ಶಾಲೆಗಳು ಕ್ವಾರಂಟೈನ್ ಸೆಂಟರ್-ಪೂಂಜ

ಶಾಲಾಗಳು ಕ್ವಾರಂಟೈನ್ ಸೆಂಟರ್-ಪೂಂಜಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಅಲೆ ಹರಡುವಿಕೆ ತಡೆಯಲು ಸಮರೋಪಾದಿಯಲ್ಲಿ ಸರಕಾರಿ ಯಂತ್ರವನ್ನು ಕಾರ್ಯಾಚರಣೆಗೆ ಇಳಿಸಲು ಮುಂದಾಗಿರುವ ಶಾಸಕ ಹರೀಶ್ ಪೂಂಜ; ಇದೀಗ ಬೆಂಗಳೂರು ಸಹಿತ ಪರವೂರುಗಳಲ್ಲಿ ಉದ್ಯೋಗದಲ್ಲಿದ್ದು, ಲಾಕ್‌ಡೌನ್ ಸಂದರ್ಭ ತಾಲೂಕಿನ ಹಳ್ಳಿಗಳಿಗೆ ಬರಲಿರುವ ವ್ಯಕ್ತಿಗಳು ಒಂದು ವಾರ ಕಾಲ ತಮ್ಮತಮ್ಮ ಊರುಗಳ ಶಾಲೆಯಲ್ಲಿ ಕ್ವಾರಂಟೈನ್‌ಗೊಳಗಾಗುವ ಮೂಲಕ ತಾಲೂಕಿನ ಹಳ್ಳಿಗಳಲ್ಲಿ ಕೊರೋನಾ ಹರಡುವಿಕೆ ತಡೆಯಲು ತಾಲೂಕು ಆಡಾಳಿತದೊಂದಿಗೆ ಸಹಕರಿಸಲು ಕೋರಿದ್ದಾರೆ. ಎಪ್ರಿಲ್ 27ರಂದು ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ […]

ಮೂಡುಬಿದಿರೆಯಲ್ಲಿ ಆಕರ್ಷಣೆಯ ಕೇಂದ್ರ ದಾನ ಮಾಲ್

ದಾನ ಮಾಲ್

ಮೂಡಬಿದಿರೆ: ವಿಸ್ತಾರವಾದ, ಅತೀ ಸುಂದರವಾದ ವಾಣಿಜ್ಯ ಸಂಕೀರ್ಣ ” ದಾನ ಮಾಲ್ ” ಇಂದು ಲೋಕಾರ್ಪಣೆಗೊಳ್ಳಲಿದೆ.ಗಲ್ಫ್ ರಾಷ್ಟ್ರಗಳಲ್ಲಿರುವ ವಾಣಿಜ್ಯ ಸಂಕೀರ್ಣಗಳ ಮಾದರಿಯಲ್ಲಿ ಮೂಡುಬಿದಿರೆ ಜುಮ್ಮಾ ಮಸೀದಿಯ ಸನಿಹದಲ್ಲಿ ಇರುವೈಲು ರಸ್ತೆಯಲ್ಲಿ ಈ ಅತ್ಯಾಕರ್ಷಕ ವಾಣಿಜ್ಯ ಸಂಕೀರ್ಣ ನಿರ್ಮಾಣವಾಗಿದೆ.ಸುಮಾರು 85 ಸಾವಿರ ಚದರ ಅಡಿ ವಿಸ್ತೀರ್ಣದ ದಾನ ಮಾಲ್ ನ ಬೇಸ್ ಮೆಂಟ್ ನಲ್ಲಿ 55 ಕಾರುಗಳು ಮತ್ತು 35 ದ್ವಿಚಕ್ರ ವಾಹನಗಳು ತಂಗಲು ಅವಕಾಶ ಸ್ಥಳಾವಕಾಶವಿದೆ. ಒಟ್ಟು ನಾಲ್ಕು ಅಂತಸ್ತಿನ ಈ ಕಟ್ಟಡದ ಮೊದಲ 3 ಅಂತಸ್ತುಗಳಲ್ಲಿ […]

ಕಸ ವಿಲೇವಾರಿ ಘಟಕದಲ್ಲಿ ಅರ್ಧಂಬರ್ಧ ವಿಲೇವಾರಿ : ಸ್ಥಳೀಯರು ಗರಂ

ಮೂಡುಬಿದಿರೆ : ಕರಿಂಜೆಯಲ್ಲಿ ರಾಶಿ ಹಾಕಲಾಗುತ್ತಿವ ಕಸ ಗಬ್ಬೆದ್ದು ನಾರುತ್ತಿರುವ ಹಿನ್ನೆಲೆಯಲ್ಲಿ ಕರಿಂಜೆ ಕಸ ವಿಲೇವಾರಿ ಘಟಕದ ಅವ್ಯವಸ್ಥೆ ಬಗ್ಗೆ ಈಗಾಗಲೇ ಹಲವಾರು ದಿನಗಳಿಂದ ದೂರುಗಳು ಬರುತಿದ್ದು, ಕೆಲ ದಿನಗಳ ಹಿಂದೆ ಈ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಮತ್ತು ಸಾರ್ವಜನಿಕವಾಗಿ ಮೂಡಬಿದಿರೆ ಪುರಸಭೆಗೆ ಸಾರ್ವಜನಿಕರು ಚೆನ್ನಾಗಿ ಮಂಗಳಾರತಿ ಎತ್ತಿದ್ದಾರೆ. ಜನವರಿ 31ರಂದು ಒಂದು ಜೆಸಿಬಿ ಮತ್ತು ಹಿಟಾಚಿ ಮೂಲಕ ಈ ಘನತ್ಯಾಜ್ಯ ಘಟಕದಲ್ಲಿ ಕಸವನ್ನು ಅವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಒಂದು ಪ್ರಯತ್ನ ನಡೆದಿದ್ದು, ಈ ಬಗ್ಗೆ ಮಾಹಿತಿ […]

ಗಬ್ಬೆದ್ದು ನಾರುತ್ತಿರುವ ಕರಿಂಜೆ ಕಸ ವಿಲೇವಾರಿ ಘಟಕ

ಮೂಡುಬಿದಿರೆ: ಮೂಡುಬಿದಿರೆಯನ್ನು ಸ್ವಚ್ಛಗೊಳಿಸುವ ಕಾರ್ಯ ಸ್ಥಳೀಯ ಪುರಸಭೆ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ನಡೆಯುತ್ತಿದೆ. ಜವಾಬ್ದಾರಿಯನ್ನು ಮರೆತಿರುವ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಒಳ್ಳೆಯ ಉದ್ದೇಶವಿಟ್ಟು ಸ್ಥಾಪಿಸಲಾಗಿರುವ ಕರಿಂಜೆಯ ಕಸ ವಿಲೇವಾರಿ ಘಟಕ ಗಬ್ಬೆದ್ದು ನಾರುತ್ತಿದ್ದು, ಪರಿಸರದಲ್ಲಿ ವಾಸಿಸುವ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯನ್ನೆದುರಿಸುತ್ತಿದ್ದಾರೆ. ಹಲವು ದಿನಗಳಿಂದ ಕರಿಂಜೆ ಕಸ ವಿಲೇವಾರಿ ಘಟಕದ ಸುತ್ತಲಿನ ಪ್ರದೇಶದಲ್ಲಿ ಕಸದ ರಾಶಿ ತಂದು ಹಾಕಲಾಗುತ್ತಿದೆ. ಈ ಪರಿಸರ ದುರ್ವಾಸನೆಯಿಂದ ತುಂಬಿದ್ದು ಈ ಪರಿಸರದಲ್ಲಿ ವಾಸಿಸುವ ಜನ ಮೂಗು ಮುಚ್ಚಿ ತಿರುಗುವಂತಾಗಿದೆ. ಈ […]

ಮಾರೂರಿನಲ್ಲಿ ಮದ್ಯದಂಗಡಿಗೆ ಪರವಾನಿಗೆ -ಅಧಿಕಾರಿಗಳ ಬೆವರಿಳಿಸಿದ ಕಾಂಗ್ರೆಸ್ ಪ್ರತಿಭಟನೆ

ಮೂಡುಬಿದಿರೆ: ಇಲ್ಲಿನ ಶಾಸಕ ಉಮಾನಾಥ ಎ. ಕೋಟ್ಯಾನ್ ಅವರ ಆಪ್ತರೊಬ್ಬರಿಗೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಮಾರೂರಿನಲ್ಲಿ ಎಂ.ಎಸ್.ಐ.ಎಲ್. ಪರವಾನಿಗೆಯ ಮದ್ಯದಂಗಡಿ ತೆರೆಯಲು ಅನುಮತಿ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ನೇತೃತ್ವದಲ್ಲಿ ಇಲ್ಲಿನ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಜನವರಿ 22ರ ಬೆಳಿಗ್ಗೆ 10-30ಕ್ಕೆ ಸರಿಯಾಗಿ ಪ್ರತಿಭಟನೆ ನಡೆಸುವುದೆಂದು ತೀರ್ಮಾನಿಸಿ, ನಮ್ಮ ಮನವಿ ಸ್ವೀಕರಿಸಿ ಎಂದು ತಹಶಿಲ್ದಾರರಿಗೆ ಮೊದಲೇ ತಿಳಿಸಲಾಗಿತ್ತು. ಸಮಯಕ್ಕೆ ಸರಿಯಾಗಿ ತಾಲೂಕು ಕಚೇರಿ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು […]

ನಾರಾವಿ ದೇಗುಲದ ವ್ಯವಸ್ಥಾಪನಾ ಸಮಿತಿಗೆ ಆಯ್ಕೆ.

ಬೆಳ್ತಂಗಡಿ: ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಸಭೆಯು ಜನವರಿ 18ರಂದು ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಡೆಯಿತು ಆಡಳಿತ ಮೊಕ್ತೇಸರರಾಗಿ ನಿರಂಜನ ಬಿ. ಆಜ್ರಿ ರಾಮೆರಗುತ್ತು ನಾರಾವಿ ಆಯ್ಕೆಯಾದರು. ಸಹ ಮೊಕ್ತೇಸರರಾದ ದೇವಸ್ಥಾನದ ಪ್ರಧಾನ ಅರ್ಚಕರಾದ ವಿ. ಕೃಷ್ಣತಂತ್ರಿ, ಪ್ರಸಾದ್ ಬಿ. ಶೆಟ್ಟಿ, ಉದಯ ಕುಮಾರ್ ಹೆಗ್ಡೆ, ಡಾಕಯ್ಯ ಪೂಜಾರಿ, ವಸಂತಿ ನಾರಾಯಣ ಪೂಜಾರಿ, ಅರ್ಪಿತಾ ವಸಂತ ಆಚಾರ್ಯ ಸಭೆಯಲ್ಲಿ ಭಾಗವಹಿಸಿದ್ದರು.

ಮತ‌ಎಣಿಕೆ ಕೇಂದ್ರದ ಬಳಿ‌ ರಾಷ್ಟ್ರದ್ರೋಹಿಗಳಿಂದ ಪಾಕಿಸ್ತಾನಪರ ಘೋಷಣೆ.ರಾಷ್ಟ್ರದ್ರೋಹಿಗಳ ಬಂಧನಕ್ಕೆ ಆಗ್ರಹ.

*ಬಿಗ್ ಬ್ರೇಕಿಂಗ್ ನ್ಯೂಸ್ * ಬೆಳ್ತಂಗಡಿ: ಡಿಸೆಂಬರ್ 30ರಂದು ಬೆಳ್ತಂಗಡಿ ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆಯ ಮತಗಳ ಎಣಿಕೆ ಕಾರ್ಯ ನಡೆಯುತ್ತಿರುವ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಎದುರುಗಡೆ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು ತಮ್ಮ ಸಂಘಟನೆಯ ಧ್ವಜ ಹಿಡಿದು ಸಹಸ್ರಾರು ಮಂದಿ ಸಾರ್ವಜನಿಕರ ನಡುವೆಯೇ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿ ರಾಷ್ಟ್ರದ್ರೋಹದ ವಿಕೃತಿ ಮೆರೆದರು. ಸ್ಥಳದಲ್ಲಿದ್ದ ಕೇಸರಿ ಶಾಲು ಧರಿಸಿದ್ದ ಸಹಸ್ರಾರು ಸಂಖ್ಯೆಯ ಹಿಂದು ಕಾರ್ಯಕರ್ತರು ಈ ಸಂದರ್ಭದಲ್ಲಿ ಉದ್ವೇಗಕ್ಕೆ ಒಳಗಾಗದೇ ತಾಳ್ಮೆ ಪ್ರದರ್ಶಿಸಿದ್ದು ಸಂಭಾವ್ಯ […]

ದೀಪೋತ್ಸವ ಪ್ರಯುಕ್ತ ಭಜನಾ ಪಾದಯಾತ್ರೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಯಲ್ಲಿ ಕಾರ್ತಿಕ ಮಾಸದ ಶುಭ ಸಂದರ್ಭದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಗಳು ಡಿಸೆಂಬರ್ 10ರಿಂದ 14ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇಗುಲದ ದ್ವಾರದಿಂದ ಧರ್ಮಸ್ಥಳದವರೆಗೆ 8ನೇ ವರ್ಷದ ಪಾದಾಯಾತ್ರೆ ಡಿಸೆಂಬರ್ 10ರಂದು ನಡೆಯಿತು.ಉಜಿರೆ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾl ಎಲ್.ಹೆಚ್. […]

‘ನಾಯಕತ್ವ ಬೆಳೆಯಲು ತರಬೇತಿ ಅಗತ್ಯ’

ಬೆಳ್ತಂಗಡಿ: ಅಂತಾರಾಷ್ಟ್ರೀಯ  ಕಾರಿತಾಸ್ ಸಂಸ್ಥೆಯ ಪ್ರಾಯೋಜಕತ್ವ ದಲ್ಲಿ, ಕರ್ನಾಟಕ ರೀಜನಲ್ ಆರ್ಗನೈಜೇಷನ್ ಫಾರ್ ಸೋಶಿಯಲ್ ಸರ್ವಿಸ್ (ಕ್ರಾಸ್) ಸಂಸ್ಥೆ ಬೆಂಗಳೂರು ಇವರ ಮೂಲಕ ಡಿ.ಕೆ.ಆರ್.ಡಿ.ಎಸ್ ಸಂಸ್ಥೆ ಬೆಳ್ತಂಗಡಿ ಇದರ ಸಿಬ್ಬಂದಿ ಮತ್ತು ಸ್ವಯಂ ಸೇವಕರಿಗೆ ಕಾರಿತಾಸ್ ಇಂಡಿಯಾದ ಪ್ರಮುಖ ಕಾರ್ಯತಂತ್ರಗಳ ಸ್ತಂಭಗಳ ಮತ್ತು ವಿಧಾನಗಳ ಕುರಿತು ತರಬೇತಿ ಆಯೋಜಿಸಲಾಗಿತ್ತು.ಈ ತರಬೇತಿಯನ್ನು ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂ. ಬಿನೋಯಿ ಏ.ಜೆ. ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮ ಮಟ್ಟದಲ್ಲಿ ನಾಯಕ ನಾಯಕಿಯರು ಬೆಳೆದು ಸಮಾಜಮುಖಿ ಕೆಲಸ ಮಾಡಲು ತರಬೇತಿಗಳ ಅಗತ್ಯವಿದೆ. ಸಮಾಜ […]

ರಾಷ್ಟ್ರ ಪುನರ್‌ ನಿರ್ಮಾಣದ ಕಲ್ಪನೆ ಸಾಕಾರವಾಗಲಿ.ವೇಣೂರಿನಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಉದ್ಘಾಟಿಸಿ ಶಾಸಕ ಪೂಂಜಾ.

ಬೆಳ್ತಂಗಡಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್‌ರ ಕಲ್ಪನೆ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯ ಸ್ವಾವಲಂಬಿ-ಸ್ವಾಭಿಮಾನಿ ಭಾರತ್ ನಿರ್ಮಾಣವನ್ನು ದೃಷ್ಟಿಯಲ್ಲಿರಿಸಿ; ಯುವಕರಿಗೆ ಅವರವರ ಊರುಗಳಲ್ಲೇ ಸ್ವ-ಉದ್ಯೋಗ ಮಾಡಲು ಅವಕಾಶ ಕಲ್ಪಿಸಲು ಈ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ ಪೂರಕ. ನಮ್ಮ ಜಿಲ್ಲೆಯಲ್ಲಿ ಈಗಾಗಲೇ ಉದ್ಯೋಗ ನೈಪುಣ್ಯ ತರಬೇತಿ ಪಡೆದ ಸುಮಾರು 4,000ಯುವಕರ ಪೈಕಿ ಸುಮಾರು 1,200ಯುವಕರು ತಮ್ಮತಮ್ಮ ಊರುಗಳಲ್ಲೇ ಸ್ವ-ಉದ್ಯೋಗ ಆರಂಭಿಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆ ಮೂಲಕ ರಾಷ್ಟ್ರ ಪುನರ್ ನಿರ್ಮಾಣ […]