ಬೆಳ್ತಂಗಡಿ ಡಿಕೆಆರ್‌ಡಿಎಸ್ ಸಂಸ್ಥೆಯಿಂದ ವಿಶ್ವ ಏಡ್ಸ್ ದಿನಾಚರಣೆ

ಬೆಳ್ತಂಗಡಿ: ಹೆಚ್‌ಐವಿ ರೋಗ ಹರಡುವಿಕೆ ಈಗ ಕಡಿಮೆಯಾಗಿದೆ. ಇದರ ಬಗ್ಗೆ ಬಹಳಷ್ಟು ಜನಜಾಗೃತಿ ಉಂಟಾಗಿದೆ. ರೋಗ ಪೀಡಿತರು ಮರಣ ಹೊಂದುತ್ತಾರೆ ಎಂಬ ಅಭಿಪ್ರಾಯ ಇತ್ತು. ನಮ್ಮ ಡಿಕೆಆರ್‌ಡಿಎಸ್ ಸಂಸ್ಥೆಯಿಂದ ಏಡ್ಸ್ ಬಾಧಿತರಿಗೆ ಮತ್ತು ಸೋಂಕಿತರಿಗೆ ಎಲ್ಲರಂತೆ ಸಮಾನ ಬದುಕು ಕಟ್ಟಿಕೊಡುವ ಕೆಲಸ ಮಾಡಿಕೊಂಡು ಬರುತ್ತಿದ್ದೇವೆ. ಎಲ್ಲರೂ ಅವರ ಸೇವೆಗೆ ಸ್ವಯಂ ಪ್ರೇರಿತರಾಗಿ ತೊಡಗಿಕೊಳ್ಳಬೇಕು ಎಂದು ಡಿಕೆಆರ್‌ಡಿಎಸ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.ಅವರು ದಕ್ಷಿಣ ಕನ್ನಡ ರೂರಲ್ ಡೆವಲಪ್‌ಮೆಂಟ್ […]

ಜನರ ಪ್ರೀತಿ-ವಿಶ್ವಾಸವೇ ಕ್ಷೇತ್ರದ ದೊಡ್ಡ ಸಂಪತ್ತು-ಡಾ. ಹೆಗ್ಗಡೆ

ಬೆಳ್ತಂಗಡಿ: ಜನರ ಪ್ರೀತಿ, ಅವರು ನಮ್ಮ ಮೇಲೆ‌ ಇಟ್ಟಿರುವ ವಿಶ್ವಾಸ ಇವುಗಳೇ ಕ್ಷೇತ್ರದ ಅತಿ ದೊಡ್ಡ ಸಂಪತ್ತು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನುಡಿದರು. ಲಕ್ಷದೀಪೋತ್ಸವದ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳವರೆಗೆ ನಡೆದ ಒಂಭತ್ತನೆಯ ವರ್ಷದ ‘ಭಕ್ತರ ಪಾದಯಾತ್ರೆ’ಯನ್ನು ಸ್ವಾಗತಿಸಿ,‌ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು.ಭಕ್ತರ ಪ್ರೇರಣೆಯಿಂದ, ಪ್ರಧಾನಿ ಮೋದಿಯವರು ಶ್ರೀ ಕ್ಷೇತ್ರಕ್ಕೆ ಬಂದು ಆಡಿದ ಮಾತಿನಿಂದ, ರುಡ್‌ಸೆಟ್ ಕಾರ್ಯಕ್ರಮದಲ್ಲಿ ದೇಶದ ನಾನಾ ಭಾಗದ ಜನರು ಬಂದವರು […]

ಮಡಂತ್ಯಾರು ಕಾಲೇಜಿನಲ್ಲಿ ಬಿಸಿಯೂಟ

ಬೆಳ್ತಂಗಡಿ: ಸೇಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರಿನ ಬಿಸಿಯೂಟ ಯೋಜನೆಗೆ ನವೆಂಬರ್ 25ರಂದು ಚಾಲನೆ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಎನ್. ಜೋಸೆಫ್ ಹಾಗೂ ನಿಕಟ ಪೂರ್ವ ಪ್ರಾಂಶುಪಾಲರಾದ ಪ್ರೊ. ಅಲೆಕ್ಸ್ ಐವನ್ ಸಿಕ್ವೇರಾ ವಿದ್ಯಾರ್ಥಿಗಳಿಗೆ ಊಟ ಬಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಸಂಯೋಜಕರದ ಪ್ರೊ. ಬೇಬಿ ಎ., ಪ್ರೊ. ಉಷಾ, ಪ್ರಾಧ್ಯಾಪಕರಾದ ಜನಾರ್ಧನ ರಾವ್, ರಾಜೇಶ್ ಶೆಟ್ಟಿ ಮತ್ತಿತರರು ಹಾಜರಿದ್ದರು ಹಲವಾರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ಬಿಸಿಯೂಟ ಯೋಜನೆಯ ಧ್ಯೇಯೋದ್ಧೇಶಗಳ ಕುರಿತು ಪ್ರೊ. […]

ಕನ್ನಡಪರ ಚಿಂತನೆಗಳ ಅನುಷ್ಠಾನಕ್ಕೆ ನನ್ನನ್ನು ಬೆಂಬಲಿಸಿ: ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ. ಶ್ರೀನಾಥ್ ಮನವಿ

ಬೆಳ್ತಂಗಡಿ: ಕನ್ನಡದ ಬೆಳವಣಿಗೆ ದೃಷ್ಟಿಯಿಂದ ಏಕಮುಖವಾದ ಚಿಂತನೆ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ ಸೃಜನಶೀಲ ಕಾರ್ಯಕ್ರಮಗಳನ್ನು ರೂಪಿಸುವುದು, ಹಿರಿಯರ ಮಾರ್ಗದರ್ಶನದಿಂದ ಯುವ ಸಾಹಿತಿ ಕವಿಗಳಿಗೆ ಹೆಚ್ಚಿನ ಅವಕಾಶ ಮತ್ತು ಪ್ರೇರಣೆ ಲಭಿಸುವಂತೆ ಮಾಡುವ ಉದ್ದೇಶ ಇಟ್ಟುಕೊಂಡು ಈ ಬಾರಿಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿರುವ ಡಾ. ಎಂ. ಪಿ. ಶ್ರೀನಾಥ್ ಅವರನ್ನು ಎಲ್ಲರೂ ಬೆಂಬಲಿಸಿ ಜಯಗಳಿಸುವಂತೆ ಮಾಡಬೇಕು ಎಂದು ವಾಣಿ ಕಾಲೇಜಿನ ಪ್ರಾಂಶುಪಾಲ, ಸಾಹಿತಿ ಯದುಪತಿ ಗೌಡ ಹೇಳಿದ್ದಾರೆ.ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನವೆಂಬರ್ 17ರಂದು ಕರೆದಿದ್ದ […]

ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಯ ಧ್ಯೇಯದೊಂದಿಗೆ ಚುನಾವಣೆಗೆ ಸ್ಪರ್ಧೆ- ಡಾ. ಎಂ.ಎನ್. ರಾಜೇಂದ್ರ ಕುಮಾರ್

ಬೆಳ್ತಂಗಡಿ: ಪಂಚಾಯತ್ ಸದಸ್ಯರು, ಸಹಕಾರಿ ಬಂಧುಗಳ ಹಾಗೂ ಆತ್ಮೀಯರ ಅಭಿಲಾಷೆಯಂತೆ ಈ ಬಾರಿಯ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.ಅವರು ನವೆಂಬರ್ 14ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿ, ಗಣಪತಿ ದೇವರ ದರ್ಶನ ನಡೆಸಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.ಗ್ರಾಮ ಪಂಚಾಯತ್, ನಗರ ಪಂಚಾಯತ್ ಹಾಗೂ ಪಟ್ಟಣ […]

ಗೃಹ ಸಚಿವ ಹಾಗೂ ಸ್ವಾಮೀಜಿಯ ಗುಪ್ತ ಸಮಾಲೋಚನೆ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನವೆಂಬರ್ 9 ರಂದು ಪೊಲೀಸ್ ಠಾಣೆಯ ಕಟ್ಟಡದ ಶಿಲಾನ್ಯಾಸಕ್ಕೆ ಆಗಮಿಸಿದ ರಾಜ್ಯ ಸರಕಾರ ಗೃಹ ಸಚಿವ ಅರಗ ಜ್ಞಾನೇಂದ್ರ ಶಿಲಾನ್ಯಾಸ ಕಾರ್ಯಕ್ರಮ ಪೂರೈಸಿ ಸುಲ್ಕೇರಿ ಶಾಲೆಗೆ ತೆರಳುವ ಹಾದಿ ಮಧ್ಯೆ ಧರ್ಮಸ್ಥಳ ಕನ್ಯಾಡಿಯ ನಿತ್ಯಾನಂದ ನಗರದಲ್ಲಿರುವ ಶ್ರೀ ರಾಮಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಸೀತಾರಾಮರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರ ಕೋರಿಕೆಯಂತೆ ಶ್ರೀ ರಾಮಕ್ಷೇತ್ರಕ್ಕೆ ಭೇಟಿ ನೀಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಬಳಿಕ ಕ್ಷೇತ್ರದ ಬ್ರಹ್ಮಾನಂದ […]

‘ಸಂಘದ ಮೂಲಕ ಸಮಾಜದ ಬಂಧುಗಳಿಗೆ ಇನ್ನಷ್ಟು ಸಹಾಯ ನೀಡುವಂತಾಗಲಿ’ಬೆಳ್ತಂಗಡಿ ಬಿಲ್ಲವ ಸಂಘದ ಮಹಾಸಭೆಯಲ್ಲಿ ಬಂಗೇರ

ಬೆಳ್ತಂಗಡಿ : ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಆರ್ಥಿಕವಾಗಿ ಇನ್ನಷ್ಟು ಸದೃಢವಾಗಿ ಬೆಳೆಯಬೇಕು. ಆ ಮೂಲಕ ಸಮಾಜದ ಬಂಧುಗಳಿಗೆ, ವಿದ್ಯಾರ್ಥಿಗಳಿಗೆ ಸಹಕಾರ ನೀಡುವಲ್ಲಿ ಇನ್ನಷ್ಟು ಹೆಚ್ಚಿನ ಮುತುವರ್ಜಿಯನ್ನು ಬೆಳೆಸಿಕೊಳ್ಳಬೇಕು ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.ಅವರು ನವೆಂಬರ್ 7ರಂದು ಬೆಳ್ತಂಗಡಿಯ ಶ್ರೀ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಸಭಾಭವನದಲ್ಲಿ ನಡೆದ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವಾರ್ಷಿಕ ಮಹಾಸಭೆಯನ್ಬು ಉದ್ದೇಶಿಸಿ ಮಾತನಾಡುತ್ತಿದ್ದರು.ಸಂಘಕ್ಕೆ […]

ಕರ್ನಾಟಕ ಮುಸ್ಲಿಂ ಜಮಾಅತ್ ಕಣಿಯೂರು ಬ್ಲಾಕ್: ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ: ಮುಸ್ಲಿಂ ಸಮುದಾಯದ ಅಭಿವೃದ್ಧಿ, ಸಮಾಜದ ಸಾಂಸ್ಕೃತಿಕ-ಆರ್ಥಿಕ-ಸಾಮಾಜಿಕ-ಶೈಕ್ಷಣಿಕ-ಆರೋಗ್ಯ, ಔದ್ಯೋಗಿಕ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಸಬಲೀಕರಣ, ನಾಡಿನ ಸರ್ವ ಜನರ ಮಧ್ಯೆ ಸಾಮರಸ್ಯ ಸೌಹಾರ್ದತೆ ಸಹಿಷ್ಣುತೆ ಸೃಷ್ಟಿಸಿ, ರಾಷ್ಟ್ರದ ಏಕತೆಗಾಗಿ ಶ್ರಮಿಸುವ ಧ್ಯೇಯದೊಂದಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ.ನವೆಂಬರ್ 1ರಿಂದ 30ರತನಕ ನಡೆಯುವ ಸದಸ್ಯತ್ವ ಅಭಿಯಾನದ ಭಾಗವಾಗಿ, ಕಣಿಯೂರು ಬ್ಲಾಕ್ ವ್ಯಾಪ್ತಿಯಲ್ಲಿ ಚಾಲನೆಯನ್ನು ನೀಡಲಾಯಿತು. ಬ್ಲಾಕ್ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಅಶ್ರಫ್ ಸಖಾಫಿ ಮೂಡಡ್ಕ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು, SMA ಕುಪ್ಪೆಟ್ಟಿ ರೀಜನಲ್ ಹಾಗೂ […]

ಜಾತಿ ನಿಂದನೆ ದೂರು; ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು

ಬೆಳ್ತಂಗಡಿ: ಅಕ್ಟೋಬರ್ 13ರಂದು ನಡೆದ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಮಾನ್ಯ ಸಭೆಯಲ್ಲಿ ಸಂಘದ ನಿರ್ದೇಶಕ ರಘುಚಂದ್ರ ರಾವ್ ಸಂಘದ ಇನ್ನೋರ್ವ ನಿರ್ದೇಶಕ ನಾರ್ಯ ನಿವಾಸಿ ಶೀನ ಎಂಬವರನ್ನು ಜಾತಿ ಹೆಸರಲ್ಲಿ ನಿಂದನೆ ಮಾಡಿರುವ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಅಕ್ಟೋಬರ್ 13ರಂದು ನಡೆದ ಸಂಘದ ಸಾಮಾನ್ಯ ಸಭೆಯಲ್ಲಿ ಇತ್ತೀಚೆಗೆ ಅಸಹಜವಾಗಿ ನಿಧನರಾದ ಸಂಘದ ದೈನಿಕ ಠೇವಣಿ ಸಂಗ್ರಾಹಕ ಜಗದೀಶ್‌ರ ಕುಟುಂಬಕ್ಕೆ ಸಂಘದಿಂದ ಆರ್ಥಿಕ ನೆರವು ನೀಡುವ ವಿಚಾರ ಪ್ರಸ್ತಾಪವಾದಾಗ ಮಾತನಾಡಿದ ನಿರ್ದೇಶಕ ರಘುಚಂದ್ರ […]

ರಾಜ್ಯೋತ್ಸವ ಆಚರಣೆ ಶಿಷ್ಟಾಚಾರಕ್ಕೆ ಸವಾಲ್ : ಹಸಿದ ಮಕ್ಕಳು ಬರಿಹೊಟ್ಟೆಯಲ್ಲಿ ಮನೆಗೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಆಡಳಿತದ ನೇತೃತ್ವದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಆಶ್ರಯದಲ್ಲಿ ನವೆಂಬರ್ 1ರಂದು ಬೆಳ್ತಂಗಡಿಯ ಮಿನಿವಿಧಾನಸೌಧದ ಆವರಣದಲ್ಲಿ ನಡೆದ 66ನೇ ಕನ್ನಡ ರಾಜ್ಯೋತ್ಸವವು ಸಾಕಷ್ಟು ಎಡವಟ್ಟುಗಳಿಗೆ ಸಾಕ್ಷಿಯಾಯಿತು.ರಾಜ್ಯದೆಲ್ಲೆಡೆ ಶಿಷ್ಟಾಚಾರದಂತೆ ಬೆಳಿಗ್ಗೆ ಗಂಟೆ 9-00ರಿಂದ 9-30ರೊಳಗೆ ಧ್ವಜಾರೋಹಣವಾದರೆ; ಬೆಳ್ತಂಗಡಿಯಲ್ಲಿ ಮಾತ್ರ ಗಂಟೆ 10-00 ಆದರೂ ಧ್ವಜಾರೋಹಣಕ್ಕೆ ಮುಹೂರ್ತ ಕೂಡಿ ಬಂದಿರಲೇ ಇಲ್ಲ. ಈ ರೀತಿ ಶಿಷ್ಟಾಚಾರ ಉಲ್ಲಂಘನೆಗೆ ಕಾರಣ ಎಲ್ಲರಿಗೂ ಗೊತ್ತಿತ್ತು. ಆದರೆ ಅಭಿಪ್ರಾಯಿಸುವ ‘ದಂ’ ಯಾರಿಗೂ ಇದ್ದಂತಿರಲಿಲ್ಲ. ಶಾಸಕ ಹರೀಶ್ ಪೂಂಜರಿಗೆ ಬಕೆಟ್ ಹಿಡಿಯುವುದೇ […]