ಸಮಾಜದ ಕಂದಕ ನಿವಾರಿಸಿ ಸಮ ಸಮಾಜ ನಿರ್ಮಿಸಬೇಕು-ಡಾl ಆಳ್ವ

ಬೆಳ್ತಂಗಡಿ: ಶ್ರೇಷ್ಠವಾದ ಹಿಂದೂ ಧರ್ಮ, ಅದರಲ್ಲೂ ಬಂಟ ಸಮುದಾಯದಲ್ಲಿ ಜನಿಸಿರುವುದು ದೇವರು ಕೊಟ್ಟ ವರವಾಗಿದೆ. ನಮ್ಮ ಹಿರಿಯರಿಂದಲೇ ರಕ್ತಗತವಾಗಿ ಹಲವು ಗುಣಗಳು ಬಂದಿವೆ. ಮುಖ್ಯವಾಗಿ ಎಲ್ಲರೊಂದಿಗೆ ಹೊಂದಿಕೊಂಡು ಬದುಕುವುದು, ನಾಯಕತ್ವ ಗುಣ, ಹೋರಾಟದ ಮನೋಭಾವ, ಧರ್ಮನಿಷ್ಠೆ, ಪ್ರಾಮಾಣಿಕತೆ ಮೊದಲಾದವು ಬಂದಿದೆ. ಇವುಗಳು ನಾವು ಸಮಾಜದಲ್ಲಿ ಉನ್ನತಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗಿದೆ. ನಾವು ಬೆಳೆಯುವ ಜೊತೆಗೆ ಸಮಾಜದ ಇತರ ಸಮುದಾಯದವರನ್ನೂ ಜೊತೆಗೆ ಮುನ್ನಡೆಸುವ ಮೂಲಕ ಸಮಾಜದ ವಿಶ್ವಾಸ ಗಳಿಸಿರುವುದು ಹೆಮ್ಮೆಯ ವಿಚಾರ. ಸಮುದಾಯದ ಜನತೆ ಗೌರವಯುತವಾದ ಜೀವನ ಸಾಗಿಸುತ್ತಿರುವುದೇ ಇದಕ್ಕೆ […]

ಧರ್ಮಸ್ಥಳದಲ್ಲಿ ಪಾತಾಳ ಕಲಾ ಮಂಗಳ ಪ್ರಶಸ್ತಿ ಪ್ರದಾನ

ಧರ್ಮಸ್ಥಳ: ಮೂವತ್ತು ಹಿರಿಯ ಯಕ್ಷಗಾನ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ನೋಡುವ ಸೌಭಾಗ್ಯ ನಮ್ಮದಾಗಿದೆ. ಧರ್ಮಸ್ಥಳ ಯಕ್ಷಗಾನ ಮೇಳಕ್ಕೆ ಇನ್ನೂರು ವರ್ಷಗಳ ಇತಿಹಾಸವಿದೆ. ಮೇಳದಲ್ಲಿ ಎಲ್ಲಾ ಕಲಾವಿದರು ಸೇವೆಯನ್ನು ಸಲ್ಲಿಸಿ ಗೌರವ ಹೆಚ್ಚಿಸಿದ್ದಾರೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಅಕ್ಟೊಬರ್ 7ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನದ ವತಿಯಿಂದ ಕುರಿಯ ವಿಠಲ ಶಾಸ್ತ್ರೀ ಪ್ರತಿಷ್ಠಾನ ಉಜಿರೆ ಇದರ ಸಹಕಾರದೊಂದಿಗೆ ಪಾತಾಳ ಕಲಾ ಮಂಗಳ ಪ್ರಶಸ್ತಿ ಪ್ರದಾನಿಸಿ […]

ರಾಜ್ಯಮಟ್ಟದ ಶಿಕ್ಷಕ ಪುರಸ್ಕೃತರಿಗೆ ಗೌರವಾರ್ಪಣೆ

ಬೆಳ್ತಂಗಡಿ: ಬೆಳ್ತಂಗಡಿ ಜೇಸಿಐ ಮಂಜುಶ್ರೀ ವತಿಯಿಂದ ಬೆಳ್ತಂಗಡಿಯ ಜೇಸಿಐ ಸಭಾಂಗಣದಲ್ಲಿ ಅಕ್ಟೋಬರ್ 4ರಂದು ನಡೆದ ಸರಳ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಓಡಿಲ್ನಾಳ ಗ್ರಾಮದ ಕಟ್ಟದಬೈಲು ಶಾಲಾ ಮುಖ್ಯ ಶಿಕ್ಷಕ ಎಡ್ವರ್ಡ್ ಡಿ’ಸೋಜಾರನ್ನು ಗೌರವಿಸಿ, ಅಭಿನಂದನೆ ಸಲ್ಲಿಸಲಾಯಿತು. ಬೆಳ್ತಂಗಡಿ ಜೇಸಿಐ ಮಂಜುಶ್ರೀಯ ಅಧ್ಯಕ್ಷ ಸ್ವರೂಪ್ ಶೇಖರ್‌ರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜೇಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಾಧ್ಯಕ್ಷರುಗಳಾದ ನಾರಾಯಣಶೆಟ್ಟಿ, ಚಿದಾನಂದ ಇಡ್ಯಾ, ಕಿರಣ್ ಕುಮಾರ್ ಶೆಟ್ಟಿ ಪ್ರಶಾಂತ ಲಾಯಿಲ, ನಿಕಟಪೂರ್ವ ಅಧ್ಯಕ್ಷ […]

ಮಂಜುಶ್ರೀ ಸೀನಿಯರ್ ಚೇಂಬರ್‌ನಿಂದ ಸರಕಾರಿ ಶಾಲೆಗೆ ಡೆಸ್ಕ್-ಬೆಂಚುಗಳ ಕೊಡುಗೆ

ಬೆಳ್ತಂಗಡಿ: ಗ್ರಾಮೀಣ ಸರಕಾರಿ ಶಾಲೆಗೆ ಡೆಸ್ಕ್-ಬೆಂಚುಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಬೆಳ್ತಂಗಡಿಯ ಮಂಜುಶ್ರೀ ಸೀನಿಯರ್ ಚೇಂಬರ್‌ನವರು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದರು.ಅಕ್ಟೊಬರ್ 2ರ ಬೆಳಿಗ್ಗೆ ಅಧ್ಯಕ್ಷ ಲ್ಯಾನ್ಸಿ ಎ. ಪಿರೇರಾರ ನೇತೃತ್ವದಲ್ಲಿ ನಾವೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿದ ಬೆಳ್ತಂಗಡಿಯ ಮಂಜುಶ್ರೀ ಸೀನಿಯರ್ ಚೇಂಬರ್‌ನ ಸದಸ್ಯರು ಮೊದಲಿಗೆ ಶಾಲಾ ಮಕ್ಕಳೊಂದಿಗೆ ಗಾಂಧಿ ಜಯಂತಿಯನ್ನು ಆಚರಿಸಿದರು. ಗಾಂಧಿ ಜಯಂತಿ ಪ್ರಯುಕ್ತ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು. ಬಳಿಕ ಶಾಲೆಗೆ ಡೆಸ್ಕ್-ಬೆಂಚುಗಳನ್ನು ಕೊಡುಗೆಯಾಗಿ ನೀಡಿದರು. ಶಾಲಾಭಿವೃದ್ಧಿ […]

ಕಡಿರುದ್ಯಾವರ ಹಾಗೂ ಚಾರ್ಮಾಡಿಯಲ್ಲಿ ಕಾಡಾನೆ ದಾಳಿ

ಬೆಳ್ತಂಗಡಿ: ಅಕ್ಟೋಬರ್ ತಿಂಗಳ 1 ಮತ್ತು2ನೇ ತಾರೀಕಿನಂದು ರಾತ್ರಿ ಕಾಡಾನೆಗಳು ಕಡಿರುದ್ಯಾವರ ಹಾಗೂ ಚಾರ್ಮಾಡಿ ಭಾಗಗಳ ಕೃಷಿ ಪ್ರದೇಶಕ್ಕೆ ದಾಳಿ ನಡೆಸಿ ಹಾನಿ ಉಂಟು ಮಾಡಿವೆ.ಈ ಎರಡು ರಾತ್ರಿಗಳಲ್ಲಿ ಈ ಭಾಗಗಳಲ್ಲಿ ಉತ್ತಮ ಮಳೆ ಸುರಿದಿದ್ದು ಆನೆಗಳ ದಾಳಿ ತಡವಾಗಿ ಬೆಳಕಿಗೆ ಬಂದಿದೆ.ಕಡಿರುದ್ಯಾವರ ಗ್ರಾಮದ ಶೆಟ್ಟಿ ಪಾಲು ಸಮೀಪ ಕ್ಸೇವಿಯರ್ ಅವರ ತೋಟದಲ್ಲಿ 100ಕ್ಕೂ ಅಧಿಕ ಅಡಕೆ ಮರ, ಬಾಳೆಗಿಡ ಕಾಡಾನೆ ದಾಳಿಗೆ ತುತ್ತಾಗಿವೆ. ಇಲ್ಲಿನ ಹಾನಿ ಪ್ರಮಾಣ ಅಂದಾಜಿಸುವಾಗ ಒಂದಕ್ಕಿಂತ ಅಧಿಕ ಕಾಡಾನೆಗಳು ದಾಳಿ ನಡೆಸಿರುವ […]

‘ಸಮೃದ್ಧಿ’ ಸಾವಯವ ಗೊಬ್ಬರ ಮಾರುಕಟ್ಟೆಗೆ ಬಿಡುಗಡೆ

ಬೆಳ್ತಂಗಡಿ: ಗ್ರಾಮ ಪಂಚಾಯತ್ ಧರ್ಮಸ್ಥಳದ ಆಶ್ರಯದಲ್ಲಿ ಅಕ್ಟೋಬರ್ 2ರ ಮಹಾತ್ಮ ಗಾಂಧೀಜಿ ಅವರ ಜಯಂತ್ಯೋತ್ಸವದ ಪ್ರಯುಕ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬೆಳ್ತಂಗಡಿ, ಸ್ವಚ್ಚ್ ಭಾರತ ಮಿಷನ್‌ನ ಸಹಭಾಗಿತ್ವದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸ್ವಚ್ಛ ಸಂಕೀರ್ಣ ಘಟಕದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ನೀರು ಮತ್ತು ನೈರ್ಮಲ್ಯ ಸಮಿತಿ ವಿಶೇಷ ಗ್ರಾಮಸಭೆ ಹಾಗೂ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ […]

ಉಜಿರೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಾಂಧಿ ಜಯಂತಿ

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಟಿ. ರವರು ತಮ್ಮ ಭಾಷಣದಲ್ಲಿ ದಿನದ ಪ್ರಾಮುಖ್ಯತೆಯನ್ನು ವಿವರಿಸಿದರು. ಸಹ ಪ್ರಾಧ್ಯಾಪಕರಾದ ಡಾ. ಕೃಷ್ಣಪ್ರಸಾದ್ ಪಿ. ಎ. ಹಾಗೂ ಡಾ. ಸುಬ್ರಮಣ್ಯ ಭಟ್, ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜೀವನ ಕಥೆ ಯನ್ನು ಸ್ಮರಿಸಿದರು. ಉಪನ್ಯಾಸಕ ಡಾ.ಸತ್ಯನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದು […]

ರಾಷ್ಟ್ರ ನಾಯಕರ ಜನ್ಮ ದಿನಾಚರಣೆ

ಬೆಳ್ತಂಗಡಿ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿಯಲ್ಲಿ ರಾಷ್ಟ್ರ ನಾಯಕರಾದ ಮಹಾತ್ಮಾ ಗಾಂಧಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಜನ್ಮದಿನವನ್ನು ಆಚರಿಸಲಾಯಿತು. ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಜಿನೇಂದ್ರ ಕುಮಾರ್ ಜೈನ್ ಅವರು ಈರ್ವರು ಮಹಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ತದನಂತರ ಎಲ್ಲ ಪೋಷಕರ ಸಹಕಾರದಿಂದ ಶಾಲಾ ಆವರಣದಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು. ಶಾಲಾ ಮಕ್ಕಳು ಸರ್ವಧರ್ಮ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಪಾರಾಸ್ ಪೃಥ್ವಿ ಜುವೆಲ್ಲರ್ಸ್ ಬೆಳ್ತಂಗಡಿ ಇಲ್ಲಿನ ಸಿಬ್ಬಂದಿವರ್ಗದವರು […]

ಸಮಗ್ರವಾಗಿರುವ ಸಮಾಜವನ್ನು ಒಡೆಯಬಾರದುಮುಂಡಾಜೆಯಲ್ಲಿ ಗಾಂಧಿ ವಿಚಾರ ವೇದಿಕೆಯ ಕಾರ್ಯಕ್ರಮದಲ್ಲಿ ಸಾಹಿತಿ ಚೊಕ್ಕಾಡಿ

ಬೆಳ್ತಂಗಡಿ: ಗಾಂಧೀಜಿ ಒಬ್ಬ ಮಹಾಪುರುಷರು. ಗಾಂಧೀಜಿಯವರ ಹತ್ಯೆಯಾದ ನಂತರ ತರಲಾದ ಚಿತಾಭಸ್ಮವನ್ನು ಹಾಕಿ ಅದರ ಮೇಲೆ ಒಂದು ಆಲದ ಸಸಿಯನ್ನು ಮುಂಡಾಜೆಯಲ್ಲಿ ನೆಡಲಾಯಿತು. ಅದೀಗ ಹೆಮ್ಮರವಾಗಿ ಬೆಳೆದು ಆಮ್ಲಜನಕವನ್ನು ಕೊಡುತ್ತಿದೆ. ಈ ವಿಚಾರವನ್ನು ಮುಂದಿನ ತಲೆಮಾರಿಗೆ ದೃಢಪಡಿಸದೆ ಇರಬಾರದು ಎಂದು ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ಮನೆಗೆ ಬಂದಿದ್ದ ಗ್ರಾಮ ಪಂಚಾಯತ್‌ನವರಿಗೆ ಇದನ್ನು ತಿಳಿಸಿದ್ದೆ. ನಂತರ, ಮೊದಲ ಹಂತದಲ್ಲಿ ಗಾಂಧಿ ವಿಚಾರ ವೇದಿಕೆಯ ಉಪಾಧ್ಯಕ್ಷರಾದ ನಾಮದೇವ ರಾವ್ ಅವರು, ನಂತರ ಗ್ರಾಮ ಪಂಚಾಯತ್‌ನವರು ಮುತುವರ್ಜಿ ತೆಗೆದುಕೊಂಡು ಆ ಸ್ಥಳವನ್ನು […]

ಸ್ವಚ್ಛತಾ ಹಿ ಸೇವಾ ಗೌರವ ಪುರಸ್ಕಾರ ಪ್ರದಾನ

ಬೆಳ್ತಂಗಡಿ: ಉಜಿರೆ ಹಾಗೂ ಲಾಯ್ಲ ಗ್ರಾಮ ಪಂಚಾಯತ್‌ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸ್ವಚ್ಛತೆಗೆ ಕೈಗೊಂಡಿರುವ ಮಹತ್ವದ ಯೋಜನೆಗಳನ್ನು ಗುರುತಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚರವರಿಗೆ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೊಡಮಾಡಿದ ಗೌರವ ಪುರಸ್ಕಾರ ‘ಸ್ವಚ್ಛತಾ ಹಿ ಸೇವಾ’ವನ್ನು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ‌ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.ಈ ಪ್ರತಿಷ್ಠಿತ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ […]