ಪಶ್ಚಿಮಘಟ್ಟದಲ್ಲಿ ಹಸಿರು ಹೊದಿಕೆ ಅಭಿಯಾನ

ಬೆಳ್ತಂಗಡಿ: ಗ್ರಾಮ ಪಂಚಾಯತ್ ಅರಸಿನಮಕ್ಕಿ, ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಮತ್ತು ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜೂನ್ 13 ರಂದು ಅರಸಿನಮಕ್ಕಿ ಸರಕಾರಿ ಪ್ರೌಢಶಾಲೆಯ ಆವರಣದಲ್ಲಿ ಮತ್ತು ಹತ್ಯಡ್ಕ ಗ್ರಾಮದ ಉಪ್ಪರಡ್ಕ ಎಂಬಲ್ಲಿನ ಫೋರ್ಕಳ ರಕ್ಷಿತಾರಣ್ಯದಲ್ಲಿ ಪಶ್ಚಿಮ ಘಟ್ಟಗಳಿಗೆ ಹಸಿರು ಹೊದಿಕೆ ಅಭಿಯಾನವನ್ನು ನಡೆಸಲಾಯಿತು.ಈ ಅಭಿಯಾನದಲ್ಲಿ ಸುಮಾರು 600 ಕ್ಕೂ ಹೆಚ್ಚು ಕಾಡು ಹಣ್ಣಿನ ಗಿಡಗಳನ್ನು ನೆಡಲಾಯಿತು.ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೂ ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ರೆಖ್ಯಾ ಸಹಿತ ಸದಸ್ಯರು […]

ಶೌರ್ಯ ಸ್ವಯಂಸೇವಕರ ಸಮಯಪ್ರಜ್ಞೆಯಿಂದ ಉಳಿಯಿತು ಜೀವ

ಬೆಳ್ತಂಗಡಿ: ಧರ್ಮಸ್ಥಳದ ಅಣ್ಣಪ್ಪ ಬೆಟ್ಟದ ಬಳಿ ವ್ಯಕ್ತಿಯೋರ್ವ ಫಿಡ್ಸ್ ಪೀಡಿತನಾಗಿ ಬಳಲುತ್ತಿದ್ದ. ಯಾರೂ ಸಂಬಂಧಿಕರಿಲ್ಲದ ಕಾರಣ ಸಹಾಯಕ್ಕೆ ಯಾರೂ ದೊರೆಯದೆ, ಬಿದ್ದಾಗ ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಅಪಾಯದಲ್ಲಿದ್ದರು. ಕೂಡಲೇ ಅಲ್ಲೇ ಸಮೀಪದಲ್ಲಿ ಸಾಗುತ್ತಿದ್ದ ಶೌರ್ಯ ವಿಪತ್ತು ನಿರ್ವಹಣಾ ಸ್ವಯಂಸೇವಕರು ಇದನ್ನು ಗಮನಿಸಿ ಸಹಾಯಕ್ಕೆ ಧಾವಿಸಿದರು. ಪ್ರಾಥಮಿಕ ಚಿಕಿತ್ಸೆಯ ಬಳಿಕ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ಆಕಾಶ್ ಅವರನ್ನು ಸಂಪರ್ಕಿಸಿ ಅವರ ಸಲಹೆಯ ಮೇರೆಗೆ ಆ್ಯಂಬುಲೆನ್ಸ್ ಮುಖಾಂತರ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದರು.ಧರ್ಮಸ್ಥಳ […]

ಮಕ್ಕಳ ರಕ್ಷಣಾ ನೀತಿಯ ಮಾಹಿತಿ

ಬೆಳ್ತಂಗಡಿ: ಧರ್ಮಸ್ಥಳ ಕನ್ಯಾಡಿಯ ಸೇವಾಭಾರತಿಯ ಅಂಗಸಂಸ್ಥೆಯಾದ ಕೊಕ್ಕಡ ಗ್ರಾಮದ ಸೌತಡ್ಕ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ಸೇವಾಭಾರತಿಯ ಸಲಹಾ ಸಮಿತಿ ಸದಸ್ಯರು ಹಾಗೂ ಮಕ್ಕಳ ರಕ್ಷಣಾ ನೀತಿಯ ಅಧ್ಯಕ್ಷೆ ಮನೋರಮಾ ಭಟ್ ಮಕ್ಕಳ ರಕ್ಷಣಾ ನೀತಿಯ ಬಗ್ಗೆ ಸೇವಾಭಾರತಿಯ ಸಿಬ್ಬಂದಿಗಳು ಮತ್ತು ಸೇವಾಧಾಮದ ಶಿಬಿರಾರ್ಥಿಗಳು ಹಾಗೂ ಪೋಷಕರಿಗೆ ಜಾಗೃತಿಯನ್ನು ಮೂಡಿಸಿ ಕಾನೂನು ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಈ ಕಾರ್ಯಕ್ರಮದಲ್ಲಿ ಸೇವಾಭಾರತಿಯ ಸಿಬ್ಬಂದಿ ಹಾಗೂ ಮಕ್ಕಳ ರಕ್ಷಣಾ ನೀತಿಯ ಸದಸ್ಯರಾದ ಮೋಹನ್ ಎಸ್., ಸೇವಾಭಾರತಿ ಫಂಡ್ ರೈಸಿಂಗ್ ಮ್ಯಾನೇಜರ್ […]

ಬೆಸ್ಟ್ ಫೌಂಡೇಶನ್ ನ ಐದನೇ ದಿನವೂ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ವಕೀಲರಾಗಿರುವ ರಕ್ಷಿತ್ ಶಿವರಾಂರವರ ನೇತೃತ್ವದ ಬ್ರಹ್ಮಶ್ರೀ ಎಜುಕೇಶನ್ & ಸೋಶಿಯಲ್ ಟ್ರಸ್ಟ್ ನ (BEST) ಆಶ್ರಯದಲ್ಲಿ ಬೆಳ್ತಂಗಡಿ ತಾಲ್ಲೂಕು ಯುವ ಕಾಂಗ್ರೆಸ್‌ನ ಸಹಯೋಗದಲ್ಲಿ ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತಾಲೂಕಿನ ವಿವಿಧೆಡೆ ಅರ್ಹ ಕುಟುಂಬಗಳಿಗೆ ಆಹಾರ ಪರಿಕರ ಸಾಮಗ್ರಿಗಳ ನೆರವನ್ನು ನಾಲ್ಕಾರು ದಿನಗಳಿಂದ ನೀಡುತ್ತಿದ್ದು, ಜೂನ್ 14ರಂದು ಬೆಳ್ತಂಗಡಿ ತಾಲೂಕಿನ ಧರ್ಮ ಪ್ರಾಂತ್ಯದ ಸೈಂಟ್ ಲಾರೆನ್ಸ್ ಕ್ಯಾಥೆಡ್ರಲ್ ಚರ್ಚ್ ವಠಾರದ ಬಡ ಕುಟುಂಬಗಳಿಗೆ, ಬಡಗಕಾರಂದೂರು, […]

ಬೆಳಕು ಸೇವಾ ಪ್ರತಿಷ್ಠಾನದಿಂದ ಆಹಾರ ಕಿಟ್ ಗೌರವಧನ ವಿತರಣೆ

ಬೆಳ್ತಂಗಡಿ: ಉಜಿರೆಯ ಬೆಳಕು ಸೇವಾ ಪ್ರತಿಷ್ಠಾನದ ವತಿಯಿಂದ ಕಲ್ಮಂಜ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಧಾನ್ಯದ ಕಿಟ್ ಮತ್ತು ಗೌರವ ಧನವನ್ನು ಕಲ್ಮಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜೂನ್ 14ರಂದು ನಡೆದ ಸರಳ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀಧರ್ ಎಂ. ಕಲ್ಮಂಜ, ಬೆಳ್ತಂಗಡಿ ತಾಲೂಕು ಪಂಚಾಯತ್‌ನ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ರ ಶಶೀಧರ್ ಎಂ. ಕಲ್ಮಂಜ, ಪಂಚಾಯತ್ ಸದಸ್ಯ ಹಾಗೂ ಸಮಾಜ ಸೇವಕ ವರದಾಕ್ಷ ಆಚಾರ್ಯ, ಸವಿತಾ, […]

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕುವೆಟ್ಟು ಗ್ರಾಮ ಪಂಚಾಯತ್ ಎದುರು ಕಾಂಗ್ರೆಸ್ ಪ್ರತಿಭಟನೆ

ಬೆಳ್ತಂಗಡಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಕುವೆಟ್ಟು ಹಾಗು ಓಡಿಲ್ನಾಳ ಗ್ರಾಮ ಸಮಿತಿಯ ನೇತ್ರತ್ವದಲ್ಲಿ ಪೆಟ್ರೋಲ್-ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಸಿರುವ ಕೇಂದ್ರ ಬಿಜೆಪಿ ಸರಕಾರದ ವಿರುದ್ಧ ಜೂನ್ 14ರಂದು ಕುವೆಟ್ಟು ಗ್ರಾಮ ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು.ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಮಾತನಾಡಿ, ಇತ್ತೀಚಿನ ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಲೀಟರ್ ಪೆಟ್ರೋಲ್‌ಗೆ 35 ರೂಪಾಯಿ ಆಗಿದ್ದರೂ ಕೂಡ ತೆರಿಗೆ ರೂಪದಲ್ಲಿ […]

ಯಕ್ಷರಸದೌತಣ ಇನ್ನಷ್ಟು ನಡೆಯಲಿ: ಶಾಸಕ ಪೂಂಜ

ಬೆಳ್ತಂಗಡಿ: ಕರಾವಳಿ ಜಿಲ್ಲೆಗಳ ಹೆಚ್ಚಿನ ಪ್ರೇಕ್ಷಕರು ಇಷ್ಟ ಪಡುವ ಕಲೆ ಯಕ್ಷಗಾನ. ಕೋವಿಡ್ ಮಹಾಮಾರಿ ಯಕ್ಷಗಾನ ಕಲಾವಿದರು ಹಾಗೂ ಪ್ರೇಕ್ಷಕರಿಗೂ ನೋವುಂಟುಮಾಡಿದೆ. ಈ ಸಂದರ್ಭದಲ್ಲಿ ಯಕ್ಷಗಾನ ಕಲೆ ಶಕ್ತಿ ತುಂಬುತ್ತಿದೆ. ನೋವಿನ ಸಂದರ್ಭದಲ್ಲಿ ಕಲಾಪ್ರದರ್ಶನದಿಂದ  ಯಕ್ಷಗಾನ ರಸದೌತಣ ಇನ್ನಷ್ಟು ನಡೆಯಲಿ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಜೂನ್ 12ರಂದು ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಉಜಿರೆ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ (ರಿ) ಬೆಳ್ತಂಗಡಿ, ಮತ್ತು ಬೆಳ್ತಂಗಡಿ ಹಾಗೂ ಬಂಟ್ವಾಳ ರೋಟರಿ ಕ್ಲಬ್‌ಗಳ ಸಹಯೋಗದೊಂದಿಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರ  […]

ಬೆಸ್ಟ್ ಫೌಂಡೇಶನ್‌ನಿಂದ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಬೆಸ್ಟ್ ಫೌಂಡೇಷನ್ ಬೆಂಗಳೂರು ಹಾಗೂ ತಾಲೂಕು ಯುವ ಕಾಂಗ್ರೆಸ್ ಸಹಭಾಗಿತ್ವದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಆದಿವಾಸಿಗಳಿಗೆ ಹಾಗೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಕಿಟ್ ವಿತರಣಾ ಕಾರ್ಯಕ್ರಮಕ್ಕೆ ಲಾಯಿಲ ಶ್ರೀ ರಾಘವೇಂದ ಮಠದ ಸಭಾಭವನದಲ್ಲಿ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ  ಮಾಜಿ ಶಾಸಕ ಕೆ‌. ವಸಂತ ಬಂಗೇರ, ಜನರು ಸಂಕಷ್ಟದಲಿರುವ ಈ ಸಂದರ್ಭದಲ್ಲಿ ಅವರ ನೆರವಿಗೆ ನಿಲ್ಲುವ ಕಾರ್ಯವನ್ನು ಎಲರೂ ಮಾಡಬೇಕಾಗಿದೆ. ಇದೀಗ ಜನರಿಗೆ ನೆರವಾಗುವ ಕಾರ್ಯಕ್ರಮಕ್ಕೆ ಯುವಕರ ತಂಡ ಮುಂದಾಗಿದ್ದು ಇದು ಉತ್ತಮ ಕಾರ್ಯವಾಗಿದೆ ಎಂದರು. […]

ಪ್ರಧಾನಿ ಭಾವಚಿತ್ರಕ್ಕೆ ಅಪಮಾನ ಖಂಡನಿಯ-ಜಯಂತ ಕೋಟ್ಯಾನ್

ಬೆಳ್ತಂಗಡಿ: ಸಾಂಕ್ರಾಮಿಕ ಕಾಯಿಲೆ ಕೋವಿಡ್ 19 ಸುಳಿಯಲ್ಲಿ ಇಡೀ ವಿಶ್ವವೇ ನರಳುತ್ತಿರುವ ಸಂಕೀರ್ಣ ಕಾಲಘಟ್ಟದಲ್ಲಿ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲವಾಗಿ ನಿಲ್ಲಬೇಕಿದ್ದ ಜವಾಬ್ದಾರಿಯುತ ರಾಜಕೀಯ ಪಕ್ಷವಾದ ಕಾಂಗ್ರೆಸ್ ಪೆಟ್ರೋಲ್ ನಾಟೌಟ್ 100 ಎಂಬ ಪ್ರಹಸನ ಮಾಡಿಕೊಂಡು ಕೇಕ್ ಕಟ್ ಮಾಡಿ ಇತರರಿಗೆ ಹಂಚಿ ಸಂಭ್ರಮಿಸುತ್ತಿರುವುದು ಆರರಿಂದ ಏಳು ದಶಕಗಳ ಕಾಲ ರಾಷ್ಟ್ರವನ್ನಾಳಿದ ರಾಜಕೀಯ ಪಕ್ಷವೊಂದು ನೈತಿಕ ಪತನದತ್ತ ಸಾಗುತ್ತಿರುವ ದಿಕ್ಸೂಚಿಯಾಗಿದೆ ಎಂದು ಬೆಳ್ತಂಗಡಿ ಬಿಜೆಪಿ ತಿಳಿಸಿದೆ.ಬಿಜೆಪಿ ಹಿಂದೆ ವಿರೋಧ ಪಕ್ಷದಲ್ಲಿದ್ದ […]

ಶ್ರೀ ಗುರುದೇವ ಸೊಸೈಟಿಯಿಂದ ಕೋವಿಡ್-19 ನಿಯಂತ್ರಣ ಸಾಮಾಗ್ರಿ ಕೊಡುಗೆ

ಬೆಳ್ತಂಗಡಿ: ಬೆಳ್ತಂಗಡಿಯ ಶ್ರೀ ಗುರುದೇವ ವಿವಿಧೊದ್ಧೇಶ ಸಹಕಾರಿ ಸಂಘದ ವತಿಯಿಂದ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ಕೋವಿಡ್-19 ನಿಯಂತ್ರಣ ಸಾಮಾಗ್ರಿಗಳಾದ ಎನ್-95 ಮಾಸ್ಕ್, ಟ್ರಿಪಲ್ ಲೇಯರ್ ಮಾಸ್ಕ್, ಪೇಸ್ ಶೀಲ್ಡ್, ಪಲ್ಸ್ ಆಕ್ಸಿಮಿಟರ್ ಸಾಮಾಗ್ರಿಗಳನ್ನು ಹಸ್ತಾಂತರಿಲಾಯಿತು. ಸಂಘದ ಅಧ್ಯಕ್ಷರಾದ ಎನ್‌ ಪದ್ಮನಾಭ ಮಾಣಿಂಜ ರವರು ಅಗತ್ಯ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿ, ವಾರಿಯರ್ಸ್ ಆಗಿ ದುಡಿಯುತ್ತಿರುವ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಶ್ರಮ, ಪ್ರಾಮಾಣಿಕ ಸೇವೆಗೆ ಅಭಿನಂದನೆಗಳು ಮತ್ತು ಕೃತಜ್ಣತೆಗಳನ್ನು ಅರ್ಪಿಸಿದರು. ಕಳೆದ ವರ್ಷ ಸಂಘದಿಂದ ರೂ.50000/- ಕೋವಿಡ್ […]