ಘನತ್ಯಾಜ್ಯ ವಿಲೇವಾರಿ ಘಟಕದ ಬ್ರ್ಯಾಂಡಿಗ್ ಲೋಕಾರ್ಪಣೆ

ಧರ್ಮಸ್ಥಳ: ಧರ್ಮಸ್ಥಳ ಗ್ರಾಮ ಪಂಚಾಯತ್ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆ ‘ಸ್ವಚ್ಛೋತ್ಸವ -ನಿತ್ಯೋತ್ಸವ’ ಮಾಸಾಚರಣೆ ಪ್ರಯುಕ್ತ ಧರ್ಮಸ್ಥಳ ಗ್ರಾಮ ಪಂಚಾಯತ್ ಘನತ್ಯಾಜ್ಯ ವಿಲೇವಾರಿ ಘಟಕದ ಏಕರೂಪದ ಬ್ರ್ಯಾಂಡಿಗ್ ಲೋಕಾರ್ಪಣೆ ಕಾರ್ಯಕ್ರಮ ಅಕ್ಟೋಬರ್ 30 ರಂದು ಜರುಗಿತು.ಕಾರ್ಯಕ್ರಮವನ್ನು ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡುತ್ತಾ, ಸ್ವಚ್ಛತೆ ಕಡೆಗೆ ಆದಷ್ಟು ಗಮನ ನೀಡಬೇಕು. ನಮ್ಮ ಸುತ್ತಮುತ್ತಲ ಪ್ರದೇಶದ ಸ್ವಚ್ಛತೆಯಲ್ಲಿ ನಮ್ಮ ಪಾತ್ರ ಪ್ರಾಮುಖ್ಯತೆ ವಹಿಸಿದೆ. ಪಂಚಾಯತ್ ಮಟ್ಟದ ಎಲ್ಲಾ ಅಧಿಕಾರಿಗಳು ಸ್ವಚ್ಛತೆ ಬಗ್ಗೆ ಹೆಚ್ಚಿನ […]

ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ.

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಎಸ್.ಟಿ. ಮೋರ್ಚಾದ ಆಶ್ರಯದಲ್ಲಿ ಅಕ್ಟೋಬರ್ 30ರಂದು ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.ಬೆಳ್ತಂಗಡಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪರ್ಷನೆ ಮಾಡಿ ಮಾತನಾಡುತ್ತಾ, ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮಹನೀಯರ ಆದರ್ಶಗಳನ್ನು ಮುಂದಿಟ್ಡುಕೊಂಡು ಆ ವರ್ಗಗಳಿಗೆ ಶಕ್ತಿ ನೀಡುವ ಕೆಲಸ ಮಾಡುತ್ತಿದೆ. ಮಹರ್ಷಿ ವಾಲ್ಮೀಕಿ ನಮಗೆ ಆ ದೃಷ್ಠಿಯಿಂದ ಆದರ್ಶಪ್ರಾಯರು ಎಂದರು.ಬಿಜೆಪಿ ಮಂಡಲ ಉಪಾಧ್ಯಕ್ಷ ಸೀತಾರಾಮ […]

ಬೆಳ್ತಂಗಡಿಯಲ್ಲಿ ನಕಲಿ‌ ನೋಟು ಪತ್ತೆ

ಬೆಳ್ತಂಗಡಿ : ಇತ್ತೀಚಿನ ದಿನಗಳಲ್ಲಿ ಖೋಟಾನೋಟು ಚಲಾವಣೆ ಪ್ರಕರಣಗಳು ಹೆಚ್ಚುತ್ತಿದ್ದು, ಈ ಜಾಲದ ಬಾಹುಗಳು ಬೆಳ್ತಂಗಡಿ ಚಾಚಿಕೊಂಡ ಬಗ್ಗೆ ತಿಳಿದು ಬಂದಿದೆ.ಬೆಳ್ತಂಗಡಿ ತಾಲೂಕಿನ ಬಳೆಂಜ ಗ್ರಾಮದ ಕಾಪಿನಡ್ಕದ ಅಲಡ್ಕ ಚಿಕನ್ ಸೆಂಟರ್ ಮಾಲಕ ದೇವದಾಸ್ ಎಂಬರಿಗೆ ಒಂದು ಬೆಳಿಗ್ಗೆ ಕಾಪನಡ್ಕ ಹೋಟೆಲ್ ಮಾಲಕರೊಬ್ಬರು ವ್ಯವಹಾರ ಸಮಯದಲ್ಲಿ 100 ರೂಪಾಯಿಯ 3 ಹೊಸ ನೋಟು ನೀಡಿದ್ದರು. (300 ರೂಪಾಯಿ) ಅವರು ತನ್ನ ಚಿಕನ್ ಅಂಗಡಿಯಲ್ಲಿ ವ್ಯವಹಾರದ ಸಮಯ ಇದೇ ನೋಟನ್ನು ಬೇರೆಯರಿಗೆ ನೀಡಿದಾಗ ಅವರಿಗೆ ಒಂದು ನೂರು ರೂಪಾಯಿ […]

ಕಡಿರುದ್ಯಾವರದಲ್ಲಿ ತೋಟಕ್ಕೆ ನುಗ್ಗಿದ ಆನೆ

ಬೆಳ್ತಂಗಡಿ: ಕಾಡಿನಿಂದ ತೋಟಕ್ಕೆ ನುಗ್ಗಿದ ಆನೆಗಳ ಹಿಂಡಿನಲ್ಲಿದ್ದ ಆನೆಮರಿಯೊಂದು ಹಿಂದೆ ಹೋಗಲು ದಾರಿ ಕಾಣದೇ ತೋಟದಲ್ಲಿ ಸಿಲುಕಿಕೊಂಡ ಘಟನೆ ಅಕ್ಟೋಬರ್ 29ರಂದು ರಾತ್ರಿ ಕಡಿರುದ್ಯಾವರದಲ್ಲಿ ನಡೆದಿದೆ.ಕಡಿರುದ್ಯಾವರ ಗ್ರಾಮದ ಡೀಕಯ್ಯ ಗೌಡರವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು ಕೃಷಿಯನ್ನು ತಿಂದು ಸಂಪೂರ್ಣ ನಾಶಗೊಳಿಸಿದ್ದು, ನಂತರ ತೋಟದಿಂದ ಕಾಡಿಗೆ ಮರಳುವ ಸಮಯದಲ್ಲಿ ಮರಿಯಾನೆಗೆ ಹೋಗಲು ಸಾಧ್ಯವಾಗದೆ ತೋಟದಲ್ಲೇ ಸಿಲುಕಿದ ಪ್ರಕರಣ ಬೆಳಕಿಗೆ ಬಂದಿದೆ. ತೋಟದಲ್ಲಿ ಮರಿಯಾನೆ ಸಿಲುಕಿಕೊಂಡಿದ್ದರಿಂದ ಆನೆಗಳ ಹಿಂಡು ತೋಟದ ಸಮೀಪದ ಕಾಡಿನಲ್ಲಿ ಬೀಡುಬಿಟ್ಟಿತ್ತು. ಬೆಳಗ್ಗೆ ಡೀಕಯ್ಯ ಗೌಡರವರು […]

ಬೆಳ್ತಂಗಡಿ ಕಾರಿನೊಳಗೆ ನಾಗರಹಾವು ಪತ್ತೆ

ಬೆಳ್ತಂಗಡಿ : ಬೆಳ್ತಂಗಡಿಯಲ್ಲಿ ಸಂಭಾವ್ಯ ದೊಡ್ಡ ಅನಾಹುತ ಒಂದು ಸುದೈವವಶಾತ್ ತಪ್ಪಿದಂತಾಗಿದೆ. ಕಾರಿನಲ್ಲಿ ಅಡಗಿದ್ದ ನಾಗರಹಾವು ನೋಡಿ ಎಚ್ಚೆತ್ತು ಹೊರಬಂದ ದಂಪತಿ ಹಾಗೂ ಮಗ ಗಂಡಾಂತರದಿಂದ ಪಾರಾಗಿ ನಿಟ್ಟುಸಿರು ಬಿಟ್ಟಿದ್ದಾರೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಪುತ್ರಬೈಲು ನಿವಾಸಿಗಳಾದ ಪ್ರವೀಣ್ ಪತ್ನಿ ಮೀನಾ ಮತ್ತು ಮಗ ಕೃತಿಕ್ ಮೂವರು ಬೆಳ್ತಂಗಡಿಯ ಮುಳಿಯ ಜುವೆಲರ್ಸ್ ಮುಂಭಾಗದಲ್ಲಿ ತಮ್ಮ ಕಾರು ಪಾರ್ಕ್ ಮಾಡಿ ಅಮರ್ ಡ್ರಗ್ ಹೌಸ್‌ಗೆ ಮೆಡಿಸಿನ್ ಖರೀದಿಸಲು ಹೋಗಿದ್ದರು. ಹಿಂತುರುಗಿ ಬಂದು ಕಾರಿನಲ್ಲಿ ಪ್ರವೀಣ್ ಚಾಲಕನ ಸೀಟಿನಲ್ಲಿ […]

ಕಾಳಜಿ ರಿಲೀಫ್ ಫಂಡ್‌ಗೆ ದೇಣಿಗೆ

ಬೆಳ್ತಂಗಡಿ: ಬೆಳ್ತಂಗಡಿಯ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ ವತಿಯಿಂದ ಬೆಳ್ತಂಗಡಿ ಕಾಳಜಿ ರಿಲೀಫ್ ಫಂಡ್‌ಗೆ 1 ಲಕ್ಷ ರೂಪಾಯಿ ಧನಸಹಾಯದ ಚೆಕ್ಕನ್ನು ಸುಬ್ರಹ್ಮಣ್ಯ ಸ್ಥಾನಿಕ ಸಭಾ ಅಧ್ಯಕ್ಷರಾದ ದಿನೇಶ್ ಕುಮಾರ್ ಎಂ.ಎಸ್. ರಿಲೀಫ್ ಫಂಡ್‌ನ ಅಧ್ಯಕ್ಷರಾದ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾರಿಗೆ ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಅಕ್ಟೋಬರ್ 29ರಂದು ಹಸ್ತಾಂತರಿಸಿದರು.ಸುಬ್ರಹ್ಮಣ್ಯ ಸ್ಥಾನಿಕ ಸಭಾ ಕೋಶಾಧಿಕಾರಿ ರೇಖಾ ಸುಧೀರ್ ರಾವ್, ಕಾಳಜಿ ರಿಲೀಫ್ ಫಂಡ್ ಕಾರ್ಯದರ್ಶಿ ಬಿ. ಕೆ. ಧನಂಜಯ ರಾವ್ ಈ ಸಂದರ್ಭದಲ್ಲಿ ಹಾಜರಿದ್ದರು.

ವಿಶ್ವ ಪೋಲಿಯೋ ದಿನಾಚರಣೆ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ ಹಾಗೂ ರಿಕ್ಷಾ ಮಾಲಕ ಹಾಗೂ ಚಾಲಕರ ಸಂಘ ಉಜಿರೆ ಇವರ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 24ರಂದು ವಿಶ್ವ ಪೋಲಿಯೋ ದಿನಾಚರಣೆಯನ್ನು ಉಜಿರೆಯ ಕೃಷ್ಣಾನುಗ್ರಹ ಸಭಾಂಗಣದ ಆವರಣದಲ್ಲಿ ನಡೆಸಲಾಯಿತು.ಈ ಸಂಧರ್ಭದಲ್ಲಿ ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್‌ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‌ಸಿಂಹ ನಾಯಕ್, ರೋಟರಿ ಜಿಲ್ಲೆಯ ಪಲ್ಸ್ ಪೋಲಿಯೊದ ಸಹಾಯಕ ಚೇರ್ಮನ್ ಸುರೇಂದ್ರ ಕಿಣಿ, ರೋಟರಿ ಕ್ಲಬ್ ಬೆಳ್ತಂಗಡಿಯ ಪಲ್ಸ್ ಪೋಲಿಯೊ ಚೇರ್ಮನ್ ಡಾ. ರಾಘವೇಂದ್ರ ಪಿದಮಲೆ, ರೋಟರಿ ಕ್ಲಬ್ ಬೆಳ್ತಂಗಡಿಯ […]

ದೇರಾಜೆ ಕೃತಿ ’ಕುರುಕ್ಷೇತ್ರಕ್ಕೊಂದು ಆಯೋಗ’ ಲೋಕಾರ್ಪಣೆ

ಬೆಳ್ತಂಗಡಿ: ದೇರಾಜೆ ಸೀತಾರಾಮಯ್ಯ ಕೃತಿ ’ಕುರುಕ್ಷೇತ್ರಕ್ಕೊಂದು ಆಯೋಗ’ ಇದರ ತೃತೀಯ ಮುದ್ರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರದ‌ ಬೀಡಿನಲ್ಲಿ ಬಿಡುಗಡೆಗೊಳಿಸಿದರು.ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಡಾ. ಹೆಗ್ಗಡೆಯವರು ಮಹಾಭಾರತದಲ್ಲಿ ಬರುವ ಮಹಾನ್‌ ವ್ಯಕ್ತಿಗಳ ಹಾಗೂ ಘಟನೆಗಳ ಮೇಲೆ ವಿಮರ್ಶಾತ್ಮಕವಾದ ಹೊಸ ಬೆಳಕನ್ನು ಈ ಕೃತಿಯಲ್ಲಿ ಲೇಖಕರು ಹಾಯಿಸಿದ್ದಾರೆ. ಚಮತ್ಕಾರಿಯಾದ ಕಲ್ಪನಾವಿಲಾಸದಿಂದ ಈ ಗ್ರಂಥವನ್ನು ರಚಿಸಿದ್ದಾರೆ. ಮಹಾಭಾರತದ ಘಟನಾವಳಿಗಳ ಮೇಲೆ ನೂತನ ಪ್ರಕಾಶವನ್ನು ಬೀರುವ ಈ ಗ್ರಂಥದಿಂದ ಧಾರ್ಮಿಕ ಜಿಜ್ಞಾಸೆಯು ಜಾಗೃತಗೊಂಡೀತು […]

ರಾಘವೇಂದ್ರ ಹೊಳ್ಳರಿಗೆ ಪಿಎಚ್‌ಡಿ ಗೌರವ

ಬೆಳ್ತಂಗಡಿ: ಉಜಿರೆಯ ಡಾ. ರಾಘವೇಂದ್ರ ಹೊಳ್ಳ ಅವರು ಭೌತಶಾಸ್ತ್ರ ವಿಭಾಗದಲ್ಲಿ “ಇನ್ವೆಸ್ಟಿಗೇಷನ್ ಆಫ್ ಟೆಕ್ನಿಕಲ್ ಅಂಡ್ ಡೋಸಿಮೆಟ್ರಿಕ್ ಆಸ್ಪೆಕ್ಟ್ಸ್ ಆಫ್ ರೆಸ್ಪಿರೇಟರಿ ಮೋಷನ್ ಅಂಡ್ ಎ ನ್ಯೂ ಫಿಲ್ಮ್ ಸ್ಲೋಪ್ ಮೆಥಡ್ ಫಾರ್ ಸ್ಮಾಲ್ ಫೀಲ್ಡ್ ಡೋಸಿಮೆಟ್ರಿ” ಎಂಬ ವಿಷಯದ ಕುರಿತು ಸಂಶೋಧನೆ ಕೈಗೊಂಡು ಸಲ್ಲಿಸಿದ ಸಂಪ್ರಬಂಧವನ್ನು ಮನ್ನಿಸಿ ಕೊಯಂಬತ್ತೂರಿನ ಕಾರುಣ್ಯ ವಿಶ್ವವಿದ್ಯಾಲಯವು ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ.  ಇವರು ಉಜಿರೆಯ ಎಸ್.ಡಿ.ಎಂ ಕಾಲೇಜಿನಲ್ಲಿ ಬಿ.ಎಸ್ಸಿ ಪದವಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್ಸಿ ಪದವಿ ಹಾಗೂ ಮುಂಬಯಿಯ ಹೋಮಿ […]

ನೊಚ್ಚ ಶೆಟ್ಟರಿಗೆ ಕಲಾ ತಂಡದ ಗೌರವ

ಬೆಳ್ತಂಗಡಿ: ಅಳದಂಗಡಿಯ ಶ್ರೀ ಗುರು ಸಭಾಭವನದಲ್ಲಿ ಅಕ್ಟೋಬರ್ 26ರಂದು ನಡೆದ ಸತತ 37 ವರುಷ ಸೇವೆ ಸಲ್ಲಿಸಿ ಅಕ್ಟೋಬರ್ 31ರಂದು ನಿವೃತ್ತ ರಲ್ಲಿರುವ ಶಿರ್ಲಾಲಿನ ಸುಲ್ಕೇರಿಮೊಗ್ರು ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಎಚ್. ನಿತ್ಯಾನಂದ ಶೆಟ್ಟಿ ನೊಚ್ಚರ ಅಭಿನಂದನಾ ಸಮಾರಂಭದಲ್ಲಿ ಅಳದಂಗಡಿಯ ‘ನಮ ಮಾತೆರ್ಲ ಒಂಜೇ ಕಲಾತಂಡ’ದವರಿಂದ ನೊಚ್ಚ ಶೆಟ್ಟರಿಗೆ ಕಲಾತಂಡದ ಪ್ರತಿ ಕಾರ್ಯಕ್ರಮಕ್ಕೆ ನಿರಂತರ ಸಹಕಾರ ನೀಡಿದಕ್ಕಾಗಿ ನೆನಪಿನ ಕಾಣಿಕೆ ನೀಡಿ ತಂಡದ ವತಿಯಿಂದ ಗೌರವಿಸಲಾಯಿತು.ಈ ಸಮಯದಲ್ಲಿ ತಂಡದ ಅಧ್ಯಕ್ಷರಾದ […]