ಅಕ್ರಮ ಗೋಮಾಂಸ ಸಾಗಾಟ ಪತ್ತೆ

70ಕೆ.ಜಿ. ಗೋಮಾಂಸ ಸಹಿತ ಆರೋಪಿ ಪೊಲೀಸ್ ವಶಕ್ಕೆ ಬೆಳ್ತಂಗಡಿ: ಅಟೋವೊಂದರಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟವಾಗುತ್ತಿದ್ದುದನ್ನು ಕಂಡ ಸ್ಥಳೀಯ ಯುವಕರ ತಂಡ, ಅಟೋವನ್ನು ತಡೆದು ನಿಲ್ಲಿಸಿ, ಗೋಮಾಂಸ ಸಹಿತ ಅಟೋ‌ ರಿಕ್ಷಾದೊಂದಿಗದ ಓರ್ವ ಆರೋಪಿಯನ್ನು ಬೆಳ್ತಂಗಡಿ ಪೊಲೀಸರಿಗೊಪ್ಪಿಸಿದ ಘಟನೆ ಜುಲೈ 27ರಂದು ಮಿತ್ತಬಾಗಿಲು ಗ್ರಾಮದ ಎರ್ಮಾಳ್‌ಪಲ್ಕೆಯಿಂದ ವರದಿಯಾಗಿದೆ.ಸುಮಾರು 70 ಕೆಜಿ ಗೋಮಾಂಸವನ್ನು ರಿಕ್ಷಾದಲ್ಲಿ ಹೇರಿಕೊಂಡು ಕಾಜೂರು ಕಡೆಯಿಂದ ಎರ್ಮಾಳಪಲ್ಕೆ – ಕುಕ್ಕಾವು ರಸ್ತೆಯಾಗಿ ಬರುತ್ತಿದ್ದಾಗ ಮಾಹಿತಿ ಪಡೆದು ತಡೆದ ಯುವಕರು ಅಕ್ರಮ ಗೋಮಾಂಸ ಸಾಗಾಟದ ಬಗ್ಗೆ ಬೆಳ್ತಂಗಡಿ ಪೊಲೀಸರಿಗೆ […]

ಶಾಸಕರ ಹಾದಿ ತಪ್ಪಿಸುವ ಅಧಿಕಾರಿಗಳು

ಅಪಾಯದಂಚಿನಲ್ಲಿ ಕೊರೋನಾ ವಾರಿಯರ್ಸ್ ಬೆಳ್ತಂಗಡಿ: ಹೊರ ದೇಶದಿಂದ ಬಂದವರಿಂದ ಕೊರೋನಾ ಸೋಂಕು ಹರಡಿದ್ದಾಯಿತು. ಹೊರ ರಾಜ್ಯದಿಂದ ಬಂದವರು ನಮ್ಮ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಹರಡಿದ್ದೂ ಆಯಿತು. ಇದೀಗ ಆರಂಭದಿಂದಲೂ ಹಳ್ಳಿಹಳ್ಳಿಗಳಲ್ಲಿ ಕೊರೋನಾ ಸೋಂಕಿನ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಆಶಾಕಾರ್ಯಕರ್ತೆಯರ ಸರದಿ. ಇವರನ್ನು ಇದೀಗ ತಮ್ಮ ಜೀವವನ್ನೇ ಅಪಾಯಕ್ಕೊಡ್ಡಿ ತಮಗೆ ಮಾಹಿತಿ ಅಥವಾ ಸೂಕ್ತ ತರಬೇತಿಯೇ ಇಲ್ಲದ ಕಾರ್ಯಕ್ಕೆ ಬಳಸಿಕೊಳ್ಳಲು ಸರಕಾರ ತೀರ್ಮಾನಿಸಿದಂತಿದೆ. ಈ ಕೊರೋನಾ ವಾರಿಯರ್ಸ್ ಕಳೆದ ಕೆಲ ತಿಂಗಳುಗಳಿಂದ ತಮ್ಮ ಜೀವವನ್ನೇ […]

ಮೂಡುಬಿದಿರೆ ಹಳೆ ಪೊಲೀಸ್ ಠಾಣಾ ಕಟ್ಟಡ ನೆಲಸಮ

ನೆಮ್ಮದಿಯ ನಿಟ್ಟುಸಿರು ಬಿಟ್ಟ ವಾಹನ ಚಾಲಕರು ಮೂಡುಬಿದರೆ: ಮೂಡುಬಿದಿರೆ ಪೊಲೀಸ್ ಠಾಣೆಗೆ ಹೊಸ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆಗೊಂಡು ಸಾಕಷ್ಟು ವರ್ಷಗಳು ಕಳೆದಿದೆ. ಆದರೂ ಇಲ್ಲಿನ ಪೇಟೆ ಜಂಕ್ಷನ್‌ನಲ್ಲಿ ಕಡಿದಾದ ತಿರುವಿನ ಬಳಿಯಿದ್ದ ಪೊಲೀಸ್ ಠಾಣೆಯ ಹಳೆಯ ಕಟ್ಟಡದ ತೆರವು ಕಾರ್ಯ ಪೊಲೀಸ್ ಇಲಾಖೆಯಿಂದ ನಡೆದಿರಲಿಲ್ಲ. ಮೂಡುಬಿದಿರೆ ಪುರಸಭಾ ಆಡಳಿತವೂ ಈ ವಿಚಾರದಲ್ಲಿ ದೀರ್ಘ ನಿದ್ರಾವಸ್ಥೆಯಲ್ಲಿತ್ತು.ಇದೀಗ ಕೊರೋನಾ ಸೋಂಕಿನ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲೆ ಲಾಕ್‌ಡೌನ್ ಆಗಿರುವುದರಿಂದ ವಾಹನ ಸಂಚಾರ ಒಂದಷ್ಟು ವಿರಳವಾಗಿರುವುದರ ಅವಕಾಶವನ್ನು ಬಳಸಿಕೊಂಡ ಪೊಲೀಸ್ ಇಲಾಖೆ ಜುಲೈ […]

ಬೆಳ್ತಂಗಡಿಯಲ್ಲಿ ಇಂದು 8ಮಂದಿಗೆ ಕೊರೋನಾ ದೃಢ

ವೈದ್ಯಾಧಿಕಾರಿ ಹಾಗೂ ಮಗುವಿಗೂ ತಟ್ಟಿದ ಸೋಂಕು ಬೆಳ್ತಂಗಡಿ ತಾಲೂಕಿನಲ್ಲಿ ಇಂದು 8ಮಂದಿಗೆ ಕೊರೋನಾ ಸೋಂಕು ಪಾಸಿಟಿವ್ ಬಂದಿದ್ದು; ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರಕಾಪಾಡದೇ, ಅನಗತ್ಯ ಓಡಾಟ ನಡೆಸಿ ಕೊರೋನಾ ಸೋಂಕಿಗೇ ಸವಾಲು ಹಾಕುವ ದುಸ್ಸಾಹಸವನ್ನು ತಾಲೂಕಿನ ವೀರರು ಇನ್ನಾದರೂ ಕೈಬಿಡದಿದ್ದರೆ ; ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಕೊರೋನಾ ಇನ್ನಷ್ಟು ಅಬ್ಬರಿಸಿ ಬೊಬ್ಬರಿಯಬಹುದು ಎಂಬ ಆತಂಕ ಜನಸಾಮಾನ್ಯರನ್ನು ಕಾಡತೊಡಗಿದೆ.ಈ ನಡುವೆ ತಾಲೂಕಿನಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮಗಳನ್ನು ಸಂಘಟಿಸಿದ್ದ, ವೈದ್ಯರಿಗಿರಬೇಕಾದ ಸಹನೆ-ತಾಳ್ಮೆ-ಸೇವೆ ಸಹಿತ […]

ಅಕ್ರಮ‌ ಕಸಾಯಿಖಾನೆಗೆ ದಾಳಿ

ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ಗಂಟಾಲ್‌ಕಟ್ಟೆ ಎಂಬಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿಖಾನೆಗೆ ಮೂಡುಬಿದಿರೆ ಪೊಲೀಸರು‌ ಜುಲೈ 20ರಂದು ದಾಳಿ ನಡೆಸಿದ್ದಾರೆ.ಗಂಟಾಲ್‌ಕಟ್ಟೆ ನೀರಲ್ಕೆ ಎಂಬಲ್ಲಿ ಆರೋಪಿ ಮನ್ಸೂರು ಎಂಬಾತ ತನ್ನ ಮನೆಯ ಹಿಂದೆ ಅಕ್ರಮ ಕಸಾಯಿಖಾನೆ ನಿರ್ಮಿಸಿ, ಮಾಂಸ ಸಿದ್ಧ ಮಾಡುತ್ತಿದ್ದ. ಈತನೊಂದಿಗೆ ಶೌಕತ್, ಮುಸ್ತಾಕ್ ಉಲಾಯಿಬೆಟ್ಟು ಮತ್ತು ಆಸಿಫ್ ಎಂಬವರು ಜೊತೆ ಸೇರಿದ್ದರು. ಆರೋಪಿಗಳು ಜಾನುವಾರುಗಳನ್ನು ಕದ್ದು ತಂದು ಮಾಂಸ ಮಾಡಿ ದಂಧೆ ನಡೆಸುತ್ತಿದ್ದರು. ಪೊಲೀಸ್ ದಾಳಿ ವೇಳೆ ಸ್ಥಳದಲ್ಲಿ ಮೂರು ಕೋಣಗಳು, ದನದ ಮಾಂಸ ಮತ್ತು ಕೃತ್ಯಕ್ಕೆ […]

ಸುರಕ್ಷತಾ ಕ್ರಮ ಮರೆತ ಶಾಸಕರಿಗೆ ಹಿಂಬಾಲಕರ ಸಾಥ್

ಕಿರುಸೇತುವೆ ಉದ್ಘಾಟನೆ : ಮಾಸ್ಕ್-ವೈಯಕ್ತಿಕ ಅಂತರ ಮಾಯ ಬೆಳ್ತಂಗಡಿ: ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಿಟ್ಟಡೆ ಗ್ರಾಮದ ಫಂಡಿಜೆಯ ದಂಬೆದಡಿ ಎಂಬಲ್ಲಿ ಶಾಸಕರ ವಿವೇಚನಾ ಅನುದಾನದಲ್ಲಿ ನಿರ್ಮಾಣವಾದ ಕಿರು ಸೇತುವೆಯನ್ನು ಜುಲೈ 21ರಂದು ಬೆಳ್ತಂಗಡಿಯ ಶಾಸಕ ಹರೀಶ ಪೂಂಜ ಉದ್ಘಾಟಿಸಿದರು. ಕೊರೋನಾ ಸೋಂಕು ತಡೆಗೆ ಸರಕಾರ ಸೂಚಿಸಿದ ಅಗತ್ಯ ಸುರಕ್ಷತಾ ಕ್ರಮಗಳ ಪಾಲನೆಯಲ್ಲಿ ಶಾಸಕ ಹರೀಶ್ ಪೂಂಜರಿಗೆ ಸಾಥ್ ನೀಡಿದ ಅವರ ಹಿಂಬಾಲಕರು ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ವೈಯಕ್ತಿಕ ಅಂತರ ಕಾಪಾಡದೇ ಭಾಗವಹಿಸುವ ಮೂಲಕ ಕೊರೋನಾ ಸೋಂಕಿಗೆ […]

ಪಡಿತರದೊಂದಿಗೆ ಕೊರೋನಾ ಹರಡುವ ಹುನ್ನಾರ!

ಪಡಿತರ ಅಂಗಡಿಗಳಲ್ಲಿ ಜನಜಂಗುಳಿ ಬೆಳ್ತಂಗಡಿ: ಒಂದೆಡೆ ಸರಕಾರ ಕೊರೋನಾ ಸೋಂಕು ತಡೆಗೆ ಲಾಕ್‌ಡೌನ್‌ನ ಮೊರೆ ಹೋಗಿ, ಜನರ ಅನಗತ್ಯ ಓಡಾಟ ಹಾಗೂ ಒಂದೇ ಸ್ಥಳದಲ್ಲಿ ಗುಂಪು ಸೇರುವಿಕೆಗೆ ತಡೆ ಹಾಕಲು ಯೋಜಿಸಿದರೆ; ಇನ್ನೊಂದು ಕಡೆ ಇದೇ ಸರಕಾರ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಬಡ ಜನತೆಗೆ ಅವರವರ ಊರುಗಳಲ್ಲಿ ಪಡಿತರ ಅಂಗಡಿಗಳಲ್ಲಿ ತಿಂಗಳ ಪಡಿತರವನ್ನು ಉಚಿತವಾಗಿ ವಿತರಿಸುವ ಹೆಸರಲ್ಲಿ ಕೊರೋನಾ ಸೋಂಕನ್ನೂ ಪುಕ್ಕಟೆಯಾಗಿ ಹರಡಲು ವೇದಿಕೆ ಸಿದ್ಧಪಡಿಸುತ್ತಿದೆಯಾ ಎಂಬ ಭಯ ನಾಡಿನ ಕಾನೂನು-ಕಟ್ಟಳೆಗಳನ್ನು ಗೌರವಿಸಿ-ಪಾಲಿಸುವ ನಾಗರಿಕರನ್ನು ಕಾಡಲಾರಂಭಿಸಿದೆ.ಬೆಳ್ತಂಗಡಿ […]

ಹಳ್ಳಿಯ ಕೊರೋನಾ ಸೋಂಕಿತ ಗರ್ಭಿಣಿ ನರಳಾಟ

ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಕಂಗಾಲು ಬೆಳ್ತಂಗಡಿ: ಸರಕಾರವೇನೋ ಖಾಸಗಿ ಆಸ್ಪತ್ರೆಗಳಲ್ಲೂ ಕೊರೋನಾ ಸೋಂಕಿತರಿಗೆ ಚಿಕಿತ್ಸೆಗೆ ಬೆಡ್‌ ವ್ಯವಸ್ಥೆ ಮಾಡಲಾಗಿದೆ; ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಭರವಸೆಯ ಹೇಳಿಕೆ ನೀಡುತ್ತಿದೆ. ಆದರೆ ನಾವು ಇದುವರೆಗೆ ಬೆಂಗಳೂರು ಮಹಾನಗರದಲ್ಲಿ ಕೊರೋನಾ ಸೋಂಕಿತರು ಹಾಗೂ ಇತರ ರೋಗಿಗಳಿಗೆ ಚಿಕಿತ್ಸೆಗೆ ಬೆಡ್ ಇಲ್ಲದೇ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ದೃಶ್ಯಗಳನ್ನು ದೃಶ್ಯ ಮಾಧ್ಯಮಗಳಲ್ಲಿ ನೋಡಿದ್ದೇವೆ. ಇದೀಗ ಬೆಳ್ತಂಗಡಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲೂ ಗರ್ಭಿಣಿ ಮಹಿಳೆಯರು ಕೊರೋನಾ ಸೋಂಕಿನಿಂದ ನರಳಾಡಿದರೂ, ಅವರಿಗೆ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಬೆಡ್ […]

ಚುನಾಯಿತ ಸದಸ್ಯನಿಂದ ವಿನೂತನ ಪ್ರತಿಭಟನೆ

ಗಾಂಧಿ ಮಾರ್ಗಕ್ಕೆ ಜೈ ಎಂದ ಜಗದೀಶ್ ಬೆಳ್ತಂಗಡಿ: ಕೊರೋನಾ, ಡೆಂಗ್ಯೂನಂತಹ ಸಾಂಕ್ರಾಮಿಕ ರೋಗಗಳು ಹರಡುತ್ತಿದೆ, ಮುಂಜಾಗ್ರತೆ ಕೈಗೊಳ್ಳಿ ಎಂದು ಜನಸಾಮಾನ್ಯರಿಗೆ ಕರೆ ನೀಡಿ ಪೋಸ್ ಕೊಡುವ ಸಾಕಷ್ಟು ಜನಪ್ರತಿನಿಧಿಗಳ ಎದುರು ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಚುನಾಯಿತ ಸದಸ್ಯ ಜಗದೀಶ್ ತನ್ನ ಕಾರ್ಯಶೈಲಿಯ ಮೂಲಕ ಭಿನ್ನವಾಗಿ ಕಾಣುತ್ತಾರೆ. ಡೆಂಗ್ಯೂ, ಕೊರೋನಾದಂತಹ ಕಾಯಿಲೆಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಪರಿಸರ ಸ್ವಚ್ಛವಾಗಿರಿಸುವುದರ ಜೊತೆಗೆ ರೋಗ ಹರಡುವ ಸೊಳ್ಳೆ ಉತ್ಪತ್ತಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆದರೆ ನಮ್ಮ ರಾಜ್ಯ ಸರಕಾರದಲ್ಲಿ ಜನತೆಯ ಸುರಕ್ಷತೆಗೆ ಮುಂಜಾಗ್ರತೆ […]

ಟಾಸ್ಕ್‌ಫೋರ್ಸ್ ಸದಸ್ಯರಿಗೆ ಆನ್‌ಲೈನ್ ತರಬೇತಿ

ಬೆಳ್ತಂಗಡಿ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ನ ಪ್ರತೀ ವಾರ್ಡ್ ಹಾಗೂ ಬೂತ್ ಮಟ್ಟದಲ್ಲಿ ಕೋರೋನಾ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸುವಂತೆ ನೋಡಿ ಕೊಳ್ಳಲು ಚುನಾಯಿತ ಪ್ರತಿನಿಧಿಗಳು, ಸ್ವಯಂ ಸೇವಾ ಸಂಸ್ಥೆಗಳು, ಸ್ವಯಂಸೇವಕರು ಹಾಗೂ ನೋಡಲ್ ಅಧಿಕಾರಿಗಳು ಒಳಗೊಂಡಂತೆ ಟಾಸ್ಕ್‌ಪೋರ್ಸ್ ಸಮಿತಿ ಗಳನ್ನು ರಚಿಸಲಾಗಿದ್ದು, ಸದರಿ ಸಮಿತಿಗಳ ಮುಖಾಂತರ ವಾರ್ಡ್‌ಗಳಲ್ಲಿ ಅಗತ್ಯ ಆರೋಗ್ಯ ಸೇವೆ ಹಾಗೂ ಇತರ ತುರ್ತು ಮಾಹಿತಿಗಳನ್ನು ನೀಡುವ ವಿಚಾರದಲ್ಲಿ ಎಲ್ಲಾ ಸ್ವಯಂಸೇವಕರಿಗೆ ಸರಕಾರದ ವತಿಯಿಂದ ಯೂಟ್ಯೂಬ್ ಮುಖಾಂತರ ಆನ್‌ಲೈನ್‌ನಲ್ಲಿ ಮಾಹಿತಿ ಹಾಗೂ ತರಬೇತಿಯನ್ನು […]