ಆರೋಗ್ಯ ಕಾರ್ಯಕರ್ತರ ಸೇವೆ ಶ್ಲಾಘನೀಯ-ವಂl ಬಿಷಪ್

ಬೆಳ್ತಂಗಡಿ: ಕೋವಿಡ್ ನಿಯಂತ್ರಣಕ್ಕಾಗಿ ಆರೋಗ್ಯ ಕಾರ್ಯಕರ್ತರು ಮಾಡುತ್ತಿರುವ ಸೇವೆ ಶ್ಲಾಘನೀಯವಾದುದು.ಇದು ಸರಕಾರ ಮಟ್ಟದ ಕೆಲಸವಾದರೂ ಫ್ರಂಟ್ ಲೈನ್ ಕಾರ್ಯಕರ್ತರು ಮಾಡುತ್ತಿರುವ ಸೇವೆಗೆ ಗೌರವ ನೀಡುತ್ತಿದ್ದೇವೆ. ಆದ್ದರಿಂದ ನಿಮ್ಮ ರಕ್ಷಣೆ ದೃಷ್ಟಿಯಿಂದ ನಾವು ನಿಮಗೆ ಈ ಮೂಲಕ ಆರೋಗ್ಯ ರಕ್ಷೆ ನೀಡುತ್ತಿದ್ದೇವೆ ಎಂದು ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ಹೇಳಿದರು.ಬೆಳ್ತಂಗಡಿ ಧರ್ಮಪ್ರಾಂತ್ಯದ ಸಮಾಜ ಸೇವಾ ಸಂಸ್ಥೆ ಡಿಕೆಆರ್‌ಡಿಎಸ್ ಇದರ ವತಿಯಿಂದ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ಸಹಯೋಗದೊಂದಿಗೆ, ಬೆಳ್ತಂಗಡಿ ತಾಲೂಕಿನ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ […]
ಕೋವಿಡ್ ಲಸಿಕಾ ಕೇಂದ್ರದಲ್ಲಿ ಬಿಜೆಪಿ ರಾಜಕೀಯ-ಕಾಂಗ್ರೆಸ್ ನಾಯಕರ ಆರೋಪ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಮಂಜುನಾಥೇಶ್ವರ ಕಲಾಭವನದಲ್ಲಿ ಕೊರೊನ ನಿಯಂತ್ರಣಕ್ಕೆ ಪೂರಕವಾಗಿ ಲಸಿಕಾ ಅಭಿಯಾನ ಕಾರ್ಯ ನಡೆಯುತ್ತಿದ್ದು, ಲಸಿಕೆ ಕೇಂದ್ರದಲ್ಲಿ ಯಾವುದೇ ಚುನಾಯಿತ ಪ್ರತಿನಿಧಿಗಳಲ್ಲದ ಹಲವರು ಅನಧಿಕೃತವಾಗಿ ಸುತ್ತಾಡುತ್ತಿದ್ದು ಹಲವು ಗೊಂದಲ ಹಾಗೂ ಸಂದೇಹಗಳಿಗೆ ಕಾರಣವಾಗಿದೆ. ಈ ಬಗೆಗೆ ಈ ಮೊದಲೇ ಬೆಳ್ತಂಗಡಿ ತಾಲೂಕು ತಹಶೀಲ್ದಾರರಿಗೆ ಲಿಖಿತ ದೂರು ನೀಡಲಾಗಿದ್ದು ಯಾವುದೇ ಕ್ರಮ ಕೈಗೊಂಡಿಲ್ಲ. ಲಸಿಕಾ ಕೇಂದ್ರದ ಡಾಟಾ ಮಾಹಿತಿ ಹಾಗೂ ಗುಪ್ತಸಂಖ್ಯೆಯು ಆರೋಗ್ಯ ಇಲಾಖೆಗೆ ಮಾತ್ರ ತಿಳಿಯಬೇಕಾದುದಾಗಿದ್ದು, ಲಸಿಕಾ ಕೇಂದ್ರದ ಡಾಟಾ […]
ಪರಿಸರ ಸ್ನೇಹಿ ಮಾಸ್ಕ್ ತಯಾರಿಸುವ ನಿತಿನ್ ವಾಸ್ ಪಕ್ಷಿಕೆರೆ ಅವರಿಗೆ ಸನ್ಮಾನ

ಮೂಡುಬಿದಿರೆ: ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರದ ಪಕ್ಷಿಕೆರೆಯ ನಿತಿನ್ ವಾಸ್ ಅವರು ಪರಿಸರ ಸ್ನೇಹಿ ಮಾಸ್ಕ್ ಹಾಗು ಮಂಗಳೂರು ಬೊಂಬೆ ತಯಾರಿಸಿ ವಿಶ್ವದಾದ್ಯಂತ ಮನ್ನಣೆ ಗಳಿಸಿದ್ದಾರೆ.ಈ ನಿಮಿತ್ತ ಯುವಮೋರ್ಚಾ ಮಂಡಲದ ವತಿಯಿಂದ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ ಎಂ ಅವರು ನಿತಿನ್ ವಾಸ್ ರವರನ್ನು ಗೌರವಿಸಿ ಅಭಿನಂದಿಸಿದರು. ಜಿಲ್ಲಾ ಉಪಾಧ್ಯಕ್ಷರಾದ ಈಶ್ವರ್ ಕಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಮಂಡಲಾಧ್ಯಕ್ಷರಾದ ಸುನೀಲ್ ಆಳ್ವ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯಧರ್ಶಿ ಸೂರಜ್ ಜೈನ್ ಮಾರ್ನಾಡ್, ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರಾದ […]
ಯಕ್ಷಧ್ರುವ ಪಟ್ಲ ಫೌಂಡೇಶನ್ ಯಕ್ಷಗಾನ ಕಲಾವಿದರಿಗೆ ಆಹಾರ ಕಿಟ್ ವಿತರಣೆ

ಮೂಡುಬಿದಿರೆ : ವಿವಿಧ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ದುಡಿಯುತ್ತಾ ಕೊರೋನಾ ಸಂಕಷ್ಟ ©ದಲ್ಲಿ ಮೇಳದ ತಿರುಗಾಟವೂ ಇಲ್ಲದೆ ಜೊತೆಗೆ ಬೇರೆ ಆದಾಯವೂ ಇಲ್ಲದೆ ಕಂಗೆಟ್ಟಿರುವ 37 ಮಂದಿ ಕಲಾವಿದರನ್ನು ಗುರುತಿಸಿ ಅವರಿಗೆ 25 ಕೆ.ಜಿ. ಅಕ್ಕಿ, ಬೇಳೆ, ಸಕ್ಕರೆ, ಬೆಲ್ಲ, ಎಣ್ಣೆ, ಸಾಬೂನು, ಮಸಾಲೆ ಸಾಮಗ್ರಿ, ಉಪ್ಪಿನಕಾಯಿ, ಚಹಾಹುಡಿ ಮತ್ತು ಬಿಸ್ಕೆಟ್ ಇರುವ ಆಹಾರದ ಕಿಟ್ ಅನ್ನು ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಇದರ ಮೂಡುಬಿದಿರೆ ಘಟಕದ ವತಿಯಿಂದ ಮೂಡುಬಿದಿರೆ ಸಮಾಜ ಮಂದಿರ ಸಭಾದ ಆವರಣದಲ್ಲಿ […]
ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ಸಾರ್ವಜನಿಕ ಉಪಯೋಗಕ್ಕೆ ಆಂಬುಲೆನ್ಸ್ ಕೊಡುಗೆ

ಮೂಡುಬಿದಿರೆ: ಸೌಹಾರ್ಧ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾರ್ವಜನಿಕರ ಉಪಯೋಗಕ್ಕಾಗಿ ಆಂಬುಲೆನ್ಸ್ ಒಂದನ್ನು ಕೊಡುಗೆಯಾಗಿ ನೀಡಲಾಗಿದೆ. ಈ ಆಂಬುಲೆನ್ಸ್ ಕೊಡುಗೆಯನ್ನು ಸ್ಕೌಟ್ ಗೈಡ್ಸ್ ಕನ್ನಡ ಸಂಘದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೌಹಾರ್ದ ಚಾರಿಟೇಬಲ್ ಟ್ರಸ್ಟ್ ನ ಪ್ರಮುಖರಾದ ಸಿ.ಎಚ್. ಅಬ್ದುಲ್ ಗಫೂರ್, ಹಸ್ದುಲ್ಲಾ ಇಸ್ಮಾಯಿಲ್, ಅಬುಲ್ ಾಲಾ ಪುತ್ತಿಗೆ, ಮಕ್ಬುಲ್ ಹುಸೇನ್ ಅವರು ಶಾಸಕ ಉಮನಾಥ್ ಎ. ಕೋಟ್ಯಾನ್ ಅವರಿಗೆ ಹಸ್ತಾಂತರಿಸಿದರು. ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ ಎಂ., ಚೌಟರ ಅರಮನೆಯ […]
ನವಭಾರತ್ ಗೆಳೆಯರ ಬಳಗದಿಂದ ಸೇವಾಕಾರ್ಯ

ಬೆಳ್ತಂಗಡಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಸರಾಂತ ಸಂಘಟನೆ ನವಭಾರತ್ ಗೆಳೆಯರ ಬಳಗ(ರಿ) ಕಲ್ಲಾಜೆ-ಇಂದಬೆಟ್ಟು ವತಿಯಿಂದ ಲಾಕ್‌ಡೌನ್ ಸಮಯದಲ್ಲಿ ಧಾರ್ಮಿಕ ಸೇವಾ ಕಾರ್ಯ ನಡೆಸುತ್ತಿರುವ ಬೆಳ್ತಂಗಡಿ ತಾಲೂಕಿನ ಗೋಶಾಲೆಗಳಾದ ನಂದ ಗೋಕುಲ ಗೋಶಾಲೆ ಕಳೆಂಜ (2 ಲೋಡ್ ಪಿಕಪ್) ಹಾಗೂ ಕಾಮಧೇನು ಗೊಶಾಲೆ ಸೌತಡ್ಕ ಕ್ಷೇತ್ರಕ್ಕೆ(1ಲೋಡ್ ಪಿಕಪ್) ಹಸಿ ಹುಲ್ಲನ್ನು ನೀಡಲಾಯಿತು. ಮತ್ಸ್ಯ ಕ್ಷೇತ್ರ ಶಿಶಿಲದ ದೇವರ ಮೀನುಗಳಿಗೆ ಆಹಾರವನ್ನು ನೀಡುವ ಮೂಲಕ ಸಂಘದ ಸದಸ್ಯರಿಂದ ಸೇವಾ ಕಾರ್ಯ ಮುಂದುವರಿಯಿತು. ಈ ಸಂದರ್ಭದಲ್ಲಿ ನವಭಾರತ್ ಸಂಘಟನೆಯ ಗೌರವ ಅಧ್ಯಕ್ಷ […]
ಬೆಳ್ತಂಗಡಿಯಿಂದ ಬೆಂಗಳೂರಿಗೆ ಮರಳಲೂ ಶಾಸಕ ಹರೀಶ್ ಪೂಂಜರ ಕೃಪೆಯಿಂದ ಉಚಿತ ಬಸ್

ಬೆಳ್ತಂಗಡಿ: ಕಳೆದ ಎಪ್ರಿಲ್ ಕೊನೆಯ ವಾರದಲ್ಲಿ ರಾಜ್ಯ ಸರಕಾರ ಕೊರೋನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಜನತಾ ಕರ್ಫ್ಯೂ ಹೆಸರಿನ ಲಾಕ್‌ಡೌನ್‌ಗೆ ಮುಂದಾಗುತ್ತಿದ್ದಂತೆ ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದ ಸಾಕಷ್ಟು ಮಂದಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಎಪ್ರಿಲ್ 24ಹಾಗೂ 25ತಾರೀಕಿನಂದು ಉಚಿತವಾಗಿ ವ್ಯವಸ್ಥೆಗೊಳಿಸಿದ ಬಸ್‌ಗಳಲ್ಲಿ ಎದ್ದೆನೋ-ಬಿದ್ದೆನೋ ಎಂಬಂತೆ ಓಡಿ ಬಂದು ಬಸ್ಸನ್ನೇರಿ ಬೆಳ್ತಂಗಡಿ ತಾಲೂಕಿನ ತಮ್ಮ ಊರುಗಳಿಗೆ ಮರಳಿದರು. ಇದರಲ್ಲಿ ಅನೇಕರು ಊರಿಗೆ ಮರಳುತ್ತಿದ್ದಂತೆ ಶಾಸಕ ಹರೀಶ್ ಪೂಂಜರ ಉಸ್ತುವಾರಿಯಲ್ಲಿ ಹಳ್ಳಿಯ ಶಾಲೆಗಳಲ್ಲಿ ವ್ಯವಸ್ಥೆಗೊಳಿಸಲಾದ ಕ್ವಾರಂಟೈನ್ ಸೆಂಟರ್‌ಗಳಲ್ಲಿ ವಾಸ್ತವ್ಯವಿದ್ದು […]
‘ವೈದ್ಯರ ನಡೆ-ಹಳ್ಳಿಯ ಕಡೆ’ ಕಾರ್ಯಕ್ರಮಕ್ಕೆ ಚಾಲನೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತ ಬೆಳ್ತಂಗಡಿ ಇದರ ಸಂಯಕ್ತ ಆಶ್ರಯದಲ್ಲಿ ಜೂನ್ 6ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ‘ವೈದ್ಯರ ನಡೆ ಹಳ್ಳಿಯ ಕಡೆ’ ಜಾಗೃತಿಗೆ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ಚಾಲನೆ ನೀಡಿದರು.ಕೋರೊನಾ ಸಂಧಿಗ್ಧತೆಯ ಈ ಸಂದರ್ಭದಲ್ಲಿ ಮುಂಚೂಣಿಯಲ್ಲಿ ನಿಂತು ಜನರ ಸೇವೆ ಮಾಡುತ್ತಿರುವ ವೈದ್ಯರು ಹಳ್ಳಿಗಳಿಗೆ ತೆರಳಿ ಜನರಲ್ಲಿ ಧೈರ್ಯತುಂಬಲಿದ್ದಾರೆ.
ಕೊರೋನಾ ಸೋಂಕಿತರ ಪಾಲಿಗೆ ವರವಾದ ಧರ್ಮಸ್ಥಳದ ರಜತಾದ್ರಿ ಕೋವಿಡ್ ಸೆಂಟರ್

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿರುವ ಕೊರೋನಾ ಸೋಂಕಿತರಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವಿರೇಂದ್ರ ಹೆಗ್ಗಡೆಯವರು ಯವರು ರಜತಾದ್ರಿ ವಸತಿಗೃಹದಲ್ಲಿ 300 ಕೊಠಡಿಗಳ 600 ಬೆಡ್ ಇರುವಂತಹ ಕಟ್ಟಡವನ್ನು ಕೋವಿಡ್ ಕೇರ್ ಸೆಂಟರ್ ಮಾಡಲು ಅವಕಾಶ ಕಲ್ಪಿಸಿರುತ್ತಾರೆ.ಸದ್ರಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಪ್ರಸ್ತುತ 106 ಪುರುಷರು,72 ಮಹಿಳೆಯರು ಒಟ್ಟು 178 ಮಂದಿ ಸೋಂಕಿತರಿಗೆ ಸಕಲ ಸೌಕರ್ಯಗಳೊಂದಿಗೆ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಲಾಗುತ್ತಿದೆ.ಪ್ರತಿದಿನ ಶ್ರೀ ಕ್ಷೇತ್ರದಿಂದ ಬೆಳಗ್ಗಿನ ಉಪಹಾರ, 11ಗಂಟೆಗೆ ಕಷಾಯ-ಬಿಸ್ಕೆಟ್, ಮದ್ಯಾಹ್ನ […]
ಕೋವಿಡ್-19 ಸರಕಾರದ ನಿಯಮ ಉಲ್ಲಂಘಿಸಿದ ಸಚಿವ ಲಿಂಬಾವಳಿ

ಬೆಳ್ತಂಗಡಿ: ರಾಜ್ಯ ಸರಕಾರದ ಕೋವಿಡ್-19 ನಿಯಮಾವಳಿಯನ್ನು ರಾಜ್ಯ ಸರಕಾರದ ಅರಣ್ಯ ಸಚಿವ ಅರವಿಂದ ಲಿಂಬಾವಳಿಯವರು ಉಲ್ಲಂಘಿಸಿದ ಪ್ರಕರಣ ಜೂನ್ 5ರಂದು ಧರ್ಮಸ್ಥಳದಲ್ಲಿ ನಡೆದಿದೆ.ರಾಜ್ಯ ಸರಕಾರ ಹೊರಡಿಸಿದ ಕೋವಿಡ್-19 ಲಾಕ್‌ಡೌನ್ ಮಾರ್ಗಸೂಚಿಯಂತೆ ರಾಜ್ಯದ ಎಲ್ಲ ದೇಗುಲಗಳು, ಚರ್ಚ್‌ಗಳು, ಮಸೀದಿಗಳ ಸಹಿತ ಎಲ್ಲ ಧರ್ಮೀಯರ ಎಲ್ಲ ಶ್ರದ್ಧಾಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸರಕಾರದ ಆದೇಶ ಎಂದ ಮೇಲೆ ಇದು ಸಚಿವರಿಂದ ಜನಸಾಮಾನ್ಯನವರೆಗೆ ಎಲ್ಲರಿಗೂ ಅನ್ವಯ. ಜೂನ್ 5ರಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸರಕಾರದ ಅರಣ್ಯ ಸಚಿವ […]