ಈ ಸಂಕಷ್ಟದಲ್ಲಿ ಇಂತಹಾ ಓಲೈಕೆ ಯಾಕೆ?

ಬೆಳ್ತಂಗಡಿ: ಮೇ 21ರಂದು ಬೆಳ್ತಂಗಡಿ ತಾಲೂಕಿನ ನೆರಿಯಾದಲ್ಲಿ ಬೆಳ್ತಂಗಡಿಯ ರೋಟರಿ ಕ್ಲಬ್ ಹಾಗೂ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ವತಿಯಿಂದ ನೆರಿಯ ಗ್ರಾಮ ಪಂಚಾಯತ್‌ಗೆ ಕೋವಿಡ್ ನಿರ್ವಹಣೆಗಾಗಿ ‘ಆಪ್ತರಕ್ಷಕ’ ವಾಹನದ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಇದೇ ಕಾರ್ಯಕ್ರಮದಲ್ಲಿ ಶಾಸಕರಾಗಿ ಮೂರು ವರ್ಷ ಪೂರೈಸಿದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರನ್ನು ಸಮ್ಮಾನಿಸುವ ಮೂಲಕ ಬಕೆಟ್ ಹಿಡಿಯುವ ಕಾರ್ಯಕ್ರಮವೂ ನಡೆಯಿತು.ತಾಲೂಕಿನ ಮಾತ್ರವಲ್ಲ; ಇಡೀ ದೇಶದ ಜನತೆ ಕೊರೋನಾ ಸೋಂಕಿನಿಂದ ತತ್ತರಿಸಿ ಭಯದಿಂದ ಬದುಕುತ್ತಿರುವಾಗ; ತಾಲೂಕಿನಲ್ಲೂ ಕೊರೋನಾಗೆ ಬಲಿಯಾದ ಅದೆಷ್ಟೋ […]
ಮಾಜಿ ಪ್ರಧಾನಿ ರಾಜೀವ್ ಗಾಂಧಿ 30ನೇ ಪುಣ್ಯಸ್ಮೃತಿ ಮಾಸ್ಕ್ ಸರಿಸಿ ಭಾಗವಹಿಸಿದ ಹಿರಿಯ ನಾಯಕರು

ಮಾಜಿ ಪ್ರಧಾನಿ ರಾಜೀವ್ ಗಾಂಧಿ 30ನೇ ಪುಣ್ಯಸ್ಮೃತಿ ಮಾಸ್ಕ್ ಸರಿಸಿ ಭಾಗವಹಿಸಿದ ಹಿರಿಯ ನಾಯಕರುಫೊಟೊ ಬೆಳ್ತಂಗಡಿ: ಅಧುನಿಕ ಭಾರತದ ನಿರ್ಮಾತೃ, ಡಿಜಿಟಲ್ ಕ್ರಾಂತಿಯ ಮೂಲಕ ದೇಶದ ಪ್ರಗತಿಗೆ ಮುನ್ನುಡಿ ಬರೆದ ಮಾಜಿ ಪ್ರಧಾನಿ ರಾಜೀವ್ ಗಾಂಧಿರವರ 30ನೇ ವರ್ಷದ ಪುಣ್ಯಸ್ಮೃತಿ ಕಾರ್ಯಕ್ರಮವು ಮೇ 21ರಂದು ಬೆಳ್ತಂಗಡಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಆವರಣದಲ್ಲಿರುವ ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿಯ ಹೊರಗಡೆ ನಡೆಯಿತು. ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಸ್ಮರಣೆಯಲ್ಲಿ […]
ಬದುಕಿ ಇನ್ನೊಬ್ಬರನ್ನು ಬದುಕಿಸುವ ಶ್ರೇಷ್ಠ ಕಾರ್ಯ ರಕ್ತದಾನ-ಬಂಗೇರ

ಬೆಳ್ತಂಗಡಿ : ‘ರಕ್ತ ನಮ್ಮ ಬದುಕಿನ ಜೀವರಸ. ರಕ್ತದಾನ ಬದುಕಿನ ಶ್ರೇಷ್ಠ ಕಾರ್ಯಗಳಲ್ಲಿ ಒಂದಾಗಿದ್ದು, ರಕ್ತದಾನದಿಂದ ನಾವು ಬದುಕಿ ಇನ್ನೊಬ್ಬರನ್ನು ಬದುಕಿಸುವ ಸತ್ಕಾರ್ಯವಾಗಿದೆ. ಹಾಗಾಗಿ ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವ ಶ್ರೇಷ್ಠ ಮನಸ್ಸನ್ನು ಬೆಳೆಸಿಕೊಂಡಿರಬೇಕು’ ಎಂದು ಮಾಜಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.ಅವರು ಮೇ 18ರಂದು ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೆಳ್ತಂಗಡಿ ತಾಲೂಕು ಘಟಕ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ, ವೈದ್ಯಕೀಯ ಶಿಕ್ಷಣ ಹಾಗೂ ಸಂಶೋಧನಾ […]
ಮಿಡಿದ ಮಾನವ ಹೃದಯದಿಂದ ಅಶಕ್ತರಿಗೆ ಸಹಾಯಹಸ್ತ

ಬೆಳ್ತಂಗಡಿ: ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸರಕಾರ ಘೋಷಿಸಿದ ಲಾಕ್‌ಡೌನ್‌ನಿಂದ ಹೊಟ್ಟೆಗೆ ಸಕಾಲದಲ್ಲಿ ಹಿಟ್ಟಿಲ್ಲದೇ ಸಂಕಷ್ಟದಲ್ಲಿರುವವರಿಗೆ ಕಳೆದ ನಾಲ್ಕಾರು ದಿನಗಳಿಂದ ನೂರಾರು ಮಂದಿಗೆ ಪ್ರತಿನಿತ್ಯ ಬೆಳ್ತಂಗಡಿ ಪರಿಸರದಲ್ಲಿ ಅನ್ನ ದಾಸೋಹದ ಮೂಲಕ ಮೌನವಾಗಿ ಸೇವೆ ಸಲ್ಲಿಸುತ್ತಿರುವ ಬೆಳ್ತಂಗಡಿಯ ನ್ಯಾಯವಾದಿ ಹಾಗೂ ನೋಟರಿ ಬಿ. ಮುರಳಿ ತಮ್ಮ ಮಕ್ಕಳಾದ ಬಿ. ಎಂ. ಮಯೂರ ಮತ್ತು ಬಿ. ಎಂ. ಮಂದಾರರೊಂದಿಗೆ ಮೇ 14ರಂದು ಮೇಲಂತಬೆಟ್ಟು ಮತ್ತು ಸವಣಾಲು ಗ್ರಾಮಗಳ 13ಮನೆಗಳಿಗೆ ಹದಿನೈದು ದಿನಗಳಿಗೆ ಅಗತ್ಯವಿರುವ ದಿನಸಿ ಸಾಮಾಗ್ರಿಗಳನ್ನು ವಿತರಿಸುವ […]
ಬೆಳ್ತಂಗಡಿ ಪಟ್ಟಣ ಪಂಚಾಯತ್‌ಗೆ ‘ಆಪ್ತರಕ್ಷಕ’

ಬೆಳ್ತಂಗಡಿ : ಉಜಿರೆ ಬದುಕು ಕಟ್ಟೋಣ ಬನ್ನಿ ತಂಡ ಮತ್ತು ಬೆಳ್ತಂಗಡಿ ರೋಟರಿ ಕ್ಲಬ್ ಇವರ ಸಹಯೋಗದಲ್ಲಿ ಇಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಗೆ ಕೊರೋನಾ ಸೋಂಕಿನ ಸಂದರ್ಭ ಕೊರೋನಾ ವಾರಿಯರ್ಸ್‌ಗೆ ಬಳಕೆ ಮಾಡಲು “ಆಪ್ತರಕ್ಷಕ’ ಎರಡು ವಾಹನವನ್ನು ಪಟ್ಟಣ ಪಂಚಾಯತಿನ ಮಖ್ಯಾಧಿಕಾರಿ ಸುಧಾಕರ್ ಅವರಿಗೆ ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್ ಉಜಿರೆ, ರಾಜೇಶ್ ಪೈ ಉಜಿರೆ ಹಾಗೂ ಬೆಳ್ತಂಗಡಿ ರೋಟರಿ ಕ್ಲಬ್ ಅದ್ಯಕ್ಷ ಬಿ. ಕೆ. ಧನಂಜಯ ರಾವ್ ವಾಹನದ ಕೀಕೈ ನೀಡುವ […]
ಭಾರೀ ಮಳೆಗೆ ತುಂಬಿ ಹರಿದ ನದಿಗಳು, ಅಲ್ಲಲ್ಲಿ ಹಾನಿ

ಬೆಳ್ತಂಗಡಿ: ಮೇ 13ರಂದು ಸಂಜೆಯ ಬಳಿಕ ದಿಡುಪೆ, ಚಾರ್ಮಾಡಿ, ನೇತ್ರಾವತಿ ಹಾಗೂ ಮೃತ್ಯುಂಜಯ ನದಿಗಳ ಉಗಮ ಸ್ಥಾನಗಳಲ್ಲಿ ಭಾರಿ ಮಳೆಯಾಗಿದ್ದು, ಈ ನದಿಗಳ ಹರಿವು ಹೆಚ್ಚಳಗೊಂಡು ಅಲ್ಲಲ್ಲಿ ಹಾನಿ ಸಂಭವಿಸಿದೆ. ಈ ನದಿಗಳು ಹರಿಯುವ ಗ್ರಾಮಗಳಲ್ಲೂ ಮಳೆಯಾದ ಕಾರಣ ತಗ್ಗು ಪ್ರದೇಶಗಳಲ್ಲೂ ನೀರಿನ ಹರಿವಿನ ಪ್ರಮಾಣ ಹೆಚ್ಚಳ ಗೊಂಡಿದ್ದು, ಶುಕ್ರವಾರ ಬೆಳಿಗ್ಗೆಯಿಂದ ನದಿಗಳ ನೀರಿನ ಮಟ್ಟ ಸಾಮಾನ್ಯ ಸ್ಥಿತಿಗೆ ಮರಳ ತೊಡಗಿತು.ನೇತ್ರಾವತಿ ನದಿಯನ್ನು ಸೇರುವ ದಿಡುಪೆ ಭಾಗದ ನಂದಿಕಾಡು ಹಾಗೂ ಆನಡ್ಕ ಹಳ್ಳಗಳಲ್ಲಿ ಹೆಚ್ಚಿನ ಪ್ರಮಾಣದ ನೀರು […]
ಕೋವಿಡ್ ಕಾರ್ಯಪಡೆಯ ಕೆಲಸ ಪರಿಶೀಲನೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಮುಂಜಾಗ್ರತಾ ಕ್ರಮಗಳು ಹಾಗೂ ಕೋವಿಡ್ ಕಾರ್ಯಪಡೆಯ ಕೆಲಸ ಪರಿಶೀಲನೆ ಬಗ್ಗೆ ಸಮಾಲೋಚನಾ ಸಭೆ ಮೇ 14ರಂದು ಧರ್ಮಸ್ಥಳ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬೆಳಂಗಡಿ ತಹಶೀಲ್ದಾರ್ ಮಹೇಶ್ ಜೆ.ಯವರ ನಡೆಯಿತು.ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದ್ದು, ಸೋಂಕಿತರ ಚಿಕಿತ್ಸೆಗೆ ಬೆಡ್‌ಗಳ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಧರ್ಮಸ್ಥಳದ ರಜತಾದ್ರಿ ಸಭಾಭವನವನ್ನು ಉಪಯೋಗಿಸುವಂತೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಸಲಹೆ ನೀಡಿದ್ದು, ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತದಿಂದ ಅಲ್ಲಿ […]
ಸುಧೆಮುಗೇರು ಕಾಲೋನಿಗೆ ಮಾನವ ಹೃದಯಿಗಳಿಂದ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ: ಇತ್ತೀಚೆಗೆ ಕೊರೊನಾದಿಂದಾಗಿ ಭಾರೀ ಸದ್ದು ಮಾಡಿರುವ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸುಧೆಮುಗೇರು ಪರಿಶಿಷ್ಟ ಜಾತಿ ಕಾಲೋನಿನಲ್ಲಿ ಹಲವಾರು ಜನರು ಕೊರೊನಾ ಬಾದಿತರಾಗಿಈ ಪ್ರದೇಶವನ್ನು ಕೆಲವು ದಿನಗಳಿಂದ ಕಂಟೋನ್ಮೆಂಟ್ ವಲಯ ಎಂಬುದಾಗಿ ಘೋಷಣೆ ಮಾಡಲಾಗಿದೆ. ಇದರಿಂದ ಇಲ್ಲಿನ ಜನರಿಗೆ ಮನೆಯಿಂದ ಹೊರಗಡೆ ಬಾರದಂತೆ ನಗರ ಪಂಚಾಯತ್ ಮತ್ತು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದಾರೆ.ಪರಿಣಾಮವಾಗಿ ಕೂಲಿ ಕೆಲಸವನ್ನೇ ನಂಬಿ ಬದುಕುತ್ತಿದ್ದ ಇಲ್ಲಿನ ನಿವಾಸಿಗಳಿಗೆ ಬದುಕು ಸಾಗಿಸುವರೇ ಕಷ್ಟವಾಗುತ್ತಿದೆ.ಒಂದೆಡೆ ಸೀಲ್ ಡೌನ್ ಘೋಷಣೆ ಮಾಡಿದ ಪಟ್ಟಣ ಪಂಚಾಯತ್ ಆಗಲೀ, […]
ಕೊರೋನಾ ಸೋಂಕಿತರ ಸೇವೆಗೆ ಆಪ್ತರಕ್ಷಕ ಸಿದ್ಧ

ಬೆಳ್ತಂಗಡಿ: ಕೊರೊನಾ ಮಹಾಮಾರಿಯನ್ನು ಹೊಡೆದೋಡಿಸಲು ಪ್ರಜ್ಞಾವಂತ ನಾಗರಿಕರು ಇನ್ನಷ್ಟು ಎಚ್ಚೆತ್ತುಕೊಳ್ಳುವುದರ ಜತೆ ಸವಾಲು, ತೊಂದರೆಗಳನ್ನು ಮೆಟ್ಟಿ ಮುಂದುವರಿಯಬೇಕು, ಗ್ರಾಮಗಳಲ್ಲಿ ಸಂಘ-ಸಂಸ್ಥೆಗಳು, ಉದ್ಯಮಿಗಳು, ಯುವಕರು ಸೇರಿ ಜನ ಜಾಗೃತಿ ಮೂಡಿಸುವುದರ ಜೊತೆಗೆ ಕೊರೊನಾ ವಿರುದ್ಧದ ಹೋರಾಟಕ್ಕೆ ಮುಂದಾಗಿ ಮಾದರಿಯಾಗಬೇಕು ಎಂದು ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಬಿ. ಕೆ. ಧನಂಜಯ ರಾವ್ ಹೇಳಿದರು.ಅವರು ಮೇ 13ರಂದು ಉಜಿರೆಯ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ಸೇವಾ ಸಮಿತಿಯ ‘ಬದುಕು ಕಟ್ಟೋಣ ಬನ್ನಿ’ ತಂಡದ ಆಪ್ತರಕ್ಷಕ ಸೇವಾ […]
ಕಳಿಯ ಸೊಸೈಟಿಯಿಂದ ಮಾದರಿ ಕಾರ್ಯ;ಸೀಲ್‌ಡೌನ್ ಪ್ರದೇಶದಲ್ಲಿ ರೇಷನ್ ಮನೆಬಾಗಿಲಿಗೆ.

ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ರೇಶ್ಮೆರೋಡ್ ಮಾವಿನಕಟ್ಟೆ ಪ್ರದೇಶವವನ್ನು ಕೊರೋನಾ ಕಾರಣಕ್ಕೆ ಸೀಲ್‌ಡೌನ್ ಮಾಡಲಾಗಿದ್ದು, ಗೇರುಕಟ್ಟೆಯ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದವರು ಲಾಕ್‌ಡೌನ್ ಆದ ಆ ಪ್ರದೇಶದ ನಿವಾಸಿಗರಿಗೆ ತಿಂಗಳ ಪಡಿತರವನ್ನು ಅವರವರ ಮನೆಗಳಿಗೆ ತಲುಪಿಸಿ ವಿತರಿಸಿ ಮಾದರಿಯಾಗಿದ್ದಾರೆ. ಮಾವಿನಕಟ್ಟೆ ಪ್ರದೇಶದಲ್ಲಿ ಸಾಕಷ್ಟು ಕೊರೋನಾ ಪ್ರಕರಣವಿದ್ದು, ಈ ಪ್ರದೇಶವನ್ನು ಮುಂಜಾಗ್ರತಾ ಕ್ರಮವಾಗಿ ಸೀಲ್‌ಡೌನ್ ಮಾಡಲಾಗಿತ್ತು. ಇಲ್ಲಿನ ಜನತೆಗೆ ಪಡಿತರ ತೆಗೆದುಕೊಳ್ಳಲು ಅಸಾಧ್ಯವಾದ ಕಾರಣ ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತದೊಂದಿಗೆ […]