ಧರ್ಮಾಧಿಕಾರಿ ಡಾ. ಹೆಗ್ಗಡೆಯವರಿಗೆ ಗೌರವಪೂರ್ವಕ ಅಭಿನಂದನೆ.

ಬೆಳ್ತಂಗಡಿ: ಸೌತ್ ಕೆನರಾ ಫೋಟೊಗ್ರಾಫರ್ಸ್ ಅಸೋಸಿಯೇಷನ್ ದ. ಕ. ಹಾಗೂ ಉಡುಪಿ ಜಿಲ್ಲೆ ಇದರ ಬೆಳ್ತಂಗಡಿ ವಲಯದ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಪಟ್ಟಾಭಿಷೇಕದ 53ನೇ ವರ್ಷದ ವರ್ಧಂತ್ಯತ್ಸವದ ಶುಭ ಸಂದರ್ಭ ಧರ್ಮಸ್ಥಳಕ್ಕೆ ಬೇಟಿ ನೀಡಿ ಧರ್ಮಾಧಿಕಾರಿ ಡಾ. ಹೆಗ್ಗಡೆಯವರನ್ನು ಗೌರವಪೂರ್ವಕವಾಗಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ವಲಯದ ಅಧ್ಯಕ್ಷ ಸುರೇಶ್ ಬಿ. ಕೌಡಂಗೆ, ಸ್ಥಾಪಕಾಧ್ಯಕ್ಷ ಪಾಲಾಕ್ಷ ಪಿ. ಸುವರ್ಣ, ಗೌರವಾಧ್ಯಕ್ಷ ಎನ್. ಎ. ಗೋಪಾಲ್ ಅಳದಂಗಡಿ, ಪ್ರಧಾನ ಕಾರ್ಯದರ್ಶಿ […]
ಕೋಲಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪಾದುಕಾನ್ಯಾಸ.

ಬೆಳ್ತಂಗಡಿ: ರೆಖ್ಯ ಗ್ರಾಮದ ಕೋಲಾರು ಶ್ರೀ ದುರ್ಗಾರಮೇಶ್ವರೀ ದೇವಸ್ಥಾನದಲ್ಲಿ ಅಕ್ಟೋಬರ್ 19ರಂದು ಪಾದುಕಾನ್ಯಾಸ ಕಾರ್ಯಕ್ರಮವು ಶಾಸಕ ಹರೀಶ್ಮ ಪೂಂಜರ ನೇತೃತ್ವದಲ್ಲಿ ನಡೆಯಿತುಕಾರ್ಯಕ್ರಮದ ಅಧ್ಯಕ್ಷತೆ ಯನ್ನು ರಾಮಯ್ಯ ಗೌಡ ಕೋಲಾರು, ದೇಗುಲದ ಅನುವಂಶಿಕ ಮೊಕ್ತೆಸ್ಥರರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ರಾಘವೇಂದ್ರ ನಾಯಕ್, ಅಧ್ಯಕ್ಷರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅರಸಿನಮಕ್ಕಿ; ಕುಶಾಲಪ್ಪಗೌಡ ಪಾಪುದಮಂಡೆ, ಅಧ್ಯಕ್ಷರು, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ (ರಿ) ಕೋಲಾರು; ಮಂಜುನಾಥ ಗೌಡ ಕೈಕುರೆ, ಅಧ್ಯಕ್ಷರು, ಜೀರ್ಣೋಧ್ಧಾರ ಸಮಿತಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕೋಲಾರು; ಶೀನಪ್ಪ […]
ರೆಡ್ ಮಾರ್ಕ್ಯೂರಿ ದಂಧೆ: ಧರ್ಮಸ್ಥಳದ ಯುವಕ ಸಹಿತ ಇಬ್ಬರ ಬಂಧನ-ಉಳಿದವರು ಪರಾರಿ.

ಬೆಳ್ತಂಗಡಿ : ರೆಡ್ ಮಾರ್ಕ್ಯೂರಿ ದಂಧೆ ಎಲ್ಲಾ ರಾಜ್ಯಗಳಲ್ಲಿಯೂ ಹೆಚ್ಚಾಗಿದ್ದು ಈಗ ಈ ದಂಧೆ ನಮ್ಮ ಜಿಲ್ಲೆಯಲ್ಲೂ ಕಾರ್ಯಾಚರಿಸುತ್ತಿದೆ.ಚಿಕ್ಕಮಗಳೂರು ಜಿಲ್ಲೆಯ ಹಾಂದಿ ಗ್ರಾಮದ ಸರ್ಕಲ್ ಬಳಿ ಅಲ್ದೂರು ಪೊಲೀಸರು ಖಚಿತ ಮಾಹಿತಿ ಮೇರೆಗೆ ಪುತ್ತೂರು ನೊಂದವಣೆಯ ಅಲ್ಟೋ ಕಾರಿನಲ್ಲಿ ಖೋಟಾ ನೋಟು ಹಣ ಸಾಗಿಸುತ್ತಿದ್ದಾಗ ಅಡ್ಡಗಟ್ಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 500 ಮುಖಬೆಲೆಯ 5 ಲಕ್ಷ ರೂಪಾಯಿ ಖೋಟಾ ನೋಟುಗಳು ಅಲ್ಟೋ ಕಾರಿನಲ್ಲಿದ್ದ ಬ್ಯಾಗಿನಲ್ಲಿ ಪತ್ತೆಯಾಗಿದೆ. ಈ ಹಣ ರೆಡ್ ಮಾರ್ಕ್ಯೂರಿ ಖರೀದಿಸುವ ಉದ್ಧೇಶದಿಂದ ಬೆಳ್ತಂಗಡಿಯಿಂದ […]
ಹೊಲಿಗೆ ಯಂತ್ರ ವಿತರಣೆ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ ಹಾಗೂ ಗ್ರಾಮ ಪಂಚಾಯತ್ ಉಜಿರೆ ಇದರ ಸಂಯುಕ್ತ ಆಶ್ರಯದಲ್ಲಿ ಉಜಿರೆ ಗ್ರಾಮ ಪಂಚಾಯತ್‌ನ 2020 – 2021ನೇ ಸಾಲಿನ 25% ಮೀಸಲು ಅನುದಾನದಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮವು ಅಕ್ಟೋಬರ್ 9ರಂದು ಉಜಿರೆ ಗ್ರಾಮ ಪಂಚಾಯತ್‌ನ ಸುವರ್ಣ ಸೌಧ ಸಭಾಂಗಣ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯರಾದ ಕೆ ಪ್ರತಾಪ್‌ಸಿಂಹ […]
ಪ್ರಬಂಧ ಸ್ಪರ್ಧೆ ವಿಜೇತರ ಘೋಷಣೆ

ಉಜಿರೆ : ‘ದರ್ಪಣ ಇದು ಅರಿವಿನ ದೀವಿಗೆ’ ತಂಡ, ‘ಮಡಿಲು ಸಾಂಸ್ಕೃತಿಕ ಟ್ರಸ್ಟ್’ ಮತ್ತು ವಿಸ್ತಾರ ನ್ಯೂಸ್ ಇದರ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಫೇಸ್‌ಬುಕ್ ಲೈವ್ ಮುಖಾಂತರ ಯುವ ಲೇಖಕ ಪೃಥ್ವೀಶ್ ಧರ್ಮಸ್ಥಳ ಘೋಷಿಸಿದರು.ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ರಕ್ಷಾ ಕೋಟ್ಯಾನ್ ಪ್ರಥಮ, ಮಂಗಳೂರು ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿನಿ ಗುಣವತಿ ದಾನದಗುಡ್ಡೆ ದ್ವಿತೀಯ ಹಾಗೂ ಪುತ್ತೂರಿನ ಫಿಲೋಮಿನ ಕಾಲೇಜು ವಿದ್ಯಾರ್ಥಿನಿ ಶ್ರೀದೇವಿ ಕೆ. ತೃತೀಯ ಸ್ಥಾನ […]
ದಾನಿ ವೀರಮ್ಮ ಅಚ್ಚಿನಡ್ಕರಿಗೆ ಅಭಿನಂದನೆ.

ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ಜೀವಶಾಸ್ತ್ರ ವಿಭಾಗದ ಪ್ರಯೋಗ ಶಾಲೆಗೆ ಅಗತ್ಯವಿರುವ ಪರಿಕರಗಳನ್ನು ನೀಡುವ ಸಲುವಾಗಿ ರೋಟರಿ ಕ್ಲಬ್ ಬೆಳ್ತಂಗಡಿಗೆ ರೂಪಾಯಿ 30000 ಧನ ಸಹಾಯವನ್ನು ನೀಡಿದ ನರ್ಸಿಂಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ ವೀರಮ್ಮ ಅಚ್ಚಿನಡ್ಕ ಇವರಿಗೆ ರೋಟರಿ ಕ್ಲಬ್ ಬೆಳ್ತಂಗಡಿ ಪರವಾಗಿ ಅಭಿನಂದನೆಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ್ ಕೆ. ವಿ., ನಿರ್ದೇಶಕರಾದ ಡಿ.ಎಮ್ ಗೌಡ, ಶ್ರೀಕಾಂತ್ ಕಾಮತ್, ಆ್ಯನ್ಸ್ ಕ್ಲಬ್‌ನ ಅಧ್ಯಕ್ಷೆ ಡಾl […]
ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಪ್ರಧಾನ ಕಛೇರಿಯ ಉದ್ಘಾಟನೆ.

ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನವೀಕೃತ ಪ್ರಧಾನ ಕಛೇರಿಯ ಉದ್ಘಾಟನೆಬೆಳ್ತಂಗಡಿ: ಆರ್ಥಿಕ ವ್ಯವಹಾರದೊಂದಿಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡು ಗ್ರಾಹಕರ ಮತ್ತು ನಾಗರಿಕರ ಮೆಚ್ಚುಗೆ-ಪ್ರಶಂಸೆಗೆ ಪಾತ್ರವಾದ ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲೊಂದಾದ ಬೆಳ್ತಂಗಡಿಯ ಕಥೋಲಿಕ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಛೇರಿಯ ನವೀಕೃತಗೊಂಡ ಕಛೇರಿಯ ಉದ್ಘಾಟನಾ ಸಮಾರಂಭವು ಅಕ್ಟೋಬರ್ 1ರಂದು ಬೆಳ್ತಂಗಡಿಯ ಸಿಎಸ್ ಕಾಂಪ್ಲೆಕ್ಸ್‌ನಲ್ಲಿರುವ ಸಂಘದ ಪ್ರಧಾನ ಕಛೇರಿಯಲ್ಲಿ ನಡೆಯಿತು.ಕರ್ನಾಟಕ ಸರಕಾರದ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ನವೀಕೃತ ಕಛೇರಿಯನ್ನು ಉದ್ಘಾಟಿಸಿ, ಸಂಸ್ಥೆಗೆ […]
ಆಯ್ದ ರೈತರಿಗೆ ಗೇರು ಗಿಡ ವಿತರಣೆ ಕಾರ್ಯಕ್ರಮ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗುರುವಾಯನಕೆರೆ ವಲಯದ ಆಶ್ರಯದಲ್ಲಿ ವಲಯ ಮಟ್ಟದ ಗೇರುಗಿಡ ವಿತರಣಾ ಕಾರ್ಯಕ್ರಮವು ಸರಕಾರಿ ಉನ್ನತೀಕರಿಸಿದ ಪ್ರೌಢ ಶಾಲೆ ಪೆರೋಡಿತ್ತಾಯಕಟ್ಟೆಯಲ್ಲಿ ಜರಗಿತು.ವಲಯದ ಆಯ್ದ ಗೇರುಕೃಷಿ ರೈತ ಫಲಾನುಭವಿಗಳಿಗೆ ಲಾಭದಾಯಕ ಗೇರುಕೃಷಿಯ ನಾಟಿ ಮತ್ತು ನಿರ್ವಹಣೆ ಬಗ್ಗೆ ಮಾಹಿತಿ ನೀಡಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ವ್ಯಾಪ್ತಿಯ ನಿರ್ದೇಶಕರಾದ ವಸಂತ್ ಸಾಲ್ಯಾನ್ ನೆರವೇರಿಸಿದರು. ಗ್ರಾಮಾಭಿವೃದ್ಧಿ ಯೋಜನೆ ನಡೆದು ಬಂದ ದಾರಿ ಮತ್ತು ಕೃಷಿ ಕುಟುಂಬಕ್ಕೆ ಯೋಜನೆಯ ಮೂಲಕ ನೀಡುತ್ತಿರುವ […]
ರೋಟರಿ ವತಿಯಿಂದ ‘ರೋಸ್ ಡೇ’ .

ಬೆಳ್ತಂಗಡಿ: ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯ ಹಸ್ತವನ್ನು ನೀಡುವ ದಿನವಾಗಿ ಆಚರಿಸಲ್ಪಡುವ ಸೆಪ್ಟೆಂಬರ್ 22 “ರೋಸ್ ಡೇ” ಯನ್ನು ಬೆಳ್ತಂಗಡಿ ರೋಟರಿ ಕ್ಲಬ್‌ನ ಸದಸ್ಯರ ಸಹಕಾರದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ನಿಡ್ಲೆ ಗ್ರಾಮದ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ನಾಲ್ಕೂವರೆ ವರ್ಷದ ಮಗುವಿನ ಚಿಕಿತ್ಸೆಗಾಗಿ ರೂಪಾಯಿ 25000/- ವನ್ನು ನೀಡುವುದರ ಮೂಲಕ ಅರ್ಹರಿಗೆ ಸಹಾಯಹಸ್ತ ಚಾಚಲಾಯಿತು. ಈ ಕಾರ್ಯಕ್ರಮದಲ್ಲಿ ಮಗುವಿನ ತಂದೆ ಜಯಂತ್, ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಬಿ. ಕೆ. ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ್ […]
ನೆರೆಯಿಂದ ಕಂಗಾಲಾದ ಬೊಳಿಯಾರು ನಿವಾಸಿಗರು

ಧರ್ಮಸ್ಥಳ: ನಾಡಿನ ಪ್ರಸಿದ್ದ ಯಾತ್ರಾ ಸ್ಥಳವಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮದಲ್ಲಿರುವ ಬೊಳಿಯಾರು ಪ್ರದೇಶದ ನಿವಾಸಿಗರು ಪ್ರತೀವರ್ಷ ಮಳೆಗಾಲ ಬಂತೆಂದರೆ ನದಿಯಲ್ಲಿ ನೀರು ಉಕ್ಕಿ ಬರುವ ನೆರೆಗೆ ಭಯದಿಂದಲೇ ಬದುಕುತ್ತಾ, ಪೇಟೆಯ ಸಂಪರ್ಕ ಕಳೆದುಕೊಂಡು ದ್ವೀಪ ವಾಸದ ಅನುಭವ ಪಡೆಯುತ್ತಿದ್ದಾರೆ.ಈ ಬಾರಿಯೂ ಸೆಪ್ಟೆಂಬರ್ 19, 20ನೇ ತಾರೀಕಿನಂದು ಸುರಿದ ಭಾರೀ ಮಳೆಗೆ ನದಿಯಲ್ಲಿ ಉಕ್ಕಿ ಹರಿದ ನೀರಿನ ಪರಿಣಾಮ ಬೊಳಿಯಾರು ಪ್ರದೇಶದ ನಿವಾಸಿಗರು ಪೇಟೆ ಸಂಪರ್ಕ ಕಡಿದುಕೊಂಡು ಕಂಗಾಲಾಗಿದ್ದಾರೆ. ಇಲ್ಲಿ ಧರ್ಮಸ್ಥಳ ಪೇಟೆಗೆ ಸಂಪರ್ಕ ಕಲ್ಪಿಸುವ ಕಚ್ಛಾ […]