ಬಲಿಪ ಅಸೋಸಿಯೇಟ್ ಶುಭಾರಂಭ

ಬೆಳ್ತಂಗಡಿ: ಬೆಳ್ತಂಗಡಿ ಮೂರು ಮಾರ್ಗದ ಬಳಿ ಕಳೆದ 25 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ನ್ಯಾಯವಾದಿ ಮತ್ತು ನೋಟರಿ ಪಬ್ಲಿಕ್ ಮುರಳಿ ಬಲಿಪರ ಕಛೇರಿಯು ಬೆಳ್ತಂಗಡಿ ಆಡಳಿತ ಸೌಧದ ಅಮೀಪವಿರುವ ವಿಘ್ನೇಶ್ ಸಿಟಿ ಸಂಕೀರ್ಣಕ್ಕೆ ಸ್ಥಳಾಂತರಗೊಂಡಿದ್ದು; ಇದರ ಉದ್ಘಾಟನಾ ಸಮಾರಂಭವು ಡಿಸೆಂಬರ್ 24ರಂದು ನೆರವೇರಿತು.ದೀಪ ಪ್ರಜ್ವಲನಗೈದು ನೂತನ ಕಛೇರಿಯನ್ನು ಉದ್ಘಾಟಿಸಿದ ನ್ಯಾಯವಾದಿ ಮುರಳಿಯವರ ಮಾವ ಕೆನರಾ ಬ್ಯಾಂಕ್‌ನ ನಿವೃತ್ತ ಅಧಿಕಾರಿ ಕೆ. ಸುಬ್ರಹ್ಮಣ್ಯ ಭಟ್ ಮತ್ತು ಅವರ ಪತ್ನಿ ಫಿಶರಿಸ್ ಇಲಾಖೆಯ ನಿವೃತ್ತ ಅಧಿಕಾರಿ ಉಮಾ ಎಸ್. ಭಟ್ ಆಶೀರ್ವಾದ […]

ಪೆರಾಡಿ ಸೊಸೈಟಿಯ ಸಿಇಒ ಸೇವಾ ನಿವೃತ್ತಿ

ಬೆಳ್ತಂಗಡಿ: ಅನೇಕ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಒಂದಾದ ಪೆರಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ವಿವಿಧ ಹುದ್ದೆಗಳಲ್ಲಿ 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಉತ್ತಮ ಕರ್ತವ್ಯ ನಿರ್ವಾಹಕರಾದ ಯು. ಶೇಖ್ ಲತೀಫ್ ಇವರು ಕಳೆದ ಡಿಸೆಂಬರ್ 31ರಂದು ಸೇವಾ ನಿವೃತ್ತಿ ಹೊಂದಿದರು.ಸಂಘದ ಆಡಳಿತ ಮಂಡಳಿಯ ಮಾತ್ರವಲ್ಲ; ಮತ್ತು ಸದಸ್ಯರ ಹಾಗೂ ಗ್ರಾಹಕರ ಪ್ರೀತಿ-ವಿಶ್ವಾಸಗಳಿಗೆ ಪಾತ್ರರಾಗಿದ್ದ ಯು. ಶೇಖ್ ಲತೀಫ್; ಆರಂಭದಲ್ಲಿ ಸಂಘದ ಪೆರಿಂಜೆ ಶಾಖೆಯ […]

ಪಂಚಾಯತ್‌ರಾಜ್ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಅವಲೋಕನಾ ಸಭೆ

ಬೆಳ್ತಂಗಡಿ: ಜನವರಿ 2ರಂದು ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ರಾಜ್ಯದ ಐದನೇ ಹಣಕಾಸು ಆಯೋಗದ ಅಧ್ಯಕ್ಷ ಡಾ. ಸಿ. ನಾರಾಯಣಸ್ವಾಮಿಯವರ ಅಧ್ಯಕ್ಷತೆಯಲ್ಲಿ ಪಂಚಾಯತ್‌ರಾಜ್ ಸಂಸ್ಥೆಗಳ ಸಾಂಸ್ಥಿಕ ರಚನೆ, ಕಾರ್ಯಚಟುವಟಿಕೆಗಳು, ಆರ್ಥಿಕ ಸ್ಥಿತಿಗತಿ, ಸಂಪನ್ಮೂಲಗಳ ಕ್ರೂಢೀಕರಣ ಮತ್ತು ಹಂಚಿಕೆ, ಮೂಲಸೌಕರ್ಯಗಳ ಮತ್ತು ಸೇವೆಗಳ ಒದಗಿಸುವಿಕೆಯಲ್ಲಿ ತಾಂತ್ರಿಕ ಸಾಮರ್ಥ್ಯ ಮತ್ತಿತರ ವಿಚಾರಗಳನ್ನು ಅಧ್ಯಯನ ಮಾಡಲು ಅವಲೋಕನಾ ಸಭೆ ನಡೆಯಿತು.ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ […]

ಲಾಯ್ಲ ಶ್ರೀ ಚಂದ್ಕೂರು ದೇಗುಲದಲ್ಲಿ ಯಕ್ಷಗಾನ ಬಯಲಾಟ

ಬೆಳ್ತಂಗಡಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಲಾಯ್ಲ ಗ್ರಾಮದ ಚಂದ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ನವೆಂಬರ್ 29ರಂದು ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವು ಅದ್ದೂರಿಯಾಗಿ ನಡೆಯಿತು. ಸಾವಿರಾರು ಮಂದಿ ಕಲಾಭಿಮಾನಿಗಳು ಅನ್ನ ಸಂತರ್ಪಣೆಯಲ್ಲಿ ಭಾಗವಹಿಸಿ’ ಯಕ್ಷಗಾನ ಪ್ರಸಂಗ ವೀಕ್ಷಿಸಿದರು. ಸೇವಾಕರ್ತರಾದ ಲಾಯ್ಲ ಗ್ರಾಮದ ಕೋಡಿಯೇಲು ಶ್ರೀಮತಿ ಜಯಂತಿ ಶೆಟ್ಟಿ ಮತ್ತು ಮಕ್ಕಳು ಬಂದಂತಹ ಎಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡು ಸತ್ಕರಿಸಿದರು.

ಡೆನ್ನನ ಡೆನ್ನಾನ ಶಬ್ಧವೇ ತುಳುವರಿಗೆ ರೋಮಾಂಚಕ-ರಕ್ಷಿತ್

ಬೆಳ್ತಂಗಡಿ: ತುಳುವರನ್ನು ಜಾತಿ, ಮತ, ಧರ್ಮ ಭೇದವಿಲ್ಲದೇ ಬೆಸೆಯುವ ಶಬ್ಧವೇ ಡೆನ್ನನ ಡೆನ್ನಾನ. ಡೆನ್ನನ ಡೆನ್ನಾನ ಶಬ್ಧವೇ ತುಳುವರಿಗೆ ರೋಮಾಂಚಕ. ಎಲ್ಲ ಸಮುದಾಯಗಳಿಗೂ ಒಂದು ಸಾಂಸ್ಕೃತಿಕ ಹಿನ್ನೆಲೆ ಇದೆ. ಆದರೆ ಇಂದು ಸರಿಯಾದ ಆಚರಣೆ ಇಲ್ಲದೇ ನಿರ್ಲಕ್ಷ್ಯದಿಂದ ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದೇವೆ. ಯುವವಾಹಿನಿ ಸಂಘಟನೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸಂಸ್ಕರಿಸುವ ಒಳ್ಳೆಯ ಉದ್ಧೇಶದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಖಂಡಿತಾ ಯುವವಾಹಿನಿಯ ಎಲ್ಲ ಸದಸ್ಯರೂ ಅಭಿನಂದನಾರ್ಹರು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ […]

ಪುರುಷ ಹಾಗೂ ಮಹಿಳೆ ಸಮಾನತೆಯಿಂದ ದೇಶದ ಅಭಿವೃದ್ಧಿ’

ಬೆಳ್ತಂಗಡಿ: ಕಾಲ ಬದಲಾಗಿದೆ, ಭಾರತ ಬದಲಾಗುತ್ತಿದೆ; ಸಂಸಾರವೆಂಬ ರಥದಲ್ಲಿ ಪುರುಷ ಹಾಗೂ ಮಹಿಳೆ ಎರಡು ಚಕ್ರಗಳಿದ್ದಂತೆ. ಇಬ್ಬರೂ ಸರಿಸಮಾನವಾಗಿ ಹೆಜ್ಜೆ ಹಾಕಿದರೆ ಸಂಸಾರದ ಹಾದಿ ಸುಗಮವಾಗಿ ಸಾಗುವುದು. ಅಂತೆಯೇ ಸರಿಸಮಾನತೆಯಿಂದ ದೇಶ ಹಾಗೂ ಸಮಾಜದ ಅಭಿವೃದ್ಧಿಯ ದೃಷ್ಟಿಯಲ್ಲಿ ಜೊತೆಯಾಗಿ ಸಾಗಬೇಕು ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ಹೇಣಲಿದರು. ಅವರು ನವೆಂಬರ್ 23ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಬೆಳ್ತಂಗಡಿ ಲಾಯ್ಲದ ವಿಮುಕ್ತಿ ಸ್ವಸಹಾಯ ಸಂಘಗಳ ಟ್ರಸ್ಟ್ ಬೆಳ್ಳಿಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಧರ್ಮ, […]

ದೇವರ ನಾಮಸ್ಮರಣೆಗೆ ಸೋಲೇ ಇಲ್ಲ-ಡಾ. ಹೆಗ್ಗಡೆ

ಬೆಳ್ತಂಗಡಿ: ದೇವರ ನಾಮಸ್ಮರಣೆಗೆ ಸೋಲೇ ಇಲ್ಲ; ಬದುಕಿನಲ್ಲಿ ಎಲ್ಲವೂ ಗೆಲುವೇ. ಆದ್ದರಿಂದ ಇಲ್ಲಿ ಏರ್ಪಡಿಸಿದ ಜಿನಭಜನಾ ಸ್ಪರ್ಧೆಯಲ್ಲಿ ಎಲ್ಲರೂ ಶ್ರದ್ಧೆಯಿಂದ ಭಾಗವಹಿಸಿ; ಸ್ಪರ್ಧೆಯಲ್ಲಿ ಒಂದು ತಂಡ ಗೆಲ್ಲಬಹುದು; ಉಳಿದ ತಂಡಗಳಿಗೆ ಅದು ಮುಂದಿನ ಸ್ಪರ್ಧೆಗೆ ಸಿದ್ಧತೆಗೆ ವೇದಿಕೆಯಾದಂತೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಅವರು ನವೆಂಬರ್ 24ರಂದು ಬೆಳ್ತಂಗಡಿಯ ಶ್ರೀ ಮಂಜುನಾಥಸ್ವಾಮಿ ಕಲಾಭವನದಲ್ಲಿ ನಡೆದ ಮಂಗಳೂರು ವಿಭಾಗ ಮಟ್ಟದ ಜಿನಭಜನಾ ಸ್ಪರ್ಧೆಯನ್ನು ತಂತ್ರಜ್ಞಾನ ಮತ್ತು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ […]

ಜಿಲ್ಲಾಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ

ಬೆಳ್ತಂಗಡಿ: ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಹಾಗೂ ರಿಯಲ್ ಎಸ್ಟೇಟ್ ಗ್ರೂಪ್ ಜಂಟಿ ಸಹಯೋಗದಲ್ಲಿ ನವೆಂಬರ್ 17ರಂದು ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಅಂತರ್ ಐಟಿಐ ಶಿಕ್ಷಣ ಸಂಸ್ಥೆಗಳ ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಾವಳಿಯ ತ್ರೋಬಾಲ್ ಪಂದ್ಯದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಐಟಿಐ ಪ್ರಥಮ ಸ್ಥಾನ ಗಳಿಸಿದೆ.ಪಂದ್ಯದಲ್ಲಿ ನಾಲ್ಕು ಕೈಗಾರಿಕಾ ತರಬೇತಿ ಸಂಸ್ಥೆಗಳ (ಐಟಿಐ) ವಿದ್ಯಾರ್ಥಿನಿಯರು ಭಾಗವಹಿಸಿದ್ದು, ವಾಮಂಜೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಂಗಳಜ್ಯೋತಿ ಐಟಿಐ […]

ಕೈ ಮತ್ತು ಮೈಕ್ರೊಸರ್ಜರಿ ಸೇವೆಗೆ ಚಾಲನೆ

ಬೆಳ್ತಂಗಡಿ: ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ಕೈ ಮತ್ತು ಸೂಕ್ಷ್ಮ ಶಸ್ತ್ರಚಿಕಿತ್ಸೆಯಲ್ಲಿ ಫೆಲೋಶಿಪ್ ಪಡೆದಿರುವ ಮೂಳೆ ಶಸ್ತ್ರಚಿಕಿತ್ಸಕ ಡಾ| ರೋಹಿತ್ ಜಿ. ಭಟ್ ಅವರು ಇತ್ತೀಚೆಗೆ ನಡೆದ ಸರಳ ಸಮಾರಂಭದಲ್ಲಿ ಸೇವೆಗೆ ಸೇರ್ಪಡೆಗೊಂಡರು.ಕೈ ಮತ್ತು ಮಣಿಕಟ್ಟಿನ ಮೈಕ್ರೊಸರ್ಜರಿಯಲ್ಲಿ ಹೆಬ್ಬೆರಳು ಅಥವಾ ಬೆರಳು, ರಕ್ತನಾಳದ ತೀವ್ರವಾದ ಸೀಳುವಿಕೆ ಅಥವಾ ಗಂಭೀರ ಸ್ನಾಯುರಜ್ಜು ಅಥವಾ ನರಗಳ ಗಾಯದಂತಹ ಆಘಾತಕಾರಿ ಗಾಯಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗುವುದು. ತೀವ್ರವಾಗಿ ಗಾಯಗೊಂಡ ಬೆರಳುಗಳು ಮತ್ತು ಮಣಿಕಟ್ಟುಗಳನ್ನು ರಕ್ಷಿಸುವ ಹಾಗೂ ಕೈ ಮತ್ತು ಬೆರಳಿನ ಪುನರ್ನಿರ್ಮಾಣ ಮಾಡುವ […]

ಎಸ್.ಡಿ.ಎಂ ಇಂಗ್ಲಿಷ್ ವಿಭಾಗದಿಂದ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಸರಣಿ

ಬೆಳ್ತಂಗಡಿ : ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯ ಹಾದಿಯಲ್ಲಿ ಇಂಗ್ಲಿಷ್ ಭಾಷಾ ಕಲಿಕೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಡಾ.ಮಂಜುಶ್ರೀ ಹೇಳಿದರು.ಆಕಾಂಕ್ಷಾ ಚಾರಿಟೇಬಲ್ ಟ್ರಸ್ಟ್, ಬಳಂಜ ಎಜುಕೇಷನಲ್ ಟ್ರಸ್ಟ್ ಮತ್ತು ಎಸ್. ಡಿ. ಎಂ ಸ್ನಾತಕೋತ್ತರ ಸಂಸ್ಥೆಯ ಸಹಯೋಗದೊಂದಿಗೆ ವಿವಿಧೆಡೆ ಆಯೋಜಿತವಾಗಲಿರುವ ‘ಸ್ಪೋಕನ್ -ಇಂಗ್ಲಿಷ್ ಕ್ಲಾಸ್’ ಸರಣಿ ಕಾರ್ಯಕ್ರಮಕ್ಕೆ ಬಳಂಜದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿದ್ಯುಕ್ತ ಚಾಲನೆ ನೀಡಿ ಅವರು ಮಾತನಾಡಿದರು.ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಹಾಗೂ ಸಾಮಾಜಿಕ ಪರಿಕಲ್ಪನೆಗಳ […]