ಡಿಎಸ್ಎಸ್‌ನಿಂದ ಲಾಕ್‌ಡೌನ್ ನಿಯಮ ಉಲ್ಲಂಘಸಿ ಜೈಲ್‌ಭರೋ ಚಳುವಳಿಯ ಎಚ್ಚರಿಕೆ

ಬೆಳ್ತಂಗಡಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಇದರ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನೆಮನೆಯಲ್ಲಿ ರಾಜ್ಯಾದ್ಯಂತ ನಡೆದ ಪ್ರತಿಭಟನೆಯ ಅಂಗವಾಗಿ ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮೇ 24ರಂದು ಪ್ರತಿಭಟನೆ ನಡೆಯಿತು.ಚಿಕ್ಕಮಗಳೂರು ಜಿಲ್ಲೆಯ ಗೋಣಿಬೀಡು ಪೋಲಿಸ್ ಠಾಣೆಯ ಉಪ ನಿರೀಕ್ಷಕ ಅರ್ಜುನ್‌ನನ್ನು ಸೇವೆಯಿಂದ ಅಮಾನತು ಮಾಡಿ, ಬಂಧಿಸಿ, ಜೈಲಿಗಟ್ಟಬೇಕು; ಕೋವಿಡ್ ಸಂಬಂಧಿತ ಎಲ್ಲಾ ಚಿಕಿತ್ಸೆಯನ್ನು ಉಚಿತಗೊಳಿಸಬೇಕು; ಎಲ್ಲರಿಗೂ ತುರ್ತಾಗಿ ವ್ಯಾಕ್ಸಿನ್ ವ್ಯವಸ್ಥೆ ಮಾಡಬೇಕು; ಎಲ್ಲಾ ಬಡಕುಟುಂಬಗಳಿಗೂ ದಿನಬಳಕೆ ಸಾಮಾಗ್ರಿ ಮತ್ತು ಮಾಸಿಕ 5,000ರೂಪಾಯಿ […]
‘ವಿವೇಕ ಮಿತ್ರ ಕೋವಿಡ್19’ ಉಚಿತ ವಾಹನ ಸೇವೆ ಉದ್ಘಾಟನೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕಳೆಂಜ ಗ್ರಾಮದ ಸ್ವಾಮಿ ಶ್ರೀ ವಿವೇಕಾನಂದ ಸೇವಾ ಟ್ರಸ್ಟ್ ವತಿಯಿಂದ ಕೋವಿಡ್-19 ಪರಿಹಾರ ಕಾರ್ಯದಲ್ಲಿ ನೆರವಾಗಲು ಬೆಳ್ತಂಗಡಿ ರೋಟರಿ ಕ್ಲಬ್ ಮತ್ತು ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಸಹಯೋಗದೊಂದಿಗೆ ತಾಲೂಕಿನ ಮುಂಡೂರು ಗ್ರಾಮ ವ್ಯಾಪ್ತಿಯ ಕೋವಿಡ್ ಪೀಡಿತರು, ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಮತ್ತು ಮುಂಚೂಣಿಯ ಸ್ವಯಂಸೇವಕರ ಸಂಚಾರಕ್ಕೆ ಹಾಗೂ ಅಗತ್ಯವುಳ್ಳವರಿಗೆ ಆಹಾರ ಸಾಮಗ್ರಿ ಒದಗಿಸಲು ಟ್ರಸ್ಟ್ ವತಿಯಿಂದ ಎರಡು ವಾಹನಗಳನ್ನು ‘ವಿವೇಕಮಿತ್ರ ಕೋವಿಡ್-19’ ಹೆಸರಿನಲ್ಲಿ ಉಚಿತವಾಗಿ ಒದಗಿಸಲಾಗಿದೆ. ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ವಠಾರದಲ್ಲಿ ಮೇ 22 ರಂದು ನಡೆದ […]
ಕೊರೋನಾ ಮೂರನೇ ಅಲೆ ನಿಯಂತ್ರಣಕ್ಕೆ ಎಲ್ಲ ಕ್ರಮ-ಕೋಟ

ಬೆಳ್ತಂಗಡಿ: ಮಂಗಳೂರಲ್ಲಿ ಮೇ 25ರಂದು ಮಕ್ಕಳ ತಜ್ಞರ ಜೊತೆ ಸಮಾಲೋಚನಾ ಸಭೆ ಆಯೋಜಿಸಲಾಗಿದ್ದು, ಎಳೆಯ ಮಕ್ಕಳ ಮೇಲೆ ಬರಬಹುದಾದ ಕೊರೋನಾ ಮೂರನೇ ಅಲೆಯನ್ನು ನಿಯಂತ್ರಣದಲ್ಲಿರಿಸಲು ಸರ್ವ ತಯಾರಿ ಮಾಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಯ ಸರಕಾರವೂ ಗಂಭೀರ ಚಿಂತನೆ ನಡೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.ಅವರು ಮೇ 24ರಂದು ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಳದ ವಠಾರದಲ್ಲಿ ಅಳದಂಗಡಿ ಸತ್ಯದೇವತಾ ದೈವಸ್ಥಾನದ ವತಿಯಿಂದ ವತಿಯಿಂದ ಅಳದಂಗಡಿ ಹಾಗೂ ನಾರಾವಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 80 […]
ಲಾಯ್ಲ ಪಡ್ಲಾಡಿ ಕಂಟೋನ್ಮೆಂಟ್ ವಲಯ ನಿವಾಸಿಗರಿಗೆ ಕಿಟ್ ವಿತರಣೆ

ಬೆಳ್ತಂಗಡಿ: ರಾಜ್ಯ ಪ್ರಶಸ್ತಿ ವಿಜೇತ ಉತ್ಸಾಹಿ ಯುವಕ ಮಂಡಲದ ವತಿಯಿಂದ ಕಂಟೋನ್ಮೆಂಟ್ ವಲಯ ಎಂದು ಗುರುತಿಸಲಾಗಿರುವ ಲಾಯಿಲ ಪಡ್ಲಾಡಿ ಪ್ರದೇಶದ ಎಲ್ಲಾ ಮನೆಗಳಿಗೆ ತರಕಾರಿ ಕಿಟ್ ಗಳನ್ನು ಮೇ 24ರಂದು ವಿತರಣೆ ಮಾಡಲಾಯಿತು.ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಚಂದ್ರಕಾಂತ, ಕಾರ್ಯದರ್ಶಿ ಹರ್ಷಿತ್ ನಿನ್ನಿಕಲ್ಲು, ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಚಂದು ಎಲ್., ಯುವಕ ಮಂಡಲದ ಪದಾಧಿಕಾರಿಗಳಾದ ಸಂದೇಶ್ ಎಲ್, ಹರೀಶ್ ಎಲ್, ರವಿಚಂದ್ರ, ಸೂರ್ಯಕಾಂತ್, ಸುಧೀರ್ ಮತ್ತಿತರರು […]
ಆಕ್ಸೀಜನ್ ಘಟಕ ಕಾಮಗಾರಿಗೆ ಶಿಲಾನ್ಯಾಸ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಕೇಂದ್ರದ ಸರಕಾರಿ ಆಸ್ಪತ್ರೆಗೆ ರಾಜ್ಯ ಸರ್ಕಾರದ ರೂಪಾಯಿ 82ಲಕ್ಷ ವಿಶೇಷ ಅನುದಾನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಆಕ್ಸಿಜನ್ ಘಟಕ ಕಾಮಗಾರಿಗೆ ಮೇ 24ರಂದು ಕರ್ನಾಟಕ ಸರಕಾರದ ಮುಜರಾಯಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯರುಗಳಾದ ಪ್ರತಾಪ್‌ಸಿಂಹ ನಾಯಕ್ ಮತ್ತು ಶ್ರೀ ಹರೀಶ್ […]
ಕಾಂಗ್ರೆಸ್ ವತಿಯಿಂದ 1500 ಐಸೊಲೇಷನ್ ಕಿಟ್ ವಿತರಣೆ

ಮೂಡುಬಿದಿರೆ : ಕಾಂಗ್ರೆಸ್ ಯುವನಾಯಕ ಮಿಥುನ್ ರೈಯವರು ಕೋವಿಡ್ ಸಂದರ್ಭದಲ್ಲಿ ಕೊಡುಗೆಯಾಗಿ ನೀಡಿರುವ ಉಪಯುಕ್ತ ಔಷಧಿ, ಮಾಹಿತಿ, ವಿಟಮಿನ್ ಮಾತ್ರೆಗಳು ಮತ್ತು ಮಾಸ್ಕನ್ನು ಒಳಗೊಂಡ 1500 ಐಸೊಲೇಷನ್ ಕಿಟ್ ಗಳನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನೇತ್ರತ್ವದಲ್ಲಿ ಮೂಡುಬಿದಿರೆಯ ಆಶಾ ಕಾರ್ಯಕರ್ತೆಯರು, ಆಟೋರಿಕ್ಷಾ ಚಾಲಕರು ಮತ್ತಿತರರಿಗೆ ವಿತರಿಸಲಾಯಿತು.ಸರಕಾರ ವಿಧಿಸಿರುವ ಕೋವಿಡ್ ನಿಯಮಗಳ ಪಾಲನೆಯೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪ್ರಧಾನ […]
‘ಮುಂಡಾಜೆಯಲ್ಲಿ ಆಪ್ತರಕ್ಷಕ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸೆಲ್ಫ್ ಕ್ವಾರಂಟೈನ್ ಆಗಲಿ’

ಬೆಳ್ತಂಗಡಿ: ಬದುಕು ಕಟ್ಟೋಣ ಬನ್ನಿ ತಂಡ ಹಾಗೂ ರೋಟರಿ ಕ್ಲಬ್ ಬೆಳ್ತಂಗಡಿಯವರು ಮೇ 18ರಂದು ಮುಂಡಾಜೆಯಲ್ಲಿ ಆಯೋಜಿಸಿದ ಮುಂಡಾಜೆ ಗ್ರಾಮ ಪಂಚಾಯತ್‌ಗೆ ಕೊರೋನಾ ಸಂದರ್ಭ ತುರ್ತು ಅಗತ್ಯಕ್ಕಾಗಿ ನೀಡಿದ ‘ಆಪ್ತರಕ್ಷಕ’ ವಾಹನದ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ ಓರ್ವ ಜನಪ್ರತಿನಿಧಿ ಹಾಗೂ ಓರ್ವ ಆಶಾ ಕಾರ್ಯಕರ್ತೆಗೆ ಕೊರೋನಾ ಪಾಸಿಟಿವ್ ವರದಿಯಾಗಿದ್ದು; ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬೆಳ್ತಂಗಡಿ ರೋಟರಿ ಕ್ಲಬ್‌ನ ಸದಸ್ಯರು ಮತ್ತು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸದಸ್ಯರೆಲ್ಲರೂ ಕೊರೋನಾ ಟೆಸ್ಟ್ ಮಾಡಿಸುವುದರ ಜೊತೆಗೆ ಇವರೆಲ್ಲಾ ಸೋಂಕಿತರ […]
ಮನೆಯಲ್ಲಿದ್ದೇ ಕೊರೊನಾ ಗೆದ್ದ ಮರೋಡಿ ರಾಂತಿಬೆಟ್ಟು ಕುಟುಂಬ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಸಾಕಷ್ಟು ಗ್ರಾಮಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಸೋಂಕಿಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಸೋಂಕನ್ನು ದಿಟ್ಟತನದಿಂದ ಎದುರಿಸಿ ಗೆದ್ದು ಬಂದವರ ಸಂಖ್ಯೆಯೂ ದೊಡ್ಡದಾಗಿ ಬೆಳೆಯುತ್ತಿರುವುದು ಸಮಾಧಾನಕರ ಅಂಶ.ಬೆಳ್ತಂಗಡಿ ತಾಲೂಕಿನ ತೀರಾ ಗ್ರಾಮೀಣ ಪ್ರದೇಶವಾದ ಪೆರಾಡಿ ಗ್ರಾಮದ ರಾಂತಿಬೆಟ್ಟು ಮನೆಯ ಒಂದೇ ಕುಟುಂಬದ 13ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಇದೀಗ ಎಲ್ಲರೂ ಸೋಂಕಿನಿಂದ ಗುಣಮುಖರಾಗಿದ್ದಾರೆ.ಪೆರಾಡಿಯ ರಾಂತಿಬೆಟ್ಟು ಕುಟುಂಬಿಕರು ಇತ್ತೀಚೆಗೆ ಉಡುಪಿಯಲ್ಲಿನ ತಮ್ಮ ಹತ್ತಿರದ ಸಂಬಂಧಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು. ಆ ಬಳಿಕ ಕುಂಟುಂಬದ […]
ಸುದೆಮುಗೇರು ಕಾಲನಿ ನಿವಾಸಿಗರಿಗೆ ಆಹಾರ ಕಿಟ್ ವಿತರಣೆ

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊರೋನಾ ಹಾಟ್‌ಸ್ಪಾಟ್ ಪ್ರದೇಶಗಳಲ್ಲೊಂದಾದ ಸೀಲ್ ಡೌನ್ ಆಗಿರುವ ಪ್ರದೇಶ ಸುಧೇಮುಗೇರು ಕಾಲನಿಯ 25 ಮನೆಗಳಿಗೆ ಬೆಳ್ತಂಗಡಿ ಬಿಷಪ್‌ಹೌಸ್‌ನಿಂದ ಮೇ 22ರಂದು ಆಹಾರ ಕಿಟ್ ವಿತರಿಸಲಾಯಿತು.ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಡಾ. ಲಾರೆನ್ಸ್ ಮುಕ್ಕುಯಿ ಅವರ ಮಾರ್ಗದರ್ಶನದಲ್ಲಿ ಇಲ್ಲಿನ 24 ಮನೆಗಳಿಗೆ ಹಾಗೂ ಈ ಭಾಗದ ಓರ್ವ ಪೌರ ಕಾರ್ಮಿಕ ಸೇರಿ ಒಟ್ಟು 25 ಮನೆಗಳಿಗೆ ತಲಾ 10ಕಿಲೋ ಅಕ್ಕಿ, 6ತೆಂಗಿನಕಾಯಿ ಹಾಗೂ ದಿನಬಳಕೆ ಸಾಮಾಗ್ರಿಯನ್ನು ವಿತರಿಸಲಾಯಿತು. ಈ ಸಂದರ್ಭ ಬಿಷಪ್ […]
ವೈದ್ಯಕೀಯ ಪರಿಕರ ಕೊಡುಗೆ

ಬೆಳ್ತಂಗಡಿ: ದಕ್ಷಿಣ ಕನ್ನಡಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಬೆಂಗಳೂರಿನ ಉದ್ಯಮಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅವರು ಮೇ 21ರಂದು ಬೆಳ್ತಂಗಡಿ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಸುಮಾರು 3ಲಕ್ಷ ರೂಪಾಯಿ ಮೌಲ್ಯದ ಪಿಪಿಇ ಕಿಟ್, ಸರ್ಜಿಕಲ್ ಗ್ಲೌಸ್, ಮಾಸ್ಕ್, ಸ್ಯಾನಿಟೈಜರ್ ಹಾಗೂ ಇನ್ನಿತರ ವೈದ್ಯಕೀಯ ಬಳಕೆಗೆ ಬೇಕಾಗುವ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು.ಬೆಳ್ತಂಗಡಿ ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು ವೈದ್ಯಕೀಯ ಪರಿಕರಗಳನ್ನು ಸ್ವೀಕರಿಸಿ, ದೇವೇಂದ್ರ ಹೆಗ್ಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ […]