ಸತ್ಯಸ್ಥಳದಲ್ಲೇ ಕಾನೂನಿಗೆ ಸವಾಲು – ಧರ್ಮಸ್ಥಳ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಲಸಿಕೆಗೆ ಲಾಬಿ!

ಬೆಳ್ತಂಗಡಿ: ಕೆಲ ದಿನಗಳ ಹಿಂದೆಯಷ್ಟೆ ಉಜಿರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡುವ ವಿಚಾರದಲ್ಲಿ ಬಿಜೆಪಿಯ ಸ್ಥಳೀಯ ಪ್ರಭಾವಿಗಳು ಹಾಗೂ ಕೆಲ ಗ್ರಾಮ ಪಂಚಾಯತ್ ಸದಸ್ಯರು ಲಾಬಿ ನಡೆಸಿ, ತಮಗೆ ಬೇಕಾದವರಿಗೆ ಮಾತ್ರ ಕೋವಿಡ್ ಲಸಿಕೆ ದೊರಕಿಸಿಕೊಡುತ್ತಿದ್ದ ಬಗ್ಗೆ ದೂರುಗಳು ಕೇಳಿ ಬಂದಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಮೇ 26ರಂದು ಉಜಿರೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಪರಿಸ್ಥಿತಿಯನ್ನು ಅವಲೋಕಿಸಿ, ಆದ್ಯತೆ ನೆಲೆಯಲ್ಲಿ ಆನ್‌ಲೈನ್‌ನಲ್ಲಿ ನೋಂದಾವಣೆ ಮಾಡಿದವರಿಗೆ ಲಸಿಕೆ […]
ಶಿಶಿಲ ಮತ್ಸ್ಯಗಳಿಗೆ ಆಹಾರ ಸೇವೆ ಮಾಡಿದ ಭಕ್ತಸಮೂಹ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಶ್ರೀ ಶಿಶಿಲೆಶ್ವರ ದೇವಸ್ಥಾನದ ಕಪಿಲಾ ನದಿಯಲ್ಲಿರುವ ದೇವರ ಮೀನೆಂದೆ ಪ್ರಖ್ಯಾತವಾದ ಪೆರುವೊಳು ಜಾತಿಯ ಮತ್ಸ್ಯಗಳು ಪ್ರವಾಸಿಗರಿಗೆ ನಿರಂತರ ಮುದ ನೀಡುತ್ತಿತ್ತು. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದರು. ನಿತ್ಯ ಅವುಗಳಿಗೆ ಆಹಾರ ಒದಗಿಸುತ್ತಿದ್ದರು. ಆದರೆ ಇದೀಗ ಕೊರೊನಾ ಮುಂಜಾಗ್ರತೆಯಾಗಿ ಲಾಕ್‌ಡೌನ್ ಇರುವುದರಿಂದ ಭಕ್ತಾದಿಗಳು ಕೋವಿಡ್ ನಿಯಮದಂತೆ ದೇಗುಲಕ್ಕೆ ಬರುತ್ತಿಲ್ಲ. ಇದರಿಂದ ಮತ್ಸ್ಯಗಳಿಗೂ ಆಹಾರ ಹಾಕುವವರಿಲ್ಲ. ತೀರಾ ಹಳ್ಳಿ ಪ್ರದೇಶವಾಗಿರುವುದರಿಂದ ದೇವಾಲಯಕ್ಕೆ ಆದಾಯವೂ ಇಲ್ಲ. ಇದನ್ನು ಗಮನಿಸಿದ ಊರ ಪರವೂರಿನ ಭಕ್ತರು […]
ನಿರಾಶ್ರಿತರಿಗೆ ಹಾಗೂ ರೋಗಿಗಳಿಗೆ ಉಚಿತ ಊಟ ವಿತರಿಸುತ್ತಿರುವ ಅಲ್ ಅಮೀನ್ ಹೆಲ್ಪ್ ಲೈನ್ ತಂಡ

ಮೂಡಬಿದಿರೆ:ಕೊರೋನ ಸಂದರ್ಭದಲ್ಲಿ ತಮ್ಮ ಜಾತಿ-ಧರ್ಮ-ಮತ ಬೇಧಗಳನ್ನು ಮರೆತು ಮಾನವಕುಲ ಒಂದೇ ಎಂದು ಭಾವಿಸಿ ಆಹಾರವಿಲ್ಲದೆ ಬದುಕು ದೂಡುತ್ತಿರುವ ನಿರ್ಗತಿಕರ ಹೊಟ್ಟೆ ತುಂಬಿಸುವ ಕೆಲಸವನ್ನು ಮೂಡಬಿದಿರೆಯ ಅಲ್ ಅಮೀನ್ ಹೆಲ್ಪ್ ಲೈನ್ ತಂಡದವರು ಕಳೆದ 19 ದಿನಗಳಿಂದ ದಿನನಿತ್ಯ ಮಾಡುತ್ತಿರುವುದು ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದೆ. ಬಡವರ ಕಷ್ಟದ ಬಗ್ಗೆ ಅರಿತ ಕೆಲವರು ತಾವು ತಿನ್ನುವ ಅನ್ನವನ್ನು ಇತರರಿಗೂ ಹಂಚಿ ತಮ್ಮ ದೊಡ್ಡತನವನ್ನು ತೋರಿಸುತ್ತಾರೆ. ಮೂಡಬಿದಿರೆಯಲ್ಲಿ 2015 ರಲ್ಲಿ ಸ್ಥಾಪಿತವಾದ ಬಡ ಹೆಣ್ಣು ಮಕ್ಕಳ ಮದುವೆ ಹಾಗೂ ತೀರ ಬಡವರಿಗೆ […]
ಬಿಗ್ ಬ್ರೇಕಿಂಗ್ ನ್ಯೂಸ್ : ಬೆಳ್ತಂಗಡಿಗೂ ವಕ್ಕರಿಸಿದ ಬ್ಲ್ಯಾಕ್ ಫಂಗಸ್ ವೈರಸ್‌ಗೆ ಓರ್ವ ಬಲಿ

ಬೆಳ್ತಂಗಡಿ: ಎರಡನೇ ಅಲೆಯ ಕೊರೋನಾದೊಂದಿಗೆ ಜನತೆಯಲ್ಲಿ ಇನ್ನಷ್ಟು ಭೀತಿ ಹುಟ್ಟಿಸಿದ ಬ್ಲ್ಯಾಕ್ ಫಂಗಸ್ ವೈರಸ್ ಇದೀಗ ಬೆಳ್ತಂಗಡಿ ತಾಲೂಕಿಗೂ ವಕ್ಕರಿಸಿದ್ದು ಓರ್ವನನ್ನು ಬಲಿ ಪಡೆದಿದೆ.ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದ ಅಳಕೆ ನಿವಾಸಿ ನೋಣಯ್ಯ ಪೂಜಾರಿ (55) ಬ್ಲ್ಯಾಕ್ ಫಂಗಸ್ ವೈರಸ್‌ಗೆ ಬಲಿಯಾದ ವ್ಯಕ್ತಿ. ಕೆಲ ದಿನಗಳಿಂದ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ನೋಣಯ್ಯ ಪೂಜಾರಿಗೆ ಕೊರೋನಾ ಪಾಸಿಟಿವ್ ಜೊತೆಗೆ ಬ್ಲ್ಯಾಕ್ ಫಂಗಸ್ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ […]
ಮಾನವ ಸ್ಪಂದನ ತಂಡದ ನೇತೃತ್ವದಲ್ಲಿ ಫಾಗಿಂಗ್ ಮತ್ತು ಸ್ಯಾನಿಟೈಸೇಷನ್

ಬೆಳ್ತಂಗಡಿ: ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡ ಕೇವಲ ಅಂತ್ಯಸಂಸ್ಕಾರ ಕಾರ್ಯ ಮಾತ್ರ ಮಾಡದೆ, ಸರಕಾರದ ವಿವಿಧ ಇಲಾಖೆ ಜೊತೆ ಸೇರಿ ಕೋವಿಡ್ ಸಂಬಂಧಿತ ಇತರ ಸೇವೆಗಳನ್ನು ಕೈಗೊಳ್ಳುವ ಮೂಲಕ ತಮ್ಮ ಸೇವಾ ಕಾರ್ಯವನ್ನು ವಿಸ್ತರಿಸಿಕೊಂಡಿದೆ.ಮಾನವ ಸ್ಪಂದನ ಕೋವಿಡ್ ಸೋಲ್ಜರ್ಸ್ ತಂಡದ ನೇತೃತ್ವದಲ್ಲಿ ಯಂಗ್ ಚಾಲೆಂಜರ್ ಕ್ರೀಡಾ ಸಂಘ ಮುಂಡಾಜೆ, ಗ್ರಾಮ ಪಂಚಾಯತ್ ಮುಂಡಾಜೆ ಹಾಗೂ ಅನಂತ ಫಡ್ಕೆ ಮೆಮೊರಿಯಲ್ ಟ್ರಸ್ಟ್‌ನ ಸಹಭಾಗಿತ್ವದಲ್ಲಿ ಮುಂಡಾಜೆಯ ಸೋಮಂತಡ್ಕದಲ್ಲಿ ಫಾಗಿಂಗ್ ಮತ್ತು ಸ್ಯಾನಿಟೈಸೇಷನ್ ಕಾರ್ಯಕ್ರಮ ನಡೆಯಿತು.ಮುಂಡಾಜೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ […]
ಸಹಕಾರಿ ಸಂಘದ ಸಿಬ್ಬಂದಿಗಳನ್ನು ಕೊರೋನಾ ವಾರಿಯರ್ಸ್ ಆಗಿ ಪರಿಗಣಿಸಿ-ರಕ್ಷಿತ್

ಬೆಳ್ತಂಗಡಿ: ಕೊರೊನಾ ಸಂದರ್ಭದಲ್ಲಿಯೂ ಗ್ರಾಮೀಣ ಆರ್ಥಿಕತೆಯಲ್ಲಿ ಸಹಕಾರಿ ಸಂಘಗಳು ಮಹತ್ವದ ಪಾತ್ರವಹಿಸಿದೆ.ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ವ್ಯವಸ್ಥೆಗೆ ರಾಷ್ಟೀಕೃತ ಬ್ಯಾಂಕ್‌ಗಳಿಗೆ ಸರಿಸಮನಾಗಿ ಸಹಕಾರಿ ಸಂಸ್ಥೆಗಳು ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲೂ ನಮ್ಮ ಸಹಕಾರಿ ಸಂಸ್ಥೆಯ ಸಿಬ್ಬಂದಿಗಳು ಕೊರೊನಾ ವಾರಿಯರ್ಸ್ ಮಾದರಿಯಲ್ಲಿ ತಮ್ಮ ಗ್ರಾಹಕರಿಗೆ ಬ್ಯಾಂಕಿಂಗ್ ಹಾಗೂ ಪಡಿತರ ವಿತರಣೆ, ಹಾಗೂ ರೈತರಿಗೆ ತಮ್ಮ ಬೆಳೆ ಬೆಳೆಯಲು ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ರಸಗೊಬ್ಬರ, ಮೈಲುತುತ್ತು ವಿತರಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆಸಹಕಾರಿ ಕ್ಷೇತ್ರದ ಸಿಬ್ಬಂದಿಗಳ ಈ […]
ಸಿಯೋನ್ ಆಶ್ರಮಕ್ಕೆ ಔಷಧಿ ಸಹಿತ ಅಗತ್ಯ ವಸ್ತುಗಳ ನೆರವು

ಬೆಳ್ತಂಗಡಿ: ಕೊರೋನಾದಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿರುವ ಮಾನಸಿಕ ಅಸ್ವಸ್ಥರ ಹಾಗೂ ನಿರ್ಗತಿಕರ ಪೋಷಣಾ ಹಾಗೂ ಚಿಕಿತ್ಸಾ ಕೇಂದ್ರವಾದ ನೆರಿಯ ಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮಕ್ಕೆ ಸಮಾನಮನಸ್ಕ ದಾನಿಗಳು ಸೇರಿ ಸಂಗ್ರಹಿಸಿದ ಸುಮಾರು 30 ಸಾವಿರ ರೂಪಾಯಿ ಮೌಲ್ಯದ ಔಷಧಿ ಸಹಿತ ಅಗತ್ಯ ವಸ್ತುಗಳನ್ನು ಮೇ 26ರಂದು ಹಸ್ತಾಂತರಿಸಲಾಯಿತು.ಆಶ್ರಮದ ರೋಗಿಗಳಿಗೆ ಹಾಗೂ ವಾಸಿಗಳಿಗೆ ತುರ್ತು ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್, ಅಗತ್ಯ ಔಷಧಿ ಹಾಗೂ ಇನ್ನಿತರ ವಸ್ತುಗಳು ಈ ಕೊಡುಗೆಯಲ್ಲಿ ಒಳಗೊಂಡಿರುತ್ತದೆ. ಬೆಳ್ತಂಗಡಿತಾಲೂಕು ತಹಶಿಲ್ದಾರ್ ಮಹೇಶ್ ಜೆ., ಬೆಳ್ತಂಗಡಿ ತಾಲೂಕು […]
ಬೆಳುವಾಯಿಯಲ್ಲಿ ಹೋಂ ಐಸೊಲೇಷನ್ ಕಿಟ್ ವಿತರಣೆ

ಮೂಡುಬಿದಿರೆ: ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಹಾಗೂ ಕಾಂಗ್ರೆಸ್ ಯುವ ನಾಯಕ ಮಿಥುನ್ ರೈ ಅವರ ನೇತ್ರತ್ವದಲ್ಲಿ ಕೊರೋನಾ ವೈರಸ್‌ನಿಂದ ಜನತೆಯನ್ನು ರಕ್ಷಿಸುವ ಉದ್ದೇಶದಿಂದ ಮಿಥುನ್ ರೈ ಅವರು ಕೊಡುಗೆಯಾಗಿ ನೀಡಿರುವ ಹೋಮ್ ಐಸೊಲೇಷನ್ ಕಿಟ್‌ಅನ್ನು ಇಂದು ಬೆಳುವಾಯಿ ಗ್ರಾಮದಲ್ಲಿ ಆಶಾ ಕಾರ್ಯ ಕರ್ತರಿಗೆ, ಆಟೋ ರಿಕ್ಷಾ ಚಾಲಕರಿಗೆ , ಪೆಟ್ರೊಲ್ ಪಂಪ್ ಸಿಬ್ಬಂದಿಗಳಿಗೆ ವಿತರಿಸಲಾಯಿತು.ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಜಯ ಕುಮಾರ್ ಶೆಟ್ಟಿ, ನಾಯಕರಾದ […]
800 ಕೋಟಿ ರೂಪಾಯಿ ಅನುದಾನದ ದಾಖಲೆ ಬಿಡುಗಡೆಗೊಳಿಸಿದರೆ ಸಾರ್ವಜನಿಕ ಸನ್ಮಾನ – ಶಾಸಕ ಹರೀಶ್ ಪೂಂಜರಿಗೆ ಸವಾಲೆಸೆದ ಮಾಜಿ ಶಾಸಕ ವಸಂತ ಬಂಗೇರ

ಬೆಳ್ತಂಗಡಿ: ‘ಶಾಸಕ ಹರೀಶ್ ಪೂಂಜ ಕಳೆದ ಮೂರು ವರ್ಷದಲ್ಲಿ ತಾನು ತಾಲ್ಲೂಕಿಗೆ ರೂಪಾಯಿ 800 ಕೋಟಿ ಅನುದಾನ ಮಂಜೂರಾತಿ ಮಾಡಿ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿದೆ ಎಂದು ಪ್ರಚಾರ ಮಾಡಿದ್ದಾರೆ. ಶಾಸಕರು 800 ಕೋಟಿ ರೂಪಾಯಿ ಅಭಿವೃದ್ಧಿ ಅನುದಾನದ ಅಧಿಕೃತ ಸರ್ಕಾರಿ ದಾಖಲೆಗಳನ್ನು ಬಿಡುಗಡೆಗೊಳಿಸಿದರೆ ನಾನೇ ಮಾಜಿ ಶಾಸಕನ ನೆಲೆಯಲ್ಲಿ ಸಾರ್ವಜನಿಕರ ಪರವಾಗಿ ಅವರನ್ನು ಅಭಿನಂದಿಸುತ್ತೇನೆ. ದಾಖಲೆ ಬಿಡುಗಡೆಗೊಳಿಸಲು ವಿಫಲವಾದರೆ ತಾಲ್ಲೂಕಿನ ಜನರಲ್ಲಿ ಶಾಸಕರು ಕ್ಷಮೆ ಕೇಳಬೇಕು’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಸವಾಲು ಹಾಕಿದರು.ಅವರು ಮೇ […]
ಆಶಾ ಕಾರ್ಯಕರ್ತೆಯರಿಗೆ ಕೋವಿಡ್ ಶಿಕ್ಷಣ ಅಭಿಯಾನಕ್ಕೆ ಶಾಸಕ ಹರೀಶ ಪೂಂಜ ಚಾಲನೆ

ಬೆಳ್ತಂಗಡಿ: ಕೊರೊನಾ ಪೀಡಿತರಿಗೆ ಯಾವ ರೀತಿ ಚಿಕಿತ್ಸೆಯನ್ನು ಆಶಾ ಕಾರ್ಯಕರ್ತೆಯರು ನೀಡಬಹುದು ಎಂಬ ಮಾಹಿತಿಯನ್ನು ನೀಡುವ ಕೋವಿಡ್ ಶಿಕ್ಷಣ ಅಭಿಯಾನಕ್ಕೆ ಶಾಸಕ ಹರೀಶ್ ಪೂಂಜ ಉಜಿರೆಯ ಶ್ರೀಕೃಷ್ಣಾನುಗ್ರಹ ಸಭಾಭವನದಲ್ಲಿ ಮೇ 26ರಂದು ಚಾಲನೆ ನೀಡಿದರು.ರಾಜ್ಯದಲ್ಲೇ ಈ ರೀತಿಯ ಮೊದಲ ಪ್ರಯತ್ನ ಬೆಳ್ತಂಗಡಿಯಲ್ಲಾಗುತ್ತಿದ್ದು ಮೊದಲ ಹಂತದಲ್ಲಿ ಮೇ 26ರಂದು ಉಜಿರೆ ಪಂಚಾಯತಿ ಮಟ್ಟದಲ್ಲಿನ ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಶಾಸಕರು ಅಕ್ಸಿಮೀಟರ್, ಪಾಸಿಟಿವ್ ವ್ಯಕ್ತಿಗಳು ಅನುಸರಿಸಬೇಕಾದ ಬಗೆಗಿನ ಕರಪತ್ರ ಹಾಗೂ ಮಾಸ್ಕ್ ನೀಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ಬೆಳ್ತಂಗಡಿಯ ರೋಟರಿ […]