ನಾಪತ್ತೆಯಾದ ಯುವಕ ಶವವಾಗಿ ಪತ್ತೆ

ಬೆಳ್ತಂಗಡಿ : ಚೆನ್ನರಾಯಪಟ್ಟಣದ ಖಾಸಗಿ ಸಂಸ್ಥೆಯೊಂದರಲ್ಲಿ ಮೇನೇಜರ್ ಆಗಿ9 ದಿನಗಳ ಹಿಂದೆಯಷ್ಷೇ ಕೆಲಸಕ್ಕೆ ಸೇರಿದ್ದ; ತದನಂತರ ಏಕಾಏಕಿ ನಾಪತ್ತೆಯಾದ ಯುವಕನ ಶವ ತನ್ನ ನಾವೂರು ಮನೆಯ ಸಮೀಪ ಕೆರೆಯಲ್ಲಿ ಪತ್ತೆಯಾದ ಘಟನೆ ಆ.28 ರಂದು ವರದಿಯಾಗಿದೆ.ನಾವೂರು ಗ್ರಾಮದ ನಾಗಜೆ ನಿವಾಸಿ ದಿ। ಶೀನಪ್ಪ ಗೌಡರ ಪುತ್ರ ರಕ್ಷಿತ್ (28) ಅಸಹಜವಾಗಿ ಸಾವನ್ನಪ್ಪಿದ ಯುವಕ.ರಕ್ಷಿತ್ 9ದಿನಗಳ ಹಿಂದೆ ಚೆನ್ನರಾಯಪಟ್ಟಣಕ್ಕೆ ಹೋಗಿ ಕೆಲಸಕ್ಕೆ ಸೇರಿದ್ದು, ಕಳೆದ ಆ.22ರಂದು ಶನಿವಾರ ಮನೆಗೆ ಬಂದಿದ್ದರು. ಗಣೇಶ ಹಬ್ಬ ಪೂರೈಸಿದ ಬಳಿಕ ಆಗಸ್ಟ್ 24ರಂದು […]
ರಾಷ್ಟ್ರಮಟ್ಟದ ಜಲಸಾಕ್ಷರತೆ 2020 ಜಲಸಾಕ್ಷರತೆ : ರಾಷ್ಟ್ರಮಟ್ಟದ ವಿಚಾರ ಸಂಕಿರಣ.

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಕಾಲೇಜು ಮಡಂತ್ಯಾರಿನ ವತಿಯಿಂದ ಜಲಸಾಕ್ಷರತೆಯ ಬಗ್ಗೆ ರಾಷ್ಟ್ರಮಟ್ಟದ ಆನ್ ಲೈನ್ ವಿಚಾರ ಸಂಕೀರ್ಣವನ್ನು ಆಗಸ್ಟ್ 29ರಂದು ಹಮ್ಮಿಕೊಳ್ಳಲಾಯಿತುಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಜೋಸೆಫ್ ಎನ್. ಎಮ್. ಇವರು ಆನ್ ಲೈನ್ ಮೂಲಕ ಜಲಸಾಕ್ಷರತೆಯ ಬಗ್ಗೆ ಉಪನ್ಯಾಸ ನೀಡಿದರು. ಅಭಿಯಾನದ ಪ್ರಾಯೋಗಿಕ ಉದಾಹರಣೆಗಳ ಸಹಿತ ಮಳೆ ನೀರು ಕೊಯ್ಲು ಬಗ್ಗೆ ಮಾಹಿತಿ ನೀಡಿದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಹಭಾಗಿತ್ವದೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮವನ್ನು ಸೇಕ್ರೆಡ್ […]
ನಡ ಸರಕಾರಿ ಪ್ರೌಢ ಶಾಲಾ ಗಣಿತ ಶಿಕ್ಷಕ ಯಾಕೂಬ್‌ರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ನಡ ಪ್ರೌಢ ಶಾಲೆಯ ಗಣಿತ ಶಿಕ್ಷಕ , ಶಾಲೆಯ ಗಣಿತ ಪ್ರಯೋಗಾಲಯದ ರೂವಾರಿ ಯಾಕೂಬ್‌ರವರನ್ನು ಶಿಕ್ಷಣ ಇಲಾಖೆ ಪ್ರಸಕ್ತ ವರ್ಷದ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಸೆಪ್ಟೆಂಬರ್ 5ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಷ್ಟ್ರಪತಿ ಘನತೆವೆತ್ತ ರಾಮನಾಥ ಕೋವಿಂದ್ ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ರಕ್ತದಾನಂ ಮಹಾದಾನಂ – ಜೀವದಾನಂಚ ನಿಶ್ಚಯಂ’

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಆಸ್ಪತ್ರೆ ಹಾಗೂ ಸಂಶೋಧನಾ ಸಂಘ (ನಿ) ಮಂಗಳೂರು , ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಹಾಗೂ ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಬೆಳ್ತಂಗಡಿ ವಿಘ್ನೇಶ್ ಬಿಲ್ಡಿಂಗ್‌ನಲ್ಲಿ ಆಗಸ್ಟ್ 21 ರಂದು ಜರುಗಿತು.ಕೊರೋನಾ ವೈರಸ್ ನಿಂದಾಗಿ ಜಿಲ್ಲೆಯ ಬ್ಲಡ್ ಬ್ಯಾಂಕುಗಳಲ್ಲಿ ರಕ್ತದ ಕೊರತೆ ಇರುವುದನ್ನು ಮನಗಂಡು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಂಗಾತಿ ಎಕೆಜಿ […]
ಮಡಂತ್ಯಾರು ಕಾಲೇಜಿನ ಎನ್‌ಎಸ್‌ಎಸ್ ಘಟಕದಿಂದ ‘ಸದ್ಭಾವನಾ ದಿನ’

ಮಡಂತ್ಯಾರು: ರಾಷ್ಟ್ರದ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಇವರ ಜನ್ಮದಿನವಾದ ಆಗಸ್ಟ್ 20ನ್ನು ದೇಶದಾದ್ಯಂತ ಸದ್ಭಾವನಾ ದಿನವನ್ನಾಗಿ ಆಚರಿಸಲಾಗುತ್ತದೆ. ಈ ವರ್ಷ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತೆಯಾಗಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಾದ ಹಿನ್ನೆಲೆಯಲ್ಲಿ ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ ಎನ್‌ಎಸ್‌ಎಸ್ ಘಟಕವು ಎನ್‌ಎಸ್‌ಎಸ್ ಸ್ವಯಂಸೇವಕರಿಗೆ ರಾಜೀವ್ ಗಾಂಧಿ ಜನ್ಮದಿನದ ಸಂದೇಶವನ್ನು ಹಂಚಿಕೊಳ್ಳಲು ಆನ್‌ಲೈನ್ ಕಾರ್ಯಕ್ರಮವನ್ನು ಆಯೋಜಿಸಿತು.ಕಾಲೇಜಿನ ಪ್ರಾಂಶುಪಾಲರಾದ , ಡಾ.ಜೋಸೆಫ್ ಎನ್. ಎಂ. ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿ, ಸದ್ಭಾವನಾ ದಿನಾಚರಣೆಯ ಹಿನ್ನೆಲೆಯನ್ನು ತಿಳಿಸಿದರಲ್ಲದೇ; ವಿದ್ಯಾರ್ಥಿಗಳು ಶಾಂತಿ, […]
ಪ್ರತಿಭಾವಂತ ವಿದ್ಯಾರ್ಥಿಗೆ ಮೊಬೈಲ್ ನೀಡಿ ಪ್ರೋತ್ಸಾಹಿಸಿದ ಉದ್ಯಮಿ ಪುಷ್ಪರಾಜ್ ಶೆಟ್ಟಿ

ಬೆಳ್ತಂಗಡಿ : ಕಳೆದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದ ಮೊಬೈಲ್ ಫೋನ್ ಇಲ್ಲದ ಬಡ ವಿದ್ಯಾರ್ಥಿಯೊಬ್ಬನಿಗೆ ಬೆಳ್ತಂಗಡಿಯ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮಾಲಕರಾದ ಪುಷ್ಪರಾಜ್ ಶೆಟ್ಟಿಯವರು ಅಂಡ್ರಾಯ್ಡ್ ಮೊಬೈಲ್ ನೀಡಿ ಅವನ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.ಕಳೆದ 5 ತಿಂಗಳ ಹಿಂದೆ ಇವನ ತಾಯಿ ಅನಾರೋಗ್ಯದಿಂದ ಮೃತಪಟ್ಟಿದ್ದು, ತಂದೆ 6 ವರ್ಷಗಳ ಹಿಂದೆಯೇ ತೀರಿಕೊಂಡಿದ್ದಾರೆ. ಗೇರುಕಟ್ಟೆಯಲ್ಲಿರುವ ತನ್ನ ಅಜ್ಜನ ಮನೆಯಲ್ಲಿ ವಾಸ್ತವ್ಯವಿದ್ದು, ಕೊರೊನಾ ಮಹಾಮಾರಿಯಿಂದ ಈ ಭಾರಿ ಹತ್ತನೆ ತರಗತಿಯ ಪರೀಕ್ಷೆಗೆ ತಯಾರಿಗಳು ಮೊಬೈಲ್ ಮೂಲಕವೇ ಅಧ್ಯಾಪಕರು […]
ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ; 74ನೇ ಸ್ವಾತಂತ್ರ್ಯೋತ್ಸವದಲ್ಲಿ ತಹಶೀಲ್ದಾರ್ ಮಹೇಶ್

ಬೆಳ್ತಂಗಡಿ: ಸ್ವಾತಂತ್ರ್ಯವೆಂದರೆ ಸ್ವೇಚ್ಛಾಚಾರವಲ್ಲ. ನಮ್ಮ ಇತಿಮಿತಿಗಳನ್ನು ಅರಿತು ಸಹನೆ ಹಾಗೂ ಸಂಯಮದಿಂದ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಂಡು ಬದುಕು ರೂಪಿಸಿಕೊಳ್ಳುವುದೇ ನಿಜವಾದ ಸ್ವಾತಂತ್ರ್ಯ ಎಂದು ಬೆಳ್ತಂಗಡಿಯ ತಹಶೀಲ್ದಾರ್ ಮಹೇಶ್ ಜೆ. ಹೇಳಿದರು.ಅವರು ಆಗಸ್ಟ್ 15ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ರಾಷ್ಟ್ರದ 74ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಸ್ವಾತಂತ್ರ್ಯ ದಿನದ ಸಂದೇಶ ನೀಡುತ್ತಿದ್ದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತಾಲೂಕು ಪಂಚಾಯತ್‌ಗೆ ಅಧ್ಯಕ್ಷೆ ದಿವ್ಯಜ್ಯೋತಿ ಮಾತನಾಡಿ; […]
ಶಿಶಿಲ: ಕಪಿಲಾ ನದಿಯಲ್ಲಿ ನೀರು ಹೆಚ್ಚಳ ಭೀತಿ: ಬೆಳ್ತಂಗಡಿ ಇ.ಓ ಸ್ಥಳಕ್ಕೆ ಭೇಟಿ.

ಕೊಕ್ಕಡ: ಬೆಳ್ತಂಗಡಿ ತಾಲೂಕಿನ ಮತ್ಸö್ಯಕ್ಷೇತ್ರ ಖ್ಯಾತಿಯ ಶಿಶಿಲ ದಲ್ಲಿ ಕಪಿಲಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಈ ಬಗ್ಗೆ ಸ್ಥಳೀಯರ ಮನವಿಯ ಮೇರೆಗೆ ಬೆಳ್ತಂಗಡಿ ತಾಲೂಕು ಇ.ಒ ಕುಸುಮಾಧರ್ ಶಿಶಿಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಕಪಿಲಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು ಯಾವುದೇ ಅನಾಹುತಗಳು ಸಂಭವಿಸದAತೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸ್ಥಳೀಯ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಈ ನಡುವೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಇ.ಒ […]
ಅಳಂಬದಲ್ಲಿ ಆದಿವಾಸಿ ದಿನಾಚರಣೆ ; ಎಲ್ಲ ಓಕೆ, ಮಾಸ್ಕ್ ಧರಿಸಿಲ್ಲ ಯಾಕೆ?

ಬೆಳ್ತಂಗಡಿ: ದಿನಾಂಕ 09-08-2020 ವಿಶ್ವ ಆದಿವಾಸಿಗಳ ದಿನ. ಆದಿವಾಸಿ ಹಕ್ಕುಗಳ ಸಂರಕ್ಷಣಾ ಸಮಿತಿ ಬೆಳ್ತಂಗಡಿ ಇದರ ಆಶ್ರಯದಲ್ಲಿ ಕಾರ್ಮಿಕ ಮುಂದಾಳು ಬಿ.ಎಂ.ಭಟ್‌ರ ನಾಯಕತ್ವದಲ್ಲಿ ಬೆಳ್ತಂಗಡಿ ತಾಲೂಕು ಕುತ್ಲೂರು ಗ್ರಾಮದ ರಕ್ಷಿತಾರಣ್ಯ ಅಡವಿಯ ಅಳಂಬಾದಲ್ಲಿ ಸ್ಥಳೀಯ ಆದಿವಾಸಿಗಳು ಸೇರಿ ಆದಿವಾಸಿ ದಿನಾಚರಣೆಯನ್ನು ಆಚರಿಸಿದರು. ಭೂಮಿಯ ಹಕ್ಕು ಹಾಗೂ ಸಮುದಾಯ ಹಕ್ಕು ಆದಿವಾಸಿಗಳ ಜನ್ಮ ಸಿದ್ದ ಹಕ್ಕು ಎನ್ನುತ್ತಾ, ಆದಿವಾಸಿ ಹಕ್ಕುಗಳ ರಕ್ಷಣೆಗಾಗಿ ಸಮರ ದೀರ ಹೋರಾಟ ನಡೆಸಲು ಈ ಸಂದರ್ಭದಲ್ಲಿ ಪ್ರತಿಜ್ಞೆ ಸ್ವೀಕರಿಸಿದರು.ಬಿ.ಎಂ.ಭಟ್ ಹಾಗೂ ಎಲ್. ಮಂಜುನಾಥ್ ಮಾತಾಡಿದರು. […]
ದಿಡುಪೆಯ ಕಲ್ಬೆಟ್ಟು ಸೇತುವೆ ಅಪಾಯದಲ್ಲಿ

ಸಂಪರ್ಕ ಕಡಿದುಕೊಳ್ಳುವ ಭೀತಿಯಲ್ಲಿ ದಿಡುಪೆಯ ಮಂದಿ ಬೆಳ್ತಂಗಡಿ: ಆಗಸ್ಟ್ ತಿಂಗಳ 3 ಮತ್ತು 4ನೇ ತಾರೀಕಿನಂದು ಸುರಿದ ಭಾರೀ ಮಳೆಗೆ ಮಲವಂತಿಗೆ ಗ್ರಾಮದದಿಡುಪೆಯ ಕಲ್ಬೆಟ್ಟು ಎಂಬಲ್ಲಿನ ನೇತ್ರಾವತಿ ಕಿನಾರೆಯ ಸೇತುವೆಯ ಸಂಪರ್ಕ ಕಡಿದುಹೋಗಿ ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ನದಿಯ ಪ್ರವಾಹಕ್ಕೆ ಸೇತುವೆಯೂ ಹಾನಿಗೊಳಗಾಗಿದ್ದು ಜನರ ಹಾಗೂ ವಾಹನಗಳ ಓಡಾಟಕ್ಕೆ ಅನಾನುಕೂಲವಾಗಿದೆ. ಪರಿಸರದ ನಿವಾಸಿಗರು ಅದರಲ್ಲೂ ನಿತ್ಯ ಸೊಸೈಟಿಗೆ ಹಾಲು ಕೊಂಡೊಯ್ಯುವ ಹೈನುಗಾರರು ಹಾಗೂ ಕೃಷಿಕರು ಈ ರಸ್ತೆಯನ್ನೇ ಅವಲಂಬಿಸಿದ್ದು, ಇದೀಗ ಸೇತುವೆ ಸಂಪರ್ಕ ಕಳೆದುಕೊಂಡದ್ದು ಮಾತ್ರವಲ್ಲದೇ, ಸೇತುವೆಯೇ […]