ಅಕ್ರಮ ಮದ್ಯ ಮಾರಾಟ ಪತ್ತೆ

ಬೆಳ್ತಂಗಡಿ: ಜೂನ್ 10ರಂದು ಬೆಳ್ತಂಗಡಿ ವಲಯದ ಅಬಕಾರಿ ನಿರೀಕ್ಷಕರಾದ ಸೌಮ್ಯಲತಾ ತಮ್ಮ ಸಿಬ್ಬಂದಿಗಳೊಂದಿಗೆ ರಸ್ತೆಯಲ್ಲಿ ಗಸ್ತು ಹಾಗೂ ತಪಾಸಣೆ ನಡೆಸುತ್ತಿದ್ದಾಗ, ಪಿಲ್ಯದಲ್ಲಿ ಬೈಕೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದು; ಆರೋಪಿಯಿಂದ 15.300ಲೀಟರ್ ಮದ್ಯ ಹಾಗೂ ಮದ್ಯ ಮಾರಾಟಕ್ಕೆ ಬಳಸಲಾಗಿದ್ದ ಹೀರೊ ಹೋಂಡಾ ಸ್ಪ್ಲೆಂಡರ್ ಬೈಕನ್ನು ವಶ ಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶ ಪಡಿಸಿಕೊಂಡ ಮದ್ಯ ಹಾಗೂ ಇತರ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 46,000/- ಎಂದು ಅಂದಾಜಿಸಲಾಗಿದೆ. ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೇಸ್ ಪ್ರತಿಭಟನೆ

ಬೆಳ್ತಂಗಡಿ: ದೇಶದ ಜನತೆಗೆ ‘ಅಚ್ಛೇದಿನ್’ನ ಭ್ರಮೆ ಹುಟ್ಟಿಸಿ, ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ದೇಶದಲ್ಲಿ ಪೆಟ್ರೋಲ್-ಡೀಸಿಲ್-ಅಡುಗೆ ಅನಿಲ ಸಹಿತ ಎಲ್ಲ ತೈಲೋತ್ಪನ್ನಗಳ ಬೆಲೆ ಏರಿಸಿ, ಜನಜೀವನ ದುಸ್ಥರವಾಗುವಂತೆ ಮಾಡಿದೆ. ಪೆಟ್ರೋಲ್-ಡೀಸಿಲ್ ದರ ಹೆಚ್ಚಳದಿಂದ ವಸ್ತುಗಳ ಸಾಗಾಟ ದರ ಏರಿಕೆಯಾದುದರ ಪರಿಣಾಮ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಅಚ್ಛೇದಿನ್‌ನ ನಿರೀಕ್ಷೆಯಲ್ಲಿದ್ದ ದೇಶದ ಜನಸಾಮಾನ್ಯ ದಿನಕಳೆಯುವುದೇ ತ್ರಾಸದಾಯಕವಾಗಿದೆ. ಪೆಟ್ರೋಲ್ ದರ ಶತಕ ದಾಟಿ ಮುನ್ನುಗ್ಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ದರದಲ್ಲಿ ಅಜೇಯ ಶತಕ ಬಾರಿಸಿ ಮುನ್ನುಗ್ಗುತ್ತಿದ್ದಾರೆ […]

ಅರ್ಚಕರು ಹಾಗೂ ಅಡುಗೆ ಭಟ್ಟರಿಂದ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ

ಬೆಳ್ತಂಗಡಿ: ಕೋವಿಡ್-19 ಪ್ರಯುಕ್ತ ಧಾರ್ಮಿಕ ದತ್ತಿ ಇಲಾಖೆಯ ಸಮೂಹ ‘ಸಿ’ ಅಧಿಸೂಚಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು, ಅಡುಗೆಭಟ್ಟರು ಹಾಗೂ ಸಿಬ್ಬಂದಿಗಳಿಗೆ ತಲಾ ರೂಪಾಯಿ 3000/ ರಂತೆ ಧನ ಸಹಾಯಧನವನ್ನು ಸರಕಾರ ಘೋಷಿಸಿದೆ. ಆ ಪ್ರಯುಕ್ತ ತಾಲೂಕಿನ 40 ‘ಸಿ’ ದೇವಾಲಯಗಳ ಸುಮಾರು ನೂರಕ್ಕೂ ಹೆಚ್ಚು ಅರ್ಜಿಗಳನ್ನು ಜೂನ್ 11ರಂದು ಬೆಳ್ತಂಗಡಿಯ ‘ಶ್ರಮಿಕ’ ಶಾಸಕರ ಅಧಿಕೃತ ಕಛೇರಿಯಲ್ಲಿ ಶಾಸಕ ಹರೀಶ ಪೂಂಜ ಅವರ ಸಮ್ಮುಖದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ‌ ಪರಿಷತ್ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ […]

ಉಜಿರೆ ರಬ್ಬರ್ ಸೊಸೈಟಿಯಿಂದ ತಾಲೂಕು ಸರಕಾರಿ ಆಸ್ಪತ್ರೆಗೆ ಆಕ್ಸೀಮೀಟರ್ ಕೊಡುಗೆ

ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ವತಿಯಿಂದ ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಕೊಡಮಾಡಿದ 10ಆಕ್ಸಿಮೀಟರ್‌ಗಳನ್ನು ಸಂಘದ ಅಧ್ಯಕ್ಷ ಶ್ರೀಧರ ಜಿ. ಬಿಡೆಯವರು ಜೂನ್ 11ರಂದು ಸಂಘದ ಸಭಾಂಗಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾl ವಿದ್ಯಾವತಿಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷರಾದ ಅನಂತ ಭಟ್ ಎಂ., ನಿರ್ದೇಶಕರುಗಳಾದ ಬಾಲಕೃಷ್ಣ ಗೌಡ ಕೆ., ವಿ. ವಿ. ಅಬ್ರಾಹಂ, ಬೈರಪ್ಪ ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ […]

ಸೇವಾಸಂಸ್ಥೆಗಳಿಂದ ಸಹಜವಾದ ಮಾನವೀಯ ಸ್ಪಂದನ ಲಭಿಸಿದೆ-ಪ್ರತಾಪ್‌ಸಿಂಹ ನಾಯಕ್

ಬೆಳ್ತಂಗಡಿ: ಕೋವಿಡ್ ನಿಯಂತ್ರಣ ಕೇವಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕೆಲಸವಲ್ಲ. ಇದನ್ನು ಮನಗಂಡ ಮಾನವ ಸ್ಪಂದನ ಮತ್ತು ಸಮಾನ‌ಮನಸ್ಕ ಸಂಘಟನೆ ನೆಲ್ಯಾಡಿಯವರು ಹಾಗೂ ಇತರ ಸೇವಾಸಂಸ್ಥೆಗಳೂ ಕೋವಿಡ್ ಯುದ್ಧದಲ್ಲಿ ಸರಕಾರದ ಜೊತೆ ಕೈ ಜೋಡಿಸುತ್ತಿದ್ದು, ಸಹಜವಾಗಿ ಮಾನವೀಯ ಸ್ಪಂದನೆ ನೀಡಿದೆ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ್‌ಸಿಂಹ ನಾಯಕ್ ಹೇಳಿದರು.ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡಹಾಗೂ ಸಿಯೋನ್ ಆಶ್ರಮಕ್ಕೆ ಸಹಕಾರಿಯಾಗುವಂತೆ ಸಮಾನ‌ ಮನಸ್ಕ ವೇದಿಕೆ ನೆಲ್ಯಾಡಿ ವತಿಯಿಂದ ಪರಿಕರಗಳನ್ನು ಬೆಳ್ತಂಗಡಿ ಸರಕಾರಿ ಪ್ರವಾಸಿ ಬಂಗಲೆಯಲ್ಲಿ ಜೂನ್ 11ರಂದು […]

ಮಾಸ್ಕ್ ಧರಿಸದವರಿಗೆ ದಂಡ

ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಹೆಚ್ಚಳ ಆಗುತ್ತಿರುವ ನಿಟ್ಟಿನಲ್ಲಿ ಮುಂಜಾಗ್ರತ ಕ್ರಮದ ಬಗ್ಗೆ ಜೂನ್ 11ರಂದು ಬೆಳಿಗ್ಗೆ 7ಗಂಟೆಯಿಂದಲೇ ಉಜಿರೆ ಪೇಟೆಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಮತ್ತು ಸಿಬ್ಬಂದಿಗಳು ಹಾಗೂ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಸ್ಕ್ ಹಾಕದೆ ತಿರುಗಾಡುವ ಸಾರ್ವಜನಿಕರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಲಾಯ್ತು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ನಿರ್ವಹಣೆಯಲ್ಲಿ ಬಿಜೆಪಿ ಸರಕಾರ ಸಂಪೂರ್ಣ ವಿಫಲ-ಹರೀಶ್ ಕುಮಾರ್

ಬೆಳ್ತಂಗಡಿ : ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೊರೊನಾ ನಿಯಂತ್ರಿಸುವಲ್ಲಿ ಮತ್ತು ಲಸಿಕೆ ಹಂಚಿಕೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದು ದುರ್ಬಲ ಹಾಗೂ ಬೇಜವಾಬ್ದಾರಿಯಿಂದ ಕೂಡಿದ ಪ್ರಚಾರ ಪ್ರಿಯ ಸರ್ಕಾರಗಳಾಗಿವೆ. 18ರಿಂದ 44ವರ್ಷದವರಿಗೆ ಉಚಿತ ಲಸಿಕೆ ನೀಡಲು ಸುಪ್ರೀಂ ಕೋರ್ಟಿನ ಆದೇಶವಾಗಿದ್ದು, ಅದಕ್ಕಾಗಿ ಸುಪ್ರೀಂಕೋರ್ಟಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ಹೇಳಿದರು.ಅವರು ಮೇ 9ರಂದು ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸಭಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.‘ಲಸಿಕೆ ಉತ್ಪಾದನಾ […]

ವನಮಹೋತ್ಸವ ಮತ್ತು ಹಣ್ಣಿನ ಸಸಿಗಳು

ಬೆಳ್ತಂಗಡಿ: ಅದೊಂದು ಕಾಲವಿತ್ತು. ಜೂನ್ 5 ವಿಶ್ವ ಪರಿಸರ ದಿನದಂದು ವಿವಿಧ ಸಂಘಸಂಸ್ಥೆಗಳವರು ಎಲ್ಲೆಂದರಲ್ಲಿ ವನಮಹೋತ್ಸವ ಆಚರಿಸುವ ಸಂಭ್ರಮದಲ್ಲಿ ಅರಣ್ಯ ಇಲಾಖೆಯಿಂದ ಸಸಿಗಳನ್ನು ಪಡೆದು ನೆಡುತ್ತಿದ್ದರು. ಅರಣ್ಯ ಇಲಾಖೆಯವರೋ ಇಂತಹ ವನಮಹೋತ್ಸವಗಳಿಗೆ ಅಕೇಶಿಯಾ, ಮ್ಯಾಂಜಿಯಂನಂತಹ ಜಾತಿಯ ಸಸಿಗಳನ್ನು ನೀಡುತ್ತಿದ್ದರು. ಈ ರೀತಿಯಾಗಿ ಸಸಿಗಳನ್ನು ಪಡೆದ ಸಂಘಸಂಸ್ಥೆಯವರು ಅವುಗಳನ್ನು ನೆಟ್ಟು ಫೊಟೊ ತೆಗೆಯಿಸಿ, ತಮ್ಮ ಸೇವಾ ದಾಖಲೆಯಲ್ಲಿ ಇರಿಸಿಕೊಳ್ಳುತ್ತಿದ್ದರು. ನಂತರದ ದಿನಗಳಲ್ಲಿ ಅವರು ನೆಟ್ಟ ಗಿಡಗಳತ್ತ ತಿರುಗಿ ನೋಡುವ ಸೇವಾ ಕಾರ್ಯವೂ ಬಹುತೇಕರಿಗೆ ಇರುತ್ತಿರಲಿಲ್ಲ. ಇಂತಹ ಸಂಘಟನೆಗಳಿಗೆ ಮತ್ತೆ […]

ಲಾಕ್‌ಡೌನ್ ಸಂದರ್ಭ ಹಸಿದವರಿಗೆ ನೆರವಿನ ಹಸ್ತ ಚಾಚಿದ ಉಮೇಶ್ ಪ್ರಭು

ಬೆಳ್ತಂಗಡಿ: ಧರ್ಮಸ್ಥಳದ ಉದ್ಯಮಿ ಹಾಗೂ ಪ್ರಗತಿಪರ ಕೃಷಿಕ ಉಮೇಶ್ ಪ್ರಭು ಕೋವಿಡ್-19 ಲಾಕ್‌ಡೌನ್ ಸಂದರ್ಭದಲ್ಲಿ ತಮ್ಮ ಮನೆಯವರ ಜೊತೆಗೆ ಸೇರಿ‌ ಕೋವಿಡ್ ವಾರಿಯರ್ಸ್‌ಗಳಿಗೆ ಮಾತ್ರವಲ್ಲ; ನಿರ್ಗತಿಯರಿಗೆ‌ ಹಾಗೂ ನಿರಾಶ್ರಿತರಿಗೆ ಪ್ರತಿನಿತ್ಯ ಉಚಿತ ಆಹಾರ ಒದಗಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಲಾಕ್‌ಡೌನ್ ಸಂದರ್ಭದಲ್ಲಿ ಹೆಚ್ಚಿನ ಕಡೆಗಳಲ್ಲಿ ಹೋಟೆಲ್ ಗಳು ಇಲ್ಲದೆ ಜನ ಪರದಾಡುವಂತದ್ದನ್ನು ಮನಗಂಡು ತನ್ನ ಮನೆಯವರ ಹಾಗೂ ಗೆಳೆಯರ ಜೊತೆಗೆ ಸೇರಿ ಅಡುಗೆ ತಯಾರಿಸಿ ತನ್ನ ಸ್ವಂತ ಪಿಕ್ಆಫ್ ವಾಹನದಲ್ಲಿ ಧರ್ಮಸ್ಥಳದಿಂದ ಉಜಿರೆ ತನಕ ನಿರ್ಗತಿಯರಿಗೆ, ನಿರಾಶ್ರಿತರಿಗೆ, ಅರಕ್ಷಕರಿಗೆ […]

ಆದಿವಾಸಿಗಳ ಜೀವ ಹಾಗೂ ಜೀವನ ಉಳಿಸಲು ಆಗ್ರಹಿಸಿ ಪ್ರತಿಭಟನೆ

ಬೆಳ್ತಂಗಡಿ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ನೇತೃತ್ವದಲ್ಲಿ ಜೂನ್ 7ರಂದು ಇಡೀ ರಾಜ್ಯಾದ್ಯಂತ ಆದಿವಾಸಿಗಳ ಜೀವ ಹಾಗೂ ಜೀವನ ಉಳಿಸಲು ಒತ್ತಾಯಿಸಿ ಮನೆಮನೆಗಳಲ್ಲಿ ಪ್ರತಿಭಟನೆ ನಡೆಯಿತು.ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರಾಜ್ಯ ಸಮಿತಿ ಸದಸ್ಯ ಶೇಖರ್ ಎಲ್., ಕಾಡಿನ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿದೆ. ಕೋವಿಡ್ 19 ಸಂದರ್ಭದಲ್ಲಿ ನಿರುದ್ಯೋಗಿ ಯುವಕ/ಯುವತಿಯರಿಗೆ ನಿರುದ್ಯೋಗ ಭತ್ಯೆಯನ್ನು ನಿಲ್ಲಿಸುವ ಮೂಲಕ ಸರ್ಕಾರಗಳು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಆರೋಪಿಸಿದರು.ತಾಲೂಕಿನ ನೆರಿಯ, ಬಾಂಜಾರು, ಮಲವಂತಿಗೆ, ಲಾಯಿಲ, […]