ಗುರುವಾಯನಕೆರೆ ಸೊಸೈಟಿಯ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬೆಳ್ತಂಗಡಿ: ಗುರುವಾಯನಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 30ವರ್ಷಗಳ ಕಾಲ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿ, ಸಂಘದ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕ ದುಡಿಮೆ ಸಲ್ಲಿಸಿ ಮೇ 31ರಂದು ವಯೋ ನಿವೃತ್ತರಾದ ಅನಂತ್ರಾಜ್ ಜೈನ್‌ರವರ ಬೀಳ್ಕೊಡುಗೆ ಸಮಾರಂಭವು ಸರಕಾರದ ಕೋವಿಡ್ ನಿಯಮಗಳನ್ನು ಪಾಲಿಸಿ, ಸರಳವಾಗಿ ಸಂಘದ ಸಭಾಭವನದಲ್ಲಿ ಮೇ 31ರಂದು ನಡೆಯಿತು.ಅತ್ಯಂತ ಹೃದಯಸ್ಪರ್ಶಿಯಾಗಿ ನಡೆದ ಈ ವಿದಾಯ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಜಿ. ಭಗೀರಥ ಮತ್ತು ಉಪಾಧ್ಯಕ್ಷೆ ಸುಜಿತಾ ವಿ. ಬಂಗೇರ ನಿವೃತ್ತಿ ಹೊಂದಿದ ಸಂಘದ ಮುಖ್ಯ […]
ರಕ್ತಚೆಲ್ಲುವ ಸಂಸ್ಕೃತಿಗಿಂತ ರಕ್ತದಾನಗೈಯುವ ಸಂಸ್ಕೃತಿ ರೂಡಿಯಾಗಲಿ- ಡಾl ರಾಜಾರಾಮ್

ಬೆಳ್ತಂಗಡಿ: ಬಿಸಿ ರಕ್ತದ ಯುವ ಜನತೆ ಯಾರದೋ ಮಾತಿಗೆ ಮರುಳಾಗಿ ರಕ್ತಚೆಲ್ಲುವ ಸಂಸ್ಕೃತಿಯ ಕಡೆ ಕಾಲಿಡದೆ ರಕ್ತದಾನಗೈಯುವ ಮೂಲಕ ದೇಶ ಸೇವೆಗೆ ಮುಂದಾಗಬೇಕು. ರಕ್ತದಾನ ಜೀವದಾನಕ್ಕೆ ಸಮಾನಾಗಿದ್ದು ಭ್ರಾತೃತ್ವವನ್ನು ಹತ್ತಿರಗೊಳಿಸುತ್ತದೆ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಡಾl ರಾಜಾರಾಮ್ ಕೆ. ಬಿ. ಹೇಳಿದರು. ಅವರು ಮೇ 28ರಂದು ಉಪ್ಪಿನಂಗಡಿಯ ಎಚ್. ಎಮ್. ಆಡಿಟೋರಿಯಂನಲ್ಲಿ ಸೌಹಾರ್ದ ಸಮಿತಿ (ರಿ) ಇಳಂತಿಲ ಇದರ ವತಿಯಿಂದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ಮತ್ತು ಬ್ಲಡ್ ಡೋನರ್ಸ್ (ರಿ) […]
ಸಿಐಟಿಯು ಸಂಸ್ಥಾಪನಾ ದಿನಾಚರಣೆ

ಬೆಳ್ತಂಗಡಿ: ದೇಶದ ಕಾರ್ಮಿಕ ವರ್ಗದ ಕೇಂದ್ರವಾಗಿರುವ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮವು ಮೇ 30 ರಂದು ನಡೆಯಿತು.ಸಿಐಟಿಯು ಸಂಘಟನೆ ಸ್ಥಾಪನೆಯಾಗಿ ಮೇ 30ಕ್ಕೆ 51 ವರ್ಷಗಳಾಯಿತು. ಈ ಹಿನ್ನೆಲೆಯಲ್ಲಿ ಇಡೀ ದೇಶದಾದ್ಯಂತ ಧ್ವಜಾರೋಹಣದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕೇಂದ್ರ ಸಮಿತಿ ಕರೆ ನೀಡಿತು. ದೇಶದ ವಿವಿಧ ಕ್ಷೇತ್ರದ ಕಾರ್ಮಿಕ ಸಂಘಟನೆಗಳು ಸಿಐಟಿಯು ಜೊತೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.ಸಿಐಟಿಯುನ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ […]
ಮಾಜಿ ಸಚಿವರ ಹುಟ್ಟುಹಬ್ಬವನ್ನು ಆಶ್ರಮಕ್ಕೆ ದಿನಸಿ ನೀಡಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಇವರ ಹುಟ್ಟುಹಬ್ಬದ ದಿನವನ್ನು ಅನಾಥಾಶ್ರಮಕ್ಕೆ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ನೀಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.ಮೇ 30 ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರ ಹುಟ್ಟುಹಬ್ಬದ ದಿನವಾಗಿದ್ದು ಆ ಪ್ರಯುಕ್ತ ಇಂದು ಯುವ ನಾಯಕ, ಎಪಿಎಂಸಿ ಸದಸ್ಯರು ಆಗಿರುವ ಚಂದ್ರಹಾಸ ಸಾಧು ಸನಿಲ್ ಅವರು ತಮ್ಮ ವೈಯುಕ್ತಿಕ ನೆಲೆಯಲ್ಲಿ ಅಲಂಗಾರು ಮೌಂಟ್ ರೊಸಾರಿ ಆಶ್ರಮಕ್ಕೆ ಅಕ್ಕಿ ಹಾಗೂ ದಿನ ಉಪಯೋಗಿ ವಸ್ತುಗಳನ್ನು ನೀಡಿದರು , ಮೌಂಟ್ ರೊಸಾರಿ […]
ಬಿಜೆಪಿ ಜಿಲ್ಲಾಧ್ಯಕ್ಷರಿಂದ ಆರ್ಥಿಕ ನೆರವು, ಆಹಾರ ಸಾಮಗ್ರಿ ವಿತರಣೆ

ಮೂಡುಬಿದಿರೆ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಎರಡನೇ ಅವಧಿಯ ಎರಡನೆ ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಂಭ್ರಮ ಆಚರಣೆ ಆಚರಿಸುವ ಬದಲಾಗಿ ಕಾರ್ಯಕರ್ತರು ತಮ್ಮ ಬೂತ್ ಗಳಲ್ಲಿ ಸೇವಾಕಾರ್ಯ ಮಾಡಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಜೆ.ಪಿ.ನಡ್ಡಾಜಿಯವರ ಹಾಗು ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ರವರ ಸೂಚನೆಯಂತೆ ಬಿಜೆಪಿ ಜಿಲ್ಲಾದ್ಯಕ್ಷರಾದ ಸುದರ್ಶನ ಎಂ ರವರು ತಮ್ಮ ಬೂತ್ ನಲ್ಲಿ ಕೊವಿಡ್ ಪೀಡಿತರಿಗೆ ಆರ್ಥಿಕ ನೆರವು, ಮಾರಿಗುಡಿ ಅರ್ಚಕರಿಗೆ ಆಹಾರ ಸಾಮಗ್ರಿ ವಿತರಣೆ, ಹಾಗು ಸಸಿ ನೆಡುವ […]
ಉಜಿರೆ: ಕೊರೋನಾ ಮುಕ್ತವಾದ ಕಂಟೊನ್ಮೆಂಟ್ ಝೋನ್-ಸಿಹಿ ಹಂಚಿ ಸಂಭ್ರಮ

ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತ್‌ನ ಗಾಂಧಿನಗರ ಕಾಲನಿಯಲ್ಲಿ ಹತ್ತಕ್ಕೂ ಅಧಿಕ ಮಂದಿ ಕೊರೋನಾ ಪೀಡಿತರಾಗಿದ್ದು, ಗ್ರಾಮ ಪಂಚಾಯತ್ ವತಿಯಿಂದ ಸರಕಾರದ ಕೋವಿಡ್-19 ನಿಯಮಾವಳಿಯಂತೆ ಈ ಪ್ರದೇಶವನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಿಸಲಾಗಿತ್ತು.ಇದೀಗ ಈ ಪ್ರದೇಶದ ಎಲ್ಲ ಸೋಂಕಿತರೂ ಕೊರೋನಾದಿಂದ ಗುಣಮುಖರಾಗಿದ್ದು; ಗಾಂಧಿನಗರ ಕಾಲನಿಗೆ ಭೇಟಿ ನೀಡಿದ ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಾ ಆರ್. ಶೆಟ್ಟಿ, ಉಪಾಧ್ಯಕ್ಷ ರವಿ ಕುಮಾರ್ ಬರೆಮೇಲು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಕೊರೋನಾದಿಂದ ಗುಣಮುಖರಾದವರಿಗೆ ಸಿಹಿಹಂಚಿ ಕಾಲನಿಯನ್ನು ಕಂಟೆನ್ಮೆಂಟ್ […]
ಪಟ್ರಮೆಯಲ್ಲಿ ವಿದ್ಯುದಾಘಾತಕ್ಕೆ ತಾಯಿ-ಮಗು ಬಲಿ

ಬೆಳ್ತಂಗಡಿ: ಪಟ್ರಮೆ ಗ್ರಾಮದ ಬೋಳೋಡಿ ಸಮೀಪ ಕೊಡಂದೂರು ಎಂಬಲ್ಲಿ ತೋಟದ ಪಂಪ್‌ಶೆಡ್ ಒಳಗೆ ಸಂಭವಿಸಿದ ವಿದ್ಯುದಾಘಾತಕ್ಕೆ ಬೋಳೋಡಿ ನಿವಾಸಿ ಹರೀಶ್ ಗೌಡರ ಪತ್ನಿ ಗೀತಾ (30) ಹಾಗೂ ಕಂದಮ್ಮ ಭವಿಷ್ (4) ಸಾವನ್ನಪ್ಪಿದ ಘಟನೆ ಮೇ 30ರ ಬೆಳಿಗ್ಗೆ ಸಂಭವಿಸಿದೆ.ತಮ್ಮ ತೋಟದ ಮನೆಯಲ್ಲಿದ್ದ ಹಸುಗಳಿಗೆ ನೀರುಣಿಸಲು ಪಂಪ್‌ನ ಸ್ವಿಚ್ ಹಾಕಲು ಗೀತಾ ತನ್ನ ಮಗುವಿನೊಂದಿಗೆ ಪಂಪ್‌ಶೆಡ್‌ಗೆ ತೆರಳಿ ಸ್ವಿಚ್ ಆನ್ ಮಾಡುವ ಸಂದರ್ಭ ಈ ದುರ್ಘಟನೆ ಸಂಭವಿಸಿದೆ ಎಂದು ಸಂದೇಹಿಸಲಾಗಿದೆ. ಪಂಪ್‌ನ ವಿದ್ಯುತ್ ಸಂಪರ್ಕದ ಮೂರು ಫೇಸ್‌ನ […]
ಕಂಟೋನ್ಮೆಂಟ್ ಪ್ರದೇಶದಲ್ಲಿಫಾಗಿಂಗ್ ಮತ್ತು ಸೇನಿಟೈಸರಿಂಗ್ ಕಾರ್ಯ

ಬೆಳ್ತಂಗಡಿ: ಕೋವಿಡ್ ನಿಯಂತ್ರಣ ಬಗ್ಗೆ ಜನಪ್ರತಿನಿಧಿಗಳು ಮತ್ತು ಸರಕಾರದ ವಿವಿಧ ಇಲಾಖೆಗಳ ಜೊತೆಗೆ ಕೈ ಜೋಡಿಸಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಿರುವ ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ನುರಿತ ವೈದ್ಯರ ತಂಡ ಮೇ 29ರಂದು ಬೆಳ್ತಂಗಡಿ ಪಟ್ಟಣ ಮತ್ತು ಲಾಯಿಲ ಗ್ರಾಮದ ಪಡ್ಲಾಡಿ ಕಂಟೋನ್ಮೆಂಟ್ ಪ್ರದೇಶದ ಮನೆಗಳ ಎಲ್ಲರ ಆರೋಗ್ಯ ತಪಾಸಣೆ ಹಾಗೂ ಸೇನಿಟೈಸರಿಂಗ್ ಮತ್ತು ಫಾಗಿಂಗ್ ಕಾರ್ಯವನ್ನು ಮಾಡಿತು.ಪಟ್ಟಣ ಪಂಚಾಯತ್‌ನಲ್ಲಿ ಆರಂಭವಾದ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವಾ, ಸದಸ್ಯೆ ಗೌರಿ, ಮುಖ್ಯಾಧಿಕಾರಿ ಸುಧಾಕರ್ ಎಂ. […]
ನೆಲ್ಲಿಕಾರು: ಸೋಂಕಿತರಿಗೆ ಆಹಾರ ಕಿಟ್ ವಿತರಣೆ

ನೆಲ್ಲಿಕಾರು: ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೆಲ್ಲಿಕಾರು ಮತ್ತು ಮಾಂಟ್ರಾಡಿ ಗ್ರಾಮದ ಕೊರೊನ ಸೋಂಕಿಗೆ ಒಳಗಾದ ಬಡ ಕುಟುಂಬಗಳಿಗೆ ಗ್ರಾಮ ಪಂಚಾಯsತಿ ವತಿಯಿಂದ ದಿನ ನಿತ್ಯದ ಆಹಾರ ಪದಾರ್ಥಗಳ ಕಿಟ್ ಅನ್ನು ವಿತರಿಸಲಾಯಿತು ಮತ್ತು ಆರೋಗ್ಯ ವಿಚಾರಿಸಿ ಮನೋ ದೈರ್ಯ ತುಂಬಲಾಯಿತು.ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಶೀಲಾ ಉಪಾಧ್ಯಕ್ಷರಾದ ಶಶಿಧರ ಎಂ. ಪಂಚಾಯತ್ ಸದಸ್ಯರುಗಳಾದ ಅಣ್ಣಿ ಪೂಜಾರಿ , ಸುನಂದ , ಜಿನೇಂದ್ರ ಜೈನ್ ,ಆಶಾಲತ ಹಾಗೂ ಮೂಡಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ […]
ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಕ್ಸಿಮೀಟರ್, ಮಾಸ್ಕ್, ಸ್ಯಾನಿಟೈಸರ್ ಕೊಡುಗೆ

ಶಿರ್ತಾಡಿ: ಸೌಹಾರ್ದ ಫ್ರೆಂಡ್ಸ್ ಕ್ಲಬ್, ಶಿರ್ತಾಡಿ ಹಾಗೂ ರೋಟರಿ ಕ್ಲಬ್ ಮೂಡುಬಿದಿರೆ, ಇದರ ವತಿಯಿಂದ, ಶಿರ್ತಾಡಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಕೊರೋನ ಕಿಟ್ ಗೆ ಉಪಯೋಗಿಸುವ 3 ಆಕ್ಸಿಮೀಟರ್ ಗಳು, N95 ಮಾಸ್ಕ್ ಗಳು, ಸ್ಯಾನಿಟೈಸರ್ ಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ ಸೌಹಾರ್ದ ಫ಼್ರೆಂಡ್ಸ್ ಕ್ಲಬ್ ನ ಗೌರವಾಧ್ಯಕ್ಶರಾಗಿವ ಡಾ| ಆಶಿರ್ವಾದ್, ಅಧ್ಯಕ್ಶರಾದ ಪ್ರವೀಣ್ ಕುಮಾರ್, ರೋಟರಿ ಕ್ಲಬ್ ಮೂಡಬಿದಿರೆ ಇದರ ನಿಯೋಜಿತ ಅಧ್ಯಕ್ಶರಾದ ಜೆ. ಡಬ್ಲ್ಯೂ. ಪಿಂಟೊ, ಶಿರ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಶರಾದ ಸಂತೋಷ್ ಕೊಟ್ಯಾನ್, […]