ಎಂ.ಆರ್.ಪಿ.ಎಲ್‌ನ ಉದ್ಯೋಗ ನೀತಿ ಖಂಡಿಸಿ ಮನೆಮನೆ ಹೋರಾಟ

ಬೆಳ್ತಂಗಡಿ: ಎಂ.ಆರ್.ಪಿ.ಎಲ್ ಸಂಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾರಂಭಿಸುವ ಸಂದರ್ಭ ಇಲ್ಲಿಯ ಜನರ ಒಡೆತನದ ಭೂಸ್ವಾದೀನ ಮಾಡುವ ಸಂದರ್ಭ, ಎಂ.ಆರ್.ಪಿ.ಎಲ್ ಸಂಸ್ಥೆಯಲ್ಲಿ ಉದ್ಯೋಗ ನೀಡುವಾಗ ಸ್ಥಳಿಯರಿಗೇ ಆದ್ಯತೆ ನೀಡುವ ಭರವಸೆ ಸಂಸ್ಥೆ ನೀಡಿತ್ತು. ಆದರೆ ಇಂದು ಎಂ.ಆರ್.ಪಿ.ಎಲ್. ನವರು ಮೆರಿಟ್ ಇಲ್ಲದೆ, ನಮ್ಮ ಜಿಲ್ಲೆಗೆ ಆದ್ಯತೆಯನ್ನೂ ನೀಡದೇ ಸರಕಾರದ ಕಾನೂನು ಉಲ್ಲಂಘಿಸಿ ಉದ್ಯೊಗ ನೀಡುತ್ತಿರುವುದು ಖಂಡನೀಯ. ಆದ್ದರಿಂದ ಎಂ.ಆರ್.ಪಿ.ಎಲ್‌ನ ಉದ್ಯೋಗದಲ್ಲಿ ಸ್ಥಳಿಯರಿಗೆ ಆದ್ಯತೆ ನೀಡ ಬೇಕು ಎಂದು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿಯ ರಾಜ್ಯದ್ಯಕ್ಷರಾದ ಬಿ. […]
ವಾರದಲ್ಲಿ ಮೂರು ದಿನ ವ್ಯವಹಾರ ನಡೆಸಲು ಅವಕಾಶ ಕಲ್ಪಿಸಿ;ಮೂಡುಬಿದಿರೆ ಜವಳಿ ವರ್ತಕರ ಸಂಘದಿಂದ ಮುಖ್ಯಮಂತ್ರಿಗೆ ಪತ್ರ

ಮೂಡುಬಿದಿರೆ: ಈಗಿನಲಾಕ್ ಡೌನ್ ನಲ್ಲಿ ಜವಳಿ ವರ್ತಕರು ಚಿಂತಾಜನಕ ಪರಿಸ್ಥಿತಿಯನ್ನು ತಲುಪಿದ್ದು ಲಾಕ್ ಡೌನ್ ಆದೇಶದಲ್ಲಿ ಒಂದಿಷ್ಟು ಸಡಿಲಿಕೆ ಮಾಡಿ ಜವಳಿ ವರ್ತಕರಿಗೂ ವಾರದಲ್ಲಿ ಮೂರುದಿನ ವ್ಯವಹಾರ ನಡೆಸಲು ಅವಕಾಶ ಕಲ್ಪಿಸುವಂತೆ ಮೂಡುಬಿದಿರೆ ತಾಲೂಕು ಜವಳಿ ವರ್ತಕರ ಸಂಘವು ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದು ಮನವಿ ಮಾಡಿದೆ.ಈ ಬಗ್ಗೆ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಪತ್ರಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಜವಳಿ ವರ್ತಕರ ಸಂಘದ ಪ್ರಮುಖರು ಈ ಬಾರಿ ಕೊರೋನಾ ಹಾವಳಿಯಿಂದ ಎಪ್ರಿಲ್ […]
ಕೊರೊನಾ ವಾರಿಯರ್ಸ್‌ಗೆ ವ್ಯಾಪರೈಸರ್ ಕೊಡುಗೆ

ಬೆಳ್ತಂಗಡಿ: ಬೆಳ್ತಂಗಡಿಯ ನ್ಯಾಯವಾದಿ ಮತ್ತು ನೋಟರಿ ಪಬ್ಲಿಕ್ ಶಶಿಕಿರಣ್ ಜೈನ್ ಜೂನ್ 5ರಂದು ಕಲ್ಮಂಜ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು,ಆರೋಗ್ಯ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ವ್ಯಾಪರೈಸರ್ ಕೊಡುಗೆಯಾಗಿ ನೀಡಿ ಸಹಕರಿಸಿದರು. ಈ ಸಂದರ್ಭದಲ್ಲಿ ಕಲ್ಮಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ. ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.
ಕೊರೊನಾ ಸೋಂಕು ಮುಕ್ತರಿಂದ ಗಿಡ ನೆಟ್ಟು ಸಂಭ್ರಮ

ಬೆಳ್ತಂಗಡಿ: ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸೀಲ್‌ಡೌನ್ ಆಗಿದ್ದ 16 ಮನೆಯವರು ಸೇರಿ ಗಿಡ ನೆಟ್ಟು ಕೊರೊನಾ ಮುಕ್ತರಾಗಿದ್ದೇವೆ ಎಂಬ ಸಂದೇಶ ಸಾರುವ ಮೂಲಕ ಮಾದರಿ ಕಾರ್ಯಕ್ರಮ ಮಾಡಿ ಗಮನ ಸೆಳೆದಿದ್ದಾರೆ.ಬೆಳ್ತಂಗಡಿ ತಾಲೂಕು ಲಾಯಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡ್ಲಾಡಿಯ ಬಡಾವಣೆಯೊಂದರ 16 ಮನೆಗಳಿರುವ ಈ ಕಾಲನಿಯ 12 ಮನೆಗಳ ಸುಮಾರು 36 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಈ ಪ್ರದೇಶವನ್ನು ಮೇ 20ರಂದು ಸೀಲ್ ಡೌನ್ ಮಾಡಲಾಗಿತ್ತು. 17 ದಿನಗಳ ಬಳಿಕ […]
ರಂಗಮನೆಯಿಂದ ಕಿರುಚಿತ್ರ ನಿರ್ಮಾಣ

ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ( ರಿ.) ಸುಳ್ಯ ಇದರ ಆಶ್ರಯದಲ್ಲಿ ಸಾಮಾಜಿಕ ಜಾಗೃತಿಯ ಒಂದು ಕಿರುಚಿತ್ರ ನಿರ್ಮಾಣಗೊಳ್ಳಲಿದೆ. ಹಿರಿಯ ಯಕ್ಷರಂಗ ಕಲಾವಿದ ಸುಜನಾ ಸುಳ್ಯ ಶುಭಹಾರೈಸಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ರಂಗನಿರ್ದೇಶಕ ಜೀವನ್ ರಾಂ ಸುಳ್ಯ ನಿರ್ದೇಶನದಲ್ಲಿ ರಂಗಮನೆ ಸುತ್ತಲಿನ ಪರಿಸರದಲ್ಲಿ ಚಿತ್ರೀಕರಣ ಆರಂಭಗೊಂಡಿತು. ಮಾ| ಮನುಜ ನೇಹಿಗ,ಕು| ಲಾಲಿತ್ಯ ಹಾಗೂ ಜೀವನ್ ರಾಂ ಸುಳ್ಯ ಪ್ರಧಾನವಾಗಿ ಅಭಿನಯಿಸುವ ಈ ಕಿರುಚಿತ್ರದ ಕ್ಯಾಮರಾ ಝೀಟೋಗ್ರಫಿಯ ಝೀಶನ್,ಸಹ ನಿರ್ದೇಶನ ಹರ್ಷಿತ್ ಕೆ, ತಾಂತ್ರಿಕವಾಗಿ ಉಪನ್ಯಾಸಕರಾದ ಕುಸುಮಾಧರ ಸಂಕಡ್ಕ ಮತ್ತು […]
NETSURF ಸಂಸ್ಥೆಯಿಂದ ಕೋವಿಡ್ -19 ಟೆಸ್ಟ್ ಕಿಟ್ ಬಿಡುಗಡೆ-ಇನ್ನು 10 ನಿಮಿಷದಲ್ಲಿ ಮನೆಯಲ್ಲೇ ಟೆಸ್ಟ್ ಮಾಡಿಕೊಂಡು ರಿಪೋರ್ಟ್ ಪಡೆಯಬಹುದು

ಬೆಳ್ತಂಗಡಿ. ಮೂಲತಃ ಸಾಫ್‌ವೇರ್ ಕಂಪೆನಿಯಾದ Netsurf ಕಂಪೆನಿಯ ಮೈ Lab ಇದೀಗ ಕೇವಲ 250/ ರೂಪಾಯಿಗೆ ನಮ್ಮ ಮನೆಯಲ್ಲೇ ಕುಳಿತು 10 ನಿಮಿಷದಲ್ಲಿ Covid ಟೆಸ್ಟ್ Report ಪಡೆಯಬಹುದಾದ Coviself ಕಿಟ್‌ನ್ನು ಬಿಡುಗಡೆ ಮಾಡಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್ ( ICMR) ನಿಂದ ಮಾನ್ಯತೆ ಪಡೆದು ಬಿಡುಗಡೆ ಯಾದ ಈ Coviself ಅನ್ನು ಕಳೆದ ವಾರ Netsurf ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಸುಜೀತ್ ಜೈನ್ ಬಿಡುಗಡೆ ಮಾಡಿದ್ದರು. ಇದೀಗ ದೇಶದಾದ್ಯಂತ ಎಲ್ಲ ಮೆಡಿಕಲ್ ಸ್ಟೋರ್ ಗಳಲ್ಲಿ […]
ನಿದ್ದೆ ಬರುವವನನ್ನು ಹಾಸಿಗೆಗೆ ತಳ್ಳಿದ ಆಡಳಿತ! ಮರಳು ಮಾಫಿಯಾದವರಿಗಿನ್ನು ಹಬ್ಬ?

ಬೆಳ್ತಂಗಡಿ: ಎರಡು ವರ್ಷಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಕೆಲವೆಡೆ ಸುರಿದ ಭಾರೀ ಮಳೆ ಅದರಿಂದ ಉಂಟಾದ ನೆರೆ ಹಾಗೂ ಭೂಕುಸಿತದಿಂದ ಯಾರು ನಷ್ಟ ಅನುಭವಿಸಿದ್ದಾರೆ; ಯಾರು ತಮ್ಮ ಕೃಷಿ ಮತ್ತು ಮನೆ ಕಳೆದುಕೊಂಡಿದ್ದಾರೆ; ಯಾರು ಸರಕಾರದಿಂದ ಪರಿಹಾರ ಪಡೆದಿದ್ದಾರೆ ಎಂಬುದು ಈಗ ಎಲ್ಲರೂ ಮರೆತ ವಿಚಾರ. ಆದರೆ ಆ ಭೀಕರ ನೆರೆಯ ಸಂದರ್ಭ ನದಿ, ಹೊಳೆ, ತೊರೆ, ಹಳ್ಳಗಳಲ್ಲಿ ತುಂಬಿದ ಹೂಳೆತ್ತುವ ನೆಪದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಹುಟ್ಟಿಕೊಂಡ ಮರಳು ಮಾಫಿಯಾ ಇಂದು ತನ್ನ ಕಬಂಧ ಬಾಹುಗಳನ್ನು ಚಾಚಿ […]
ಸಂಕಷ್ಟದಲ್ಲಿದ್ದವರ ಸೇವೆ ಮಾನವೀಯತೆ-ವಂ. ಬಿಷಪ್

ಬೆಳ್ತಂಗಡಿ : ‘ನಿರ್ಗತಿಕರ, ಮಾನಸಿಕ ಅಸ್ವಸ್ಥರ, ವೃದ್ಧರ ಸೇವೆ ಮಾಡುವ ಸಿಯೋನ್ ಆಶ್ರಮದ ಕಾರ್ಯ ದೇವರು ಮೆಚ್ಚುವಂತಹುದ್ದು. ಇದೀಗ ಕೊರೊನಾ ಮಹಾಮಾರಿಯು ಇಲ್ಲಿನ ಅನಾಥರಿಗೆ ಮಾತ್ರವಲ್ಲ; ಮಾನಸಿಕ ಅಸ್ವಸ್ಥರಿಗೂ ಕಾಡುತ್ತಿದ್ದು, ಇವರ ಸೇವೆ ಮಾಡುವ ಜವಾಬ್ದಾರಿ ಎಲ್ಲರದ್ದಾಗಿದೆ’ ಎಂದು ಬೆಳ್ತಂಗಡಿ ಧರ್ಮ ಪ್ರಾಂತ್ಯದ ಬಿಷಪ್ ಅತಿವಂದನೀಯ ಲಾರೆನ್ಸ್ ಮುಕ್ಕುಯಿ ಹೇಳಿದ್ದಾರೆ.ಅವರು ಜೂನ್ 3ರಂದು ನೆರಿಯ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದಲ್ಲಿ ಅನ್ನದಾನ ಸೇವೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು.‘ಸೇವಾ ಕಾರ್ಯವನ್ನು ಸರ್ಕಾರ ಮಾಡಬೇಕಿದ್ದರೂ ಸರ್ಕಾರದ ಪರವಾಗಿ ಇಲ್ಲಿನ ಮ್ಯಾನೆಜಿಂಗ್ […]
ಯುವ ಕಾಂಗ್ರೆಸ್ ಅಧ್ಯಕ್ಷರಿಗೆ ಜೀವ ಬೆದರಿಕೆ ಶರಣ್ ಪಂಪ್ ವೆಲ್ ವಿರುದ್ಧ ದೂರು ದಾಖಲು

ಮೂಡುಬಿದಿರೆ : ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಅವರಿಗೆ ಕೊಲೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಯ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.ಮೇ 28ರಂದು ಸಂಜೆ 7-30ರ ಸುಮಾರಿಗೆ ಶರಣ್ ಪಂಪ್ ವೆಲ್ ಅವರು ಜಯಕುಮಾರ್ ಶೆಟ್ಟಿ ಅವರಿಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಲ್ಲದೆ ಜೀವ ಬೆದರಿಯನ್ನೂ ಒಡ್ಡಿದ್ದರೆಂದು ದೂರಿನಲ್ಲಿ ತಿಳಿಸಲಾಗಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ ಅವರು ಸ್ವತ: […]
ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಲು ಮನವಿ

ಬೆಳ್ತಂಗಡಿ: ಕೋವಿಡ್-19 ಎರಡನೆಯ ಅಲೆಯ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಲಾಕ್‌ಡೌನ್ ಘೋಷಿಸಿದ ಹಿನ್ನಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ 1,250 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವುದು ಸಾಮಾನ್ಯ ವರ್ಗದ ಜನರಿಗೆ ತುಂಬಾ ಸಹಕಾರಿಯಾಗಿದ್ದು, ಕರಾವಳಿ ಜನತೆಯ ಪರವಾಗಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರಿಗೆ ಅನಂತ ವಂದನೆಗಳನ್ನು ಸಲ್ಲಿಸಿದ್ದಾರೆ.ಕರ್ನಾಟಕ ರಾಜ್ಯದ ಇತರ ಪ್ರದೇಶಗಳಿಗಿಂತ ಭೌಗೋಳಿಕವಾಗಿ ಬಿನ್ನವಾಗಿರುವ ಕರಾವಳಿ ಜನತೆ ವಿಭಿನ್ನ ರೀತಿಯ ಸಂಕಷ್ಟಕ್ಕೊಳಗಾಗಿದ್ದು, ನಮ್ಮ ಜಿಲ್ಲೆಯಲ್ಲಿ […]