ಶತಮಾನೋತ್ಸವ ಸವಿನೆನಪಿಗಾಗಿ ಸಂಘದ ಮುಖ ಕಚೇರಿ ಹಿಂಭಾಗದಲ್ಲಿ ರೂಪಾಯಿ 1.92ಕೋಟಿ […]
ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ತಕ್ಷಣ ಮುಚ್ಚಲು ಆಗ್ರಹಿಸಿ ಶನಿವಾರ ಗುರುವಾಯನಕೆರೆಯಲ್ಲಿ ಪಕ್ಷಬೇಧ ಮರೆತು ರಸ್ತೆತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.ಬೆಳ್ತಂಗಡಿ ಉದ್ಯಮಿ ಯಶವಂತ ಆರ್. ಬಾಳಿಗ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬೆಳ್ತಂಗಡಿಯ ಹಿರಿಯ ನ್ಯಾಯವಾದಿ ಮನೋಹರ್ ಇಳಂತಿಲ, ಕಳೆದ ಎರಡು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ಅಸಾಧ್ಯವಾಗಿದ್ದರೂ ಇದೇ ರಸ್ತೆಯಲ್ಲಿ ದಿನನಿತ್ಯ ಸಂಚರಿಸುವ ಶಾಸಕ ಹರೀಶ್ ಪೂಂಜಾ ಕಣ್ಣಿಲ್ಲದವರಂತೆ ವರ್ತಿಸುತ್ತಿದ್ದಾರೆ. ಸಂಸದರು ತಿಂಗಳಲ್ಲಿ ಎರಡು ಬಾರಿ ಬೆಳ್ತಂಗಡಿಗೆ ಬಂದರೂ ಆಕಾಶದಲ್ಲಿ ಬಂದವರಂತೆ ವರ್ತಿಸುತ್ತಿದ್ದಾರೆ […]
ಬಂಗಾಡಿ ಸೊಸೈಟಿ ಮಹಾಸಭೆ ಸದಸ್ಯರಿಗೆ 15% ಡಿವಿಡೆಂಡ್

ಬೆಳ್ತಂಗಡಿ: ಸಂಘವು 2021-22 ಸಾಲಿನಲ್ಲಿ ರೂ.3.29 ಕೋಟಿಗಿಂತ ಅಧಿಕ ಲಾಭಗಳಿಸಿದ್ದು ಸದಸ್ಯರಿಗೆ 15% ಡಿವಿಡೆಂಡ್ ನೀಡಲಾಗಿದೆ. ಆಡಳಿತ ಮಂಡಳಿ ಅಪೇಕ್ಷೆ ಮೇರೆಗೆ ಇದರಲ್ಲಿ 2% ಭಾಗವನ್ನು ಕಟ್ಟಡ ನಿಧಿಗೆ ವರ್ಗಾಯಿಸಲು ಮಹಾಸಭೆಯಲ್ಲಿ ಸದಸ್ಯರು ಒಪ್ಪಿಗೆ ನೀಡಿದ್ದು, ನಿರ್ಣಯ ಕೈಗೊಳ್ಳಲಾಗಿದೆ ಎಂದು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಹೇಳಿದರು.ಅವರು ಕೊಲ್ಲಿ ಶ್ರೀ ದುರ್ಗಾದೇವಿ ಕಲಾಮಂದಿರದಲ್ಲಿ ಸೆಪ್ಟೆಂಬರ್ 3ರಂದು ಜರಗಿದ ಸಂಘದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಸದಸ್ಯರು ಹಾಗೂ ಗ್ರಾಹಕರಿಗೆ ಸೇವೆ ಸಲ್ಲಿಸುವುದು ಸಂಘದ ಮುಖ್ಯ […]
ಸಾರ್ವಜನಿಕ ಗಣೇಶೋತ್ಸವದಿಂದ ಶಾಂತಿ ನೆಲೆಸಲಿ-ಅಭಯಚಂದ್ರ

ಮೂಡುಬಿದಿರೆ: ಸಾರ್ವಜನಿಕರು ಒಗ್ಗೂಡಿ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುವ ಸಾರ್ವಜನಿಕ ಗಣೇಶೋತ್ಸವದಿಂದ ನಾಡಿನಲ್ಲಿ ಶಾಂತಿ, ಸೌಹಾರ್ದತೆ ಮತ್ತು ನೆಮ್ಮದಿ ನೆಲೆಸಲಿ ಎಂದು ಮೂಡುಬಿದಿರೆ ಸಮಾಜಮಂದಿರ ಸಭಾದ ಅಧ್ಯಕ್ಷರೂ ಆಗಿರುವ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನುಡಿದರು.ಅವರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಇಲ್ಲಿನ ಸಮಾಜಮಂದಿರ ಸಭಾಭವನದಲ್ಲಿ ಪ್ರಾರಂಭಗೊಂಡಿರುವ 59ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಉದ್ಘಾಟನಾ ಸಮಾರಂಬದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರ ತಿಲಕ್ ಅವರು ಸ್ವಾತಂತ್ರ್ಯೋತ್ಸವದ ಚಳವಳಿಯಲ್ಲಿ ಜನರನ್ನು […]
ಸಂಘಟನೆ ಬಲಿಷ್ಠವಾಗಲು ಗಣೇಶೋತ್ಸವ-ಪಡುವೆಟ್ಣಾಯ

ಬೆಳ್ತಂಗಡಿ: ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಭಾರತೀಯರನ್ನು ಸಂಘಟಿಸಲು ಅಂದು ಬಾಲಗಂಗಾಧರ ತಿಲಕರು ನೀಡಿದ ಕರೆಯಂತೆ ದೇಶದ ಮೂಲೆಮೂಲೆಗಳಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಯಿತು. ಆದರೆ ಸ್ವಾತಂತ್ರ್ಯದ ಅಮೃತ ವರ್ಷಾಚರಣೆಯ ಸಂಭ್ರಮದಲ್ಲಿರುವ ಇಂದು ಸಾರ್ವಜನಿಕ ಗಣೇಶೋತ್ಸವಗಳು ಸಂಘಟನೆಯ ಬದಲಾಗಿ ಸಮಾಜವನ್ನು ವಿಭಜಿಸಲು ವೇದಿಕೆಯಾಗುತ್ತಿರುವುದು ವಿಷಾದನೀಯ. ಇದನ್ನು ಸರಿಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳು ಮತ್ತೊಮ್ಮೆ ಬಲಿಷ್ಠ ಸಮಾಜ ನಿರ್ಮಿಸುವ ವೇದಿಕೆಯಾಗಲಿ ಎಂದು ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಮೊಕ್ತೇಸರರಾದ ಶರತ್‌ಕೃಷ್ಣ ಪಡುವೆಟ್ಣಾಯ ಹೇಳಿದರು.ಅವರು ಆಗಸ್ಟ್ 30ರಂದು ಬೆಳ್ತಂಗಡಿಯ […]
ಲಯನ್ಸ್ ಪ್ರಾಂತ್ಯ ಸಮ್ಮೇಳನದ ಸ್ಮರಣ ಸಂಚಿಕೆ ‘ಅಧೀಶ’ ಬಿಡುಗಡೆ

ಬೆಳ್ತಂಗಡಿ: ಲಯನ್ಸ್ ಕ್ಲಬ್ ಸಮಾಜದ ಎಲ್ಲ ವರ್ಗದ ಜನರ ಕಷ್ಟ ಕಾರ್ಪಣ್ಯಗಳಿಗೆ ಕಿವಿ, ಕಣ್ಣಾಗಿ, ಕೈಯ್ಯಾಗಿ ಕೆಲಸ ಮಾಡುತ್ತದೆ. ಕಳೆದ ಬಾರಿ ಅತ್ತುತ್ತಮ ಸೇವೆಯೊಂದಿಗೆ ಪ್ರಾಂತ್ಯ 10ನ್ನು ಮುನ್ನಡೆಸಿದ್ದ ಧರಣೇಂದ್ರ ಕುಮಾರ್ ಜೈನ್ ಅವರು ತನ್ನ ‘ಬೆಳ್ಳಿ’ ಪ್ರಾಂತ್ಯ ಸಮ್ಮೇಳನದ ಮೂಲಕ ಸ್ಮರಣ ಸಂಚಿಕೆ ತಯಾರಿಸಿ ಆ ಮೂಲಕ ಜಾಹೀರಾತಿನಿಂದ ಬಂದ ಹಣದಿಂದ ಮಾದರಿ ಶಾಶ್ವತ ಸೇವೆ ಅನುಷ್ಠಾನಿಸಿದ್ದಾರೆ ಎಂದು ಲಯನ್ಸ್ ಜಿಲ್ಲಾ ರಾಜ್ಯ ಪಾಲ ಸಂಜೀತ್ ಶೆಟ್ಟಿ ಸಕಲೇಶಪುರ ಹೇಳಿದರು.ಲಯನ್ಸ್ ಪ್ರಾಂತ್ಯ ಸಮ್ಮೇಳನದ ಸವಿನೆನಪಿಗಾಗಿ ಹೊರತಂದ […]
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಜನಾ ಕಮ್ಮಟಕ್ಕೆ ಮುಹೂರ್ತ ಫಿಕ್ಸ್
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 24ನೇ ವರ್ಷದ ಭಜನಾ ತರಬೇತಿ ಶಿಬಿರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು; ಸೆಪ್ಟೆಂಬರ್ 16ರಿಂದ ಸೆಪ್ಟೆಂಬರ್ 23ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿದೆ ಎಂದು ಭಜನಾ ಸಮಿತಿಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.ಈ ಬಾರಿಯ ಭಜನಾ ತರಬೇತಿ ಶಿಬಿರದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಉತ್ತರ ಕನ್ನಡ, ಚಿಕ್ಕಮಗಳೂರು, , ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಹಾಸನ, ಬೆಳಗಾವಿ, ಮಂಡ್ಯ ಜಿಲ್ಲೆಗಳ ಆಯ್ದ ಭಜನಾ […]
ರಬ್ಬರು ಸೊಸೈಟಿಯಿಂದ ರಬ್ಬರು ಹಾಲು ಖರೀದಿ

ಮುಖಪುಟ ಬೆಳ್ತಂಗಡಿ: ಏಷ್ಯಾ ಖಂಡದಲ್ಲಿ ರಬ್ಬರ್ ಖರೀದಿ, ಮಾರಾಟ ಸಹಿತ ವ್ಯವಹಾರದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ತನ್ನ ಗ್ರಾಹಕರ ಅನುಕೂಲಕ್ಕಾಗಿ ರಬ್ಬರ್ ಹಾಲನ್ನು (ಲ್ಯಾಟೆಕ್ಸ್) ಸಂಗ್ರಹಿಸುವ ನೂತನ ಯೋಜನೆ ಆರಂಭಿಸಿದ್ದು, ಈ ನೂತನ ಯೋಜನೆಗೆ ಆಗಸ್ಟ್ 22ರಂದು ಚಾಲನೆ ನೀಡಲಾಯಿತು.ಇಂದಿನ ದಿನಗಳಲ್ಲಿ ಕಂಡು ಬರುವ ಕಾರ್ಮಿಕರ ಅಭಾವ, ಯಂತ್ರೋಪಕರಣಗಳ ತೊಂದರೆ ಮೊದಲಾದ ಸಮಸ್ಯೆಗಳಿಂದ ನಿರಾಶರಾಗುತ್ತಿರುವ ರಬ್ಬರ್ ಕೃಷಿಕರಿಗೆ ರಬ್ಬರ್ ಶೀಟುಗಳನ್ನು ಮಾಡಲು ಕಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಕೃಷಿಕರ […]
ರಸ್ತೆ ಸುರಕ್ಷತಾ ಮಾಹಿತಿ ಶಿಬಿರ

ಮೂಡುಬಿದಿರೆ: ನಿತ್ಯ ಸಹಾಯ ಮಾತಾ ದೇವಾಲಯ ಗಂಟಾಲ್‌ಕಟ್ಟೆ, ಕಥೋಲಿಕ್ ಸಭಾ ಮಂಗ್ಳೂರ್ ಪ್ರದೇಶ್ (ರಿ) ಗಂಟಾಲ್‌ಕಟ್ಟೆ ಘಟಕ ಮತ್ತು ಲಯನ್ಸ್ ಕ್ಲಬ್ ಮೂಡುಬಿದಿರೆ ಇದರ ಸಂಯುಕ್ತ ಆಶ್ರಯದಲ್ಲಿ ಗಂಟಾಲ್‌ಕಟ್ಟೆಯ ನಿತ್ಯಾಧರ್ ಸಭಾಭವನದಲ್ಲಿ ಆಗಸ್ಟ್ 21ರಂದು ರಸ್ತೆ ಸುರಕ್ಷತಾ ಮಾಹಿತಿ ಶಿಬಿರ ನಡೆಯಿತು.ಕಥೋಲಿಕ್ ಸಭಾ ಗಂಟಾಲ್‌ಕಟ್ಟೆ ಘಟಕದ ಅಧ್ಯಕ್ಷ ಮೆಲ್ವಿನ್ ಡಿ’ಕೋಸ್ತ ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರವನ್ನು ಉದ್ಘಾಟಿಸಿದ ಗಂಟಾಲ್‌ಕಟ್ಟೆ ಚರ್ಚ್ ಧರ್ಮಗುರು ವಂದನೀಯ ರೊನಾಲ್ಡ್ ಪ್ರಕಾಶ್ ಡಿ’ಸೋಜ ಅವರು ಮಾತನಾಡಿ ಸ್ವಾತಂತ್ರ್ಯವಿದೆ, ಸ್ವ ಇಚ್ಛೆಯಿಂದ ಎಲ್ಲಿ ಬೇಕಾದರೂ:ಹೇಗೆ […]