ಎಂಎಲ್‌ಸಿ ಹರೀಶ್ ಕುಮಾರ್ ಸಿಯೋನ್ ಆಶ್ರಮಕ್ಕೆ ಭೇಟಿ

ಬೆಳ್ತಂಗಡಿ: ವಿಧಾನ ಪರಿಷತ್ತಿನ ಶಾಸಕರಾದ ಕೆ. ಹರೀಶ್ ಕುಮಾರ್‌ರವರು ಜೂನ್ 21 ರಂದು ನೆರಿಯ ಸಿಯೋನ್ ಆಶ್ರಮ ಬೇಟಿ ನೀಡಿ, ಆಶ್ರಮಕ್ಕೆ ಆಹಾರ ಕಿಟ್ ನೀಡಿ ಆಶ್ರಮದ ಟ್ರಸ್ಟಿಗಳಾದ ಯು. ಸಿ. ಪೌಲೋಸ್‌ರವರ ಜೊತೆಗೆ ಮಾತುಕತೆ ನಡೆಸಿದರು. ಅವರು ಕೊರೋನಸಂದರ್ಭದಲ್ಲಿ ಆಶ್ರಮವಾಸಿಗಳ ಸಂಕಷ್ಟ ಪರಿಸ್ಥಿತಿಯ ಬಗ್ಗೆ ವಿವರ ಪಡೆದರು. ಈ ಸಂಧರ್ಭದಲ್ಲಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯೆ ನಮೀತಾ ಕೆ. ಪೂಜಾರಿ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹಾಗೂ ನೆರಿಯ ಗ್ರಾಮ ಪಂಚಾಯತ್ ಹಾಲಿ ಸದಸ್ಯ ಬಿ. […]
ಮೊಬೈಲ್ ರಿಟೈಲರ್ಸ್ ಸಂಕಷ್ಟ ಪರಿಹರಿಸಲು ಮನವಿ

ಬೆಳ್ತಂಗಡಿ: ಲಾಕ್‌ಡೌನ್‌ನ ಈ ಸಮಯದಲ್ಲಿ ತಾಲೂಕಿನ ಸುಮಾರು 65ಕ್ಕೂ ಹೆಚ್ಚು ಮೊಬೈಲ್ ಅಂಗಡಿಗಳು ಸಂಪೂರ್ಣ ಬಂದ್ ಆಗಿದ್ದು, ಅಂಗಡಿ ಮಾಲೀಕರ ಬದುಕು ಸಂಕಷ್ಟಕ್ಕೀಡಾಗಿದ್ದು, ಗ್ರಾಹಕರು ಕೂಡಾ ತುಂಬಾ ಪರದಾಡುವಂತಾಗಿದೆ. ಕೆಲವರ ಮೊಬೈಲ್ ಕೆಟ್ಟು ಹೋಗಿ ಮಕ್ಕಳ ಆನ್‌ಲೈನ್ ಕ್ಲಾಸ್‌ಗೆ ತುಂಬಾನೇ ತೊಂದರೆ ಆಗುತ್ತಿದೆ. ಹಳ್ಳಿಗಳಲ್ಲಿ ಸಣ್ಣ ರಿಚಾರ್ಜ್‌ಗೂ ಮೊಬೈಲ್ ಅಂಗಡಿಯನ್ನು ಅವಲಂಬಿಸಿದ್ದು ಜನರು ತುಂಬಾ ಪರದಾಡುವಂತಾಗಿದೆ. ಕೆಲವರ ಸಿಮ್ ಹಾಳಾಗುತ್ತಿದ್ದು ಮೊಬೈಲ್ ಇಲ್ಲದೆ ತುಂಬ ಕಷ್ಟ ಅನುಭವಿಸುತಿದ್ದಾರೆ. ಅದಲ್ಲದೆ ಸರ್ಕಾರ Online ಸೇವೆಗಳಾದ amazon, flipcartಗಳಿಗೆ ಅವಕಾಶ […]
‘ಎಲ್ಲರಿಗೂ ಲಸಿಕೆ-ಎಲ್ಲರಿಗೂ ಉಚಿತ’ ಅಭಿಯಾನಕ್ಕೆ ಚಾಲನೆ

ಬೆಳ್ತಂಗಡಿ: ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ‘ಎಲ್ಲರಿಗೂ ಲಸಿಕೆ, ಎಲ್ಲರಿಗೂ ಉಚಿತ’ ವಿಶ್ವದ ಅತಿ ದೊಡ್ಡ ಉಚಿತ ಲಸಿಕಾ ಅಭಿಯಾನ ಜೂನ್ 21ರ ವಿಶ್ವ ಯೋಗದಿನದಂದು ದೇಶದಾದ್ಯಂತ ನಡೆಯುತ್ತಿದ್ದು, ಬೆಳ್ತಂಗಡಿ ತಾಲೂಕು ಆರೋಗ್ಯ ಕೇಂದ್ರದ ವತಿಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲಾ ಭವನದಲ್ಲಿ ನಡೆದ ಕೋವಿಡ್ ಲಸಿಕಾ ಅಭಿಯಾನಕ್ಕೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು.ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು, ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾl ವಿದ್ಯಾವತಿ, ಕ್ಷೇತ್ರ […]
ಕಲ್ಲಬೆಟ್ಟು ಸಹಕಾರಿ ಸಂಘದಲ್ಲಿ ಕೋವಿಡ್ ಲಸಿಕೆ ಅಭಿಯಾನ

ಕಲ್ಲಬೆಟ್ಟು: ಕಲ್ಲಬೆಟ್ಟು ವ್ಯ. ಸೇ. ಸ. ಸಂಘ (ನಿ.) ಕಲ್ಲಬೆಟ್ಟು ಇದರ ವತಿಯಿಂದ ಇಂದು ನಡೆದ ಕೋವಿಡ್ ಲಸಿಕೆ ಅಭಿಯಾನದಲ್ಲಿ ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಭೇಟಿ ನೀಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಲ್ಲಬೆಟ್ಟು ವ್ಯ ಸೇ ಸ ಬ್ಯಾಂಕ್ ಇದರ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ , ಪುರಸಭಾ ಸದಸ್ಯ ಜೊಸ್ಸಿ ಮಿನೇಜಾಸ್, ಬ್ಲಾಕ್ ವಕ್ತಾರ ರಾಜೇಶ್ ಕಡಲಕೆರೆ, ದಿಲೀಪ್ ಕುಮಾರ್ ಶೆಟ್ಟಿ ಮುಂತಾದವರು ಹಾಜರಿದ್ದರು. ಎಂ.ಸಿ.ಎಸ್. […]
50 ಪಲ್ಸ್ ಆಕ್ಸಿಮೀಟರ್, ಆಹಾರದ ಕಿಟ್, ಎನ್-95 ಮಾಸ್ಕ್ ವಿತರಣೆ

ಬೆಳ್ತಂಗಡಿ: ಮಾಜಿ ಶಾಸಕ ವಸಂತ ಬಂಗೇರ ಅವರ ಪುತ್ರಿಯರು ಮತ್ತು ಅಳಿಯಂದಿರ ಪ್ರಾಯೋಜಕತ್ವದಲ್ಲಿ ಬೆಳ್ತಂಗಡಿ ತಾಲೂಕು ಆರೋಗ್ಯ ಇಲಾಖೆಗೆ 50 ಪಲ್ಸ್ ಆಕ್ಸಿಮೀರ್ ಕೊಡುಗೆ; ಹಾಗೂ ತಾಲೂಕಿನ 70 ಮಂದಿ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ, ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ 16ಮಂದಿ ಪೌರ ಕಾರ್ಮಿಕರಿಗೆ ಮತ್ತು ಇತರ 15 ಆಯ್ದ ಕುಟುಂಬಗಳಿಗೆ ಆಹಾರದ ಕಿಟ್ ಮತ್ತು ಎನ್-95 ಮಾಸ್ಕ್ ವಿತರಣಾ ಕಾರ್ಯಕ್ರಮ ಜೂನ್ 21ರಂದು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸಭಾಭವನದಲ್ಲಿ ನಡೆಯಿತು. ಮಾಜಿ ಶಾಸಕ ವಸಂತ ಬಂಗೇರ ಈ […]
ಮಧ್ಯಾಹ್ನ 1ಗಂಟೆಯವರೆಗೆ ರಬ್ಬರ್ ಸೊಸೈಟಿಯಲ್ಲಿ ವ್ಯವಹಾರ
ಬೆಳ್ತಂಗಡಿ: ಕೊರೋನಾ ಲಾಕ್‌ಡೌನ್ ನಿಯಮವನ್ನು ಸಡಿಲಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಜೂನ್ 20ರಂದು ಹೊರಡಿಸಿದ ಮಾರ್ಗಸೂಚಿಯಂತೆ ಕೃಷಿಗೆ ಪೂರಕವಾದ ವ್ಯವಹಾರಗಳಿಗೆ ಷರತ್ತುಬದ್ಧ ಅನುಮತಿ ನೀಡಿದ್ದು, ಅದರಂತೆ ಜೂನ್ 21ರಿಂದ ಉಜಿರೆ ರಬ್ಬರು ಸೊಸೈಟಿಯಲ್ಲಿ ಬೆಳಿಗ್ಗೆ ಗಂಟೆ 9-30ರಿಂದ ಮಧ್ಯಾಹ್ನ ಗಂಟೆ 1-00ರತನಕ ವ್ಯವಹಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಂಗೆತ್ತ್ಯಾರು ರಾಜುಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೊಸೈಟಿಯ ಸದಸ್ಯ ಬೆಳೆಗಾರರು ಸರಕಾರ ಸೂಚಿಸಿರುವ ಕೋವಿಡ್ ನಿಯಮ ಪಾಲಿಸಿ, ಸಕಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ವ್ಯವಹಾರ […]
ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಫಲಿತಾಂಶ

ಬೆಳ್ತಂಗಡಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಿದ ರಾಜ್ಯಮಟ್ಟದ ಯೋಗ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ. ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಒಟ್ಟು 4098 ಸ್ಪರ್ಧಿಗಳು ಭಾಗವಹಿಸಿದ್ದಾರೆ ಎಂದು ಶಾಂತಿವನ ಟ್ರಸ್ಟ್ ನ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾl ಶಶಿಕಾಂತ್ ಜೈನ್ ತಿಳಿಸಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗ: ಶ್ರೇಯಾ ಆರ್. ನಾಯ್ಕ, ಉಪ್ಪುಂದ, ಉಡುಪಿ ಜಿಲ್ಲೆ.(ಪ್ರಥಮ) ಧೃತಿ ವಿ. ಮೊಯಿಲಿ, ಪಡುಮಾರ್ನಾಡು, ಮೂಡಬಿದ್ರೆ (ದ್ವಿತೀಯ) ಜಸ್ಟಿನ್ ವಾಸ್, ಬಂಟ್ವಾಳ […]
‘ಆಪ್ತರಕ್ಷಕ’ ಸೇವಾ ಕಾರ್ಯದ ಸಮಾರೋಪ

ಬೆಳ್ತಂಗಡಿ: ಕೊರೊನಾ ಮಹಾಮಾರಿಯಿಂದ ಜನ-ಜೀವನ ತತ್ತರಿಸಿದ ಸಂದರ್ಭದಲ್ಲಿ ಸಮಾಜಮುಖೀ ತುಡಿತದೊಂದಿಗೆ ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ಬಾಧಿತ ಶ್ರೀಸಾಮಾನ್ಯರ ನೋವಿಗೆ ‘ಆಪ್ತರಕ್ಷಕ’ ಎಂಬ ತುರ್ತು ವಾಹನ ಸೇವೆ ಕಳೆದ 40 ದಿನ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಿಂದ ಉಚಿತವಾಗಿ ಮಾಡಲಾಗಿತ್ತು. ಉತ್ತಮ ಸಮಾಜ ಸೇವೆಗೆ ಹಲವು ಮಂದಿ ಸಹ ಕರಿಸಿದ್ದಾರೆ. ಇದರ ಸಮಾರೋಪ ಕಾರ್ಯಕ್ರಮ ಜೂನ್ 20ರಂದು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ […]
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಯಾತ್ರಾರ್ಥಿಗಳ ನಿಯಂತ್ರಣಕ್ಕೆ ಕ್ರಮ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಶ್ರೀ ಮಂಜುನಾಥೇಶ್ವರ ದೇವಸ್ಥಾನಕ್ಕೆ ಹೊರ ಜಿಲ್ಲೆಗಳಿಂದ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪುತ್ತೂರು ಕಂದಾಯ ಇಲಾಖೆ ಉಪವಿಭಾಗದ ಸಹಾಯಕ ಕಮುಷನರ್ ಯತೀಶ್ ಉಳ್ಳಾಲ್ ಇವರ ಅಧ್ಯಕ್ಷತೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂನ್ 20ರಂದು ತುರ್ತುಸಭೆ ನಡೆಯಿತು.ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೊರ ಜಿಲ್ಲೆಗಳಿಂದ ಆಗಮಿಸುವ ಯಾತ್ರಾರ್ಥಿಗಳ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಮತ್ತು ತಾಲೂಕಿನ ಪೊಲೀಸ್ ಅಧಿಕಾರಿ ವರ್ಗದವರು ನಿರಂತರವಾಗಿ ಹೊರಜಿಲ್ಲೆಗಳ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ ಯಾತ್ರಾರ್ಥಿಗಳನ್ನು ಹಿಂದಕ್ಕೆ […]
ಕೊರೊನಾ ಸೋಂಕಿತರಿಗೆ ಕಾಯಕಲ್ಪ: ಮರಳಿ ಪಡೆದ ಆರೋಗ್ಯ ಭಾಗ್ಯ

ಬೆಳ್ತಂಗಡಿ: ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳ ಸರ್ವಧರ್ಮ ಸಮನ್ವಯ ಕೇಂದ್ರವಾಗಿ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದೆ. ಅನ್ನದಾನ, ವಿದ್ಯಾದಾನ, ಔಷಧದಾನ ಮತ್ತು ಅಭಯದಾನ ಇಲ್ಲಿ ನಿತ್ಯೋತ್ಸವ.ಕೊರೊನಾ ಸಂಕಷ್ಟದ ಸಂದರ್ಭದಲ್ಲಿಯೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಅನೇಕ ಸೇವಾಕಾರ್ಯಗಳನ್ನು ಆಯೋಜಿಸಲಾಗಿದೆ. ರಾಜ್ಯದ ವಿವಿಧ ಊರುಗಳಲ್ಲಿ ಕೊರೊನಾ ಆರೈಕೆ ಕೇಂದ್ರ, ಸೋಂಕಿತರು ಆಸ್ಪತ್ರೆಗೆ ಹೋಗಲು ಮತ್ತು ಮನೆಗೆ ಬರಲು ಉಚಿತ ವಾಹನ ಸೌಲಭ್ಯ, ಆಸ್ಪತ್ರೆಗಳಿಗೆ ಆಮ್ಲಜನಕ […]