‘ಸಮೃದ್ಧಿ’ ಸಾವಯವ ಗೊಬ್ಬರ ಮಾರುಕಟ್ಟೆಗೆ ಬಿಡುಗಡೆ

ಬೆಳ್ತಂಗಡಿ: ಗ್ರಾಮ ಪಂಚಾಯತ್ ಧರ್ಮಸ್ಥಳದ ಆಶ್ರಯದಲ್ಲಿ ಅಕ್ಟೋಬರ್ 2ರ ಮಹಾತ್ಮ ಗಾಂಧೀಜಿ ಅವರ ಜಯಂತ್ಯೋತ್ಸವದ ಪ್ರಯುಕ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಬೆಳ್ತಂಗಡಿ, ಸ್ವಚ್ಚ್ ಭಾರತ ಮಿಷನ್‌ನ ಸಹಭಾಗಿತ್ವದಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸ್ವಚ್ಛ ಸಂಕೀರ್ಣ ಘಟಕದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ನೀರು ಮತ್ತು ನೈರ್ಮಲ್ಯ ಸಮಿತಿ ವಿಶೇಷ ಗ್ರಾಮಸಭೆ ಹಾಗೂ ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮ […]

ಉಜಿರೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಗಾಂಧಿ ಜಯಂತಿ

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ್ ಕುಮಾರ್ ಟಿ. ರವರು ತಮ್ಮ ಭಾಷಣದಲ್ಲಿ ದಿನದ ಪ್ರಾಮುಖ್ಯತೆಯನ್ನು ವಿವರಿಸಿದರು. ಸಹ ಪ್ರಾಧ್ಯಾಪಕರಾದ ಡಾ. ಕೃಷ್ಣಪ್ರಸಾದ್ ಪಿ. ಎ. ಹಾಗೂ ಡಾ. ಸುಬ್ರಮಣ್ಯ ಭಟ್, ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಯವರ ಜೀವನ ಕಥೆ ಯನ್ನು ಸ್ಮರಿಸಿದರು. ಉಪನ್ಯಾಸಕ ಡಾ.ಸತ್ಯನಾರಾಯಣ ಭಟ್ ಮತ್ತಿತರರು ಉಪಸ್ಥಿತರಿದ್ದು […]

ರಾಷ್ಟ್ರ ನಾಯಕರ ಜನ್ಮ ದಿನಾಚರಣೆ

ಬೆಳ್ತಂಗಡಿ: ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೆಳ್ತಂಗಡಿಯಲ್ಲಿ ರಾಷ್ಟ್ರ ನಾಯಕರಾದ ಮಹಾತ್ಮಾ ಗಾಂಧಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಜನ್ಮದಿನವನ್ನು ಆಚರಿಸಲಾಯಿತು. ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಜಿನೇಂದ್ರ ಕುಮಾರ್ ಜೈನ್ ಅವರು ಈರ್ವರು ಮಹಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ತದನಂತರ ಎಲ್ಲ ಪೋಷಕರ ಸಹಕಾರದಿಂದ ಶಾಲಾ ಆವರಣದಲ್ಲಿ ಸ್ವಚ್ಛತೆಯನ್ನು ಮಾಡಲಾಯಿತು. ಶಾಲಾ ಮಕ್ಕಳು ಸರ್ವಧರ್ಮ ಪ್ರಾರ್ಥನೆಯನ್ನು ನಡೆಸಿಕೊಟ್ಟರು. ಪಾರಾಸ್ ಪೃಥ್ವಿ ಜುವೆಲ್ಲರ್ಸ್ ಬೆಳ್ತಂಗಡಿ ಇಲ್ಲಿನ ಸಿಬ್ಬಂದಿವರ್ಗದವರು […]

ಸಮಗ್ರವಾಗಿರುವ ಸಮಾಜವನ್ನು ಒಡೆಯಬಾರದುಮುಂಡಾಜೆಯಲ್ಲಿ ಗಾಂಧಿ ವಿಚಾರ ವೇದಿಕೆಯ ಕಾರ್ಯಕ್ರಮದಲ್ಲಿ ಸಾಹಿತಿ ಚೊಕ್ಕಾಡಿ

ಬೆಳ್ತಂಗಡಿ: ಗಾಂಧೀಜಿ ಒಬ್ಬ ಮಹಾಪುರುಷರು. ಗಾಂಧೀಜಿಯವರ ಹತ್ಯೆಯಾದ ನಂತರ ತರಲಾದ ಚಿತಾಭಸ್ಮವನ್ನು ಹಾಕಿ ಅದರ ಮೇಲೆ ಒಂದು ಆಲದ ಸಸಿಯನ್ನು ಮುಂಡಾಜೆಯಲ್ಲಿ ನೆಡಲಾಯಿತು. ಅದೀಗ ಹೆಮ್ಮರವಾಗಿ ಬೆಳೆದು ಆಮ್ಲಜನಕವನ್ನು ಕೊಡುತ್ತಿದೆ. ಈ ವಿಚಾರವನ್ನು ಮುಂದಿನ ತಲೆಮಾರಿಗೆ ದೃಢಪಡಿಸದೆ ಇರಬಾರದು ಎಂದು ಸ್ವಾತಂತ್ರ್ಯ ದಿನಾಚರಣೆಯಂದು ನಮ್ಮ ಮನೆಗೆ ಬಂದಿದ್ದ ಗ್ರಾಮ ಪಂಚಾಯತ್‌ನವರಿಗೆ ಇದನ್ನು ತಿಳಿಸಿದ್ದೆ. ನಂತರ, ಮೊದಲ ಹಂತದಲ್ಲಿ ಗಾಂಧಿ ವಿಚಾರ ವೇದಿಕೆಯ ಉಪಾಧ್ಯಕ್ಷರಾದ ನಾಮದೇವ ರಾವ್ ಅವರು, ನಂತರ ಗ್ರಾಮ ಪಂಚಾಯತ್‌ನವರು ಮುತುವರ್ಜಿ ತೆಗೆದುಕೊಂಡು ಆ ಸ್ಥಳವನ್ನು […]

ಸ್ವಚ್ಛತಾ ಹಿ ಸೇವಾ ಗೌರವ ಪುರಸ್ಕಾರ ಪ್ರದಾನ

ಬೆಳ್ತಂಗಡಿ: ಉಜಿರೆ ಹಾಗೂ ಲಾಯ್ಲ ಗ್ರಾಮ ಪಂಚಾಯತ್‌ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸ್ವಚ್ಛತೆಗೆ ಕೈಗೊಂಡಿರುವ ಮಹತ್ವದ ಯೋಜನೆಗಳನ್ನು ಗುರುತಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚರವರಿಗೆ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಕೊಡಮಾಡಿದ ಗೌರವ ಪುರಸ್ಕಾರ ‘ಸ್ವಚ್ಛತಾ ಹಿ ಸೇವಾ’ವನ್ನು ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ‌ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.ಈ ಪ್ರತಿಷ್ಠಿತ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ […]

ಸ್ವಚ್ಛತಾ ಸಂವಾದ ಹಾಗೂ ಸೇನಾನಿಗಳಿಗೆ ಸಮ್ಮಾನ ಕಾರ್ಯಕ್ರಮ.

ಬೆಳ್ತಂಗಡಿ: ಸ್ವಚ್ಛತೆ ಮನೆಯಿಂದಲೇ ಆರಂಭವಾಗಬೇಕು. ಮಕ್ಕಳಿಗೆ  ತಾವು ಬಳಸಿದ ಲೋಟ, ತಟ್ಟೆ, ಬಟ್ಟೆಯನ್ನು ತಾವೇ ತೊಳೆಯಲು ಹಾಗೂ ತಾವೇ ಸ್ನಾನ ಮಾಡಿಕೊಳ್ಳಲು  ಅಭ್ಯಾಸ ಮಾಡಿಸಬೇಕು.  ಸರಕಾರವೇ ಎಲ್ಲವನ್ನೂ ಮಾಡಲಾಗುವುದಿಲ್ಲ. ವೈಯಕ್ತಿಕ ಸ್ವಚ್ಛತೆ ನಾವೇ ಮಾಡಬೇಕು. ಆಗ ಸ್ವಚ್ಛ ಭಾರತ  ಸಂಕಲ್ಪ ಸಾಕಾರಗೊಳ್ಳುವುದು  ಎಂದು  ಉಜಿರೆ ಗ್ರಾಮ ಪಂಚಾಯತ್  ಸುವರ್ಣ ಸೌಧದಲ್ಲಿ  ಸೆಪ್ಟೆಂಬರ್ 30ರಂದು  ನಡೆದ ಗ್ರಾಮಸ್ಥರ ಸ್ವಚ್ಛತಾ ಸಂವಾದ ಕಾರ್ಯಕ್ರಮದಲ್ಲಿ ಗ್ರಾಮಸ್ಥರ ಅಭಿಪ್ರಾಯ ವ್ಯಕ್ತಗೊಂಡಿತು.  ಅಧ್ಯಕ್ಷತೆ ವಹಿಸಿದ್ದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾವತಿ ಆರ್. ಶೆಟ್ಟಿ  ಮಾತನಾಡಿ ದೇಶದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ […]

ಶುದ್ಧಗಂಗಾ: ಸೆಲ್ಕೊ-ಎಸ್‌ಕೆಡಿಆರ್‌ಡಿಪಿ ಒಪ್ಪಂದ.

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ರಾಜ್ಯದ ವಿವಿದೆಡೆ ಸ್ಥಾಪಿಸಿರುವ ಶುದ್ಧಗಂಗಾ ಕುಡಿಯುವ ನೀರಿವ ಘಟಕಗಳ ಪೈಕಿ ಪ್ರಾಯೋಗಿಕವಾಗಿ ಆಯ್ದ 40ಘಟಕಗಳಿಗೆ ಉಚಿತವಾಗಿ ಸೋಲಾರ್ ಇನ್‌ವರ್ಟರ್ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 27ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೆಲ್ಕೊ ಪ್ರತಿಷ್ಠಾನ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಡುವೆ ಒಪ್ಪಂದ ವಿನಿಮಯ ಮಾಡಿಕೊಳ್ಳಲಾಯಿತು. ಈ ಒಪ್ಪಂದದಂತೆ ಪ್ರತೀ ಘಟಕಕ್ಕೆ ವಾರ್ಷಿಕ […]

ಎನ್ಎಸ್ಎಸ್ ದಿನಾಚರಣೆ ಹಾಗೂ ಕೋವಿಡ್ ಲಸಿಕಾ ಅಭಿಯಾನ

ಬೆಳ್ತಂಗಡಿ: ಸೇಕ್ರೆಡ್ ಹಾರ್ಟ್ ಕಾಲೇಜ್ ಮಡಂತ್ಯಾರಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಸೆಪ್ಟೆಂಬರ್ 24ರಂದು ಎನ್ಎಸ್ಎಸ್ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಅಲೆಕ್ಸ್ ಐವನ್ ಸಿಕ್ವೇರಾ ಅವರು ಭಾಗವಹಿಸಿ, ಎನ್ಎಸ್ಎಸ್ ನಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಹೇಗೆ ತೊಡಗಿಸಿಕೊಳ್ಳಬೇಕು ಮತ್ತು ತಮ್ಮ ವ್ಯಕ್ತಿತ್ವ ವಿಕಸನವನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದರ ಬಗ್ಗೆ ಸಂಕ್ಷಿಪ್ತ ವಿವರವನ್ನು ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಜೋಸೆಫ್ ಎನ್. ಎಮ್. ಅವರು ವಹಿಸಿ, ತಮ್ಮ […]

‘ರಾಜಕೇಸರಿ ಸಂಘಟನೆಯ ಸೇವೆ ಅನುಭವ ಮಂಟಪಕ್ಕೆ ಸಮ’

ಬೆಳ್ತಂಗಡಿ: ಯಾವುದೇ ಹುದ್ದೆಯು ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ. ಸಿಕ್ಕ ಹುದ್ದೆಯಲ್ಲಿ ಕೀಳರಿಮೆ ತೋರದೆ ಸ್ವಾಭಿಮಾನಕ್ಕೆ ಧಕ್ಕೆ ಬರದಂತೆ ಪ್ರಾಮಾಣಿಕವಾಗಿ ದುಡಿದರೆ ಅಪ್ರತಿಮ ಸ್ಥಾನ ಲಭಿಸುತ್ತದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಸ್ಥಿತಪ್ರಜ್ಞರಾಗಿ ಉತ್ತಮ ಕೆಲಸ ನಿರ್ವಹಿಸಿದರೆ ಸಮಾಜದ ಉದ್ಧಾರಕ್ಕೆ ಕೊಡುಗೆ ಸಲ್ಲಿಸಿದಂತಾಗುವುದು. ರಾಜಕೇಸರಿ ಸಂಘಟನೆ ಸಕಾರಾತ್ಮಕ ಚಿಂತನೆಯಿಂದ ಕ್ರಾಂತಿಮಾಡುವ ಸೇವೆ  ಅನುಭವ ಮಂಟಪಕ್ಕೆ ಸಮಾನವಾಗಿದೆ ಎಂದು ಬೆಂಗಳೂರು ವಿಭಾಗದ ಸಿಐಡಿ ಎಸ್ಪಿ ರವಿ ಡಿ. ಚೆನ್ನಣ್ಣನವರ್ ಹೇಳಿದರು.ಅವರು ಉಜಿರೆಯ ಇಚ್ಚಿಲದಲ್ಲಿ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ)  ವತಿಯಿಂದ ಇಚ್ಚಿಲದ ಕುಶಲ ಮತ್ತು […]

ಮಂದಿರ, ಮಸೀದಿ, ಚರ್ಚ್, ದೈವಸ್ಥಾನಗಳು ಸಮಾನತೆಯ ಸಂಕೇತ -ಸುಧೀರ್ ಕುಮಾರ್

ಮೂಡುಬಿದಿರೆ: ಮಂದಿರ, ಮಸೀದಿ, ಚರ್ಚ್ ಮತ್ತು ದೈವಸ್ಥಾನಗಳು ಸಮಾನತೆಯ ಹಾಗೂ ಸರ್ವಧರ್ಮ ಸಮಭಾವದ ಸಂಕೇತವೆಂದು ಕಾಂಗ್ರೆಸ್ ಪಕ್ಷವು ಭಾವಿಸಿದ್ದು; ಇಂತಹ ಆರಾಧನಾ ಕೇಂದ್ರಗಳಿಗೆ ಧಕ್ಕೆ ತರುವ ಕೆಲಸ ಬಿಜೆಪಿ ಸರಕಾರದಿಂದ ನಡೆದರೆ ಅದರ ವಿರುದ್ಧ ಕಾಂಗ್ರೆಸ್ ಪಕ್ಷ ಇನ್ನಷ್ಟು ಉಗ್ರ ಪ್ರತಿಭಟನೆ ನಡೆಸಲಿದೆ ಎಂದು ಕೆ.ಪಿ.ಸಿ.ಸಿ. ವಕ್ತಾರ ಸುಧೀರ್ ಕುಮಾರ್ ಮರೋಳಿ ನುಡಿದರು. ಧಾರ್ಮಿಕ ಕೇಂದ್ರಗಳನ್ನು ಕೆಡವಿದ ಬಿಜೆಪಿ ಸರಕಾರದ ವಿರುದ್ಧ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೆಪ್ಟೆಂಬರ್ 25ರ ರಾತ್ರಿ ನಡೆದ ಬೃಹತ್ ಕಾಲ್ನಡಿಗೆ ಜಾಥಾದ […]