ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಲಸಿಕೆಯೊಂದಿಗೆ ಕೊರೋನಾ ಉಚಿತ

ಬೆಳ್ತಂಗಡಿ: ದೇಶದಲ್ಲಿ ಕೊರೋನಾ ಲಸಿಕೆಯ ಪ್ರಥಮ ಮತ್ತು ದ್ವಿತೀಯ ಡೋಸ್ ಪಡೆದ ಕೆಲ ವ್ಯಕ್ತಿಗಳಿಗೂ ಕೊರೋನಾ ಪಾಸಿಟಿವ್ ಬಂದ ವರದಿಗಳು ಮಾಧ್ಯಮಗಳ ಮೂಲಕ ಪ್ರಕಟಗೊಂಡಿದೆ. ಈ ರೀತಿ ಲಸಿಕೆ ಪಡದವರಿಗೂ ಕೊರೋನಾ ಬರಲು ಕಾರಣವೇನು ಎಂಬ ಪ್ರಶ್ನೆಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಮೇಲಿನ ದೃಶ್ಯಾವಳಿ ಒಂದು ಹಂತದವರೆಗೆ ಉತ್ತರ ನೀಡುತ್ತದೆ.ಮೇ 10ರಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಕೋವಿಡ್-19 ಲಸಿಕಾ ಕೊಠಡಿಯ ಬಾಗಿಲಲ್ಲಿ ಕಂಡು ಬಂದ ದೃಶ್ಯವಿದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡುವ ಮೂಲಕ […]

ಬೆಳ್ತಂಗಡಿಯಲ್ಲಿ ನಿಷ್ಕ್ರಿಯ ತಾಲೂಕು ಆಡಳಿತ;ಕೋವಿಡ್ ನಿಯಮಗಳಿಗೆ ಸವಾಲಾದ ಕಾನೂನು ವಿರೋಧಿಗಳ ಅಟ್ಟಹಾಸ

ಬೆಳ್ತಂಗಡಿ: ಸರಕಾರ ಹೊರಡಿಸಿದ ಕೊರೋನಾ ಸೋಂಕು ನಿಯಂತ್ರಣ ಮಾರ್ಗಸೂಚಿಗಳ ಅನುಷ್ಠಾನದ ಜವಾಬ್ದಾರಿ ಬೆಳ್ತಂಗಡಿ ತಾಲೂಕಿನಲ್ಲಿ ಪೊಲೀಸರಿಗಷ್ಟೇನಾ…. ತಾಲೂಕು ಆಡಳಿತ ಈ ವಿಚಾರದಲ್ಲಿ ಸಂಪೂರ್ಣ ನಿಷ್ಕ್ರೀಯವಾಗಿದ್ದರೂ ನಮ್ಮ ಶಾಸಕ ಹರೀಶ್ ಪೂಂಜ ಯಾಕೆ ಸುಮ್ಮನಿದ್ದಾರೆ? ರಾಜ್ಯದಲ್ಲೇ ಕೋವಿಡ್ ನಿಯಂತ್ರಣ ನಿಯಮ ಪಾಲನೆಗೆ ಕಾನೂನು ವಿರೋಧಿಗಳು ಸವಾಲು ಹಾಕುವ ಊರುಗಳಲ್ಲಿ ಬೆಳ್ತಂಗಡಿ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದರೂ ತಪ್ಪಾಗದು. ಇದಕ್ಕೆ ನೇರ ಹೊಣೆ ತಾಲೂಕು ಆಡಳಿತ. ಒಂದೊಮ್ಮೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಳ್ತಂಗಡಿಯಲ್ಲಿ ಈ ಹಿಂದಿನ ತಹಶೀಲ್ದಾರ್ ಗಣಪತಿ ಶಾಸ್ತ್ರಿಯೇ […]

ಉಜಿರೆ ಶ್ರೀ ಧ.‌‌ಮಂ. ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ಉಚಿತ ಚಿಕಿತ್ಸೆ

ಬೆಳ್ತಂಗಡಿ: ಕೋವಿಡ್ ವಿರುದ್ಧ ಹೋರಾಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗಣನೀಯವಾದ ಸೇವೆ ನೀಡುತ್ತಿದ್ದು, ತನ್ನ ಗ್ರಾಮಾಭಿವೃದ್ಧಿ ಯೋಜನೆ ಕೇಂದ್ರದ ಮೂಲಕ ಸೋಂಕಿತರ ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಹಾಗೂ ವಾಹನ ಸೇವೆಯನ್ನು ಈಗಾಗಲೇ ನೀಡಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದೆ ಬಂದು ಸಾಮಾಜಿಕ ಕಳಕಳಿ ಮೆರೆದಿದ್ದು, ಆರೋಗ್ಯ ಬಿಕ್ಕಟ್ಟು ಎದುರಾಗಿರುವ ಇಂತಹ ಸಂದರ್ಭದಲ್ಲಿ ಗರ್ಭಿಣಿಯರ ಆರೋಗ್ಯ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸಲು ಮುಂದಾಗಿದೆ. ಸದ್ಯ ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ಸೋಂಕಿತರ ಶುಶ್ರೂಷೆಗಾಗಿ ಮೀಸಲಿಟ್ಟಿದ್ದು, ಇಲ್ಲಿ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಿರುತ್ತದೆ. […]

ವಾಹನ ಸಂಚಾರ ತಡೆಗೆ ಪೊಲೀಸ್ ಸರ್ಪಗಾವಲು

ಮೂಡುಬಿದಿರೆ: ವೀಕೆಂಡ್ ಲಾಕ್‌ಡೌನ್ ಇದ್ದರೂ ಮೇ 8ರ ಶನಿವಾರವೇನೋ ಬಹಳಷ್ಟು ಮಂದಿ ತಮ್ಮ ಬೇಕು-ಬೇಡಗಳನ್ನು ಪೂರೈಸಿಕೊಳ್ಳಲು ತಮ್ಮ ದ್ವಿಚಕ್ರ, ತ್ರಿಚಕ್ರ ಮತ್ತು ಚತುಷ್ಚಕ್ರ ವಾಹನಗಳಲ್ಲಿ ಪೇಟೆ ಸವಾರಿ ನಡೆಸಿದ್ದರು. ಆದರೆ ಇಂದು ಮೇ 9ರ ಭಾನುವಾರ ಮುಂಜಾನೆಯೇ ಫೀಲ್ಡಿಗಿಳಿದ ಮೂಡುಬಿದಿರೆ ಪೊಲೀಸರು ಹೆಚ್ಚು ಕಡೆ ವಾಹನ ಸಂಚರಿಸುವ ಭಾಗಗಳನ್ನು ಗುರುತಿಸಿಕೊಂಡು, ಮೂರು ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿಕೊಂಡು ಅನಗತ್ಯ ಸಂಚಾರ ನಡೆಸುವವರನ್ನು ತಡೆದು 50ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.ಮೇ 9ರ ಭಾನುವಾರ ಮುಂಜಾನೆಯೇ ಮಂಗಳೂರಿನಿಂದ ಪೊಲೀಸ್ ಗಸ್ತು ವಾಹನವೊಂದು […]

ಬೆಂಗಳೂರಿಂದ ಬಂದವರ ವರಪ್ರಸಾದ..ಬೆಳ್ತಂಗಡಿ ಪಟ್ಟಣದ ಕಲ್ಲಗುಡ್ಡೆ ವಾರ್ಡ್ ಸೀಲ್‌ಡೌನ್

ಬೆಳ್ತಂಗಡಿ: ಜನತಾ ಲಾಕ್‌ಡೌನ್ ಘೋಷಣೆಯಾಗುತ್ತಲೇ ಬೆಂಗಳೂರಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಗ್ರಾಮಗಳಿಗೆ ಬಂದ ಸಾಕಷ್ಟು ಮಂದಿ ತಮ್ಮತಮ್ಮ ಹುಟ್ಟೂರಿಗೆ ತಮಗರಿವಿಲ್ಲದೇ ಕೊರೋನಾ ಸೋಂಕು ಹೊತ್ತು ತಂದ ಪರಿಣಾಮ ಇಂದು ಬೆಳ್ತಂಗಡಿ ತಾಲೂಕಿನಲ್ಲೂ ಕೊರೋನಾ ಅತ್ಯಂತ ವೇಗವಾಗಿ ಹರಡುತ್ತಿದೆ. ತಾಲೂಕಿನ ವಿವಿದೆಡೆ ಸೀಲ್‌ಡೌನ್ ಆಗುತ್ತಿದೆ. ನಿನ್ನೆಯಷ್ಟೇ ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಸುದೆಮುಗೇರು ವಾರ್ಡ್ ಸೀಲ್‌ಡೌನ್ ಆಗಿತ್ತು. ಇಂದು ಮೇ 9ರಂದು ಹತ್ತಾರು ಕೊರೋನಾ ಸೋಂಕು ಪತ್ತೆಯಾದ ಕಲ್ಲಗುಡ್ಡೆ ವಾರ್ಡ್ ಸೀಲ್‌ಡೌನ್. ಎಲ್ಲವೂ ಬೆಂಗಳೂರು ಮಹಿಮೆ.ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರು […]

ಪೊಲೀಸರ ಕರ್ತವ್ಯಕ್ಕೆ ಜನಪ್ರತಿನಿಧಿಗಳ ತೊಡರುಗಾಲು;ಪೊಲೀಸರ ನೈತಿಕ ಸ್ಥೈರ್ಯ ಕುಸಿತ.

ಬೆಳ್ತಂಗಡಿ: ಒಂದೆಡೆ ರಾಜ್ಯ ಸರಕಾರ ಲಾಕ್‌ಡೌನ್ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಿ, ಕೊರೋನಾ ಚೈನ್‌ಲಿಂಕ್ ತುಂಡರಿಸಲು ಮುಂದಾಗಿದೆ. ಅದಕ್ಕಾಗಿ ಮೇ 10ರಿಂದ ಅಂತರ್‌ಜಿಲ್ಲಾ ಸಂಚಾರಕ್ಕೂ ನಿರ್ಬಂಧ ಹೇರಲು ಮುಂದಾಗಿದೆ. ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಂತೂ ಈ ನಿಯಮಗಳು ಮತ್ತಷ್ಟು ಬಿಗಿಯಾಗಲಿದೆ. ಆದರೆ ಬೆಳ್ತಂಗಡಿಯಲ್ಲಿ ವೀಕ್‌ಎಂಡ್ ಕರ್ಫ್ಯೂ ಸಂದರ್ಭ ಮೇ 8ರಂದು ರಾಜ್ಯ ಸರಕಾರದ ಮಾರ್ಗಸೂಚಿಯನ್ವಯ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಬೆಳ್ತಂಗಡಿ ಪೊಲೀಸರ ಮೇಲೆ ಪ್ರಭಾವ ಬೀರಿ ಅವರ ನೈತಿಕಸ್ಥೈರ್ಯ ಕುಸಿಯುವಂತೆ ಮಾಡುತ್ತಿರುವ ಜನಪ್ರತಿನಿಧಿಗಳು, ಜಿಲ್ಲೆಯ ಹೊರಗಿನಿಂದ ಕೊರೋನಾ ಹೊತ್ತು ತರುವ […]

ಇಲ್ಲಿ ಕೊರೋನಾ ವಾರಿಯರ್ಸ್‌ಗಿಲ್ಲ ರಕ್ಷಣೆ;ಕೊರೋನಾ ವಾರಿಯರ್ಸ್‌ಗೆ ಚಪ್ಪಲಿ ತೋರಿ ಬೆದರಿಕೆ.

ಬೆಳ್ತಂಗಡಿ: ಬೆಳ್ತಂಗಡಿ ಚರ್ಚ್ ಬಳಿಯ ಮನೆಯೊಂದರಲ್ಲಿ ಕರ್ತವ್ಯನಿರತ ದಾದಿ ಓರ್ವರ ಮೇಲೆ ಚಪ್ಪಲಿ ತೋರಿ ಹಲ್ಲೆ ನಡೆಸಲು ಮುಂದಾಗಿ ಬೆದರಿಕೆ ಹಾಕಿದ ಪ್ರಕರಣ ಮೇ 7ರಂದು ವರದಿಯಾಗಿದೆ. ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರಾಗಿ ಮನೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ಮನೆಮನೆಗೆ ತೆರಳಿ ಔಷಧಿ ವಿತರಿಸುವ ಜವಾಬ್ದಾರಿ ಹೊಂದಿದ ಹಿರಿಯ ದಾದಿ ಕಮಲರವರು ಮೇ 7ರ ಸಂಜೆ ಚರ್ಚ್ ಬಳಿಯ ಮನೆಯೊಂದಕ್ಕೆ ಕಿರಿಯ ಆರೋಗ್ಯ ಮೇಲ್ವಿಚಾರಕ ಗಿರೀಶ್‌ರೊಂದಿಗೆ ತೆರಳಿ ಔಷಧಿ ನೀಡುವ ಸಲುವಾಗಿ ಅದೇ ಮನೆಯಲ್ಲಿ […]

ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲಿ ಕೊರೋನಾ ಸ್ಪೋಟ! ಸುದೆಮುಗೇರು ವಾರ್ಡ್ ಕೊರೊನಾದ ಹಾಟ್‌ಸ್ಪಾಟ್?

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನಲ್ಲೂ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಅದರಲ್ಲೂ ಸುದೆಮುಗೇರು ವಾರ್ಡ್ ಕೊರೊನಾದ ಹಾಟ್‌ಸ್ಪಾಟ್ ಆಗಿದೆ. ಇಲ್ಲಿ 15ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ಈಗಾಗಲೇ ವರದಿಯಾಗಿದ್ದು, ಇಲ್ಲಿನ ಮಂದಿ ಕೊರೊನಾ ಟೆಸ್ಟ್ ಮಾಡಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ಮಾಹಿತಿ ಇದೆ. ತಾಲೂಕು ಆಡಳಿತವೂ ಯಾವುದೋ ಒತ್ತಡಕ್ಕೆ ಕಟ್ಟುಬಿದ್ದು, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲೇ ಅತೀ ಹೆಚ್ಚು ಕೋವಿಡ್ ಪ್ರಕರಣಗಳಿರುವ ಈ ವಾರ್ಡ್‌ನ್ನು ಕಂಟೈನ್‌ಮೆಂಟ್ ಝೋನ್ ಆಗಿ ಇದುವರೆಗೆ ಘೋಷಿಸಲೂ ಇಲ್ಲ; ಈ […]

ತುರ್ತು ಸೇವೆಗೆ ಆ್ಯಂಬುಲೆನ್ಸ್ ಸರ್ವಸನ್ನದ್ಧ

ಬೆಳ್ತಂಗಡಿ: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹರಡುವಿಕೆ ತನ್ನ ವೇಗವನ್ನು ಹೆಚ್ಚಿಸಿಕೊಂಡು ಕಾನೂನನ್ನು ಗೌರವಿಸುವ ಹಾಗೂ ಸರಕಾರ ಸೂಚಿಸಿದ ಕೋವಿಡ್ ನಿಯಮ ಪಾಲಿಸುವ ನಾಗರಿಕರಲ್ಲಿ ಆತಂಕ ಸೃಷ್ಟಿಸಿದೆ. ನಾಗರಿಕರ ಆತಂಕವನ್ನು ದೂರ ಮಾಡಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆಗಾಗಿ ಅಗತ್ಯ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸಲು ಯೋಜನೆ ರೂಪಿಸಿ ಕಾರ್ಯಗತಗೊಳಿಸುತ್ತಿರುವ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ, ಮೇ 7ರಂದು ಬೆಳ್ತಂಗಡಿಯ ಶಾಸಕರ ಕಛೇರಿ ‘ಶ್ರಮಿಕ’ದಲ್ಲಿ ತಾಲೂಕಿನ ಆ್ಯಂಬುಲೆನ್ಸ್ ಸೇವೆ ಒದಗಿಸುವವರ ಸಭೆ ಕರೆದು ವಿಚಾರ ವಿನಿಮಯ ನಡೆಸಿದರು.ತಾಲೂಕಿನಲ್ಲಿ ಕೊರೋನಾ […]

ಧರ್ಮಸ್ಥಳ ಸೊಸೈಟಿ ಸಿಇಒ ಅಸಹಜ ಸಾವು ಪ್ರಕರಣ;ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಮನವಿ

ಬೆಳ್ತಂಗಡಿ : ‘ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್‍ರವರ ಅಸಹಜ ಸಾವಿನ ಪ್ರಕರಣದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಗುರುವಾರ ಮನವಿ ನೀಡಿತು.ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಂ ಸಮಿತಿಯ ಧರ್ಮಸ್ಥಳ ಘಟಕದ ಅಧ್ಯಕ್ಷ ರವೀಂದ್ರನ್ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಆಧಾರದಲ್ಲಿ ಬ್ಯಾಂಕ್‍ನ ನಿರ್ದೇಶಕರುಗಳಾದ ಜಯರಾಮ ಭಂಡಾರಿ, ರಘುಚಂದ್ರ […]