‘ಅಧ್ಯಯನಶೀಲತೆ ನಿತ್ಯನಿರಂತರವಾಗಿರಲಿ’ ಉಜಿರೆ ರುಡ್ ಸೆಟ್ ನಲ್ಲಿ ಕೌಶಲ್ಯ ತರಬೇತಿ ಸಮಾರೋಪದಲ್ಲಿ ಡಾ. ಹೆಗ್ಗಡೆ

ಬೆಳ್ತಂಗಡಿ: ಉನ್ನತ ತರಬೇತುದಾರರು ಇಲ್ಲಿ ತರಬೇತಿ ನೀಡುತ್ತಾರೆ. ಜ್ಞಾನ ಕೊಟ್ಟಸ್ಟು ನಮ್ಮ ಜ್ಞಾನ ಇಮ್ಮಡಿಯಾಗುತ್ತದೆ. ನಾವು ಸಮಯಕ್ಕೆ ಸರಿಯಾಗಿ ನೂತನ ಕೌಶಲ್ಯಕ್ಕೆ ನಮ್ಮನ್ನು ನಾವು ಅಪ್ ಗ್ರೇಡ್ ಮಾಡಿಕೊಳ್ಳಬೇಕು. ನಮ್ಮ ಅಧ್ಯಯನಶೀಲತೆ ನಿತ್ಯನಿರಂತರವಾಗಿರಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಉಜಿರೆ ರುಡ್‌ಸೆಟ್ ಸಂಸ್ಥೆ ಹಾಗೂ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್‌ನ ಜಂಟಿ ಆಶ್ರಯದಲ್ಲಿ ಉಜಿರೆಯ ರುಡ್‌ಸೆಟ್‌ನಲ್ಲಿ 3 ದಿನ ನಡೆದ ರಾಜ್ಯಮಟ್ಟದ ಬ್ಯೂಟೀಶಿಯನ್‌ಗಳ ಉನ್ನತ ಕೌಶಲ್ಯದ ತರಬೇತಿ ಬಳಿಕ […]

ಡಾ| ಟಿ. ಎನ್. ತುಳಪುಳೆ ದತ್ತಿನಿಧಿ ಉಪನ್ಯಾಸ ಮತ್ತು ಸಮ್ಮಾನ

ಬೆಳ್ತಂಗಡಿ: ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪುಸ್ತಕ ಪ್ರೀತಿ, ಓದುವ ಗ್ರಹಣಶಕ್ತಿ ಅಪೂರ್ವವಾದುದು. ಅಂತೆಯೇ ಡಾ. ಬಿ. ಯಶೋವರ್ಮ ಅವರ ಬದುಕು ಕೂಡ ತೆರೆದ ಪುಸ್ತಕದಂತೆ.‌ ಅವರಿಗೆ ಸಾಹಿತ್ಯ ಹಾಗೂ ಸಾಹಿತಿಗಳ ಮೇಲೆ ಅಪಾರ ಪ್ರೀತಿ ಹಾಗು ಗೌರವ. ಕಲಾವಿದರ ಬಗ್ಗೆ ವಿಶೇಷ ಅಭಿಮಾನ. ಸಸ್ಯಗಳ ಮೇಲಿನ ಪ್ರೀತಿ, ಆಡಳಿತದ ದೂರದರ್ಶಿತ್ವ,  ಗೋಷ್ಠಿ-ಸಮ್ಮೇಳನಗಳನ್ನು ಆಸ್ವಾದಿಸಿ ವಿಮರ್ಶಿಸುವ  ಅವರ ಜೀವನ ಹಾಗು ಬದುಕು ವಿದ್ಯಾರ್ಥಿಗಳಿಗೆ  ಅನುಕರಣೀಯ ಮಾದರಿಯಾಗಿದೆ ಎಂದು ಹಿರಿಯ ಸಾಹಿತಿ ಪ. ರಾಮಕೃಷ್ಣ ಶಾಸ್ತ್ರೀ  ನುಡಿದರು.      […]

ಸೌತಡ್ಕದಲ್ಲಿ ವಿಶ್ವ 8ನೇ ಯೋಗ ದಿನಾಚರಣೆ

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ದೇವಸ್ಥಾನ ಹಾಗೂ ಕೊಕ್ಕಡ ಅಮೃತ ಗ್ರಾಮ ಪಂಚಾಯತ್‌ಗಳ ಸಂಯುಕ್ತ ಆಶ್ರಯದಲ್ಲಿ ಸೌತಡ್ಕ ಶ್ರೀ ಗಣೇಶ ಕಲಾ ಮಂದಿರದಲ್ಲಿ ಜೂ 21ರಂದು 8ನೇ ವಿಶ್ವ ಯೋಗ ದಿನಾಚರಣೆ ಆಚರಿಸಲಾಯಿತು.              ಯೋಗ ಪ್ರಾತ್ಯಕ್ಷಿಕೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ  ವಹಿಸಿದ್ದ ಶ್ರೀ ಕ್ಷೇತ್ರ ಸೌತಡ್ಕದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ […]

ಪ್ರೊ. ಎನ್.ಜಿ. ಪಟವರ್ಧನ್‌ರ ಕೃತಿಗಳ ಅನಾವರಣ

ಬೆಳ್ತಂಗಡಿ: ಇಂದು ಪುಸ್ತಕ ಓದುವ ಮತ್ತು ಬರೆಯುವ ಹವ್ಯಾಸ ಕಡಿಮೆಯಾಗಿದೆ.  ಪ್ರತಿಯೊಂದು ಕಡೆ ಸಾಹಿತ್ಯಾರಾಧಕರು ಹಾಗೂ ಸಾಹಿತ್ಯಾಭಿಮಾನಿಗಳು ಇರುತ್ತಾರೆ. ಸಾಹಿತ್ಯವನ್ನು ಆಸಕ್ತಿಯಿಂದ ಓದಿ,ಅಭಿರುಚಿ ಬೆಳೆಸಿಕೊಳ್ಳಬೇಕು. ಪಟವರ್ಧನ್ ಅವರ  ಬರಹಗಳ ಕೃತಿಗಳು  ಲೇಖನಗಳ ಹರಿವು, ಅಳ  ಮತ್ತು ಮಾನವ ಪ್ರಜ್ಞೆಯ ಸ್ತರವನ್ನು ತಟ್ಟುತ್ತದೆ . ಸುಲಲಿತವಾಗಿ ಓದಿಸಿಕೊಂಡು ಹೋಗುವ ಸಂಗ್ರಹಯೋಗ್ಯ ಕೃತಿ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಚಾರ್ಯ ಡಾ. ಪಿ. ಎನ್ .ಉದಯಚಂದ್ರ  ಹೇಳಿದರು.                      […]

ಮಡಂತ್ಯಾರಿನಲ್ಲಿ ವಿಶ್ವ ಯೋಗ ದಿನಾಚರಣೆ

ಬೆಳ್ತಂಗಡಿ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸೇಕ್ರೆಡ್ ಹಾರ್ಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎನ್‌.ಸಿ.ಸಿ, ಯೂತ್ ರೆಡ್ ಕ್ರಾಸ್ ಹಾಗೂ ದೈಹಿಕ ಶಿಕ್ಷಣ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ 2ನೇ ಬಿ.ಕಾಂ. ವಿದ್ಯಾರ್ಥಿನಿ ಸ್ನೇಹ ಬಂಗೇರರ ನೇತೃತ್ವದಲ್ಲಿ ಯೋಗಾಸನ ತರಬೇತಿ ನೀಡು ವುದರ ಮೂಲಕ ಜೂನ್ 8ರಂದು ಯೋಗ ದಿನಾಚರಣೆ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸೇಕ್ರೆಡ್ ಹಾರ್ಟ್ ಕಾಲೆಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್. ಎಮ್., ರಾಷ್ಟ್ರೀಯ ಸೇವಾ ಯೋಜನಾ ಘಟಕದ […]

ಮಡಂತ್ಯಾರಿನಲ್ಲಿ ವಿಶ್ವ ಯೋಗ ದಿನಾಚರಣೆ

ಫೊಟೊಬೆಳ್ತಂಗಡಿ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಸೇಕ್ರೆಡ್ ಹಾರ್ಟ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎನ್‌.ಸಿ.ಸಿ, ಯೂತ್ ರೆಡ್ ಕ್ರಾಸ್ ಹಾಗೂ ದೈಹಿಕ ಶಿಕ್ಷಣ ವಿಭಾಗ ಇದರ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ 2ನೇ ಬಿ.ಕಾಂ. ವಿದ್ಯಾರ್ಥಿನಿ ಸ್ನೇಹ ಬಂಗೇರರ ನೇತೃತ್ವದಲ್ಲಿ ಯೋಗಾಸನ ತರಬೇತಿ ನೀಡು ವುದರ ಮೂಲಕ ಜೂನ್ 8ರಂದು ಯೋಗ ದಿನಾಚರಣೆ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಸೇಕ್ರೆಡ್ ಹಾರ್ಟ್ ಕಾಲೆಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್. ಎಮ್., ರಾಷ್ಟ್ರೀಯ ಸೇವಾ ಯೋಜನಾ ಘಟಕದ […]

ರಾಷ್ಟ್ರಮಟ್ಟದ ಸಾಕ್ಷ್ಯಚಿತ್ರೋತ್ಸವದಲ್ಲಿ ಎಸ್. ಡಿ.ಎಮ್ ಗೆ ಪ್ರಥಮ ಸ್ಥಾನ

ಬೆಳ್ತಂಗಡಿ: ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ರಾಷ್ಟ್ರಮಟ್ಟದ ಸಾಕ್ಷ್ಯಚಿತ್ರ ಮತ್ತು ಕಿರುಚಿತ್ರೋತ್ಸವದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ನಿರ್ಮಿಸಿದ ಸಾಕ್ಷ್ಯಚಿತ್ರ ಪ್ರಥಮ ಸ್ಥಾನದ ಗರಿ ಪಡೆದುಕೊಂಡಿದೆ.ಕಾಸರಗೋಡು ಸೀರೆ ಕೈಮಗ್ಗದ ಕುರಿತ ಸಾಕ್ಷ್ಯಚಿತ್ರ ಇದಾಗಿದ್ದು; ಕೈಮಗ್ಗದ ವಾಸ್ತವತೆ, ನೇಕಾರರ ದಿನಚರಿಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ರಾಮ್ ಮೋಹನ್ ಭಟ್ ಎಚ್. ಅವರ ಸಾಹಿತ್ಯ ಹಾಗೂ ನಿರ್ದೇಶನವಿದ್ದು ‘ಗತವೈಭವ’ ಶೀರ್ಷಿಕೆಯಡಿ ಈ ಸಾಕ್ಷ್ಯಚಿತ್ರ ಮೂಡಿಬಂದಿದೆ. ಈ ಸಾಕ್ಷ್ಯಚಿತ್ರಕ್ಕೆ ಸಂಪತ್ […]

‘ಸಾಧನೆಯ ಹಾದಿ’ ಕೃತಿ ಇಂಡಿಯನ್ ಬುಕ್ ಆಫ್ ರೆಕಾರ್ಡ್‌ಗೆ ಸೇರ್ಪಡೆ

ಬೆಳ್ತಂಗಡಿ: ಯುವ ಸಾಹಿತಿ ಬಹುಮುಖ ಪ್ರತಿಭೆಯ  ಚಂದ್ರಹಾಸ ಬಳಂಜರವರ ‘ಸಾಧನೆಯ ಹಾದಿಗೆ’ ಕೃತಿ  ಇಂಡಿಯನ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯಲ್ಲಿ ದಾಖಲಿಸಿ, ಅವರ  ಸಾಧನೆಗೆ  ಇನ್ನೊಂದು ಗರಿ ಮೂಡಿಸಿದೆ.   ಬಹುಮುಖ ಪ್ರತಿಭೆಯಾಗಿ ಗುರುತಿಸಿ ಕೊಂಡಿರುವ ಅ ವರು ಒಬ್ಬ ಯುವ ಸಾಹಿತಿ, ವಾಗ್ಮಿ, ನಿರೂಪಕ, ಹಾಡುಗಾರ, ನೃತ್ಯಪಟು, ನಟ ಮತ್ತು ತರಬೇತುದಾರ. ಸಾಂಸ್ಕ್ರತಿಕ‌ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರುವ ಇವರು ಹಲವಾರು ಕಾರ್ಯಕ್ರಮಗಳನ್ನು  ಸಂಯೋಜಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಈಗಾಗಲೇ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಿದ್ದು, ಹಲವಾರು […]

ಯೋಗ ತರಬೇತಿ ಶಿಬಿರದ ಸಮಾರೋಪ

ಬೆಳ್ತಂಗಡಿ: ಯೋಗಾಭ್ಯಾಸವು ನಮ್ಮ ದಿನಚರಿಯ ಅವಿಭಾಜ್ಯ ಅಂಗವಾಗಬೇಕು. ಅನೇಕ ಒತ್ತಡಗಳ ಮಧ್ಯೆ ಜೀವನ ಸಾಗಿಸುವ ಇಂದಿನ ಸಂದರ್ಭದಲ್ಲಿ ಪ್ರತಿ ದಿನ ಯೋಗಾಭ್ಯಾಸಕ್ಕಾಗಿ ಸಮಯ ಮೀಸಲಿಟ್ಟು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕ ಡಾl ಅಶ್ವಿನ್ ಹೇಳಿದರುಅವರು ಜೂನ್ 20ರಂದು ಬೆಳ್ತಂಗಡಿಯ ಸಂತೋಮ್ ಟವರ್ ಸಭಾಂಗಣದಲ್ಲಿ 8ನೇ ವಿಶ್ವ ಯೋಗ ದಿನಾಚರಣೆ ನಿಮಿತ್ತ ಶ್ರೀ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ […]

ನಾಲ್ಕು ವರ್ಷದಲ್ಲಿ ಮೂರು ಸಾವಿರ ಹಕ್ಕುಪತ್ರ ವಿತರಣೆ-ಪೂಂಜ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಹಕ್ಕುಪತ್ರವನ್ನು‌ ನಿರಂತರವಾಗಿ ವಿತರಿಸುವ ಮೂಲಕ ಉತ್ತಮ ವ್ಯವಸ್ಥೆಗಳನ್ನು ಜನರಿಗೆ ಮಾಡುವ ದೃಷ್ಟಿಯಿಂದಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಕಳೆದ 4 ವರ್ಷಗಳ ಅವಧಿಯಲ್ಲಿ ಸುಮಾರು 3 ಸಾವಿರ ಹಕ್ಕುಪತ್ರಗಳನ್ನು ವಿತರಿಸುವ ಕೆಲಸ ಶಾಸಕನಾಗಿಮಾಡಿದ್ದೇನೆ ಎಂದು  ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜೂನ್ 20ರಂದು  ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಕಂದಾಯ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಿಸಿ ಮಾತನಾಡುತ್ತಿದ್ದರು. ಸರಕಾರದ ಜನಪರ ಯೋಜನೆಗಳು ತಾಲೂಕಿನ ಕಟ್ಟ ಕಡೆಯ ವ್ಯಕ್ತಿಗೂ ತಲುಪ  […]