ಸ್ಪಂದನಾ ಸೇವಾ ಸಂಘದಿಂದ ನೆರವು

ಬೆಳ್ತಂಗಡಿ: ಕ್ಯಾನ್ಸರ್ ನಿಂದ ಬಳಲುತ್ತಿರುವ ಉಜಿರೆ ಗ್ರಾಮದ ಮುಂಡತ್ತೋಡಿ ಪೂರ್ಣಿಮಾ ಅವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ ವತಿಯಿಂದ ರೂಪಾಯಿ 15,000/- ದ ಚೆಕ್ಕನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರಾದ ಉಷಾದೇವಿ ಕಿನ್ಯಾಜೆ ಇವರ ಮೂಲಕ ಫಲಾನುಭವಿಗೆ ಜೂನ್ 29ರಂದು ಹಸ್ತಾಂತರ ಮಾಡಲಾಯಿತು.ಈ ಸಂಧರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿಗಳಾದ ಮೋಹನ್ ಗೌಡ ಕೊಯ್ಯೂರು, ನಿಕಟಪೂರ್ವ ನಿರ್ದೇಶಕರಾದ ಆನಂದ […]

ಗುರುದೇವ ಕಾಲೇಜಿನಲ್ಲಿ ಕೋವಿಡ್ ವ್ಯಾಕ್ಸಿನೇಷನ್

ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಕೋವಿಡ್ ವ್ಯಾಕ್ಸಿನೇಷನ್ ನೀಡುವ ಕಾರ್ಯಕ್ರಮವು ಜೂನ್ 29ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಕಾಲೇಜಿನ‌ ಆಡಳಿತ ಮಂಡಳಿ‌ ಅಧ್ಯಕ್ಷರೂ ಆಗಿರುವ ಮಾಜಿ‌ ಶಾಸಕ ವಸಂತ ಬಂಗೇರ ಉದ್ಘಾಟನೆ ನೆರವೇರಿಸಿದರು.ತಾಲೂಕು ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾl ವಿದ್ಯಾವತಿ, ಕಾಲೇಜಿನ‌ ನೋಡೆಲ್ ಅಧಿಕಾರಿ ಶಮೀವುಲ್ಲಾ, ರಾಷ್ಟ್ರೀಯ ಸೇವಾ ಯೋಜನೆಯ ಪದಾಧಿಕಾರಿಗಳಾದ ಸಂತೋಷ್, ಭವ್ಯಶ್ರೀ ಮೊದಲಾದವರು ಉಪಸ್ಥಿತರಿದ್ದರು. ಕಾಲೇಜಿನ‌ ಪ್ರಾಚಾರ್ಯ ಡಾ.‌ ಪ್ರವೀಣ್ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ […]

ಪೆಟ್ರೋಲ್ ಬೆಲೆ ಲೀಟರಿಗೆ ರೂಪಾಯಿ 100/- ದಾಟಿದರೇನು…. ಬಂಗುಡೆ ಮೀನಿಗೆ ಕಿಲೋಗೆ 200/- ರೂಪಾಯಿ ಆಗಿಲ್ಲವಾ…..

ಬೆಳ್ತಂಗಡಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸಿಲ್ ಬೆಲೆ ಗಗನಕ್ಕೇರುತ್ತಿರುವ ಬಗ್ಗೆ ಮಾಧ್ಯಮಗಳು ಹಾಗೂ ಸಾಕಷ್ಟು ಜನಸಾಮಾನ್ಯರು ಆತಂಕ ವ್ಯಕ್ತಪಡಿಸಿದಾಗ ಆಕ್ರೋಶ ವ್ಯಕ್ತಪಡಿಸಿದ ಕೆಲ ಯುವಕ ಮಿತ್ರರು ‘ಪೆಟ್ರೋಲ್ ಬೆಲೆ ರೂಪಾಯಿ 100/- ದಾಟಿದರೇನು? ಬಂಗುಡೆ ಮೀನಿಗೆ ಕಿಲೋಗೆ 200/-ರೂಪಾಯಿ ಆಗಿಲ್ಲವಾ? ನಾವೇನು ಬಂಗುಡೆ ಮೀನು ತಿನ್ನೋದನ್ನು ಬಿಟ್ಟಿದ್ದೇವಾ? ಅಂತೆಯೇ ಪೆಟ್ರೋಲ್ ಬೆಲೆ ಲೀಟರಿಗೆ 200/- ಆದರೂ ನಾವು ತಿರುಗುವುದನ್ನು ಬಿಡೋದಿಲ್ಲ’ ಎಂದು ತಿರುಗೇಟು ನೀಡಿದ್ದರು.ನಾನೇನೋ ಇದು ಬಿಸಿರಕ್ತದ ಯುವಕರು ಪ್ರಧಾನಿ ನರೇಂದ್ರ ಮೋದಿ ಮೇಲಿನ ಅಂಧಾಭಿಮಾನದದ ವ್ಯಕ್ತ […]

‘ಹಣ್ಣಿನ ಗಿಡನಾಟಿಯ ಫಲಿತಾಂಶ ಮುಂದಿನ ದಿನಗಳಲ್ಲಿ ಲಭ್ಯ’

ಬೆಳ್ತಂಗಡಿ: ಹಣ್ಣಿನ‌ ಗಿಡಗಳ‌ ನಾಟಿ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಯಶಸ್ವಿಯಾಗಿ ನಿರ್ವಹಿಸುತ್ತಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ಇದರ ಸಕಾರಾತ್ಮಕ ಪರಿಣಾಮ ನಮ್ಮ ಕಣ್ಣೆದುರಿಗೆ ಬರಲಿದೆ ಎಂದು ಶ್ರೀ‌ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಹೇಳಿದರು.ಅವರು ಜೂನ್ 28ರಂದು ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಬುಡ್ಡೇಲುಮಾರು ರುದ್ರಭೂಮಿಯಲ್ಲಿ, ಗ್ರಾಮ ಪಂಚಾಯತ್ ಶಿರ್ಲಾಲು ಮತ್ತು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ನಡೆದ ಗಿಡನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ‌ ಮಾತನಾಡುತ್ತಿದ್ದರು.ಶಿರ್ಲಾಲು […]

ಒಂಟಿ ಸಲಗದ ಸವಾರಿ ಮನೆಯಂಗಳಕ್ಕೆ

ಬೆಳ್ತಂಗಡಿ: ಮುಂಡಾಜೆ ಗ್ರಾಮದ  ಕಲ್ಲಾಜೆ, ಮುಂಡ್ರುಪಾಡಿ, ಚಾಮುಂಡಿ ನಗರ, ಧುಂಬೆಟ್ಟು, ಮಜಲು ಮತ್ತಿತರ ಪರಿಸರಗಳಲ್ಲಿ ಜೂನ್ 27ರ ಮುಂಜಾನೆ ಒಂಟಿ ಸಲಗ ಸವಾರಿ ನಡೆಸಿದೆ. ಈ ಪ್ರದೇಶದ ಗ್ರಾಮೀಣ ರಸ್ತೆಯ ಮೂಲಕ ಸುಮಾರು 2ಕಿ.ಮೀ‌ ವ್ಯಾಪ್ತಿಯಲ್ಲಿ ಓಡಾಟ ನಡೆಸಿರುವ ಒಂಟಿ ಸಲಗ, ಮುಂಡ್ರುಪಾಡಿ ಜಯಾನಂದ ಶೆಟ್ಟಿ, ಸಂಜೀವ ಶೆಟ್ಟಿ, ಬಾಲಕೃಷ್ಣ ಗೌಡ ಮೊದಲಾದವರ ಮನೆಯ ಅಂಗಳದ ಮೂಲಕ ತೋಟಗಳ ಕಡೆಗೆ ಸಂಚರಿಸಿದೆ. ಜಯಾನಂದ ಶೆಟ್ಟಿಯವರ ಮನೆಯ ಅಂಗಳದ ಮೂಲಕ ಮುಂಜಾನೆ 4:30ರ ಸುಮಾರಿಗೆ ಒಂಟಿ ಸಲಗ ಸಂಚರಿಸಿರುವ […]

ಅಂಬ್ಯುಲೆನ್ಸ್ ನಲ್ಲಿ ಮಹಿಳೆ ಹೆರಿಗೆ

ಬೆಳ್ತಂಗಡಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ 108 ಅಂಬುಲೆನ್ಸ್‌ನಲ್ಲೇ ಹೆರಿಗೆಯಾದ ಘಟನೆ ಜೂನ್ 25ರಂದು ವರದಿಯಾಗಿದೆ.ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಮಜಲಡ್ಡ ನಿವಾಸಿ ಲಲಿತ (38) ಅಂಬುಲೆನ್ಸ್‌ನಲ್ಲಿ ಮಗುವಿಗೆ ಜನ್ಮ ನೀಡಿದವರು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಇವರನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಡಂತ್ಯಾರು ಸಮೀಪಿಸುತ್ತಿದ್ದಂತೆ ವಿಪರೀತ ಹೊಟ್ಟೆ ನೋವು ಕಾಣಿಸಿಕೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಶುಶ್ರೂಷಕಿ ವಿಲ್ಮಾ ಹಾಗೂ ವಾಹನ ಚಾಲಕ ಗಿರೀಶ್‌ರವರ ಸಹಾಯದಿಂದ ಅಂಬುಲೆನ್ಸ್ ನ ಒಳಗೆ ಹೆರಿಗೆ ಮಾಡಿಸಿ ಸಾರ್ವಜನಿಕರ […]

ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷೀಲಿ ಎಂಬಂತೆ ಮತ್ತೆ ವಕ್ಕರಿಸಿದ ಕೊರೋನಾ ಸೋಂಕು

ಬೆಳ್ತಂಗಡಿ: ಇಡೀ ದೇಶದಲ್ಲಿ ಕೊರೊನಾ ಹಾವಳಿ ಸ್ವಲ್ಪ ಕಡಿಮೆಯಾಗಿದ್ದರೂ ಗ್ರಾಮೀಣ ಭಾಗಗಳಲ್ಲಿ ಇನ್ನೂ ಸೋಂಕಿನ‌ ಪ್ರಮಾಣ ಹೆಚ್ಚಾಗುತ್ತಾ ಇದೆ.‌ ಬೆಳ್ತಂಗಡಿ ತಾಲೂಕು ಜಿಲ್ಲೆಯಲ್ಲೇ ಕೊರೊನಾ ಸೋಂಕಿನ ಹಾಟ್ ಸ್ಪಾಟ್ ಆಗಿದೆ. ತಾಲೂಕಿನ ಕೆಲವೊಂದು ಗ್ರಾಮಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಲಾಯ್ಲ ಗ್ರಾಮದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗಿದ್ದ ಕಾರಣ ಜಿಲ್ಲಾಡಳಿತ ಕಳೆದ ವಾರ ಇಡೀ ಗ್ರಾಮವನ್ನು ಸೀಲ್‌ಡೌನ್ ಮಾಡಿತ್ತು. ಇನ್ನೇನು ಲಾಯ್ಲ ಗ್ರಾಮದಲ್ಲಿ ಕೊರೋನಾ ಸೋಂಕು ಹತೋಟಿಗೆ ಬಂದು ಸೀಲ್‌ಡೌನ್ ತೆರವಾಯಿತು ಅನ್ನೋವಾಗಲೇ ಗ್ರಾಮದ ಕನ್ನಾಜೆ […]

ಕೋವಿಡ್‌ನಿಂದ ಮೃತರಾದ ಕುಟುಂಬಗಳ ಸಂದರ್ಶನ, ನೆರವು – ಉಲಮಾಗಳಿಗೂ‌ ಸ್ಪಂದನೆ

ಬೆಳ್ತಂಗಡಿ; ದಕ್ಷಿಣ ಕನ್ನಡ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಫಝಲ್ ತಂಙಳ್ ಕೂರತ್‌ರವರ ನಿರ್ದೇಶನದಂತೆ ಬೆಳ್ತಂಗಡಿ ತಾಲೂಕು ಸಹಾಯಕ ಖಾಝಿ ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್ ಗುರುವಾಯನಕೆರೆ ಇವರು ಬೆಳ್ತಂಗಡಿ ತಾಲೂಕಿನಾದ್ಯಂತ ಕೋವಿಡ್‌ನಿಂದ ಮರಣಹೊಂದಿದವರ ಮನೆಗಳಿಗೆ ಸಂದರ್ಶನ ನೀಡಿ ಆಹಾರ ಕಿಟ್ ಹಾಗೂ ಕೆಲಸವಿಲ್ಲದೇ ಮನೆಯಲ್ಲಿರುವ ಉಲಮಾಗಳಿಗೆ ಆಹಾರ ಕಿಟ್ ಹಾಗೂ ಧನ ಸಹಾಯ ವಿತರಣೆ ನಡೆಸಿದರು.ಗುರುವಾಯನಕೆರೆ ಶೈಖ್ ಹಝ್ರತ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ವಠಾರದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ […]

ಬುಲ್ ಬುಲ್ ಗೋಲ್ಡನ್ ಆ್ಯರೋ ಪರೀಕ್ಷೆ-ಬೆಳ್ತಂಗಡಿ ಎಸ್‌ಡಿಎಂ ಶಾಲೆಗೆ ರಾಷ್ಟ್ರಪ್ರಶಸ್ತಿ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯ ಬುಲ್‌ಬುಲ್ ವಿದ್ಯಾರ್ಥಿನಿಯರಾದ ಪ್ರಾಪ್ತಿ ವಿ. ಶೆಟ್ಟಿ, ರಿತಿಕಾ ಶೆಣೈ, ಜಸ್ವಿತಾ ಪಿ. ಹಾಗೂ ಅದಿತಿ ಪಿ. ಪೂಜಾರಿ ಇವರು ಬುಲ್ ಬುಲ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಸಂಸ್ಥೆ ನವದೆಹಲಿ ಇವರು ಆಯೋಜಿಸಿದ ಗೋಲ್ಡನ್ ಆ್ಯರೋ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರಾಷ್ಟ್ರೀಯ ಪುರಸ್ಕಾರವನ್ನು ಪಡೆದಿರುತ್ತಾರೆ. ಇವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ ಹಾಗೂ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ […]

413 ವಿದ್ಯಾರ್ಥಿಗಳಿಗೆ ಟ್ಯಾಬ್ ಪಿಸಿ ವಿತರಣೆ

ಬೆಳ್ತಂಗಡಿ: ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗೆ ಇನ್ನಷ್ಟು ಪರಿಹಾರ ನೀಡುವ ದೃಷ್ಟಿಯಿಂದ ರಾಜ್ಯ ಸರಕಾರವು ಗ್ರಾಮೀಣ ಭಾಗದಲ್ಲೂ ಸರಕಾರಿ ಶಾಲೆಗಳನ್ನು ತಾಂತ್ರಿಕ ಪ್ರಗತಿಯತ್ತ ಕೊಂಡುಯ್ಯುವ ಮಹತ್ತರ ಯೋಜನೆಯನ್ನು ರೂಪಿಸಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಡಿಜಿಟಲ್ ಕಲಿಕಾ ಯೋಜನೆಯಡಿ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಮತ್ತು ಪೂಂಜಾಲಕಟ್ಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಒಟ್ಟು 413 ವಿದ್ಯಾರ್ಥಿಗಳಿಗೆ ಜೂನ್ 23ರಂದು ಟ್ಯಾಬ್ ಪಿಸಿಗಳನ್ನು ಸಾಂಕೇತಿಕವಾಗಿ ವಿತರಿಸಿ ಮಾತನಾಡುತ್ತಿದ್ದರು. ಆರ್ಥಿಕ ಪ್ರಗತಿಗೆ ಕೋವಿಡ್ ಹೊಡೆತ ನೀಡಿರುವ ಮಧ್ಯೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು […]