ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನವರಾತ್ರಿ ಪೂಜೆ

ಬೆಳ್ತಂಗಡಿ: ಉಜಿರೆಯ ಕಿರಿಯಾಡಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ಅಕ್ಟೋಬರ್ 3ರಿಂದ 11ರವರೆಗೆ ನವರಾತ್ರಿ ಉತ್ಸವ ನಡೆಯಿತು. ಪ್ರತಿದಿನ ರಾತ್ರಿ 8 ಗಂಟೆಯಿಂದ ಮಹಾಪೂಜೆ ಬಳಿಕ ಪ್ರಸಾದ ವಿತರಣೆ, ಭಕ್ತಾಧಿಗಳಿಗೆ ಫಲಹಾರ ವಿತರಿಸಲಾಯಿತು.ನವರಾತ್ರಿಯ ಕೊನೆಯ ದಿನ ಮೊಕ್ತೇಸರರಾದ ವಾಸುದೇವ ಸಂಪಿಗೆತ್ತಾಯ ಮತ್ತು ವಾಣಿ ಸಂಪಿಗೆತ್ತಾಯ ಇವರಿಂದ ವಿಶೇಷ ಪೂಜೆ, ಕನ್ನಿಕ-ಸುಹಾಸಿನಿ ಪೂಜೆಯ ಬಳಿಕ ಮುತ್ತೈದೆಯರಿಗೆ ರವಿಕೆಕಣ ವಿತರಿಸಲಾಯಿತು. ಅರ್ಚಕರಾದ ಕೃಷ್ಣ ಹೊಳ್ಳ, ಆಡಳಿತ ಮೊಕ್ತೇಸರಾದ ವಾಸುದೇವ ಸಂಪಗೆತ್ತಾಯ, ಅಪ್ಪು ನಾಯರ್, ರವೀಂದ್ರ ಕಾರಂತ್, ರಾಘವೇಂದ್ರ ಹೊಳ್ಳ, ಆದರ್ಶ ಕಾರಂತ್, […]
‘ಎಸ್.ಡಿ.ಎಂ. ನೆನಪಿನಂಗಳ’ದ ಹದಿನಾರನೇ ಕಂತಿನ ಕಾರ್ಯಕ್ರಮ

ಬೆಳ್ತಂಗಡಿ: ಮಾಡುವ ಕೆಲಸದಲ್ಲಿ ತೃಪ್ತಿ, ಆ ಕೆಲಸದ ಕುರಿತು ಆಳವಾದ ಅರಿವು ಹಾಗೂ ಜೀವನದಲ್ಲಿ ಶಿಸ್ತು, ಸಮಯಪ್ರಜ್ಞೆ ಇರುವುದು ಅಗತ್ಯ ಎಂದು ಹಿರಿಯ ಸಾಹಿತಿ ಹಾಗೂ ನಿವೃತ್ತ ಇಂಜಿನಿಯರ್ ಕುಮಾರಸ್ವಾಮಿ ಟಿ. ಹೇಳಿದರು.ಅವರು ಸೆಪ್ಟೆಂಬರ್ 30ರಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಹಿರಿಯ ವಿದ್ಯಾರ್ಥಿಗಳೊಂದಿಗೆ ಸಂವಾದ ಸರಣಿ ‘ಎಸ್ ಡಿ ಎಂ ನೆನಪಿನಂಗಳ’ದ ಹದಿನಾರನೇ ಕಂತಿನ ಕಾರ್ಯಕ್ರಮದಲ್ಲಿ ಅವರು ಪ್ರತಿಭಾನ್ವಿತ ವಿದ್ಯಾರ್ಥಿ ನಿತಿನ್ ಎಸ್.ಜೆ. (ದ್ವಿತೀಯ ಬಿ.ಎ.) ಅವರಿಗೆ […]
ಶ್ರಮದಾನದ ಮೂಲಕ ಕಿಂಡಿ ಅಣೆಕಟ್ಟಿನಲ್ಲಿ ಸಿಲುಕಿದ ಕಸಕಡ್ಡಿ-ಕೊಂಬೆಗಳ ತೆರವು

ಬೆಳ್ತಂಗಡಿ: ನಡ ಗ್ರಾಮದ ಬಸ್ರಾಯ ಕಿಂಡಿ ಅಣೆಕಟ್ಟಿನಲ್ಲಿ ನಲ್ಲಿ ಸಿಲುಕಿಕೊಂಡಂತಹ ಮರದ ಕೊಂಬೆ ಹಾಗೂ ಕಸಕಡ್ಡಿಗಳನ್ನು ಸ್ಥಳೀಯರ ಸಹಕಾರದಿಂದ ಶ್ರಮದಾನದ ಮೂಲಕ ತೆರವುಗೊಳಿಸಲಾಯಿತು.ನಡ ಗ್ರಾಮದ ಅಜಯನಗರ ಹಾಗೂ ಅಣ್ಣಪ್ಪ ಕೋಡಿಯ ನಿವಾಸಿಗರಾದ ಜೈಸನ್ ಡಿ’ಸೋಜ, ವಿಕ್ಟರ್ ಡಿ’ಸೋಜಾ, ವಿಜಯ್ ಪೌಲ್, ಶ್ಯಾಮ್ ಭಟ್, ಲಿಂಗಪ್ಪ, ಬಿನೋಯ್ ಹಾಗೂ ಬೆಳ್ತಂಗಡಿ ಸಿ.ಎ. ಬ್ಯಾಂಕ್ ನಿರ್ದೇಶಕ ಶ್ರೀನಾಥ್ ಕೆ.ಎಂ. ಮತ್ತಿತರರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಡ್ಯಾಮಿಗೆ ಆಗಲಿರುವ ತೊಂದರೆಯನ್ನು ಸರಿಪಡಿಸಲಾಯಿತು.
ನೇಜಿ ನಾಟಿ ಕಾರ್ಯಕ್ರಮ

ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ) ಉಜಿರೆಯ ರಾಷ್ಟ್ರೀಯ ಸೇವಾ ಯೋಜನೆಯ ಸುವರ್ಣ ಸಂಭ್ರಮಾಚಾರಣೆಯ ಹಿನ್ನೆಲೆಯಲ್ಲಿ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ಉಜಿರೆ ಇದರ ನೇತೃತ್ವದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ಪೋರ್ಟ್ಸ್ ಕ್ಲಬ್ ಉಜಿರೆ, ರೋಟರಿ ಕ್ಲಬ್ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ, ಅನಂತಪದ್ಮನಾಭ ದೇವಸ್ಥಾನ ಅನಂತೋಡಿ ಇದರ ವ್ಯವಸ್ಥಾಪನ ಸಮಿತಿ ಇವುಗಳ ಸಹಯೋಗದಲ್ಲಿ ಸುಮಾರು 500ಕ್ಕೂ ಮಿಕ್ಕಿ […]
ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರ

ಬೆಳ್ತಂಗಡಿ: ಧರ್ಮಸ್ಥಳದ ಕನ್ಯಾಡಿಯ ಯಕ್ಷ ಭಾರತಿ ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ತುಳು ಶಿವಳ್ಳಿ ಸಭಾ ಬೆಳ್ತಂಗಡಿ ಆಶ್ರಯದಲ್ಲಿ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆ, ಮಂಗಳೂರಿನ ಯೆನಪೋಯ ಮೆಡಿಕಲ್ ಕಾಲೇಜ್ ಆಸ್ಪತ್ರೆ ಮತ್ತು ಜುಲೈಕಾ ಕ್ಯಾನ್ಸರ್ ಆಸ್ಪತ್ರೆ ದೇರಳಕಟ್ಟೆಯ ಸಹಕಾರದಲ್ಲಿ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವು ಅಕ್ಟೋಬರ್ 13ರಂದು ಕನ್ಯಾಡಿಯ ಹರಿಹರಾನುಗ್ರಹ ಕಲ್ಯಾಣ ಮಂಟಪದಲ್ಲಿ ಜರಗಿತು.ಉಜಿರೆಯ ಕನಸಿನ ಮನೆ ‘ಲಕ್ಷ್ಮಿ ಗ್ರೂಪ್’ ಮಾಲಕ ಹಾಗೂ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್. […]
ಎಸ್.ಡಿ.ಎಂ. ಕಾಲೇಜಿನಲ್ಲಿ ಔದ್ಯಮಿಕ ಬೂಟ್ ಕ್ಯಾಂಪ್

ಬೆಳ್ತಂಗಡಿ: ಜನರ ಸ್ವಭಾವ, ಸಾಮಾಜಿಕ ಅಗತ್ಯತೆ ಮತ್ತು ಆದ್ಯತೆಗಳಿಗೆ ಅನುಗುಣವಾಗಿ ನೂತನ ವಿಚಾರಗಳನ್ನು ಹೊಳೆಸಿಕೊಳ್ಳುವ ಸಾಮರ್ಥ್ಯ ಔದ್ಯಮಿಕ ಪ್ರಯೋಗಶೀಲತೆಗೆ ಸಹಾಯಕವಾಗುತ್ತದೆ ಎಂದು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ್ ಹೆಗ್ಡೆ ಅಭಿಪ್ರಾಯಪಟ್ಟರು.ಅವರು ಅಕ್ಟೋಬರ್ 14ರಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಬಿ.ವೋಕ್ ರೀಟೇಲ್ ಅಂಡ್ ಸಪ್ಲೇ ಚೈನ್ ಮ್ಯಾನೇಜಮೆಂಟ್ ವಿಭಾಗ ಮತ್ತು ಉದ್ಯಮಶೀಲತೆ ಅಭಿವೃದ್ಧಿ ಘಟಕ ಸಹಯೋಗದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ‘ಆಲೋಚನೆಗಳಿಂದ […]
ಕರ್ನಾಟಕ ಆಯುಷ್ ಫೆಡರೆಷನ್ ಆಫ್ ಇಂಡಿಯಾ ಬೆಳ್ತಂಗಡಿ ಘಟಕದ ಪದಾಧಿಕಾರಿಗಳ ಪದಗ್ರಹಣ

ಬೆಳ್ತಂಗಡಿ: ಕರ್ನಾಟಕ ಆಯುಷ್ ಫೆಡರೆಷನ್ ಆಫ್ ಇಂಡಿಯಾದ (ಎ.ಎಫ್.ಐ.) ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಕ್ಟೋಬರ್ 13ರಂದು ಉಜಿರೆಯ ಓಷಿಯನ್ ಪರ್ಲ್ ಹೋಟೆಲ್‌ನ ಸಭಾಂಗಣದಲ್ಲಿ ಎ.ಎಫ್.ಐ. ಬೆಳ್ತಂಗಡಿ ಘಟಕದ ನೂತನ ಅಧ್ಯಕ್ಷೆ ಡಾ| ಸುಷ್ಮಾ ಡೋಂಗ್ರೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪದಗ್ರಹಣ ಸಭಾರಂಭವನ್ನು ಎ.ಎಫ್.ಐ. ದಕ್ಷಿಣಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಮಂಗಳೂರಿನ ಡಾ| ಕೃಷ್ಣ ಗೋಖಲೆ ನಿರ್ವಹಿಸಿಕೊಟ್ಟರು.ಮುಖ್ಯ ಅತಿಥಿಗಳಾಗಿ ಕೆ.ಎಂ.ಸಿ. ಆಸ್ಪತ್ರೆಯ ಖ್ಯಾತ ವೈದ್ಯರೂ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳೂ ಆಗಿರುವ ಡಾ| ಚಕ್ರಪಾಣಿ […]
ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ (ರಿ) ಬೆಂಗಳೂರು ಕೇಂದ್ರ ಸಂಘದ ಮೈಸೂರು ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಯಾಗಿ ಕೆ. ಜಯಕೀರ್ತಿ ಜೈನ್ ಧರ್ಮಸ್ಥಳ ಇವರನ್ನು ಸಂಘದ ರಾಜ್ಯ ಅಧ್ಯಕ್ಷರಾದ ಡಾ. ಎಲ್. ಭಯರಪ್ಪರವರು ನೇಮಕ ಮಾಡಿರುತ್ತಾರೆ.ಜಯಕೀರ್ತಿ ಜೈನ್‌ರವರು ಸುದೀರ್ಘ 25ವರ್ಷಗಳ ಕಾಲ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯ ಅಧ್ಯಕ್ಷರಾಗಿ ಸಂಘಕ್ಕೆ ಯಶಸ್ವಿ ನಾಯಕತ್ವ ಒದಗಿಸಿದ್ದರು. ಅಂತೆಯೇ 35 ವರ್ಷಗಳ ಸುದೀರ್ಘ ಅವಧಿಗೆ ದಕ್ಷಿಣ ಕನ್ನಡ ಜಿಲ್ಲಾ ಪಶು […]
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶರನ್ನವರಾತ್ರಿ ಮಹೋತ್ಸವ ಸಂಪನ್ನ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಶರನ್ನವರಾತ್ರಿ ಪ್ರಯುಕ್ತ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಅಕ್ಟೋಬರ್ 3ರಿಂದ ಅಕ್ಟೋಬರ್ 11ರ ಮಹಾನವಮಿವರೆಗೆ ಪ್ರತಿ ರಾತ್ರಿ ವಿಶೇಷ ಪೂಜೆ, ಬಲಿ ಉತ್ಸವ, ವಸಂತಮಂಟಪದಲ್ಲಿ ಪೂಜೆ, ಕನ್ನಿಕಾಪೂಜೆ, ಅಷ್ಟಾವಧಾನ ಸೇವೆ, ಅಕ್ಟೋಬರ್ 9ರ ಮೂಲಾನಕ್ಷತ್ರದಂದು ಚಂಡಿಕಾಯಾಗ ಹಾಗೂ ಅಕ್ಟೋಬರ್ 11ರವರೆಗೆ ಪಲ್ಲಕಿ ಉತ್ಸವ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ದೇವಸ್ಥಾನದ ಪ್ರವಚನ ಮಂಟಪದಲ್ಲಿ ಪ್ರತಿ ದಿನ ಸಂಜೆ ಗಂಟೆ 6ರಿಂದ 8ರವರೆಗೆ ನಾಡಿನ ಖ್ಯಾತ ಕಲಾವಿದರಿಂದ […]
‘ಭ್ರಷ್ಟ ಬಿಜೆಪಿ ಸರಕಾರ ತೊಲಗಿಸುವುದು ದುಡಿಯುವ ಜನರ ಕರ್ತವ್ಯ’

ಬೆಳ್ತಂಗಡಿ: ಇಂದು ನಮ್ಮ ದೇಶವನ್ನು ಆಳುತ್ತಿರುವ ಬಿಜೆಪಿಯ ನರೇಂದ್ರ ಮೋದಿ ಸರಕಾರ ಅತಿ ಭ್ರಷ್ಟ ಸರಕಾರವಾಗಿದ್ದು, ಇಂತಹ ಭ್ರಷ್ಟ ಮತ್ತು ಕಾರ್ಮಿಕ ವಿರೋದಿ ಸರಕಾರವನ್ನು ಹಿಮ್ಮೆಟ್ಟಿಸುವುದು ಭಾರತೀಯರ ಇಂದಿನ ಕರ್ತವ್ಯವಾಗಿದ್ದು; ಆ ಮೂಲಕ ರೈತರ, ಕಾರ್ಮಿಕರ ಬದುಕಿನ ರಕ್ಷಣೆ ಮಾಡಬೇಕಾದ್ದು ಅತೀ ಅಗತ್ಯ ಕೆಲಸವಾಗಿದೆ ಮತ್ತು ಅದು ಸಿಪಿಐ(ಎಂ) ಬೆಳವಣಿಗೆಯಿಂದಷ್ಟೇ ಸಾದ್ಯ ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೃಷ್ಣಪ್ಪ ಕೊಂಚಾಡಿ ಹೇಳಿದರು. ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ […]