ರಾಜ್ಯಮಟ್ಟದ ಚಿತ್ರ-ಕವನ ಸ್ಪರ್ಧೆ

ಬೆಳ್ತಂಗಡಿ: ದರ್ಪಣ ಇದು ಅರಿವಿನ ದೀವಿಗೆ ತಂಡ. ರೇಡಿಯೋ ನಿನಾದ, ಮಡಿಲು ಸಾಂಸ್ಕೃತಿಕ ಟ್ರಸ್ಟ್(ರಿ), ಮಂಗಳೂರು ಮತ್ತು ಕುತೂಹಲ ಕಲರವ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗಾಗಿ ರಾಜ್ಯ ಮಟ್ಟದ ಚಿತ್ರ-ಕವನ ಸ್ಪರ್ಧೆಯನ್ನು ಏರ್ಪಡಿಸಿದೆ.ಭಾಗವಹಿಸಲಿಚ್ಚಿಸುವ ಸ್ಪರ್ಧಾರ್ಥಿಗಳು ಯಾವುದಾದರೂ ವಸ್ತು-ವಿಷಯವನ್ನಿಟ್ಟುಕೊಂಡು ಕವನವನ್ನು ರಚಿಸಬೇಕು. ಕವನಕ್ಕೆ ಪೂರಕವಾದ ಫೋಟೋ ಜೊತೆಗಿರಬೇಕು. ಫೋಟೋಗೆ ಪೂರಕವಾಗಿ ಕವನ ನಿರೂಪಿಸಲ್ಪಟ್ಟಿರಬೇಕು.ಸ್ಪರ್ಧೆ ಎರಡು ಹಂತಗಳಲ್ಲಿ ನಡೆಯಲಿದ್ದು, ಒಂದರಿಂದ ಹತ್ತನೇ ತರಗತಿಯವರೆಗೆ ಪ್ರಾಥಮಿಕ ವಿಭಾಗ ಮತ್ತು ಪಿಯುಸಿ ಮೇಲ್ಪಟ್ಟವರು ಪ್ರೌಢ ವಿಭಾಗದಲ್ಲಿ ಭಾಗವಹಿಸಬಹುದಾಗಿದೆ. ಚಿತ್ರ+ಕವನ ಕಳುಹಿಸಲು ಜುಲೈ15 ಕೊನೆಯ ದಿನಾಂಕವಾಗಿದ್ದು, ಯಾವುದೇ ಕೃತಿಚೌರ್ಯಕ್ಕೆ […]
ಪರಿಸರದೊಂದಿಗೆ ಪತ್ರಿಕಾ ದಿನಾಚರಣೆ ಮಾದರಿಕಾರ್ಯ -ಪ್ರತಾಪ್‌ಸಿಂಹ ನಾಯಕ್

ಬೆಳ್ತಂಗಡಿ: ಜಗತ್ತಿನಲ್ಲಿ ನವ ಮಾಧ್ಯಮಗಳು ಪರಿಣಾಮಕಾರಿಯಾಗಿ ಸುದ್ದಿ ಪ್ರಸಾರ ಮಾಡುತ್ತಿವೆ. ಆ ಮೂಲಕ ಜಗತ್ತಿನ ಮೂಲೆ ಮೂಲೆಯನ್ನು ಕ್ಷಣಮಾತ್ರದಲ್ಲಿ ಸುದ್ದಿ ತಲುಪಲು ಸಾಧ್ಯವಾಗಿದೆ. ಸಮಾಜಮುಖಿ ಕಾರ್ಯವಾದ ಗಿಡನಾಟಿ ಕಾರ್ಯ ಹಮ್ಮಿಕೊಂಡು ಪತ್ರಿಕಾ ದಿನಾಚರಣೆ ನಡೆಸಿರುವುದು ಪರಿಸರ ಪರವಾದ ನಡೆಯನ್ನು ಬಿಂಬಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹೇಳಿದರು.ಅವರು ಕಳೆಂಜ ನಂದಗೋಕುಲ ಗೋ ಶಾಲೆಯಲ್ಲಿ ಬೆಳ್ತಂಗಡಿ ಮೀಡಿಯಾ ಕ್ಲಬ್ ಹಮ್ಮಿಕೊಂಡಿದ್ದ ಶ್ರಮದಾನದೊಂದಿಗೆ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪ್ರಾದೇಶಿಕ ಹಾಗೂ ಗ್ರಾಮಾಂತರ ಪ್ರದೇಶದ ಕಾರ್ಯಕ್ರಮಗಳ ವಿಸ್ತೃತ ವರದಿಗಳಿಂದ ಧನಾತ್ಮಕ […]
ನಾಡಿನ ‘ಸಹಕಾರಿ ಶಕ್ತಿ’ ಎನ್. ಎಸ್. ಗೋಖಲೆಯವರಿಗೆ ಭಾವಪೂರ್ವ ನುಡಿನಮನ

ಬೆಳ್ತಂಗಡಿ: ಸಹಕಾರಿ ಕ್ಷೇತ್ರದ ಅತ್ಯುತ್ತಮ ಚಿಂತಕ ಹಾಗೂ ಮಾರ್ಗದರ್ಶಕರಾಗಿದ್ದು, ಅನೇಕ ಸಂಘ ಸಂಸ್ಥೆಗಳ ಏಳಿಗೆಯಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡಿದ ಎನ್. ಎಸ್. ಗೋಖಲೆಯವರ ಜೀವನದ ಆದರ್ಶ ಹಾಗೂ ತತ್ವಗಳು ಮುಂದಿನ ಪೀಳಿಗೆಯ ಬೆಳವಣಿಗೆಗೆ ಮಾದರಿ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು ಜುಲೈ 5ರಂದು ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಂಗಣದಲ್ಲಿ ಜರಗಿದ ಹಿರಿಯ ಸಹಕಾರಿ ಧುರೀಣ ಎನ್. ಎಸ್. ಗೋಖಲೆಯವರಿಗೆ ಶ್ರದ್ಧಾಂಜಲಿ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಎನ್. ಎಸ್. ಗೋಖಲೆಯವರು ಸಮಾಜಕ್ಕೆ ಸಲ್ಲಿಸಿದ […]
ಸಾಮಾಜಿಕ ಜಾಗೃತಿಯ “ಸ್ಥಿತಿ” ಕಿರುಚಿತ್ರ ಬಿಡುಗಡೆ

ಬೆಳ್ತಂಗಡಿ: ಖ್ಯಾತ ರಂಗಕರ್ಮಿ ಜೀವನ್‌ರಾಂ ಸುಳ್ಯ ನಿರ್ದೇಶನದ ಮೊದಲ ಕಿರುಚಿತ್ರ ‘ಸ್ಥಿತಿ’ ಬಿಡುಗಡೆ ಕಾರ್ಯಕ್ರಮವುಸುಳ್ಯದ ರಂಗಮನೆಯಲ್ಲಿ ನಡೆಯಿತು.ಸುಳ್ಯ ತಹಶೀಲ್ದಾರ್ ಅನಿತಾಲಕ್ಷ್ಮಿಯವರು ಸ್ಥಿತಿ ಕಿರುಚಿತ್ರದ ಪೋಸ್ಟರ್ ಅನಾವರಣಗೊಳಿಸಿ, ಕಂಪ್ಯೂಟರ್ ಬಟನ್ ಒತ್ತಿ ಟಿ. ವಿ. ಪರದೆಯಲ್ಲಿ ಕಿರುಚಿತ್ರಕ್ಕೆ ಚಾಲನೆ ನೀಡಿದರು. ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ. ಬಿ. ಸುಧಾಕರ ರೈ ಹಾಗೂ ಸುಳ್ಯ ಪ್ರೆಸ್‌ಕ್ಲಬ್ ಅಧ್ಯಕ್ಷ ಹರೀಶ್ ಬಂಟ್ವಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಜೀವನ್ ರಾಮ್ ಸುಳ್ಯ, ಮನುಜ ನೇಹಿಗ ಮತ್ತು ಲಾಲಿತ್ಯ ಆರ್. ತಾರಾಗಣದ ಒಂಬತ್ತೂವರೆ ನಿಮಿಷಗಳ […]
ನಿರ್ಮಲ ಮನಸ್ಸು- ನೈರ್ಮಲ್ಯ ಪರಿಸರ ಹಾಗೂ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ: ನಿರ್ಮಲ ಮನಸ್ಸು- ನೈರ್ಮಲ್ಯ ಪರಿಸರ ಎಂಬ ಘೋಷಣೆಯೊಂದಿಗೆ ಕಾರ್ಯಚರಿಸುತ್ತಿರುವಸಹಾಯ್ ಉಪ್ಪಿನಂಗಡಿ ಸರ್ಕಲ್‌ನ ಕುಪ್ಪೆಟ್ಟಿ ಸೆಂಟರ್ ವ್ಯಾಪ್ತಿಯ ಸ್ವಚ್ಚತಾ ಅಭಿಯಾನವನ್ನು ಸರಕಾರಿ ಹಿರಿಯ ಪ್ರಾಥಮಿಜ ಶಾಲೆ ಇಳಂತಿಲದ ವಠಾರದಲ್ಲಿ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನ್ಯಾಯವಾದಿ ಮನೊಹರ್ ಕುಮಾರ್ ಸಹಾಯ್ ತಂಡ ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದು, ನೊಂದವರ ನೆರವಿಗೆ ಧಾವಿಸುವ ಮೂಲಕ ಕಾರ್ಯಾಚರಣೆ ನಡೆಸುವ ಸಹಾಯ್ ತಂಡ ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ […]
ಚಾರ್ಮಾಡಿಯಲ್ಲಿ ಸಾಮಾಜಿಕ ಅರಣ್ಯೀಕರಣ ಯೋಜನೆಗೆ ಡಾ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆ

ಬೆಳ್ತಂಗಡಿ: ಚಾರ್ಮಾಡಿಯ ಕಣ್ಣಪ್ಪಾಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಹಣ್ಣಿನ ಮತ್ತು ತರಕಾರಿ ಗಿಡಗಳ ಬೀಜದುಂಡೆಗಳನ್ನು ಹಾಕುವ ಮೂಲಕ ‘ಸಾಮಾಜಿಕ ಅರಣ್ಯೀಕರಣ’ ಯೋಜನೆಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು.ಚಾರ್ಮಾಡಿಯ ಕಣ್ಣಪ್ಪಾಡಿ ಮೀಸಲು ಅರಣ್ಯ ಪ್ರದೇಶದ ಸುಮಾರು 20ಎಕರೆ ಪ್ರದೇಶದಲ್ಲಿ 500ಕ್ಕೂ ಹೆಚ್ಚಿನ ಹಣ್ಣಿನ ಗಿಡಗಳ ಬಿತ್ತನೆ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಜನಜಾಗೃತಿ ವೇದಿಕೆ, ಶೌರ್ಯ ವಿಪತ್ತು ನಿರ್ವಹಣಾ ಘಟಕ, ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಜುಲೈ 3ರಂದು ಹಮ್ಮಿಕೊಳ್ಳಲಾಗಿತ್ತು. ಮಾವು, ಹಲಸು, ಹೆಬ್ಬಲಸು, […]
ಸಣ್ಣ ನೀರಾವರಿ ಸಚಿವರಿಂದ ವಿವಿಧ ಕಾಮಗಾರಿಗಳ ಪರಿಶೀಲನೆ

ಬೆಳ್ತಂಗಡಿ: ರಾಜ್ಯ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರು ಜುಲೈ 3ರಂದು ಬೆಳ್ತಂಗಡಿಗೆ ಭೇಟಿ ನೀಡಿ ಪ್ರಗತಿ ಹಂತದಲ್ಲಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು.ಸುಮಾರು ರೂಪಾಯಿ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಳಿಯ ಗ್ರಾಮ ಪಂಚಾಯತ್ ಮತ್ತು ಕೊಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹರ್ಪಳ ಸಂಪರ್ಕ ಸೇತುವೆ, ಕಿಂಡಿ ಅಣೆಕಟ್ಟು ಮತ್ತು ತಡೆಗೋಡೆ ಕಾಮಗಾರಿ ಹಾಗೂಸುಮಾರು ರೂಪಾಯಿ 3.5 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಣಿಯೂರು ಗ್ರಾಮ ಪಂಚಾಯತ್ ಹಾಗೂ ಮಚ್ಚಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲೇಜಿ-ಕಲಾಯಿ ಸಂಪರ್ಕ […]
ಕೋಟೆಬಾಗಿಲಿನಲ್ಲಿ ವೃಕ್ಷಾರೋಪಣ ಕಾರ್ಯಕ್ರಮ

ಮೂಡುಬಿದಿರೆ: ಮಾರ್ಪಾಡಿ ಗ್ರಾಮದ ಕೋಟೆಬಾಗಿಲಿನಲ್ಲಿ ಬಿಜೆಪಿ ನಗರ ಮಹಾ ಶಕ್ತಿಕೇಂದ್ರದ ವತಿಯಿಂದ ವೃಕ್ಷಾರೋಪಣ ಕಾರ್ಯಕ್ರಮವುಭಾರತೀಯ ಜನತಾ ಪಾರ್ಟಿ ಮೂಲ್ಕಿ-ಮೂಡುಬಿದಿರೆ ಮಂಡಲ, ಬಿಜೆಪಿ ಮೂಡುಬಿದಿರೆ ನಗರ ಮಹಾ ಶಕ್ತಿಕೇಂದ್ರದ ಸಹಭಾಗಿತ್ವದಲ್ಲಿ ನಡೆಯಿತು.ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ, ಭಾರತೀಯ ಜನಸಂಘದ ಸ್ಥಾಪಕ ಅಧ್ಯಕ್ಷರಾದ ಡಾಕ್ಟರ್ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನ್ ದಿವಸದ ಪ್ರಯುಕ್ತ ಪ್ರತಿ ಬೂತಿನಲ್ಲಿ 20 ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಆಚರಿಸಬೇಕೆಂದು ಪಕ್ಷದ ಸೂಚನೆ […]
ಬೆಳ್ತಂಗಡಿ: ತಾಲೂಕು ಪತ್ರಿಕಾ ದಿನಾಚರಣೆ ಆಧುನಿಕ ತಂತ್ರಜ್ಞಾನದ ಮಧ್ಯೆಯೂ ಪತ್ರಿಕೆ ವಿಶ್ವಾಸಾರ್ಹ

ಬೆಳ್ತಂಗಡಿ: ತಾಲೂಕು ಪತ್ರಿಕಾ ದಿನಾಚರಣೆ ಆಧುನಿಕ ತಂತ್ರಜ್ಞಾನದ ಮಧ್ಯೆಯೂ ಪತ್ರಿಕೆ ವಿಶ್ವಾಸಾರ್ಹಫೊಟೊ ಬೆಳ್ತಂಗಡಿ: ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪತ್ರಿಕೆ ಮಹತ್ತರ ಪಾತ್ರ ವಹಿಸಿತ್ತು. ಅದೇ ರೀತಿ ಕೊರೊನಾ ಸಂದರ್ಭದಲ್ಲಿ ಪತ್ರಿಕೆಗಳು ಸೋಂಕನ್ನು ಕ್ಷಿಪ್ರವಾಗಿ ನಿಯಂತ್ರಣಕ್ಕೆ ತರುವಲ್ಲಿ ಸರಕಾರ ಎಷ್ಟು ಕಾರಣವೋ ಅಷ್ಟೇ ಮಾಧ್ಯಮವೂ ಕಾರಣ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ತಾಲೂಕು ಪತ್ರಕರ್ತರ ಸಂಘ ಬೆಳ್ತಂಗಡಿ ವತಿಯಿಂದ ಜುಲೈ 3ರಂದು ಬೆಳ್ತಂಗಡಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತುರ್ತು ಪರಿಸ್ಥಿತಿ […]
ಕೋರೋನ ವಾರಿಯರ್ಸ್‌ಗೆ ಗೌರವಧನ ಹಾಗೂ ಪರಿಕರ ಕೊಡುಗೆ

ಬೆಳ್ತಂಗಡಿ: ಗ್ರಾಮ ಮಟ್ಟದಲ್ಲಿ ಕೊರೋನ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕಿರಿಯ ಅರೋಗ್ಯ ಮಹಿಳಾ ಸಹಾಯಕಿಯರುಗಳ ಜನಸೇವೆಯನ್ನು ಗುರುತಿಸಿ ಅವರಿಗೆ ಮಾಸ್ಕ್, ಗ್ಲೌಸ್ ಹಾಗೂ ಸೇನಿಟೈಸರ್ ಜೊತೆಗೆ ಗೌರವಧನವನ್ನು ಕಡಿರುದ್ಯಾವರ ಗ್ರಾಮ ಪಂಚಾಯತ್ ವತಿಯಿಂದ ನೀಡಲಾಯಿತು.ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜುಲೈ 2ರಂದು ಪಂಚಾಯತ್ ಅಧ್ಯಕ್ಷ ಅಶೋಕ್ ಕುಮಾರ್ ಅಧ್ಯಕ್ಷತೆಯಲ್ಲಿ ಸರಳ ಕಾರ್ಯಕ್ರಮ ಆಯೋಜನೆಗೊಂಡಿತ್ತು.ಆಶಾ ಕಾರ್ಯಕರ್ತೆಯರಾದ ಭಾರತಿ ಕೊಂದೋಡಿ, ಯಶೋಧಾ, ವಿನಯ ಆರ್. ಗೌಡ, ಶಾರದಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ಭಾರತಿ ಯು, ಸವಿತಾ […]