ಬೆಸ್ಟ್ ಫೌಂಡೇಷನ್ ವತಿಯಿಂದ ದಿನಸಿ ಕಿಟ್ ವಿತರಣೆ

ಬೆಳ್ತಂಗಡಿ: ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ವತಿಯಿಂದ ಸೋಣಂದೂರು ಗ್ರಾಮದ ಪೊಮ್ಮಜೆ ಭಾಗದ 150 ಕುಟುಂಬಗಳಿಗೆ ಹೈಕೋರ್ಟ್ ವಕೀಲರು ಹಾಗೂ ಬೆಸ್ಟ್ ಫೌಂಡೇಷನ್‌ನ ರಕ್ಷಿತ ಶಿವರಾಂ ಇವರ ನೇತೃತ್ವದಲ್ಲಿ ಇಂದು ದಿನಸಿ ಕಿಟ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಬೇಬಿ ಸುವರ್ಣ ಎಸ್., ಮಾಜಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಬೆಳ್ತಂಗಡಿ ಯುವ ಕಾಂಗ್ರೆಸ್‌ನ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅನಿಲ್ ಪೈ, ತಾಲೂಕು ಮಲೆಕುಡಿಯ ಸಂಘದ ಕಾರ್ಯದರ್ಶಿ ಜಯನಂದ ಪಿಲಿಕಲ, ಯುವ […]
ರೋಟರಿ ಕ್ಲಬ್ ಬೆಳ್ತಂಗಡಿಗೆ ಪ್ರಶಸ್ತಿಗಳ ತುರಾಯಿ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ 2020-21ನೇ ಸಾಲಿನಲ್ಲಿ ಧನಂಜಯರಾವ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀಧರ ಕೆ. ವಿ. ಕಾರ್ಯದರ್ಶಿಯಾಗಿ ಮಾಡಿದ ರಾಷ್ಟ್ರಮಟ್ಟದ ದಾಖಲೆಯ ಕಾರ್ಯಗಳಿಗೆ ರೋಟರಿ ಜಿಲ್ಲೆಯಿಂದ ಹಲವಾರು ಪ್ರಶಸ್ತಿಗಳ ತುರಾಯಿ ದೊರಕಿವೆ.ಬಂಟ್ವಾಳದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ರೋಟರಿ ಸಮಾರಂಭದಲ್ಲಿ ರೋಟರಿ ಜಿಲ್ಲೆ ಕ್ಲಬ್‌ಗಳಿಗೆ ಕೊಡಲ್ಪಡುವ ಪ್ರಶಸ್ತಿಗಳಲ್ಲಿ ಬೆಳ್ತಂಗಡಿ ಕ್ಲಬ್ ಗೆ ಅತ್ಯುನ್ನತ ಪ್ರಶಸ್ತಿ ‘ಪ್ಲಾಟಿನಂ ಪ್ಲಸ್’ನ ಗೌರವ ಸಿಕ್ಕಿದರೆ; ಭೂಮಿಯ ಅಂತರ್ಜಲವನ್ನು ಮಟ್ಟವನ್ನು ಉಳಿಸುವ ಹಾಗೂ ಏರಿಸುವ ಸಲುವಾಗಿ ಮಾಡಿದ ನೀರುಳಿಸುವ ಬಗ್ಗೆ ಮಾಡಿದ […]
ಡಿ.ಸಿ. ಆದೇಶಕ್ಕೆ ಸಚಿವರಿಂದಲೇ ಸವಾಲ್

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಕ್ ಜಿಲ್ಲಾಧಿಕಾರಿ ಡಾl ಕೆ. ವಿ. ರಾಜೇಂದ್ರರ ಆದೇಶಕ್ಕೆ ರಾಜ್ಯ ಸರಕಾರದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ದಂಪತಿಗಳು ಸವಾಲು ಹಾಕುವ ಮೂಲಕ ಪರೋಕ್ಷವಾಗಿ ಜಿಲ್ಲೆಯ ಕಾನೂನು-ನಿಯಮ ಉಲ್ಲಂಘಕರ ಬೆಂಬಲಕ್ಕೆ ನಿಂತಿದ್ದಾರೆ.ಕೊರೋನಾ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ವೀಕ್‌ಎಂಡ್ ಕರ್ಫ್ಯೂ ಘೋಷಿಸಿ ಆದೇಶ ಹೊರಡಿಸಿದ್ದರು. ವೀಕ್‌ಎಂಡ್ ಕರ್ಫ್ಯೂ ಇರುವಾಗ ಸರಕಾರದ ಓರ್ವ ಜವಾಬ್ದಾರಿಯುತ ಸಚಿವನಾಗಿ ತನ್ನ ಪತ್ನಿ ಹಾಗೂ ಹಿಂಬಾಲಕರೊಡನೆ ಆಗಸ್ಟ್ 14ರ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ […]
ಕಲ್ಮಂಜ ರೋಟರಿ ಸಮುದಾಯದಳ ಪದಗ್ರಹಣ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿಯ ಅಂಗಸಂಸ್ಥೆಯಾದ ಕಲ್ಮಂಜ ರೋಟರಿ ಸಮುದಾಯ ದಳದ 2021-22 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಿದ್ದಬೈಲು ಪರಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಕಲ್ಮಂಜ ರೋಟರಿ ಸಮುದಾಯ ದಳದ ನಿಕಟಪೂರ್ವ ಅಧ್ಯಕ್ಷೆ ಜಾನಕಿ ಗಣ್ಯರನ್ನು ಸ್ವಾಗತಿಸಿ, ಈ ಹಿಂದಿನ ಅವಧಿಯ ಕೆಲಸದ ಬಗ್ಗೆ ಮಾತನಾಡಿದರು. ನಿಕಟಪೂರ್ವ ಕಾರ್ಯದರ್ಶಿ ದಿನೇಶ್ ಗೌಡ ಮಾತನಾಡಿ, ಕೊರೋನಾದ ಸಂಕಷ್ಟದ ಸಂದರ್ಭದಲ್ಲೂ ಕೈಗೊಂಡ ಸನಾಜಮುಖಿ ಕಾರ್ಯಕ್ರಮಗಳ ಬಗ್ಗೆ ವರದಿ ಮಂಡಿಸಿದರು. ಬೆಳ್ತಂಗಡಿ ರೋಟರಿ […]
ಎಸ್‌ಎಸ್‌ಎಲ್‌ಸಿಯಲ್ಲಿ 621 ಅಂಕ ಪಡೆದ ಅನಘಗೆ ಡಿಸಿಯಿಂದ ಅಭಿನಂದನೆ

ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮಾ ಶಾಲೆಯ ವಿದ್ಯಾರ್ಥಿನಿ ಅನಘ ಪ್ರಸಕ್ತ ಶೈಕ್ಷಣಿಕ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳಲ್ಲಿ 621ಅಂಕಗಳನ್ನು ಪಡೆದಿದ್ದಾರೆ. ಆಗಸ್ಟ್ 10ರ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾl ರಾಜೇಂದ್ರ ಕೆ. ವಿ. ಅವರು ಅನಘನನ್ನು ಮಂಗಳೂರು ಕಚೇರಿಯಲ್ಲಿ ಅಭಿನಂದಿಸಿದರು.ಅನಘ ಅವರು ಬೆಳ್ತಂಗಡಿ ತಾಲೂಕು ಕಂದಾಯ ಇಲಾಖೆಯಲ್ಲಿ ಬೆಳ್ತಂಗಡಿ ಕಸಬಾ ಗ್ರಾಮದ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸತೀಶ್‌ರಾಜ್ ಹಾಗೂ ಧರ್ಮಸ್ಥಳ ಶಾಂತಿವನದಲ್ಲಿ ಫಿಸಿಯೋತೆರೆಪಿಸ್ಟ್ ಆಗಿರುವ ಮಂಜುಳಾ […]
‘ಕಾರ್ಪೋರೇಟ್ ಕಂಪೆನಿಗಳೇ ಭಾರತ ಬಿಟ್ಟು ತೊಲಗಿ’ ಪ್ರತಿಭಟನೆ

ಬೆಳ್ತಂಗಡಿ: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಲಾಮರಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಏಜೆಂಟ್ ಆಗಿರುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ಮತ್ತೆ ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸುವ ಮೂಲಕ ಮತ್ತೆ ದೇಶವನ್ನು ಗುಲಾಮಗಿರಿಗೆ ತಳ್ಳುವ ಕ್ರಮ ಅತ್ಯಂತ ಅಪಾಯಕಾರಿಯಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಆರೋಪಿಸಿದರು.ಅವರು ಆಗಸ್ಟ್ 9ರಂದು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಸಿಐಟಿಯು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ‘ಕಾರ್ಪೊರೇಟ್ […]
ನಲಿಕೆಯವರ ಸಮಾಜ ಸೇವಾ ಸಂಘದಿಂದ ಪೊಲೀಸ್ ವೃತ್ತನಿರೀಕ್ಷರ ಭೇಟಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ತಾಲೂಕು ಪದಾಧಿಕಾರಿಗಳನ್ನೊಳಗೊಂಡ ನಿಯೋಗವೊಂದು ಇತ್ತೀಚೆಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿಕೊಂಡ ನೂತನ ಪೊಲೀಸ್ ವೃತ್ತನಿರೀಕ್ಷಕಾರದ ಶಿವಕುಮಾರ್ ಅವರನ್ನು ಭೇಟಿ ಮಾಡಿ ಪರಿಚಯಿಸಿಕೊಂಡು ಸಮುದಾಯದ ಪರವಾಗಿ ಪುಷ್ಪಗುಚ್ಛ ನೀಡಿ ಗೌರವಿಸಿ ಸೇವಾವಧಿಗೆ ಶುಭಹಾರೈಸಲಾಯಿತು.ಈ ಸಂದರ್ಭ ನಿಯೋಗದಲ್ಲಿ ನಲಿಕೆಯವರ ಸಮಾಜ ಸೇವಾ ಸಂಘದ ತಾಲೂಕು ಸಂಘದ ಅಧ್ಯಕ್ಷ ಯಸ್. ಪ್ರಭಾಕರ ಶಾಂತಿಕೋಡಿ, ಉಪಾಧ್ಯಕ್ಷ ರಾಮು ಶಿಶಿಲ, ಮಾಜಿ ಕಾರ್ಯದರ್ಶಿ ಅನಂತ್ ಮುಂಡಾಜೆ, ಯುವ ವೇದಿಕೆ ಮಾಜಿ ಕಾರ್ಯದರ್ಶಿ ರಮೇಶ್ […]
ಪರಿಶಿಷ್ಟ ಪಂಗಡದ ಸ್ತ್ರೀಶಕ್ತಿ ಗುಂಪಿನ ಸದಸ್ಯರಿಗೆ ತರಬೇತಿ

ಬೆಳ್ತಂಗಡಿ: ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಮತ್ತು ಸ್ತ್ರೀಶಕ್ತಿ ಒಕ್ಕೂಟದ ಪದಾಧಿಕಾರಿಗಳು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಇದರೊಂದಿಗೆ ಸರಕಾರದ ಸೌಲಭ್ಯಗಳ ಮಾಹಿತಿಯನ್ನು ಪಡೆದುಕೊಂಡು ಕಟ್ಟಕಡೆಯ ಕುಟುಂಬಗಳಿಗೂ ಸರಕಾರದ ಸೌಲಭ್ಯ ಸಿಗುವಂತೆ ಮಾಡುವ ಮೂಲಕ ಸಬಲೀಕರಣಕ್ಕೆ ನೆರವಾಗಬೇಕು ಎಂದು ತಾಲೂಕು ಸಮಾಜಕಲ್ಯಾಣಾಧಿಕಾರಿ ಹೇಮಚಂದ್ರ ಹೇಳಿದರು.ಅವರು ಆಗಸ್ಟ್ 4ರಂದು ಬೆಳ್ತಂಗಡಿಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಕಚೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳ್ತಂಗಡಿ, ತಾಲೂಕು ಸ್ತ್ರೀಶಕ್ತಿ ಒಕ್ಕೂಟ (ರಿ.) ಬೆಳ್ತಂಗಡಿ […]
ಟೈಲರ್ಸ್ ಎಸೋಸಿಯೇಷನ್‌ನಿಂದ ‘ಆಟಿಡೊಂಜಿ ದಿನ’

ಬೆಳ್ತಂಗಡಿ: ಟೈಲರ್ಸ್ ಎಸೋಸಿಯೇಷನ್ ವಲಯ ಸಮಿತಿಗಳು ಜಿಲ್ಲಾ ಸಂಘದ ಆಧಾರ ಸ್ತಂಭಗಳು. ರಾಜ್ಯದಲ್ಲಿ 9500 ಸದಸ್ಯರಿದ್ದು, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವಲ್ಲಿ ಹಿಂದುಳಿದಿದ್ದೇವೆ. ವಲಯ ಪದಾಧಿಕಾರಿಗಳು ಸದಸ್ಯರನ್ನು ಸಂಪರ್ಕಿಸಿ, ಸೌಲಭ್ಯಗಳ ಮಾಹಿತಿ ನೀಡಬೇಕು. ಪ್ರತಿಯೊಬ್ಬರೂ ಸಂಘಟನೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಸಂಘಟನೆ ಭದ್ರ ಪಡಿಸುವ ಹೊಣೆ ನಮ್ಮದು. ಕಾರ್ಯಚಟುವಟಿಕೆಗಳಿಗೆ ಎಲ್ಲರ ಸಹಕಾರ ಮುಖ್ಯ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಪ್ರಜ್ವಲ್ ಕುಮಾರ್ ನುಡಿದರು. […]
ಡಾ. ಶಾಂತಾರಾಮ ಪ್ರಭುಗಳಿಗೆ ಕುರಿಯ ಪ್ರಶಸ್ತಿ

ಬೆಳ್ತಂಗಡಿ: ಎಡನೀರು ಶ್ರೀ ಕೇಶವಾನಂದ ಭಾರತೀ ಶ್ರೀಗಳವರ ಪ್ರಥಮ ಆರಾಧನಾಸ್ಮೃತಿ ಹಾಗೂ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳವರ ಪ್ರಥಮ ಚಾತುರ್ಮಾಸ್ಯ ಗೌರವಾರ್ಥ ಉಜಿರೆಯ ಕುರಿಯ ವಿಠಲ ಶಾಸ್ತ್ರೀ ಸಾಂಸ್ಕೃತಿಕ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಹಿರಿಯ ಕಲಾವಿದ, ವಿದ್ವಾಂಸ ಡಾ. ನಿಟ್ಟೂರು ಶಾಂತಾರಾಮ ಪ್ರಭು ಅವರಿಗೆ ಶ್ರೀ ಸಚ್ಚಿದಾನಂದ ಭಾರತೀಶ್ರೀಗಳವರು ಕುರಿಯ ಪ್ರಶಸ್ತಿ ಪ್ರಧಾನ ಗೈದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಶಾಂತಾರಾಮ ಪ್ರಭು, ಕುರಿಯ ವಿಠಲ ಶಾಸ್ತ್ರಿಗಳು ಧರ್ಮಸ್ಥಳ ಮೇಳದ ಸಂಚಾಲಕರಾಗಿ, […]