ವಿಮುಕ್ತಿ ಸಂಸ್ಥೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಚಿಕಿತ್ಸಾ ಸಲಕರಣೆ ಕೊಡುಗೆ

ಬೆಳ್ತಂಗಡಿ: ಕಪುಚಿನ್ ಕೃಷಿಕ ಸೇವಾ ಕೇಂದ್ರ ಹಾಗೂ ವಿಮುಕ್ತಿ ಲಾಯ್ಲದ ವತಿಯಿಂದ ಬೆಳ್ತಂಗಡಿ ತಾಲೂಕಿನ 15ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬ್ಬಂದಿಗಳ ಉಪಯೋಗಕ್ಕಾಗಿ 75ಅಕ್ಸಿಮೀಟರ್, 1,500ಸರ್ಜಿಕಲ್ ಮಾಸ್ಕ್ ಹಾಗೂ 1,500ಸರ್ಜಿಕಲ್ ಗ್ಲೌಸ್‌ಗಳನ್ನು ಜೂನ್ 23ರಂದು ಬೆಳ್ತಂಗಡಿಯ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದ ವಿಮುಕ್ತಿ ಸಂಸ್ಥೆಯ ನಿರ್ದೇಶಕ ವಂದನೀಯ ವಿನೋದ್ ಮಸ್ಕರೇನ್ಹಸ್, ಈ ಕೊಡುಗೆಯ ಸದ್ಬಳಕೆಯಾಗಲಿ ಎಂದು ಹಾರೈಸಿದರು. ಅಂತೆಯೇ ಈ ಸೌಲಭ್ಯವನ್ನು ವಿಮುಕ್ತಿ ಸಂಸ್ಥೆಯ ವತಿಯಿಂದ ತಾಲೂಕಿನ ಎಲ್ಲ […]

ರಾಷ್ಟ್ರೀಯ ಶೌರ್ಯ ವಿಪತ್ತು ನಿರ್ವಹಣಾ ನಡ ಘಟಕದಿಂದ ಗಿಡ ನಾಟಿ ಕಾರ್ಯಕ್ರಮ

ಬೆಳ್ತಂಗಡಿ: ನಡ /ಕನ್ಯಾಡಿ ರಾಷ್ಟ್ರೀಯ ಶೌರ್ಯ ವಿಪತ್ತು ನಿರ್ವಹಣಾ ತಂಡದವರಿಂದ ತಂಡದ ವಾರ್ಷಿಕೋತ್ಸವದ ಸಂಭ್ರಮಾಚರಣೆ ಪ್ರಯುಕ್ತ ನಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡ ನಾಟಿ ಕಾರ್ಯಕ್ರಮವು ಜೂನ್ 23ರಂದು ನಡೆಯಿತು.ಕಾರ್ಯಕ್ರಮದಲ್ಲಿ ಜನಜಾಗೃತಿ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆಂಟ್ ಪಾಯ್ಸ್, ಹಾಗೂ ಉಪವಲಯ ಅರಣ್ಯ ಅಧಿಕಾರಿ ರಾಜೇಶ್ ಅವರು ಗಿಡ ನಾಟಿಗೆ ಚಾಲನೆ ನೀಡಿ ಶುಭ ಹಾರೈಸಿದರು.ಶಾಲಾ ಮೈದಾನದ ಸುತ್ತ ಸುಮಾರು ಆರುವತ್ತಕ್ಕೂ ಅಧಿಕ ವಿವಿಧ ಬಗೆಯ  ಹಣ್ಣು ಹಂಪಲುಗಳ  ಗಿಡಗಳನ್ನು ನಾಟಿ ಮಾಡಲಾಯಿತು. ವಿಜಯ ಗೌಡ  […]

ಸ್ಪಂದನ ಸೇವಾ ಸಂಘದಿಂದ ನೆರವು

ಬೆಳ್ತಂಗಡಿ: ಇಳಂತಿಲ ಗ್ರಾಮದ ಕೊಡಂಗೆ ನಿವಾಸಿ ನೀಲಯ್ಯ ಗೌಡರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ತೀರ ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದ ಸೇವಾ ಯೋಜನೆಯ ಧನ ಸಹಾಯ ರೂ.20,000/- ದ ಚೆಕ್ಕನ್ನು  ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕರಾದ ಯುವರಾಜ ಗೌಡ ಅನಾರು ಮೂಲಕ ಫಲಾನುಭವಿಗೆ  ಹಸ್ತಾಂತರ ಮಾಡಲಾಯಿತು.ಈ ಸಂದರ್ಭ  ವಾಣಿ ಸೌಹಾರ್ದ ಕೋ-ಆಪರೇಟಿವ್(ಲಿ.) ನಿರ್ದೇಶಕ ಸುರೇಶ್ ಕೌಡಂಗೆ, ಸ್ಥಳೀಯರಾದ ಕಾರ್ತಿಕ್ ಗೌಡ ಅನ್ನಾಜೆ, ಲೋಕೇಶ್ ಗೌಡ ಕಂಗಿನಾರುಬೆಟ್ಟು, ಸುಬ್ರಹ್ಮಣ್ಯ […]

ಕೋವಿಡ್ ಮೂರನೇ ಅಲೆ ಎದುರಿಸಲು ಸಜ್ಜು-ಹರೀಶ್ ಪೂಂಜ

ಬೆಳ್ತಂಗಡಿ: ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಬೆಳ್ತಂಗಡಿ ತಾಲೂಕಿನ ಜನರ ಆರೋಗ್ಯ ಕಾಪಾಡುವ ಮಹದುದ್ಧೇಶದಿಂದ ಇಲ್ಲಿನ ಸರಕಾರಿ ಆಸ್ಪತ್ರೆಗೆ 5ಆಕ್ಸಿಜನ್ ಕಾನ್ಸನ್‌ಟ್ರೇಟರ್‌‌ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕೊಡುಗೆಯಿಂದ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಈಗಾಗಲೇ ಬೇರೆಬೇರೆ ದಾನಿಗಳು ಇಲ್ಲಿನ ಆಸ್ಪತ್ರೆಗೆ ಸಾಕಷ್ಟು ಸೌಲಭ್ಯ-ಸಲಕರಣೆಗಳನ್ನು ಕೊಡುಗೆಯಾಗಿ ನೀಡಿದ್ದು, ಇದೀಗ ಆಕ್ಸಿಜನ್ ಘಟಕವೂ ಲೋಕಾರ್ಪಣೆಗೆ ಸಿದ್ಧವಾಗಿದೆ. ಸುಮಾರು 50ಬೆಡ್‌ಗಳಿಗೆ ಆಕ್ಸಿಜನ್ ಪೂರೈಸುವ ವ್ಯವಸ್ಥೆಯೊಂದಿಗೆ ಕೊರೋನಾ 3ನೇ ಅಲೆ ಎದುರಿಸಲು ಸರ್ವ ರೀತಿಯಿಂದಲೂ […]

ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿ ಪುಣ್ಯತಿಥಿ

ಬೆಳ್ತಂಗಡಿ: ಸ್ವತಂತ್ರ ಭಾರತದ ಮೊತ್ತಮೊದಲ ಸರ್ವಪಕ್ಷ ಸರಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಭಾರತದ ಏಕತೆಗೆ ಶ್ರಮಿಸಿದ ಮಹಾನ್ ನಾಯಕ ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಪುಣ್ಯತಿಥಿಯನ್ನು ಜೂನ್ 23ರಂದು ಬೆಳ್ತಂಗಡಿ ಮಂಡಲ ಬಿಜೆಪಿ ಕಛೇರಿಯಲ್ಲಿ ಆಚರಿಸಲಾಯಿತು. ಡಾ. ಶ್ಯಾಮ್‌ಪ್ರಸಾದ್ ಮುಖರ್ಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಲಾಯಿತು. ಬಳಿಕ ಸಸಿ ನೆಡುವ ಮೂಲಕವೃಕ್ಷಾರೋಪಣ ಮಾಡಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ‌ ಮಂಡಲ ಬಿಜೆಪಿ ಅಧ್ಯಕ್ಷ ಜಯಂತ್ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ […]

ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ವತಿಯಿಂದ ವಿಧ್ಯಾರ್ಥಿನಿಯ ಶೈಕ್ಷಣಿಕ ಶುಲ್ಕ ಹಸ್ತಾಂತರ

ಬೆಳ್ತಂಗಡಿ: ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ನಾರಾಯಣಗುರುಗಳ ಸಂದೇಶದಂತೆ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಗುರುತಿಸಿಕೊಂಡಿರುವ ಯುವವಾಹಿನಿ (ರಿ) ಬೆಳ್ತಂಗಡಿ ಘಟಕವು ದಾನಿಗಳ ನೆರವಿನಿಂದ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ಗುರಿಪಳ್ಳದ ಎಣೀರು ನಿವಾಸಿ ಜಯಂತಿ ಇವರ ಮಗಳಾದ ಸಂಜನಾ ಇವಳ ಒಂದು ವರ್ಷದ ಸಂಪೂರ್ಣ ಶೈಕ್ಷಣಿಕ ವೆಚ್ಚವನ್ನು ಘಟಕದ ಅಧ್ಯಕ್ಷರಾದ ಎಂ. ಕೆ. ಪ್ರಸಾದ್ ಇವರು ಕಾಲೇಜು ಆಡಳಿತ ಮಂಡಳಿಗೆ ಹಸ್ತಾಂತರಿಸಿದರು, ಈ ಸಂಧರ್ಭದಲ್ಲಿ ಗುರುದೇವ ಕಾಲೇಜಿನ […]

ಕಾಟಾಜೆಯಲ್ಲಿ ಅಸಮರ್ಪಕ-ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಇಲಾಖೆಯ ಅನುಮತಿ-ಆದೇಶವೇ ಇಲ್ಲ:ಅವಾಂತರವಾದರೆ ದೇವರೇ ದಿಕ್ಕು!

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಕಾಟಾಜೆ ಪರ್ಪಳ ಪರಿಶಿಷ್ಟ ಜಾತಿ ಕಾಲನಿಗೆ ಅಣಿಯೂರಿನಿಂದ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಯನ್ನು ಗುತ್ತಿಗೆದಾರರು ಅಸಮರ್ಪಕವಾಗಿ ಮಾತ್ರವಲ್ಲ; ಅವೈಜ್ಞಾನಿಕವಾಗಿ ನಿರ್ವಹಿಸಿದ ಪರಿಣಾಮ ಕಳೆದ ವಾರ ಸುರಿದ ಭಾರೀ ಮಳೆಗೆ ರಸ್ತೆಯ ಇಕ್ಕೆಲಗಳಲ್ಲೂ ಮಣ್ಣು ಕೊಚ್ಚಿ ಹೋಗಿದೆ. ಮಾತ್ರವಲ್ಲ; ರಸ್ತೆ ಬದಿಯಲ್ಲಿದ್ದ ಹತ್ತಾರು ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಸುದೈವವಶಾತ್ ಏನೂ ದೊಡ್ಡ ಮಟ್ಟದ ಅನಾಹುತ ಸಂಭವಿಸದ್ದರಿಂದ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಇಲಾಖಾ ಅಧಿಕಾರಿಗಳು ಒಂದು ಹಂತದಲ್ಲಿ ಬಚಾವಾಗಿದ್ದಾರೆ. ಆದರೂ ಇವರುಗಳಿಗೆ ಆತಂಕ […]

ಅಸ್ಮಿತೆಯ ಅವಮಾನ ಖಂಡನೀಯ : ತುಳುವೆರೆ ಪಕ್ಷ

ಬೆಳ್ತಂಗಡಿ: ಉಡುಪಿ-ಚಿಕ್ಕಮಗಳೂರು ಸಂಸದರಾದ ಶೋಭಾ ಕರಂದ್ಲಾಜೆಯವರು ಇತ್ತೀಚೆಗೆ ತುಳು ರಾಜ್ಯದ ಬೇಡಿಕೆಯು ಕುಚೋದ್ಯದ ಬೇಡಿಕೆ ಎಂದಿದ್ದು ಖಂಡನೀಯ. ಕನ್ನಡ ಏಕೀಕರಣ ಚಳವಳಿಯನ್ನು ಸಮರ್ಥಸಿರುವ ಇವರು ಅದೇ ತುಳು ಏಕೀಕರಣ ಚಳವಳಿಯನ್ನು ಕುಚೋದ್ಯದ ಬೇಡಿಕೆ ಎಂದಿದ್ದು ಇವರ ದ್ವಿಮುಖ ನೀತಿಯನ್ನು ತೋರಿಸುತ್ತದೆ. ತುಳುವರ ನಾಡು ನುಡಿಯ ಹೋರಾಟವನ್ನು ಅವಮಾನಿಸುವ ಮೂಲಕ ಸಮಸ್ತ ತುಳುವರ ಭಾವನೆಗಳಿಗೆ ನೋವು ತಂದಿದ್ದಾರೆ. ತುಳು ಅಸ್ಮಿತೆಯ ವಿಚಾರಗಳನ್ನು ಯಾರೇ ಕುಚೋದ್ಯ ಮಾಡಿದರೂ ಅದನ್ನು ತುಳುವೆರೆ ಪಕ್ಷ ಖಂಡಿಸುತ್ತದೆ ಎಂದು ಪಕ್ಷದ ಅದ್ಯಕ್ಷರಾದ ಶೈಲೇಶ್ ಆರ್.ಜೆ. […]

ವಿದ್ಯುತ್ ದರ ಏರಿಕೆ ಖಂಡಿಸಿ ಪ್ರತಿಭಟನೆ

ಬೆಳ್ತಂಗಡಿ: ವಿದ್ಯುತ್ ದರ ಏರಿಕೆ ಖಂಡಿಸಿ ಜೂನ್ 21ರಂದು ರಾತ್ರಿ ಇಡೀ ರಾಜ್ಯಾದ್ಯಂತ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್ಐ) ಕರೆ ನೀಡಿದಂತೆ ಬೆಳ್ತಂಗಡಿ ತಾಲೂಕಿನಾದ್ಯಂತ ಚಿಮಿಣಿ, ಕ್ಯಾಂಡಲ್, ದೊಂದಿ, ಲಾಟೀನು ಪ್ರದರ್ಶನದೊಂದಿಗೆ ಪ್ರತಿಭಟನೆ ನಡೆಸಲಾಯಿತು.ಕೋವಿಡ್ 19 ಲಾಕ್‌ಡೌನ್ ಹೆಸರಿನಲ್ಲಿ ಜನತೆಯನ್ನು ಕತ್ತಲಲ್ಲಿಟ್ಟು ರಾಜ್ಯ ಸರ್ಕಾರ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ವಂಚಿಸಲಾಗಿದೆ. ಜನರಿಗೆ ಕೆಲಸವಿಲ್ಲದೆ ಒಂದೊತ್ತಿನ ಊಟಕ್ಕೆ ಪರದಾಡುವ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಜನತೆಯನ್ನು ಅತ್ಯಂತ ಸಂಕಷ್ಟಕ್ಕೆ ದೂಡಲಾಗಿದೆ ಎಂದು […]

ಕಲಾವಿದನಲ್ಲಿ ಕಲೆ ಬೆಳೆಯಲು ನಿರಂತರತೆ ಮುಖ್ಯ-ಪ್ರತಾಪ್‌ಸಿಂಹ ನಾಯಕ್

ಬೆಳ್ತಂಗಡಿ: ವ್ಯಕ್ತಿಯ ಯಶಸ್ಸು ವೃತ್ತಿಯ ನಿರಂತರತೆಯ ಮೇಲೆ ಅವಲಂಬಿತವಾಗಿರುತ್ತದೆ.  ರಾಜಕೀಯದಲ್ಲಿ ನಿರಂತರ ಕೆಲಸ ಮಾಡದಿದ್ದರೆ  ಮೂಲೆಗುಂಪಾಗುತ್ತೇವೆ. ಅದೇ ರೀತಿ ಯಾವುದೇ ಕಲಾವಿದರು ವೃತ್ತಿ ಬಾಂಧವರು ನಿರಂತರ ಸಾಧನೆಯಿಂದ ನೈಪುಣ್ಯತೆ, ಸ್ವಾಮಿತ್ವ ಪಡೆಯುತ್ತಾರೆ. ಕಲಾವಿದರ ವೃತ್ತಿ ಜೀವನ ಮನಸ್ಸಿಗೆ ಆನಂದ, ಜ್ಞಾನ, ಸಂಸ್ಕಾರ ನೀಡುತ್ತದೆ. ಸನಾತನ ಪರಂಪರೆಯ ಯಕ್ಷಗಾನ ಪ್ರೇಕ್ಷಕನ ಮನಸ್ಸಿನ ಮೇಲೆ  ಜೀವನ ಮೌಲ್ಯದ ಪ್ರಭಾವ, ಪರಿಣಾಮ ಬೀರುತ್ತದೆ.  ವಿಪರೀತ ಪರಿಸ್ಥಿತಿಯಲ್ಲಿ  ಬದಲಾದ ಕಾಲ, ಬದಲಾದ ರೀತಿಯಲ್ಲಿ ಹೊಸ ಪ್ರಯೋಗದ ಮೂಲಕ  ಕಲಾಸೇವೆ, ಕಲಾರಾಧನೆ  ನಡೆಯುತ್ತಿರುವುದು  ಶ್ಲಾಘನೀಯವೆಂದು ರೋಟರಿ ಜಿಲ್ಲಾ […]