ರಾಜರ್ಷಿಯಾಗಿ ಬದುಕಿದ ಪದ್ಮನಾಭ ಮಾಣಿಂಜ- ವಿಖ್ಯಾತಾನಂದ ಶ್ರೀಗಳು

ಬೆಳ್ತಂಗಡಿ: ವಿಶಾಲ ಮನೋ ಹೃದಯದ ಪರಿಪೂರ್ಣತೆ ಹೊಂದಿದ ವ್ಯಕ್ತಿ ಪದ್ಮನಾಭ ಮಾಣಿಂಜ. ತನ್ನ ಜೀವಿತದ ಅಮೂಲ್ಯ ಸಮಯವನ್ನು ಸಮಾಜಕ್ಕೆ ನೀಡಿದವರು. ಅವರು ಜೀವಿತದಲ್ಲಿ ರಾಜರ್ಷಿಯಾಗಿದ್ದು, ಅವರ ಜೀವಿತ ಶೈಲಿ ಸಮಾಜಕ್ಕೆ ಸದಾ ಆದರ್ಶವಾದುದು ಎಂದು ಬೆಂಗಳೂರು ಸೋಲೂರು ಆರ್ಯ ಈಡಿಗ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಹೇಳಿದರು.ಅವರು ಬೆಳ್ತಂಗಡಿ ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರಿ ಸಂಘದಲ್ಲಿ 14 ವರ್ಷ ಅಧ್ಯಕ್ಷರಾಗಿ, ಸಂಘದ 25 ಶಾಖೆಗಳ ರೂವಾರಿ ಈಚೆಗೆ ನಿಧನರಾದ ಎನ್. ಪದ್ಮನಾಭ ಮಾಣಿಂಜರಿಗೆ ಬೆಳ್ತಂಗಡಿ […]
ರಬ್ಬರ್ ಸೊಸೈಟಿ ಪದ್ಮನಾಭ ಎನ್. ಮಾಣಿಂಜರಿಗೆ ನುಡಿನಮನ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಉಜಿರೆ ಇದರ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಪದ್ಮನಾಭ ಎನ್. ಮಾಣಿಂಜ ಇತ್ತೀಚೆಗೆ ನಿಧನರಾಗಿದ್ದು; ಇವರು ಸಂಘಕ್ಕೆ ನೀಡಿದ ಮಾರ್ಗದರ್ಶಕ ಸೇವೆಯನ್ನು ಸ್ಮರಿಸಿ ನುಡಿನಮನ ಕಾರ್ಯಕ್ರಮ ಸಂಘದ ದಿ. ಜಿ.ಎನ್. ಭಿಡೆ ಸಭಾಭವನದಲ್ಲಿ ನಡೆಸಲಾಯಿತು.ಸಂಘದ ಅಧ್ಯಕ್ಷರಾದ ಶ್ರೀಧರ ಜಿ. ಭಿಡೆ ಯವರು ಮಾತನಾಡಿ; ಮಿತಭಾಷಿಯಾಗಿ, ಸರಕಾರಿ ಉನ್ನತ ಸೇವೆಯ ಅನುಭವವನ್ನು ಸಂಘಕ್ಕೆ ಅನೇಕ ಅವಧಿಗೆ ಉಪಾಧ್ಯಕ್ಷರಾಗಿ ಮತ್ತು ನಿರ್ದೇಶಕರಾಗಿ ನೀಡಿದ್ದರು. ಸಮಾಜದಲ್ಲಿ […]
ಇತಿಹಾಸ ಪ್ರಸಿದ್ಧ ಕಾಜೂರು ಉರೂಸ್ ಸಾರ್ವಜನಿಕ ಸಮಾವೇಶ

ಬೆಳ್ತಂಗಡಿ: ಕಾಜೂರು ಇಂದು ಪಾವಿತ್ರ್ಯತೆಯ ಜೊತೆಗೆ ಸೌಹಾರ್ದತೆ ಮತ್ತು ಮಾಹಿತಿಯ ಕ್ಷೇತ್ರವಾಗಿದೆ. ಉರೂಸ್ ಸಮಾರಂಭಕ್ಕೆ ಪ್ರತಿ ಚುನಾವಣೆಗೆ ಸ್ಪರ್ಧಿಸುವ ಮುನ್ನ ಬಂದು ಪ್ರಾರ್ಥಿಸಿ ತೆರಳುವ ಪರಂಪರೆಯನ್ನು ಅನುಸರಿಸಿಕೊಂಡು ಬರುತ್ತಿದ್ದೇನೆ. ಇಂತಹಾ ಕ್ಷೇತ್ರಕ್ಕೆ ಮುಂದಿನ 30 ವರ್ಷಕ್ಕೆ ಬೇಕಾದಂತೆ ಭವಿಷ್ಯದ ಜನಾಂಗಕ್ಕೆ ಮೂಲಸೌಕರ್ಯದ ವಾತಾವರಣ ನಿರ್ಮಿಸಿ ಮಾಸ್ಟರ್ ಪ್ಲಾನ್ ರಚಿಸುವ ಮೂಲಕ ಅನುದಾನ ಒದಗಿಸುವಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳೋಣ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಫರೀದ್ ಹೇಳಿದರು.ಇತಿಹಾಸ ಪ್ರಸಿದ್ಧ ಸರ್ವಧರ್ಮೀಯ ಸಮನ್ವಯ ಕೇಂದ್ರ ಕಾಜೂರಿನಲ್ಲಿ ಫೆಬ್ರವರಿ 2ರಂದು […]
ಬೆನಕ ಆಸ್ಪತ್ರೆಯ ಸೇವೆ ಅನುಕರಣೀಯ ಯು.ಟಿ.ಖಾದರ್

ಬೆಳ್ತಂಗಡಿ: ಇಬ್ಬರು ವೈದ್ಯರಿಂದ ಆರಂಭವಾದ ಆಸ್ಪತ್ರೆ ಇಂದು ವಿವಿಧ ಆರೋಗ್ಯ ಕ್ಷೇತ್ರಗಳಲ್ಲಿ ಪರಿಣತಿ ಪಡೆದ 40 ಕ್ಕಿಂತಲೂ ಅಧಿಕ ತಜ್ಞ ವೈದ್ಯರ ಸೇವೆಯನ್ನು ಬೆನಕ ಉಜಿರೆಯಂತಹ ಗ್ರಾಮೀಣ ಪರಿಸರದಲ್ಲಿ ಒದಗಿಸುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಬದ್ಧತೆಯೊಂದಿಗೆ ಆರಂಭವಾದ ಉಜಿರೆಯ ಬೆನಕ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಸಮಾಜದ ಅಗತ್ಯತೆಗಳಿಗೆ ಸದಾ ಸ್ಪಂದಿಸುತ್ತಾ ಬಂದಿರುವುದು ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ. ಬೆನಕ ಆಸ್ಪತ್ರೆ ಈ ಪ್ರದೇಶದ ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ […]
ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಬೆಳ್ತಂಗಡಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರ ಅಧಿಸೂಚನೆಯಂತೆ ರಾಜ್ಯದ ಎಲ್ಲ ಮೊರಾರ್ಜಿ ದೇಸಾಯಿ, ಇಂದಿರಾ ಗಾಂಧಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ನಾರಾಯಣ ಗುರು ವಸತಿ ಶಾಲೆಗಳ 6ನೇ ತರಗತಿಯ ಪ್ರವೇಶಕ್ಕೆ ಆನ್‌ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಹಾಗೂ ವಿಶೇಷ ವರ್ಗದ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ಧೇಶದಿಂದ ಸ್ಥಾಪಿಸಿದ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ […]
ಜ. 23 – ಬೆಳ್ತಂಗಡಿ ಕಥೊಲಿಕ್ ಕ್ರೆಡಿಟ್ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ: 1997-98ನೇ ಸಾಲಿನಲ್ಲಿ ಸುಮಾರು 604 ಸದಸ್ಯರನ್ನು ಒಳಗೊಂಡು ರೂಪಾಯಿ 6 ಲಕ್ಷದಷ್ಟು ಪಾಲು ಬಂಡವಾಳದೊಂದಿಗೆ 1998 ಜನವರಿ 26 ರಂದು ‘ಪರಸ್ಪರ ಸಹಕಾರ’ ಎಂಬ ಧ್ಯೇಯವನ್ನು ಮುಂದಿಟ್ಟುಕೊಂಡು ಅಂದಿನ ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ವಂದನೀಯ ಬಿಷಪ್ ಅಲೋಶಿಯಸ್ ಪಾವ್ಲ್ ಡಿ’ಸೊಜರವರಿಂದ ಆರ್ಶೀವಚನಗೊಂಡು, ಅಂದಯ ಬೆಳ್ತಂಗಡಿಯ ವಿದಾನಸಭಾ ಕ್ಷೇತ್ರದ ಶಾಸಕರಾಗಿದ್ದ ಕೆ. ವಸಂತ ಬಂಗೇರ ರಿಂದ ಉದ್ಘಾಟನೆಗೊಂಡು; ಸುಮಾರು ನಾಲ್ಕು ವರ್ಷಗಳ ಕಾಲ ಬೆಳ್ತಂಗಡಿಯ ಪಿಂಟೊ ಕಾಂಪ್ಲೆಕ್ಸ್‌ನಲ್ಲಿ ಎಲ್ಲರ ಸಹಕಾರದೊಂದಿಗೆ ವ್ಯವಹಾರ ನಡೆಸಿ ದಿನಾಂಕ 07-07-2001ರಂದು ಸುಮಾರು […]
ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ದಿಯಾ ಎಂ ಕೋಟ್ಯಾನ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ವಿಶ್ವವಿದ್ಯಾಲಯ ಮೈಸೂರು ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಗುರುವಾಯನಕೆರೆ ದೇವಿಕಿರಣ್ ಕಲಾನಿಕೇತನದ ವಿದ್ಯಾರ್ಥಿನಿ ದಿಯಾ ಎಂ. ಕೋಟ್ಯಾನ್ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ. ಇವರು ವಿದುಷಿ ಸ್ವಾತಿ ಜಯರಾಮ್ ಮತ್ತು ವಿದುಷಿ ಪ್ರಥ್ವಿ ಸತೀಶ್ ರವರ ಶಿಷ್ಯೆಯಾಗಿದ್ದು ಪತ್ರಕರ್ತ ಮನೋಹರ್ ಬಳಂಜ ಮತ್ತು ಬೆಳ್ತಂಗಡಿ ಸಮುದಾಯ ಆಸ್ಪತ್ರೆಯ ಶುಷ್ರೂಷಕಿ ಲಿಖಿತಾ ದಂಪತಿಗಳ ಪುತ್ರಿ. ಪ್ರಸ್ತುತ ಬೆಳ್ತಂಗಡಿಯ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂಭತ್ತನೇ ತರಗತಿಯ […]
ಉಜಿರೆ ಬೆನಕ ಆಸ್ಪತ್ರೆಗೆ ರಜತ ಸಂಭ್ರಮ ಹಾಗೂ ನೂತನ ವಿಸ್ತೃತ ಕಟ್ಟಡ ಉದ್ಘಾಟನೆ

ಬೆಳ್ತಂಗಡಿ: ಕೇವಲ ಏಳು ಹಾಸಿಗೆಗಳು ಮತ್ತು ಇಬ್ಬರು ವೈದ್ಯರು ಹಾಗೂ ಇಬ್ಬರು ದಾದಿಯರಿಂದ ಎರಡು ದಶಕಗಳ ಹಿಂದೆ ಪ್ರಾರಂಭವಾದ ಬೆನಕ ಆಸ್ಪತ್ರೆ ಸ್ಥಳಿಯ ಅಗತ್ಯತೆಗಳಿಗೆ ಅನುಗುಣವಾಗಿ ತನ್ನ ಸೇವೆಯನ್ನು ಹಂತ ಹಂತವಾಗಿ ವಿಸ್ತರಿಸುತ್ತಾ ಇದೀಗ 130 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ಸೇವೆಗಳನ್ನೊಳಗೊಂಡ ಖ್ಯಾತ ಆಸ್ಪತ್ರೆಯಾಗಿ ಬೆಳೆದು ನಿಂತಿದೆ ಎಂದು ಉಜಿರೆ ಬೆನಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಗೋಪಾಲಕೃಷ್ಣ ಕೆ. ಹೇಳಿದರು.ಅವರು ಜನವರಿ 16 ರಂದು ಆಸ್ಪತ್ರೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ರಜತ ಸಂಭ್ರಮದಲ್ಲಿರುವ ಆಸ್ಪತ್ರೆಯು ಗುಣಮಟ್ಟದ […]
ಡಾ| ಗೋಪಾಲಕೃಷ್ಣ ಮತ್ತು ಡಾ| ಭಾರತಿ ದಂಪತಿಗಳ ಸೇವೆ ಅನನ್ಯ-ಸುಬ್ರಹ್ಮಣ್ಯಶ್ರೀಗಳು

ಬೆಳ್ತಂಗಡಿ: ಉಜಿರೆಯ ಬೆನಕ ಆಸ್ಪತ್ರೆಗೆ ಜನವರಿ 13ರಂದು ಚಿತ್ತೈಸಿದ ಕುಕ್ಕೆ ಸುಬ್ರಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥಂಗಳು ಆಸ್ಪತ್ರೆಯ ವಿಸ್ಕೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ದೀಪ ಬೆಳಗಿಸಿ ಚಾಲನೆ ನೀಡಿದರು. ನಂತರ ಆಶೀರ್ವಚನ ನೀಡುತ್ತಾ; ಉಜಿರೆಯಂಥ ಸಣ್ಣ ಪ್ರದೇಶದಲ್ಲಿ ಚಿಕ್ಕ ಆಸ್ಪತ್ರೆಯನ್ನು ಆರಂಭಿಸಿ, ಕಳೆದ 25 ವppರ್ಷಗಳಿಂದ ಅವಿರತ ಪರಿಶ್ರಮದಿಂದ ಸಕಲ ಸೌಲಭ್ಯಗಳನ್ನು ಒಳಗೊಂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಪರಿವರ್ತಿಸಿರುವುದು ಅವರ ನಿರಂತರ ಸೇವೆಯ ದ್ಯೋತಕವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಮುಂದೆಯೂ ಇದೆ ರೀತಿ […]
ವಸಂತ ಬಂಗೇರರ ಹುಟ್ಟುಹಬ್ಬಕ್ಕೆ ಕಬಡ್ಡಿ ಪಂದ್ಯಾಟದ ಮೆರುಗು

ಬೆಳ್ತಂಗಡಿ: ಬಂಗೇರ ಬ್ರಿಗೇಡ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಬಿನುತಾ ಬಂಗೇರ ಅವರ ಸಾರಥ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ಸಹಯೋಗದಲ್ಲಿ ಮಾಜಿ ಶಾಸಕ ದಿ| ವಸಂತ ಬಂಗೇರ ಅವರ 79 ಹುಟ್ಟಹಬ್ಬದ ಪ್ರಯುಕ್ತ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಜನವರಿ 15ರಂದು ಮದ್ದಡ್ಕದ ಬಂಡಿಮಠ ಮೈದಾನದಲ್ಲಿ ನಡೆಯಲಿದೆ ಎಂದು ಬ್ರಿಗೇಡ್ ಗೌರವಾಧ್ಯಕ್ಷೆ ಪ್ರಿತೀತಾ ಬಂಗೇರ ತಿಳಿಸಿದರು.ಜನವರಿ 8ರಂದು ಅವರು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದರು. ಪ್ರೌಢಶಾಲಾ […]