ಸಂತೃಪ್ತಿಯೇ ನಿಜವಾದ ಸಾಧನೆ- ಶ್ರೀಪತಿ ಭಟ್

ಮೂಡುಬಿದಿರೆ: ‘ಯಾವುದೇ ವ್ಯಕ್ತಿಯು ತನ್ನ ವೃತ್ತಿ ಜೀವನದಲ್ಲಿ ಸಾರ್ಥಕತೆಯನ್ನು ಪಡೆದು ಸಂತೃಪ್ತಿ ಹೊಂದಿದರೆ ಅದುವೇ ನಿಜವಾದ ಸಾಧನೆ’ ಎಂದು ಮೂಡುಬಿದಿರೆಯ ಹಿರಿಯ ಉದ್ಯಮಿ ಧನಲಕ್ಷ್ಮಿ ಕ್ಯಾಶ್ಯೂ ಎಕ್ಸ್‌ಪೋರ್ಟ್ಸ್‌ನ ಮಾಲಕ ಕೆ. ಶ್ರೀಪತಿ ಭಟ್ ನುಡಿದರು. ಅವರು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಇದರ ಮೂಡುಬಿದಿರೆ ವಲಯದ ವತಿಯಿಂದ ಆಗಸ್ಟ್ 19ರಂದು ನಡೆದ ವಿಶ್ವ ಛಾಯಾಗ್ರಹಣ ದಿನದಂದು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಆಯೋಜಿಸಿದ ಹಿರಿಯ ಛಾಯಾಗ್ರಾಹಕರಿಗೆ ಸಮ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ […]
ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಜಾಥಾ

ಬೆಳ್ತಂಗಡಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13ರಂದು ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಸುಮಾರು ನಾಲ್ಕು ಕಿಲೋಮೀಟರ್ ಜಾಥಾವನ್ನು ನಡೆಸಿದರು. ಶಾಲೆಯ ಗಣಿತ ಅಧ್ಯಾಪಿಕೆ ಶೈಲಶ್ರೀ ಅವರು ಧ್ವಜಾರೋಹಣವನ್ನು ಮಾಡಿದ ನಂತರ ಶಾಲಾ ಮೈದಾನದಲ್ಲಿ ಸೇರಿದ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದುಕೊಂಡು ಮರೆವಣಿಗೆ ಹೊರಟರು. ಮೆರೆವಣಿಗೆಯು ಸೋಮಂತಡ್ಕ ಪೇಟೆಗೆ ಹೋಗಿ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ವೃತ್ತದಿಂದ ಹಿಂದಿರುಗಿ ಕಾನರ್ಪದ ದೇವಿಗುಡಿಯ ವೃತ್ತದಿಂದ ಹಿಂದಿರುಗಿತು. ಮೆರೆವಣಿಗೆಯ ಉದ್ದಕ್ಕೂ ಸ್ವಾತಂತ್ರ್ಯ ಹೋರಾಟಗಾರರಿಗೆ, ಸ್ವಾತಂತ್ರ್ಯ ಹೋರಾಟದ […]
ಶತಾಯುಷಿ ಆನಂದ ಆಳ್ವರಿಗೆ ಲಯನ್ಸ್ ಸನ್ಮಾನ

ಮೂಡುಬಿದಿರೆ: ಆಗಸ್ಟ್ 15 ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ತಮ್ಮ 105ನೇ ಜನ್ಮ ದಿನೋತ್ಸವವನ್ನು ಆಚರಿಸಲಿರುವ ಹಿರಿಯ ಮುತ್ಸದ್ದಿ ಮಿಜಾರುಗುತ್ತು ಆನಂದ ಆಳ್ವರನ್ನು ಮೂಡುಬಿದಿರೆ ಲಯನ್ಸ್ ಕ್ಲಬ್ ವತಿಯಿಂದ ಅವರ ನಿವಾಸ ಹಂಸನಗರದ ‘ಶೋಭಾ ಗೆಸ್ಟ್ ಹೌಸ್’ನಲ್ಲಿ ಆಗಸ್ಟ್ 13ರಂದು ಸಮ್ಮಾನಿಸಲಾಯಿತು.ಹಿರಿಯ ಉದ್ಯಮಿ ಲ. ಕೆ. ಶ್ರೀಪತಿ ಭಟ್ ಅವರು ಆನಂದ ಆಳ್ವರಿಗೆ ಶಾಲು ಹೊದಿಸಿ, ಹಾರ, ಫಲಪುಷ್ಪ, ಸ್ಮರಣಿಕೆ ಮತ್ತು ರಾಷ್ಟ್ರಧ್ವಜ ನೀಡಿ ಗೌರವಿಸಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ದಿನೇಶ್ ಎಂ.ಕೆ., ಕಾರ್ಯದರ್ಶಿ ರತ್ನಾಕರ ಎಂ. ಹೆಗ್ಡೆ, […]
ಲಾಯಿಲ ರಾಘವೇಂದ್ರ ಮಠದಲ್ಲಿ ಆರಾಧನಾ ಮಹೋತ್ಸವ ಆರಂಭ

*ಬೆಳ್ತಂಗಡಿ: ಲಾಯ್ಲ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ವತಿಯಿಂದ ಲಾಯ್ಲ ಶ್ರೀ ರಾಘವೇಂದ್ರ ಮಠದಲ್ಲಿ ಮೂರು ದಿನಗಳ ಕಾಲ ನಡೆಯುವ 351ನೇ ಆರಾಧನಾ ಮಹೋತ್ಸವದ ಕಾರ್ಯಕ್ರಮಗಳನ್ನು ಶ್ರೀ ಗುರುದೇವ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಎನ್ ಪದ್ಮನಾಭ ಮಾಣಿಂಜ ಆಗಸ್ಟ್ 12ರಂದು ಉದ್ಘಾಟಿಸಿದರು.ರಾಘವೇಂದ್ರ ಮಠಕ್ಕೆ ಮುಗುಳಿ ಶಾರದಮ್ಮ ಮತ್ತು ಮಕ್ಕಳು ಸೇವಾ ರೂಪದಲ್ಲಿ ನೀಡಿದ 2.50ಲಕ್ಷ ರೂಪಾಯಿ ವೆಚ್ಚದ ಇಂಟರ್ ಲಾಕ್‌ನ್ನು ಮುಖ್ಯ ಅತಿಥಿ ಬೆಂಗಳೂರು ಉದ್ಯಮಿ ನಾರಾಯಣ ಗೌಡ ಬೇಗೂರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ […]
500ಕ್ಕೂ ಹೆಚ್ಚು ತ್ರಿವರ್ಣ ಧ್ವಜಗಳ ವಿತರಣೆ

ಮೂಡುಬಿದಿರೆ: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದಲ್ಲಿ ಮನೆಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಸದುದ್ದೇಶಕ್ಕೆ ಪೂರಕವಾಗಿ ಮೂಡುಬಿದಿರೆಯ ಹಿರಿಯ ಉದ್ಯಮಿ ಧನಲಕ್ಷ್ಮಿ ಕ್ಯಾಶ್ಯೂಸ್‌ನ ಮಾಲಕ ಲಯನ್ ಕೆ. ಶ್ರೀಪತಿ ಭಟ್ ಅವರು ಕೊಡುಗೆಯಾಗಿ ನೀಡಿರುವ 500ಕ್ಕೂ ಹೆಚ್ಚು ತ್ರಿವರ್ಣ ಧ್ವಜಗಳನ್ನು ಧನಲಕ್ಷ್ಮಿ ಸಮೂಹ ಉದ್ಯಮದ ಸುಮಾರು 300 ಕಾರ್ಮಿಕರಿಗೆ ಹಾಗೂ ಕಲ್ಲಬೆಟ್ಟು ಸರಕಾರಿ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂಡುಬಿದಿರೆ ಲಯನ್ಸ್ ಕ್ಲಬ್ ವತಿಯಿಂದ ಆಗಸ್ಟ್ 12ರಂದು ವಿತರಿಸಲಾಯಿತು.ಈ ಸಂದರ್ಭ ಮಾತನಾಡಿದ ಕೆ. ಶ್ರೀಪತಿ […]
ಉಜಿರೆ ಎಸ್‌ಡಿಎಂ ಕಾಲೇಜಿನಲ್ಲಿ ಎಚಿವರ್ಸ್ ಡೇ ಕಾರ್ಯಕ್ರಮ ವಿದ್ಯಾರ್ಥಿಯು ಪದವಿಗಿಂತ ಮುಂದೆ ಕೈಗೊಳ್ಳುವ ಸಾಧನೆ ಮುಖ್ಯ: ಡಾ.ಹೆಗ್ಗಡೆ

ಬೆಳ್ತಂಗಡಿ; ಕಾಲೇಜಿನಲ್ಲಿ ಪದವಿ ಪಡೆಯುವುದಕ್ಕಿಂತ ಆ ಬಳಿಕದ ಜೀವನದಲ್ಲಿ, ವೃತ್ತಿ ಕ್ಷೇತ್ರದಲ್ಲಿ ತಾವಿರುವ ಸ್ಥಾನಮಾನದಲ್ಲಿ ಎಲ್ಲರೂ ಗುರುತಿಸಬಹುದಾದ ರೀತಿಯಲ್ಲಿ ಸಾಧನೆ ಮಾಡಬೇಕು. ಆ ನಿಟ್ಟಿನಲ್ಲಿ ಕಿರಿಯರಿಗೆ ಪ್ರೇರಣೆಯಾಗುವ ನಿಟ್ಟಿನಲ್ಲಿ ಈ ಸಾಧಕರ ಪ್ರಶಂಸನಾ ಕಾರ್ಯಕ್ರಮ ಆಯೋಜಿಸಿಕೊಂಡಿರುವುದು ಶ್ಲಾಘನೀಯ ಎಂದು ರಾಜ್ಯಸಭಾ ಸದಸ್ಯರೂ ಆಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಆಗಸ್ಟ್ 10ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ಜರುಗಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ […]
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ಬೆಳ್ತಂಗಡಿ ಆಡಳಿತ ಸಜ್ಜು

ಬೆಳ್ತಂಗಡಿ: ಹಿರಿಯರ ತ್ಯಾಗ ಬಲಿದಾನದ ಫಲಶ್ರುತಿಯಾಗಿ ಪಡೆದ ಸ್ವಾತಂತ್ರ್ಯದ ಅಮೃತೋತ್ಸವ ನಮ್ಮಅವಧಿಯಲ್ಲಿ ಆಚರಿಸುವ ಅವಕಾಶ ದೊರೆತದ್ದು ನಮ್ಮಲ್ಲರ ಸೌಭಾಗ್ಯವೇ ಸರಿ. ಆ ನಿಟ್ಟಿನಲ್ಲಿ ವಿವಿಧ ಸರಕಾರಿ ಇಲಾಖೆಗಳು ಮತ್ತು ಸೇವಾಸಂಸ್ಥೆಗಳ ಜೊತೆ ಸೇರಿಕೊಂಡು ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಗೆ ಬೆಳ್ತಂಗಡಿ ಆಡಳಿತ ಸಜ್ಜುಗೊಂಡಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಹರೀಶ್ ಪೂಂಜ ವಿವರ ನೀಡಿದರು.ಕಾರ್ಯಕ್ರಮದ ಅಂಗವಾಗಿ ಆಗಸ್ಟ್ 10ರಂದು ಗುರುವಾಯನಕೆರೆ ನವಶಕ್ತಿ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. […]
ಉಜಿರೆಯಲ್ಲಿ ಆ.17ರಂದು ಅಂತರ್ ಕಾಲೇಜು ಚರ್ಚಾಸ್ಪರ್ಧೆ
ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸಂಸ್ಥಾಪಕರಾದ ಡಿ. ರತ್ನವರ್ಮ ಹೆಗ್ಗಡೆ ಅವರ ಸ್ಮರಣಾರ್ಥ ಆಗಸ್ಟ್ 17ರಂದು ಬುಧವಾರ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತರ್ ಕಾಲೇಜು ಮಟ್ಟದ ಚರ್ಚಾಸ್ಪರ್ಧೆ ನಡೆಯಲಿದೆ.ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆಯುವ ಈ ಸ್ಪರ್ಧೆಯನ್ನು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಉದ್ಘಾಟಿಸಲಿದ್ದು, ಕಾಲೇಜಿನ ಉಪ ಪ್ರಾಂಶುಪಾಲ ಡಾ. ಎ. ಜಯ ಕುಮಾರ್ ಶೆಟ್ಟಿ ಪಾಲ್ಗೊಳ್ಳುವರು. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ 3 ಜಿಲ್ಲೆಗಳ ಪದವಿ ಕಾಲೇಜುಗಳ […]
ಸ್ವಚ್ಛತಾ ರಾಯಭಾರಿಗಳಿಗೆ ಮಾಹಿತಿ ಕಾರ್ಯಾಗಾರ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಛ ಭಾರತ್ ಮಿಷನ್ 2.0 ಯೋಜನೆಯ ಸ್ವಚ್ಛ ಸರ್ವೇಕ್ಷಣೆ 2022-23ನೇ ಸಾಲಿಗೆ 9 ಸ್ವಚ್ಛತಾ ರಾಯಭಾರಿಗಳನ್ನು ನೇಮಕ ಮಾಡಲಾಗಿದ್ದು, ಅವರಿಗೆ ಘನತ್ಯಾಜ್ಯ ನಿರ್ವಹಣೆ ಮತ್ತು ಘನತ್ಯಾಜ್ಯ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಾಗಿ ಆಗಸ್ಟ್ 9ರಂದು ಪುರಸಭೆ ಸಭಾಂಗಣದಲ್ಲಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಾಗಾರದಲ್ಲಿ ಬೆಂಗಳೂರು ವೇದನ್ ಟ್ರಸ್ಟ್ ಸಂಸ್ಥೆಯ ಸ್ವಯಂಸೇವಕಿ ಸುಹಾಸಿನಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಅಗತ್ಯ ಮಾಹಿತಿ ನೀಡಿದರು. ಈ ಕಾರ್ಯಾಗಾರದಲ್ಲಿ […]
ನಿಷ್ಠಾವಂತ ಪೊಲೀಸ್ ಅಧಿಕಾರಿಯ ವರ್ಗಾವಣೆಗೆ ಆಕ್ರೋಶ
ಬೆಳ್ತಂಗಡಿ: ಎಸ್‌ಟಿ ಸಮುದಾಯದ ಭೂಮಿ ಯನ್ನು ಅಕ್ರಮವಾಗಿ ಇನ್ನೊಬ್ಬರ ಹೆಸರಿಗೆ ಪರಭಾರೆ ಮಾಡಿದ ಬೆಳ್ತಂಗಡಿಯ ಖ್ಯಾತ ವಕೀಲರೂ ವಿಶ್ವ ಹಿಂದೂ ಪರಿಷತ್ ಮಾಜಿ ಅಧ್ಯಕ್ಷರೂ ಆಗಿರುವ ಸುಬ್ರಮಣ್ಯ ಆಗರ್ತ ಇವರ ಮೇಲೆ ಎಫ್‌ಐಆರ್ ದಾಖಲು ಮಾಡಿದ ಉಪ್ಪಿನಂಗಡಿ ಪೊಲೀಸ್ ಠಾಣಾ ನಿಷ್ಠಾವಂತ ಅಧಿಕಾರಿಯಾದ ಕುಮಾರ್ ಸಿ. ಕಾಂಬ್ಳೆ ಇವರನ್ನು ಬಿಜೆಪಿ ಸರಕಾರ ವರ್ಗಾವಣೆ ಮಾಡಿದ್ದು; ಇದನ್ನು ಎಸ್ಟಿ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ ರಿ. ಮಂಗಳೂರು ತೀವ್ರವಾಗಿ ಖಂಡಿಸುತ್ತದೆ.ಮರಾಟಿ ಸಮುದಾಯ ತೀರ ಬಡತನ ಕುಟುಂಬದಿಂದ […]