ಅಕ್ಟೋಬರ್ ಕೊನೆಯ ವಾರ ಗ್ರಾಮ ಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್?

ಬೆಳ್ತಂಗಡಿ: ರಾಜ್ಯದ ಒಟ್ಟು 6,025 ಗ್ರಾಮ ಪಂಚಾಯಿತಿಗಳ ಪೈಕಿ 5,800 ಪಂಚಾಯಿತಿಗಳ ಅಧಿಕಾರ ಅವಧಿ ಕಳೆದ ಜೂನ್ ತಿಂಗಳಲ್ಲೇ ಅಂತ್ಯವಾಗಿದ್ದು, ನಿಯಮದ ಪ್ರಕಾರ ಅಧಿಕಾರಾವದಿ ಕೊನೆಗೊಳ್ಳುವ ಮುನ್ನವೇ ಚುನಾವಣೆ ನಡೆಸಬೇಕು. ಆದರೆ ಕೊರೋನಾ ಭೀತಿಯಿಂದ ಸಧ್ಯಕ್ಕೆ ಅನಿವಾರ್ಯವಾಗಿ ಚುನಾವಣೆ ಮುಂದೂಡಲಾಗಿದ್ದು, ಇದೀಗ ಚುನಾವಣೆ ನಡೆಸಲು ರಾಜ್ಯ ಚುನಾವಣೆ ಆಯೋಗ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಕೊರೋನಾ ಸೋಂಕು ರಾಜ್ಯದಲ್ಲಿ ಅತ್ಯಂತ ವೇಗವಾಗಿ ಹರಡುತ್ತಿರುವಾಗಲೇ, ಚುನಾವಣಾ ಆಯೋಗ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಲು‌ ಮುಂದಾಗಿರುವುದು ಅಚ್ಛರಿಗೆ […]

ಅಪ್ರಾಪ್ತ ದಲಿತ ಬಾಲೆಯ ಮೇಲೆ ಲೈಂಗಿಕ ದೌರ್ಜನ್ಯ

ಧರ್ಮಸ್ಥಳ: ಅಪ್ರಾಪ್ತ ವಯಸ್ಸಿನ ದಲಿತ ಬಾಲೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಆಕೆಗೆ ಕೊಲೆ ಬೆದರಿಕೆ ಹಾಕಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು; ಇದೀಗ ಪ್ರಕರಣ ದಾಖಲಿಸಿಕೊಂಡ ಧರ್ಮಸ್ಥಳ ಪೊಲೀಸರು ಆರೋಪಿಗಳಿಬ್ಬರಿಗೂ ಕಾನೂನಿನ ಬೇಡಿ ತೊಡಿಸಿದ್ದಾರೆ.ಚಾರ್ಮಾಡಿ ನಿವಾಸಿ ಅಪ್ರಾಪ್ತ ವಯಸ್ಸಿನ ದಲಿತ ಬಾಲೆಯ ತಾಯಿ ಕಳಂಜ ಗ್ರಾಮದ ಬಳ್ಕಾಜೆ ರೆಜಿಮೋನು ಎಂಬವರ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದರು. ಕೆಲವೊಮ್ಮೆ ತಾಯಿಯೊಂದಿಗೆ ಈ ದಲಿತ ಬಾಲೆಯೂ ಕಳಂಜದ ರೆಜಿಮೋನುರ ತೋಟಕ್ಕೆ ಹೋಗುತ್ತಿದ್ದಳು ಎನ್ನಲಾಗಿದೆ. ಅಂತೆಯೇ ಕಳೆದ ಮೇ ತಿಂಗಳಲ್ಲಿ ಕಳಂಜದ […]

ಲಾರಿ-ಪಿಕ್‌ಅಪ್ ಢಿಕ್ಕಿ .

ಧರ್ಮಸ್ಥಳ: ಧರ್ಮಸ್ಥಳ ಗ್ರಾಮದ ಬೊಳಿಯಾರು ಸಮೀಪ ಸೆಪ್ಟೆಂಬರ್ 11ರಂದು ಲಾರಿ- ಪಿಕಪ್ ನಡುವೆ ಢಿಕ್ಕಿ ಸಂಭವಿಸಿ ಆದ ಭೀಕರ ರಸ್ತೆ ಅಪಘಾತದಲ್ಲಿ ಎರಡೂ ವಾಹನಗಳು ಜಖಂಗೊಂಡಿದೆ. ಎರಡು ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸುದೈವವಶಾತ್ ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸರು ಭೇಟಿ ನೀಡಿ, ಮಹಜರು ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

ದಲಿತ ಯುವತಿಗೆ ಲೈಂಗಿಕ ಕಿರುಕುಳ ಆರೋಪ, ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು.

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಸುರುಳಿ ಎಂಬಲ್ಲಿ ಸಲೀಂ ಎಂಬ ವಿವಾಹಿತ ಯುವಕ ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.ಆರೋಪಿ ತನ್ನ ಬೀಡಿ ಬ್ರ್ಯಾಂಚ್‌ನಲ್ಲಿ ಬೀಡಿ ತೆಗೆಯುವ ಸಂದರ್ಭದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಹೇಳಲಾಗುತ್ತಿದೆ. ಯುವತಿಯ ಬೊಬ್ಬೆ ಕೇಳಿ ಸ್ಥಳಕ್ಕೆ ಸ್ಥಳೀಯ ಬಂದ ಬಜರಂಗದಳದ ಯುವಕರು ಆರೋಪಿ ಸಲೀಂನನ್ನು ಹಿಡಿದು ಧರ್ಮಸ್ಥಳ ಪೋಲೀಸರಿಗೆ ಒಪ್ಪಿಸಿದ್ದಾರೆ.

ನೆಲ್ಯಾಡಿ ಜೆಸಿಐನಿಂದ ಶಿಕ್ಷಕ ದಿನಾಚರಣೆ; ನಿವೃತ್ತ ಶಿಕ್ಷಕ ಹಾಗೂ ಮಕ್ಕಳ ಸಾಹಿತ್ಯ ಶಾಂತಿಗೋಡು ಗೋಪಾಲಕೃಷ್ಣ ಶಗ್ರಿತ್ತಾಯ ರಿಗೆ ಗೌರವಾರ್ಪಣೆ.

ಕೊಕ್ಕಡ: ನೆಲ್ಯಾಡಿಯ ಜೆಸಿಐ ಸಂಸ್ಥೆಯ ವತಿಯಿಂದ ನೆಲ್ಯಾಡಿ ಪಡುಬೆಟ್ಟಿನ ನಿವೃತ್ತ ಶಿಕ್ಷಕ, ಸಾಹಿತ್ಯ ರತ್ನ ಗೋಪಾಲಕೃಷ್ಣ ಶಗ್ರಿತ್ತಾಯರನ್ನು ಶಾಂತಿಗೋಡುನ ಪುಂಡಿಕಾಯಿ ಸ್ವಗೃಹದಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಶುಭಸಂದರ್ಭದಲ್ಲಿ ಗೌರವಪೂರ್ವಕವಾಗಿ ಸಮ್ಮಾನಿಸಲಾಯಿತು.ನೆಲ್ಯಾಡಿ ಸಂತಜಾರ್ಜ್ ಪ್ರೌಢಶಾಲಾ ಕನ್ನಡ ಶಿಕ್ಷಕರಾದ ಕನ್ನಡ ಪಂಡಿತರೂ ಆಗಿರುವ ವಿ.ಆರ್ .ಹೆಗಡೆಯವರು ತಮ್ನ ಅಭಿನಂದನಾ ಭಾಷಣದಲ್ಲಿ ಶಗ್ರಿತ್ತಾಯರು ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಮಾಡಿರುವ ಅನನ್ಯ ಸಾಧನೆ ಮತ್ತು ಶಿಕ್ಷಕರಾಗಿ ಸಮಾಜಕ್ಕೆ ನೀಡಿದ ವಿಶಿಷ್ಟ ಸೇವೆ ಇಂದಿಗೂ ಎಲ್ಲರಿಗೂ ಮಾದರಿ. ಯಕ್ಷಗಾನ ಕ್ಷೇತ್ರದಲ್ಲಿ ಹಿಮ್ಮೇಳ ,ಮುಮ್ಮೇಳಗಳೆರಡರಲ್ಲೂ […]

ಸಿಡಿಲು ಬಡಿದು ಅಕೇಶಿಯಾ ಮರ ಛಿದ್ರ

ಬೆಳಾಲು: ಬೆಳಾಲು ಗ್ರಾಮದ ಮಾಯಾ ಕ್ರಾಸ್ ಬಳಿ ಅಪ್ಪಳಿಸಿದ ಸಿಡಿಲಿಗೆ ಅಕೇಶಿಯಾ ಮರವೇ ಛಿದ್ರಗೊಂಡಿದೆ. ಸುದೈವವಶಾತ್ ಈ ರಣಭೀಕರ ಸಿಡಿಲು ಜನಸಂಚಾರವಿರುವಲ್ಲಿ ಅಥವಾ ತೋಟ, ಗದ್ದೆಗಳಿಗೆ ಅಥವಾ ಯಾರದ್ಧೇ ಮನೆಗೆ ಅಪ್ಪಳಿಸದಿರುವುದು, ಇಂತಹ ಅಪಾಯಗಳಿಂದ ಪಾರಾಗಲು ಪರಿಸರದಲ್ಲಿ ಮರಗಳನ್ನು ಬೆಳೆಸಿ ಉಳಿಸಬೇಕೆಂಬ ವಾದಕ್ಕೆ ಪುಷ್ಠಿ ನೀಡಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ; ಬೆಳ್ತಂಗಡಿ ತಾಲೂಕಿನ ಇನ್ನೊಂದು ಶಾಲೆಯಿಂದ 100% ಫಲಿತಾಂಶದ ಸಾಧನೆ.

ಬೆಳ್ತಂಗಡಿ: ಕೊರೋನಾ ಸೋಂಕಿನ ಭೀತಿಯ ನಡುವೆ ನಡೆದ 2019-20ರ ಎಸ್‌ಎಸ್‌ಎಲ್‌ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಮೊದಲು ಫಲಿತಾಂಶ ಬಂದಾಗ ಸರಕಾರಿ ಶಾಲೆಗಳ ಪೈಕಿ ಬೆಳ್ತಂಗಡಿ ತಾಲೂಕಿನ ಪೆರ್ಲಬೈಪಾಡಿ ಮತ್ತು ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ 100% ಫಲಿತಾಂಶ ದಾಖಲಿಸಿದ ಶಾಲೆಗಳು ಎಂದು ಗುರುತಿಸಲ್ಪಟ್ಟಿತ್ತು. ಇದೀಗ ಮರು ಮೌಲ್ಯಮಾಪನದ ಬಳಿಕ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯೂ 100% ಫಲಿತಾಂಶ ಪಡೆದ ಸಾಧನೆಯ ಶಾಲೆಯೆಂಬ ಹೆಮ್ಮೆಯ ಗರಿಯನ್ನು ಮುಡಿಗೇರಿಸಿಕೊಂಡಿದೆ.ಪ್ರಸಕ್ತ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ […]

“ಫಿಟ್ ಇಂಡಿಯಾ ಪ್ರೀಡಮ್ ರನ್”

ಮಡಂತ್ಯಾರು: ಕಾಲೇಜು ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ, ಫಿಸಿಕಲ್ ಎಜುಕೇಶನ್ ಫೌಂಡೇಶನ್ ಆಫ್ ಇಂಡಿಯಾ ಕರ್ನಾಟಕ, ಮತ್ತು ಫಿಟ್ ಇಂಡಿಯಾ ಇವುಗಳ ಸಹಕಾರದಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ರಾಷ್ಟೀಯ ಸೇವಾ ಯೋಜನೆ ಇವುಗಳ ಜಂಟಿ ಆಶ್ರಯದಲ್ಲಿ “ಫಿಟ್ ಇಂಡಿಯಾ ಫ್ರೀಡಮ್ ರನ್” ಕಾರ್ಯಕ್ರಮವು ಕಾಲೇಜಿನ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 5ರಂದು ನಡೆಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜು ಸಂಚಾಲಕರಾದ ವಂ| ಬೆಸಿಲ್ ವಾಸ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಡಾ. ಜೋಸೆಪ್ ಎನ್. ಎಮ್., ಕಾರ್ಯಕ್ರಮ […]

ಫೊಟೋಗ್ರಾಫರ್ಸ್ ಎಸೋಸಿಯೇಷನ್‌ನ ವಾರ್ಷಿಕ ಮಹಾಸಭೆ

ಬೆಳ್ತಂಗಡಿ: ಸೌತ್ ಕೆನರಾ ಫೋಟೊಗ್ರಾಫರ್ಸ್ ಎಸೋಸಿಯೇಷನ್ ದ. ಕ. ಹಾಗೂ ಉಡುಪಿ ಜಿಲ್ಲೆ ಬೆಳ್ತಂಗಡಿ ವಲಯದ 18ನೇ ವಾರ್ಷಿಕ ಮಹಾಸಭೆ ಸೆಪ್ಟೆಂಬರ್ 5 ರಂದು ಗುರುವಾಯನಕೆರೆ ಶ್ರೀ ಅಯ್ಯಪ್ಪ ಗುಡಿ ಬಳಿಯಿರುವ ಛಾಯಭವನದಲ್ಲಿ ವಲಯದ ಅಧ್ಯಕ್ಷ ಸುರೇಶ್ ಬಿ. ಕೌಡಂಗೆಯವರ ಅಧ್ಯಕ್ಷತೆಯಲ್ಲಿ ಜರಗಿತು. ದ. ಕ. ಹಾಗೂ ಉಡುಪಿ ಜಿಲ್ಲಾ ಫೋಟೋಗ್ರಾಫರ್ಸ್ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಛಾಯಾಗ್ರಾಹಣ ವೃತ್ತಿ ಉಳಿದರೆ ಮಾತ್ರ ಸಂಘಟನೆ ಬೆಳೆಯಬಹುದು. ನಮ್ಮ ಸದಸ್ಯರ ಕಷ್ಟಗಳನ್ನು ಅರಿತು […]

ಮತ್ತೆ ತಲೆ ಎತ್ತಿದ ಅಕ್ರಮ ಮರಳು ಧಂದೆ

ಬೆಳ್ತಂಗಡಿ: ಮಳೆ ಬಿಡುವು ನೀಡುತ್ತಿದ್ದಂತೆಯೇ ಮಿತ್ತಬಾಗಿಲು ಗ್ರಾಮದ ನೇತ್ರಾವತಿ ನದಿಯ ದಡದಲ್ಲಿ ಅಕ್ರಮ ಮರಳುಗಾರಿಕೆ ಮತ್ತೆ ಆರಂಭವಾಗಿದೆ.ಈಗಾಗಲೇ ನದಿ ಕೊರೆತದಿಂದ ಹಲವರ ಕೃಷಿ ಜಾಗ ನದಿ ಪಾಲಾಗಿದೆ. ಆದರೆ ಮತ್ತೆ ಗಾಯಕ್ಕೆ ಬೆಂಕಿ ಸುರಿಯುವಂತೆ ಮರಳನ್ನು ತೆಗೆಯುವ ಮೂಲಕ ಅಕ್ರಮ ಮರಳುಗಾರರು ಮತ್ತಷ್ಟು ತೊಂದರೆ ನೀಡುತ್ತಿದ್ದಾರೆ.ಕಂಚರೋಡಿ ಭಾಗದಲ್ಲಿ ನದಿ ಕೊರೆತ ಉಂಟಾಗಿದ್ದು ಸಾಕಷ್ಟು ಸಮಸ್ಯೆ ಸೃಷ್ಟಿಸಿದೆ. ಈಗ ಇಲ್ಲಿ ಅಕ್ರಮ ಮರಳುಗಾರಿಕೆಯಿಂದ ಕೃಷಿ ಭೂಮಿ ನದಿ ನೀರಿಗೆ ಮತ್ತಷ್ಟು ಕೊರೆದು ಹೋಗುವ ಅಪಾಯ ಉಂಟಾಗಿದೆ.ಬೆಳಗ್ಗೆ 6 ಗಂಟೆಯಿಂದ […]