ಮಿಶ್ರ ಬೆಳೆಯಿಂದ ಕೃಷಿಕರು ಹೆಚ್ಚಿನ ಲಾಭಗಳಿಸಬೇಕು-ಪೂಂಜಾ

ಬೆಳ್ತಂಗಡಿ: ಪ್ರಸ್ತುತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರಿಗೆ ಉತ್ತಮ ಧಾರಣೆ ಬರುತ್ತಿದ್ದು; ಇದರಿಂದ ರೈತರ ಆರ್ಥಿಕ ಶಕ್ತಿ ಹೆಚ್ಚಾಗುತ್ತಿದೆ. ಅದೇ ರೀತಿಯಲ್ಲಿ ಭವಿಷ್ಯವನ್ನು ದೃಷ್ಠಿಯನ್ನಿಟ್ಟುಕೊಂಡು ವಾತಾವರಣದ ಸ್ಥಿತಿಗೆ ಅನುಗುಣವಾಗಿ ಸಮ್ಮಿಶ್ರ ಬೆಳೆಯತ್ತ ರೈತರು ಮುಂದಾಗಬೇಕು ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.ಅವರು ಮಾರ್ಚ್ 5ರಂದು ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ ಉಜಿರೆ ಇದರ ಗುರುವಾಯನಕೆರೆಯಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ಸುಳ್ಯ ಎಳನೀರು ಪ್ರದೇಶದಲ್ಲಿ ಅಡಿಕೆಗೆ ಹಳದಿ ರೋಗ […]

‘ಹಿಜಾಬ್’ ಮಧ್ಯಂತರ ತೀರ್ಪು ದುರ್ವ್ಯಾಖ್ಯಾನ ವಿರೋಧಿಸಿ ಫೆ 23 ರಂದು ಎಸ್ಸೆಸ್ಸೆಫ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ಪ್ರತಿಭಟನೆ

ಬೆಳ್ತಂಗಡಿ; ಇತ್ತೀಚೆಗೆ ಕರಾವಳಿಯಲ್ಲಿ ಹುಟ್ಟಿಕೊಂಡ ಹಿಜಾಬ್ ಪ್ರಕರಣ ತೀವ್ರಸ್ವರೂಪದ ವಿವಾದವಾಗಿ ಮಾರ್ಪಟ್ಟು ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ. ಪರೀಕ್ಷೆಗಳಿಗೆ ದಿನ ಎಣಿಸುತ್ತಿರುವ ಸಂದರ್ಭದಲ್ಲಿ ಇಂತಹ ವಿವಾದಗಳು ವಿದ್ಯಾಭ್ಯಾಸಕ್ಕೆ ಕಂಟಕವಾಗಿದ್ದು, ಪ್ರಜಾಸತ್ತಾತ್ಮಕ ದಾರಿಯಲ್ಲಿ ಇದಕ್ಕೆ ಕೊನೆ ಹಾಡಬೇಕಾಗಿದೆ . ಈ ನಡುವೆ ನ್ಯಾಯಾಲಯ ನೀಡಿರುವ ಮಧ್ಯಂತರ ತೀರ್ಪನ್ನು ದುರ್ವಾಖ್ಯಾನಗೊಳಿಸಿ ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯರಿಗೆ ಶಿಕ್ಷಣವನ್ನು ನಿರಾಕರಿಸುವ ಪ್ರವೃತ್ತಿ ಕೆಲವು ಸಂಸ್ಥೆಗಳಲ್ಲಿ ಕಂಡುಬಂದಿದ್ದು ಇದು ಅತ್ಯಂತ ಖಂಡನಾರ್ಹ. ಇದರ ವಿರುದ್ಧ ಎಸ್ಸೆಸ್ಸೆಫ್ ಈಸ್ಟ್ ಜಿಲ್ಲೆ ವತಿಯಿಂದ ಮಂಗಳೂರಿನಲ್ಲಿ […]

ದೇರಾಜೆಬೆಟ್ಟ: ಪುನರ್ ಪ್ರತಿಷ್ಠೆ, ಬ್ರಹ್ಮ ಕುಂಭಾಭಿಷೇಕ ಮಹೋತ್ಸವ ಧಾರ್ಮಿಕ ಚಿಂತನೆ ಬಲಗೊಳ್ಳಲಿ: ಪೂಂಜ

ಬೆಳ್ತಂಗಡಿ: ಧಾರ್ಮಿಕ ಶ್ರದ್ಧಾಕೇಂದ್ರಗಳ ಜೀರ್ಣೋದ್ಧಾರದಲ್ಲಿ ಸಕ್ರೀಯವಾಗಿ ಪಾಲು ಪಡೆದುಕೊಂಡಾಗ ನಮ್ಮೊಳಗಿನ ಧಾರ್ಮಿಕ ಚಿಂತನೆ ಬಲಗೊಳ್ಳುತ್ತದೆ. ಮರೋಡಿಯ ಎತ್ತರದ ಸುಂದರ ಪ್ರದೇಶದಲ್ಲಿ ಕೊಡಮಣಿತ್ತಾಯ ದೈವದ ಸಾನಿಧ್ಯ ಬೆಳಗಿದ್ದು, ಎಲ್ಲರ ಸಹಕಾರದಲ್ಲಿ ಪುರಾತನ ಧಾರ್ಮಿಕ ತಾಣವೊಂದು ಅಭಿವೃದ್ಧಿ ಕಂಡಿದೆ. ಮರೋಡಿ ಗ್ರಾಮಸ್ಥರಲ್ಲಿ ಧಾರ್ಮಿಕ ಚಿಂತನೆ ವ್ಯಾಪಕವಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಮರೋಡಿ ಗ್ರಾಮದ ದೇರಾಜೆಬೆಟ್ಟ ಶ್ರೀ ದೈವ ಕೊಡಮಣಿತ್ತಾಯ ಕ್ಷೇತ್ರದಲ್ಲಿ ದೈವಗಳ ಪುನರ್ ಪ್ರತಿಷ್ಠೆ, 108 ಕಲಶ ಸಹಿತ ಬ್ರಹ್ಮ ಕುಂಭಾಭಿಷೇಕ ಹಾಗೂ ನೇಮೋತ್ಸವ ಕಾರ್ಯಕ್ರಮದ ನಿಮಿತ್ತ ಫೆಬ್ರವರಿ […]

ಜೈನರ ಧಾರ್ಮಿಕ ಭಾವನೆಗೆ ಧಕ್ಕೆ-ದೂರು

ಬೆಳ್ತಂಗಡಿ: ಜೈನ ಧರ್ಮದ ಆರಾಧ್ಯ ದೇವರಾದ ಗೊಮಟೇಶ್ವರ ಸ್ವಾಮಿಯ ಬಗ್ಗೆ ಅಶ್ಲೀಲ , ಅವಹೇಳನಕಾರಿಯಾಗಿ  ಸಂದರ್ಶನವೊಂದರಲ್ಲಿ ಆಯುಬ್ ಖನ್ ಹೇಳಿಕೆ ನೀಡಿದ್ದು ಜೈನ ಧರ್ಮದ ಧಾರ್ಮಿಕ ಭಾವನೆಗಳಿಗೆ ನೋವು ಉಂಟಾಗಿದೆ.            ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉಳಿದ ಸಮುದಾಯಗಳಂತೆ ಜೈನಧರ್ಮವು ಧಾರ್ಮಿಕ ಪರಂಪರೆ ಹಾಗೂ ಭಗವಾನ್ ಮಹಾವೀರರ ವಾಣಿಯಂತೆ ‘ಬದುಕು ಮತ್ತು ಬದುಕಲು ಬಿಡು’ ಎನ್ನುವ ತತ್ವ-ಸಿದ್ಧಾಂತ ದೊಂದಿಗೆ ಎಲ್ಲಾ ಧರ್ಮದವರೊಂದಿಗೆ ಸಾಮರಸ್ಯದಿಂದ ಬಾಳುತ್ತಿರುವ ಆಹಿಂಸಾಮಯ ಧರ್ಮವಾಗಿದೆ. ಜೈನ ಧರ್ಮದ ಭಗವಾನ್ ಬಾಹುಬಲಿಯ ಸಂದೇಶಗಳ […]

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ರಾಜ್ಯ ಮಟ್ಟದ ಆನ್ಲೈನ್ ಭಾಷಣ ಸ್ಪರ್ಧೆ

ಬೆಳ್ತಂಗಡಿ : ಜೆಸಿಐ ಬೆಳ್ತಂಗಡಿ ಮಂಜುಶ್ರೀ ಇದರ ಆಶ್ರಯದಲ್ಲಿ ‘ಯುವೋತ್ಸವ’ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನಾಚರಣೆ ಪ್ರಯುಕ್ತ ‘ಯುವ ಮನಸ್ಸುಗಳಲ್ಲಿ ಸ್ವಾಮಿ ವಿವೇಕಾಂದರು’ ಎಂಬ ವಿಷಯದಲ್ಲಿ ರಾಜ್ಯ ಮಟ್ಟದ ಆನ್ಲೈನ್ ಭಾಷಣ ಸ್ಪರ್ಧೆ ನಡೆಯಲಿದೆ ಎಂದು ಜೆಸಿಐ ಅಧ್ಯಕ್ಷ ಪ್ರಸಾದ್ ಬಿ. ಎಸ್. ಹೇಳಿದರು.ಅವರು ಫೆಬ್ರವರಿ 10ರಂದು ಬೆಳ್ತಂಗಡಿಯ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,’ ಸ್ಪರ್ಧಾ ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಶೇಷ ಬಹುಮಾನ ಹಾಗೂ ಜೆಸಿಐ ಟ್ರೋಪಿಯನ್ನು ನೀಡಲಾಗುವುದು. ಕನ್ನಡ ಭಾಷೆಯಲ್ಲಿ ನಡೆಯುವ ಈ […]

ರಾಷ್ಟ್ರೀಯ ಶೋಕ ದಿನಾಚರಣೆಗೂ ಅಗೌರವ

ಬೆಳ್ತಂಗಡಿ: ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಕೇಂದ್ರ ಸರಕಾರ ದೇಶದಾದ್ಯಂತ ಎರಡು ದಿನಗಳ ಶೋಕಾಚರಣೆ ಘೋಷಿಸಿತ್ತು. ರಾಷ್ಟ್ರೀಯ ಶೋಕಾಚರಣೆಯ ಸಂದರ್ಭ ಸರಕಾರಿ ಕಛೇರಿಗಳಲ್ಲಿ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ ರಾಷ್ಟ್ರೀಯ ಶೋಕಾಚರಣೆಯಲ್ಲಿ ತೊಡಗಿಸಿಕೊಳ್ಳಬೇಕಾದ ಬೆಳ್ತಂಗಡಿಯ ತಾಲೂಕು ಆಡಳಿತದ ಕೇಂದ್ರಸ್ಥಾನವಾದ ಮಿನಿ ವಿಧಾನಸೌಧ ಅಥವಾ ತಾಲೂಕು ಕೇಂದ್ರ ಆಡಳಿತ ಕಛೇರಿಯಲ್ಲೇ ರಾಷ್ಟ್ರಧ್ವಜ ಅರ್ಧಕ್ಕೆ ಹಾರಿಸಿ, ಶೋಕಾಚರಣೆ ಆಚರಿಸದೇ ಮೃತ ಗಾನಕೋಗಿಲೆ ಭಾರತರತ್ನ ಲತಾ ಮಂಗೇಶ್ಕರ್‌ರನ್ನು ಅವಮಾನಿಸಿದ್ದು ಮಾತ್ರವಲ್ಲ; ಕೇಂದ್ರ ಸರಕಾರದ ಸೂಚನೆಯನ್ನು ಧಿಕ್ಕರಿಸಿ ಸವಾಲು ಎಸೆದಿರುವುದು […]

ಶೀಘ್ರ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯ ನೀಡುವಂತಾಗಬೇಕು ಬೆಳ್ತಂಗಡಿಯಲ್ಲಿ ವಕೀಲರ ಭವನ ಉದ್ಘಾಟಿಸಿ ನ್ಯಾಯಮೂರ್ತಿ ನಜೀರ್

ಬೆಳ್ತಂಗಡಿ: ದೇಶದಲ್ಲಿ 3 ಕೋಟಿಗೂ ಅಧಿಕ ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ತನಿಖಾ ಹಂತದಲ್ಲಿ ಇದೆ. ಜನತೆಗೆ ನ್ಯಾಯ ಕೊಡುವುದು ಮಾತ್ರ ನಮ್ಮ ಉದ್ದೇಶವಾಗಿರದೇ, ನ್ಯಾಯವನ್ನು ಶೀಘ್ರ ಮತ್ತು ಕಡಿಮೆ ವೆಚ್ಚದಲ್ಲಿ ಕೊಡುವುದು ನಮ್ಮ ಆದ್ಯತೆಯಾಗಬೇಕು’ ಎಂದು ದೇಶದ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶ ನ್ಯಾಯಮೂರ್ತಿ ಅಬ್ದುಲ್ ನಜೀರ್ ಹೇಳಿದರುಅವರು ಡಿಸೆಂಬರ್ 28ರಂದು ಜಿಲ್ಲಾ ನ್ಯಾಯಾಂಗ, ಲೋಕೋಪಯೋಗಿ ಇಲಾಖೆ ಹಾಗೂ ವಕೀಲರ ಸಂಘ ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಳ್ತಂಗಡಿ ನ್ಯಾಯಾಲಯದ ಆವರಣದಲ್ಲಿ ಅಂದಾಜು ರೂಪಾಯಿ 2.10 ಕೋಟಿ ವೆಚ್ಚದಲ್ಲಿ […]

ಡಾ. ಸತೀಶ್ಚಂದ್ರರಿಗೆ ‘ಪ್ರೊಫೆಸರ್ ಆಫ್ ಎಕ್ಸಲೆನ್ಸ್ ‘ ಗೌರವ

ಬೆಳ್ತಂಗಡಿ: ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಅಲ್ಯುಮಿನಿ ಅಸೋಸಿಯೇಷನ್ ವತಿಯಿಂದ ಪ್ರಾಂಶುಪಾಲರಾದ ಡಾ. ಸತೀಶ್ಚಂದ್ರ ಎಸ್. ಅವರಿಗೆ ‘ಪ್ರೊಫೆಸರ್ ಆಫ್ ಎಕ್ಸಲೆನ್ಸ್’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ಲೋಬಲ್ ಅಲ್ಯೂಮಿನಿ ಅಸೋಸಿಯೇಷನ್ ಡಿಸೆಂಬರ್ 22ರಂದು ಕಾಲೇಜಿನಲ್ಲಿ ಆಯೋಜಿಸಿದ್ದ ‘ಹವಾಮಾನ ಬದಲಾವಣೆ’ ಕುರಿತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಪುರಸ್ಕರಿಸಲಾಯಿತು. ಪ್ರತಿವರ್ಷ ಕಾಲೇಜಿನ  ಪ್ರಾಧ್ಯಾಪಕರ ಗಮನಾರ್ಹ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.ಡಾ. ಸತೀಶ್ಚಂದ್ರ ಎಸ್‌ ಅವರು 36 ವರ್ಷಗಳಿಂದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದು, ಕಳೆದ ಮೂರು […]

ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ರಾಜ್ಯಪಾಲರ ಅಧಿಕೃತ ಭೇಟಿ,ಸೇವಾ ಚಟುವಟಿಕೆಗಳ ಅನಾವರಣ.

ಬೆಳ್ತಂಗಡಿ: ಸೇವಾ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಹಾಗೂ ದೀರ್ಘ ಇತಿಹಾಸವುಳ್ಳ ಬೆಳ್ತಂಗಡಿ ಲಯನ್ಸ್ ಕ್ಲಬ್‌ಗೆ ಲಯನ್ಸ್ ಜಿಲ್ಲಾ ರಾಜ್ಯಪಾಲ ವಸಂತ ಕುಮಾರ್ ಶೆಟ್ಟಿ ಅವರ ಅಧಿಕೃತ‌ ಭೇಟಿ ಮತ್ತು ವಿವಿಧ ಸೇವಾ ಚಟುವಟಿಕೆಗಳ ಅನಾವರಣ ಕಾರ್ಯಕ್ರಮ ಡಿಸೆಂಬರ್ 23ರಂದು ನಡೆಯಲಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಹೇಂಮತ ರಾವ್ ಯರ್ಡೂರು, ಪ್ರಾಂತ್ಯಾಧ್ಯಕ್ಷ ಧರಣೇಂದ್ರ ಕೆ. ಜೈನ್ ತಿಳಿಸಿದರು.ಬೆಳ್ತಂಗಡಿಯ ಪ್ರೆಸ್‌ಕ್ಲಬ್‌ನಲ್ಲಿ ಡಿಸೆಂಬರ್ 22ರಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.ಅಂದು ಅಪರಾಹ್ನ 3.00 ಗಂಟೆಗೆ ಲಯನ್ಸ್ ಭವನದಲ್ಲಿ ರಾಜ್ಯಪಾಲರನ್ನು ಸ್ವಾಗತಿಸಿಕೊಂಡು ಬಳಿಕ […]

ಡಿ. 22ರಂದು ರೋಟರಿ ಗವರ್ನರ್ ಬೆಳ್ತಂಗಡಿಗೆ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮಗಳ ಸಮಾರೋಪ ಡಿಸೆಂಬರ್ 22 ರಂದು ಕಾಶಿಬೆಟ್ಟು ಅರಳಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಜರುಗಲಿದ್ದು, ಆ ದಿನ ಬಹುವಿಧ ಸೇವಾ ಚಟುವಟಿಕೆಗಳ ಅನಾವರಣ ಹಾಗೂ ರೋಟರಿ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮ ವ್ಯವಸ್ಥಿತವಾಗಿ ಆಯೋಜಿಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ತಿಳಿಸಿದರು.ಬೆಳ್ತಂಗಡಿಯ ಪತ್ರಿಕಾಭವನದಲ್ಲಿ ಡಿಸೆಂಬರ್ 18ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ವಿವರ ನೀಡಿದರು.ರಾಜ್ಯಪಾಲರ ಭೇಟಿಯ ಅಂಗವಾಗಿ ರೋಟರಿ ಪ್ರಮುಖ ಯೋಜನೆ ಘೋಷಿಸಿದ್ದು, ಬೆಳ್ತಂಗಡಿ […]