ತಾಲೂಕು ಆಡಳಿತದಿಂದಲೇ ಕೋವಿಡ್ ನಿಯಮ ಉಲ್ಲಂಘನೆ;ಅವಮಾನ ಸಹಿಸಿಯೂ ಮೂಕರಾದ ಇಲಾಖಾಧಿಕಾರಿಗಳು.

ಬೆಳ್ತಂಗಡಿ: ದಯವಿಟ್ಟು ಯಾವುದೇ ಪೂರ್ವಾಗ್ರಹವಿಲ್ಲದೇ ಸ್ಥಿತಪ್ರಜ್ಞರಾಗಿ ಇಲ್ಲಿ ಪ್ರಕಟಿಸಲಾದ ಫೊಟೊವನ್ನೊಮ್ಮೆ ಗಮನವಿಟ್ಟು ನೋಡಿ. ಬೆಳ್ಳಿಯ ಸಿಂಹಾಸನದಲ್ಲಿ ಎತ್ತರದ ವೇದಿಕೆಯಲ್ಲಿ ಕಲ್ಮಂಜ ದೇವರಗುಡ್ಡೆಯ ಗುರುದೇವ ಮಠದ ಬ್ರಹ್ಮಾನಂದ ಶ್ರೀಗಳು ವಿರಾಜಮಾನರಾಗಿದ್ದಾರೆ. ಅವರ ಪದತಲದಲ್ಲಿ ವೇದಿಕೆಯ ಕೆಳಗೆ ಕುಳಿತವರು ಮಠದ ಭಕ್ತರು ಎಂದು ಊಹಿಸಿಕೊಂಡರೆ ಅದು ನಿಮ್ಮ ತಪ್ಪು. ಇವರೆಲ್ಲಾ ನಮ್ಮ ತಾಲೂಕಿನ ವಿವಿಧ ಇಲಾಖೆಯ ಕ್ಲಾಸ್ l ಅಧಿಕಾರಿಗಳು. ಪ್ರಾಯಶಃ ನಮ್ಮ ತಾಲೂಕಿನ ಇತಿಹಾಸದಲ್ಲಿ ಸರಕಾರಿ ಇಲಾಖಾಧಿಕಾರಿಗಳು ಈ ರೀತಿ ಗುಲಾಮರಂತೆ ಮೂಕ ವೇದನೆ ಅನುಭವಿಸಿ, ಹತಾಶರಾಗಿ ಸರಕಾರಿ […]
ಅತ್ತ ಧರ್ಮಸ್ಥಳಕ್ಕೆ ದಿಗ್ಬಂಧನ ಇತ್ತ ದೇವರಗುಡ್ಡೆಯಲ್ಲಿ ಒಡ್ಡೋಲಗ

ಕೊರೋನಾ ನಿಯಮ ಪಾಲನೆಯಲ್ಲಿ ದ್ವಿಮುಖನೀತಿ ಬೆಳ್ತಂಗಡಿ: ಅತ್ತ ಧರ್ಮಸ್ಥಳದಲ್ಲಿ ವೀಕ್‌ಎಂಡ್ ಕರ್ಫ್ಯೂ ಹೆಸರಲ್ಲಿ ಶನಿವಾರ ಮತ್ತು ಭಾನುವಾರ ಕ್ಷೇತ್ರದ ಮುಖ್ಯದ್ವಾರದ ಬಳಿಯೇ ಪೊಲೀಸರು ಬ್ಯಾರಿಕೇಡ್ ನಿರ್ಮಿಸಿ ಪರವೂರಿನ ಭಕ್ತಾದಿಗಳನ್ನು ಮಾತ್ರವಲ್ಲ (ಭಕ್ತಾದಿಗಳು ವಿರಳಾತಿವಿರಳ), ಸ್ಥಳೀಯ ನಿವಾಸಿಗರ ಪ್ರವೇಶಕ್ಕೂ ತಡೆವೊಡ್ಡಿ ಹತ್ತಾರು ಪ್ರಶ್ನೆಗಳನ್ನು ಕೇಳ್ತಾರೆ. ವೀಕ್‌ಎಂಡ್ ಕರ್ಫೂ ಸಮಯದಲ್ಲಂತೂ ಭಕ್ತರಿಗೆ ದೇವರ ದರುಶನವೂ ಮರೀಚಿಕೆಯೇ ಸರಿ. ವಾರದ ಉಳಿದ ದಿನಗಳಲ್ಲೂ ದೇವರ ದರುಶನಕ್ಕೆ ಮಾತ್ರ ಅವಕಾಶ. ತೀರ್ಥ-ಪ್ರಸಾದವಿಲ್ಲ; ದೇವರ ಸೇವೆಗೆ ಅವಕಾಶವಿಲ್ಲ; ಪ್ರಸಾದ ಭೋಜನವಂತೂ ಇಲ್ಲವೇ ಇಲ್ಲ… ಇದು […]
ಅಂತರಂಗದ ಕರೆಯಾಗಿ ಹೊಮ್ಮಿದ ದೇಶಭಕ್ತಿ

ಅಂತರಂಗದ ಕರೆಯಾಗಿ ಹೊಮ್ಮಿದ ದೇಶಭಕ್ತಿ————————————ಹೇಳಿ ಕೊಡುವುದರಿಂದಾಗಲಿ, ಆದೇಶಗಳಿಂದಾಗಲಿ, ಪ್ರತಿಪಾದನೆಗಳಿಂದಾಗಲಿ ಬರುವ ದೇಶಭಕ್ತಿಗೂ, ಅಂತರಂಗದಿಂದಲೆ ಹೊರ ಹೊಮ್ಮಿ ಬರುವ ದೇಶಭಕ್ತಿಗೂ ವ್ಯತ್ಯಾಸವಿದೆ ಎನ್ನುವುದಕ್ಕೆ ಸಾಕ್ಷಿ ಈ ಘಟನೆ.ಸ್ವಾತಂತ್ರ್ಯ ದಿನಾಚರಣೆಯಂದು ‘ಗಾಂಧಿ ವಿಚಾರ ವೇದಿಕೆ’ ಯ ಸುಳ್ಯ ಘಟಕದವರು ಮೊಗ್ರದ ಏರಣಗುಡ್ಡೆಯಲ್ಲಿ ಧ್ವಜಾರೋಹಣ ಮಾಡಿದ್ದರು. ಧ್ವಜಾರೋಹಣದ ಕಾರ್ಯಕ್ರಮವೆಲ್ಲ ಮುಗಿದು ಎಲ್ಲರೂ ಮಾತನಾಡುತ್ತಾ ಮನೆಯ ಕಡೆಗೆ ಹೊರಡುತ್ತಿರಬೇಕಾದರೆ ಆ ದಾರಿಯಾಗಿ ತನ್ನ ದೈನಂದಿನ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯೊಬ್ಬರು ಹಾರಾಡುತ್ತಿದ್ದ ಧ್ವಜವನ್ನು ಕಾಣುತ್ತಲೇ ತನ್ನ ದಾರಿಯನ್ನು ಬದಲಿಸಿದರು. ನೇರವಾಗಿ ಧ್ವಜದ ಬಳಿಗೆ […]
ಬೆಸ್ಟ್ ಪೌಂಡೇಶನ್ ವತಿಯಿಂದ ಮುಂಡೂರಿನಲ್ಲಿ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಬೆಸ್ಟ್ ಪೌಂಡೇಶನ್ ಬೆಳ್ತಂಗಡಿ ವತಿಯಿಂದ ಮುಂಡೂರು ಗ್ರಾಮದ ಸುಮಾರು 90ಕುಟುಂಬಗಳಿಗೆ ಶಾರದಾಂಬ ಯುವಕ ಮಂಡಲದ ವಠಾರದಲ್ಲಿ ಹೈಕೋರ್ಟ್ ವಕೀಲರು ಬೆಸ್ಟ್ ಫೌಂಡೇಶನ್‌ನ ರಕ್ಷಿತ್ ಶಿವರಾಂ ರವರ ನೇತೃತ್ವದಲ್ಲಿ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ಅರವಿಂದ ಭಟ್, ಮೇಲಂತಬೆಟ್ಟು ಗ್ರಾಮ ಪಂಚಾಯಿತ್‌ನ ಉಪಾಧ್ಯಕ್ಷೆ ಸವಿತಾ, ಗ್ರಾಮ ಪಂಚಾಯಿತಿನ ಮಾಜಿ ಸದಸ್ಯೆ ನೀತಾ ಮಹೇಶ್ ಕುಮಾರ್, ಬೆಳ್ತಂಗಡಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ, […]
ಬೆಸ್ಟ್ ಫೌಂಡೇಷನ್ ವತಿಯಿಂದ ದಿನಸಿ ಕಿಟ್ ವಿತರಣೆ

ಬೆಳ್ತಂಗಡಿ: ಬೆಸ್ಟ್ ಫೌಂಡೇಷನ್ ಬೆಳ್ತಂಗಡಿ ವತಿಯಿಂದ ಸೋಣಂದೂರು ಗ್ರಾಮದ ಪೊಮ್ಮಜೆ ಭಾಗದ 150 ಕುಟುಂಬಗಳಿಗೆ ಹೈಕೋರ್ಟ್ ವಕೀಲರು ಹಾಗೂ ಬೆಸ್ಟ್ ಫೌಂಡೇಷನ್‌ನ ರಕ್ಷಿತ ಶಿವರಾಂ ಇವರ ನೇತೃತ್ವದಲ್ಲಿ ಇಂದು ದಿನಸಿ ಕಿಟ್ ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಬೇಬಿ ಸುವರ್ಣ ಎಸ್., ಮಾಜಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಬೆಳ್ತಂಗಡಿ ಯುವ ಕಾಂಗ್ರೆಸ್‌ನ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಅನಿಲ್ ಪೈ, ತಾಲೂಕು ಮಲೆಕುಡಿಯ ಸಂಘದ ಕಾರ್ಯದರ್ಶಿ ಜಯನಂದ ಪಿಲಿಕಲ, ಯುವ […]
ರೋಟರಿ ಕ್ಲಬ್ ಬೆಳ್ತಂಗಡಿಗೆ ಪ್ರಶಸ್ತಿಗಳ ತುರಾಯಿ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ 2020-21ನೇ ಸಾಲಿನಲ್ಲಿ ಧನಂಜಯರಾವ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀಧರ ಕೆ. ವಿ. ಕಾರ್ಯದರ್ಶಿಯಾಗಿ ಮಾಡಿದ ರಾಷ್ಟ್ರಮಟ್ಟದ ದಾಖಲೆಯ ಕಾರ್ಯಗಳಿಗೆ ರೋಟರಿ ಜಿಲ್ಲೆಯಿಂದ ಹಲವಾರು ಪ್ರಶಸ್ತಿಗಳ ತುರಾಯಿ ದೊರಕಿವೆ.ಬಂಟ್ವಾಳದ ರೋಟರಿ ಕ್ಲಬ್ ಸಭಾಂಗಣದಲ್ಲಿ ನಡೆದ ರೋಟರಿ ಸಮಾರಂಭದಲ್ಲಿ ರೋಟರಿ ಜಿಲ್ಲೆ ಕ್ಲಬ್‌ಗಳಿಗೆ ಕೊಡಲ್ಪಡುವ ಪ್ರಶಸ್ತಿಗಳಲ್ಲಿ ಬೆಳ್ತಂಗಡಿ ಕ್ಲಬ್ ಗೆ ಅತ್ಯುನ್ನತ ಪ್ರಶಸ್ತಿ ‘ಪ್ಲಾಟಿನಂ ಪ್ಲಸ್’ನ ಗೌರವ ಸಿಕ್ಕಿದರೆ; ಭೂಮಿಯ ಅಂತರ್ಜಲವನ್ನು ಮಟ್ಟವನ್ನು ಉಳಿಸುವ ಹಾಗೂ ಏರಿಸುವ ಸಲುವಾಗಿ ಮಾಡಿದ ನೀರುಳಿಸುವ ಬಗ್ಗೆ ಮಾಡಿದ […]
ಡಿ.ಸಿ. ಆದೇಶಕ್ಕೆ ಸಚಿವರಿಂದಲೇ ಸವಾಲ್

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಕ್ ಜಿಲ್ಲಾಧಿಕಾರಿ ಡಾl ಕೆ. ವಿ. ರಾಜೇಂದ್ರರ ಆದೇಶಕ್ಕೆ ರಾಜ್ಯ ಸರಕಾರದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ದಂಪತಿಗಳು ಸವಾಲು ಹಾಕುವ ಮೂಲಕ ಪರೋಕ್ಷವಾಗಿ ಜಿಲ್ಲೆಯ ಕಾನೂನು-ನಿಯಮ ಉಲ್ಲಂಘಕರ ಬೆಂಬಲಕ್ಕೆ ನಿಂತಿದ್ದಾರೆ.ಕೊರೋನಾ ನಿಯಂತ್ರಣಕ್ಕಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ವೀಕ್‌ಎಂಡ್ ಕರ್ಫ್ಯೂ ಘೋಷಿಸಿ ಆದೇಶ ಹೊರಡಿಸಿದ್ದರು. ವೀಕ್‌ಎಂಡ್ ಕರ್ಫ್ಯೂ ಇರುವಾಗ ಸರಕಾರದ ಓರ್ವ ಜವಾಬ್ದಾರಿಯುತ ಸಚಿವನಾಗಿ ತನ್ನ ಪತ್ನಿ ಹಾಗೂ ಹಿಂಬಾಲಕರೊಡನೆ ಆಗಸ್ಟ್ 14ರ ಶನಿವಾರ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ […]
ಕಲ್ಮಂಜ ರೋಟರಿ ಸಮುದಾಯದಳ ಪದಗ್ರಹಣ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿಯ ಅಂಗಸಂಸ್ಥೆಯಾದ ಕಲ್ಮಂಜ ರೋಟರಿ ಸಮುದಾಯ ದಳದ 2021-22 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಸಿದ್ದಬೈಲು ಪರಾರಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.ಕಲ್ಮಂಜ ರೋಟರಿ ಸಮುದಾಯ ದಳದ ನಿಕಟಪೂರ್ವ ಅಧ್ಯಕ್ಷೆ ಜಾನಕಿ ಗಣ್ಯರನ್ನು ಸ್ವಾಗತಿಸಿ, ಈ ಹಿಂದಿನ ಅವಧಿಯ ಕೆಲಸದ ಬಗ್ಗೆ ಮಾತನಾಡಿದರು. ನಿಕಟಪೂರ್ವ ಕಾರ್ಯದರ್ಶಿ ದಿನೇಶ್ ಗೌಡ ಮಾತನಾಡಿ, ಕೊರೋನಾದ ಸಂಕಷ್ಟದ ಸಂದರ್ಭದಲ್ಲೂ ಕೈಗೊಂಡ ಸನಾಜಮುಖಿ ಕಾರ್ಯಕ್ರಮಗಳ ಬಗ್ಗೆ ವರದಿ ಮಂಡಿಸಿದರು. ಬೆಳ್ತಂಗಡಿ ರೋಟರಿ […]
ಎಸ್‌ಎಸ್‌ಎಲ್‌ಸಿಯಲ್ಲಿ 621 ಅಂಕ ಪಡೆದ ಅನಘಗೆ ಡಿಸಿಯಿಂದ ಅಭಿನಂದನೆ

ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮಾ ಶಾಲೆಯ ವಿದ್ಯಾರ್ಥಿನಿ ಅನಘ ಪ್ರಸಕ್ತ ಶೈಕ್ಷಣಿಕ ವರ್ಷ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳಲ್ಲಿ 621ಅಂಕಗಳನ್ನು ಪಡೆದಿದ್ದಾರೆ. ಆಗಸ್ಟ್ 10ರ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾl ರಾಜೇಂದ್ರ ಕೆ. ವಿ. ಅವರು ಅನಘನನ್ನು ಮಂಗಳೂರು ಕಚೇರಿಯಲ್ಲಿ ಅಭಿನಂದಿಸಿದರು.ಅನಘ ಅವರು ಬೆಳ್ತಂಗಡಿ ತಾಲೂಕು ಕಂದಾಯ ಇಲಾಖೆಯಲ್ಲಿ ಬೆಳ್ತಂಗಡಿ ಕಸಬಾ ಗ್ರಾಮದ ಗ್ರಾಮ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸತೀಶ್‌ರಾಜ್ ಹಾಗೂ ಧರ್ಮಸ್ಥಳ ಶಾಂತಿವನದಲ್ಲಿ ಫಿಸಿಯೋತೆರೆಪಿಸ್ಟ್ ಆಗಿರುವ ಮಂಜುಳಾ […]
‘ಕಾರ್ಪೋರೇಟ್ ಕಂಪೆನಿಗಳೇ ಭಾರತ ಬಿಟ್ಟು ತೊಲಗಿ’ ಪ್ರತಿಭಟನೆ

ಬೆಳ್ತಂಗಡಿ: ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಲಾಮರಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಏಜೆಂಟ್ ಆಗಿರುವ ಬಿಜೆಪಿ ನೇತೃತ್ವದ ನರೇಂದ್ರ ಮೋದಿ ಸರಕಾರ ಮತ್ತೆ ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸುವ ಮೂಲಕ ಮತ್ತೆ ದೇಶವನ್ನು ಗುಲಾಮಗಿರಿಗೆ ತಳ್ಳುವ ಕ್ರಮ ಅತ್ಯಂತ ಅಪಾಯಕಾರಿಯಾಗಿದೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಆರೋಪಿಸಿದರು.ಅವರು ಆಗಸ್ಟ್ 9ರಂದು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಸಿಐಟಿಯು ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ‘ಕಾರ್ಪೊರೇಟ್ […]