ಕಳಚಿ ಬಿತ್ತು ಗೋಮುಖ ವ್ಯಾಘ್ರನ ಮುಖವಾಡ

ಕೋಳಿ ಹೆಸರಲ್ಲಿ ಗೋ ಸಾಗಾಟದ ಸಂಚು ಬಯಲು ಬೆಳ್ತಂಗಡಿ: ಹಣೆಯಲ್ಲಿ ಭಜರಂಗಿಗಳನ್ನೂ ನಾಚಿಸುವ ರೀತಿಯಲ್ಲಿ ಉದ್ದದ ನಾಮ; ವಾಹನದಲ್ಲಿ ಮಂಗಳೂರು ಕಂಕನಾಡಿಯ ಅಬ್ದುಲ್ ಕರೀಮ್ ಮಾಲಕತ್ವದ ಪಿ. ಕೆ. ಚಿಕನ್ ಸೆಂಟರ್‌ ಹೆಸರಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ನೀಡಿದ ಅಗತ್ಯ ವಸ್ತು ಸಾಗಾಟದ ಅವಧಿ ಮೀರಿದ ಪರವಾನಿಗೆ; ವಾಹನದಲ್ಲಿ ಸಾಗಿಸುತ್ತಿದ್ದುದು ಮಾತ್ರ ಅಕ್ರಮವಾಗಿ ಅದೂ ಕದ್ದ ಗೋವುಗಳನ್ನು. ಸಾಗಾಟ ಮಾಡುತ್ತಿದ್ದುದು ಅಷ್ಟೇ ಅಮಾನುಷವಾಗಿ.ಜುಲೈ 20ರ ಬೆಳಗ್ಗಿನ ಜಾವ ಮೂರು ಗಂಟೆಯ ಸುಮಾರಿಗೆ ಬೆಳ್ತಂಗಡಿ ತಾಲೂಕು ನಡ ಗ್ರಾಮದ […]

ಕಡ್ಲೆಕಾಯಿ ತಿನ್ನುತ್ತಿರುವ ಕೊಟ್ಟಿಗೆಹಾರ ಪೊಲೀಸರು ; ಚಾರ್ಮಾಡಿ ಘಾಟಿಯಲ್ಲಿ ಸ್ವಿಫ್ಟ್ ಕಾರ್ ಪಲ್ಟಿ

ಬೆಳ್ತಂಗಡಿ: ಜುಲೈ 18ರ ರಾತ್ರಿ ಚಾರ್ಮಾಡಿ ಘಾಟಿಯ 9ನೇ ತಿರುವಿನಲ್ಲಿ ಸ್ವಿಫ್ಟ್ ಕಾರೊಂದು ಮಳೆ ಹಾಗೂ ಮಂಜಿನಕಾರಣಕ್ಕೆ ದಾರಿಕಾಣದಾಗಿ; ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಕಾರಿನ ಚಾಲಕ ಮೂಡಿಗೆರೆ ನಿವಾಸಿ ಸುಹೇಲ್(38) ಯಾನೆ ಬಬ್ಲು ಗಂಭೀರವಾಗಿ ಗಾಯಗೊಂಡ ಅವಘಡ ಸಂಭವಿಸಿದೆ.ಅಪಘಾತ ಸಂಭವಿಸಿದ ಬಳಿಕ ಸುಮಾರು ಒಂದೂವರೆ ಗಂಟೆಗಳ ಕಾಲ ಗಾಯಾಳು ಚಾಲಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಾರಲ್ಲೇ ಬಿದ್ದಿದ್ದ ಎನ್ನಲಾಗಿದೆ. ಕಾನೂನು ಮೀರಿ ಸಂಜೆಯಾದ ಬಳಿಕ ಚಾರ್ಮಾಡಿ ಘಾಟಿರಸ್ತೆಯ ಮೂಲಕ ಬಂದ ಈ ಕಾರಿನ ಚಾಲಕ ತಾನೇ […]

ಬಿಗ್ ಬ್ರೇಕಿಂಗ್ ನ್ಯೂಸ್ : ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗೆ ಕೊರೊನಾ ಪಾಸಿಟಿವ್

ಕೊರೋನಾ ಸೋಂಕು ಬೆಳ್ತಂಗಡಿ ತಾಲೂಕಿನಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಕೊರೋನಾ ಸೋಂಕಿತರ ಸೇವೆ ಮಾಡುತ್ತಿರುವ ಕೊರೋನಾ ವಾರಿಯರ್ಸ್‌ಗಳನ್ನೇ ಬೆಂಬಿಡದೇ ಕಾಡಲಾರಂಭಿಸಿದೆ. ಇದೀಗ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯೊಬ್ಬರಿಗೇ ಕೊರೋನಾ ಸೋಂಕು ಪಾಸಿಟಿವ್ ಬಂದಿದ್ದು, ಆಸ್ಪತ್ರೆಯ ಸಿಬ್ಬಂದಿಗಳಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಪ್ರತ್ಯೇಕ ವಾರ್ಡ್ ತೆರೆದು ಚಿಕಿತ್ಸೆ ಆರಂಭವಾದ ಬಳಿಕ ಇಲ್ಲಿ 10ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಎಲ್ಲ ಸೋಂಕಿತರನ್ನು ಚಿಕಿತ್ಸೆಗಾಗಿ ಕೊರೋನಾ ಸೋಂಕಿತರಿಗಾಗಿ ವಿಶೇಷ ಆಸ್ಪತ್ರೆಯಾಗಿ ಮಾರ್ಪಟ್ಟ ಉಜಿರೆ ಟಿ. […]

ಅಕ್ರಮ ಮರಳು ಸಾಗಾಟ ಲಾರಿ ಪಲ್ಟಿ

ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು, ಮಲವಂತಿಗೆ, ಮುಂಡಾಜೆ ಕಡೆಯಿಂದ ಕಳೆದ ನಾಲ್ಕಾರು ತಿಂಗಳಿಂದ ನಿರಂತರವಾಗಿ ಅಕ್ರಮ ಮರಳು ಸಾಗಾಟ ನಡೆಯುತ್ತಿದ್ದರೂ ಸಂಬಂಧಿತ ಇಲಾಖಾಧಿಕಾರಿಗಳು ತಮಗೆ ಸಿಕ್ಕಷ್ಟು ಅಕ್ರಮ ಹಣವನ್ನು ಜೇಬಿಗಿಳಿಸಿ, ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದ್ದಾರೆ. ಸ್ಥಳೀಯ ಪರಿಸರ ಪ್ರೇಮಿಗಳು ಅಕ್ರಮ ಮರಳು ಸಾಗಾಟದ ಬಗ್ಗೆ ನೀಡಿದ ದೂರುಗಳು ಕಸದ ಬುಟ್ಟಿ ಸೇರಿದೆ.ಇದೀಗ ಕೊರೋನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಇಡೀ ಜಿಲ್ಲೆಯನ್ನೇ ಲಾಕ್‌ಡೌನ್ ಮಾಡುವಂತೆ ಆದೇಶಿಸಿದರೂ, ಈ ಮರಳು ಕಳ್ಳಸಾಗಾಟಗಾರರಿಗೆ ಜಿಲ್ಲಾಧಿಕಾರಿಯ ಈ ಲಾಕ್‌ಡೌನ್ […]

ಕೊರೋನಾ ವರದಿಯಿಂದ ಬೆಚ್ಚಿ ಪರಾರಿಯಾದವರಿವರು

ಆಸ್ಪತ್ರೆಯಿಂದ ಪರಾರಿಯಾದ ಬಾಣಂತಿ-ಮಗು ಮತ್ತೆ ಆಸ್ಪತ್ರೆಗೆ ಬೆಳ್ತಂಗಡಿ: ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಜುಲೈ 15ರ ರಾತ್ರಿ ಹೆರಿಗೆಯಾದ ಮಹಿಳೆಯೋರ್ವಳು ತನಗೆ ಕೊರೋನಾ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದೆ ಎಂಬ ಭಯದಿಂದ ಪತಿಯೊಂದಿಗೆ ಜುಲೈ 16ರ ರಾತೋರಾತ್ರಿ ಆಸ್ಪತ್ರೆಯ ಗೇಟಿನ ಬೀಗ ಮುರಿದು ಪರಾರಿಯಾದ ಘಟನೆ ವರದಿಯಾಗಿದೆ. ಅಪರಾತ್ರಿಯಲ್ಲಿ ಪರಾರಿಯಾದ ಬಾಣಂತಿ-ಮಗುವನ್ನು ಪತ್ತೆ ಹಚ್ಚಿದ ಬೆಳ್ತಂಗಡಿ ಪೊಲೀಸರು ಮತ್ತೆ ಅವರನ್ನು ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ ತಂದು ಬಿಟ್ಟಿದ್ದಾರೆ.ಘಟನೆಯ ವಿವರ: ಜುಲೈ 12ರಂದು ನಾವೂರಿನ ಮಹಿಳೆಯೋರ್ವಳು ಹೆರಿಗೆಗಾಗಿ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ […]

ಕೊರೋನಾ ಸೋಂಕಿನ ಭೀತಿಯ ನಡುವೆ ಸಾರ್ವಜನಿಕ ಉತ್ಸವಗಳು ಸಾಂಕೇತಿಕವಾಗಿ ಸಾರ್ವಜನಿಕ ಉತ್ಸವ ನಡೆಸಲು ತೀರ್ಮಾನ

ಕೊರೋನಾ ಸೋಂಕಿನ ಆತಂಕದ ನಡುವೆ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು, ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಬೆಳ್ತಂಗಡಿ ತಾಲೂಕಿನಲ್ಲಿ ಈ ಬಾರಿಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಹಿತ ವಿವಿಧ ಸಾರ್ವಜನಿಕ ಉತ್ಸವಗಳನ್ನು ಆಚರಿಸಲು ಪಾಲಿಸಬೇಕಾದ ನಿಯಮಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಬೆಳ್ತಂಗಡಿ ತಾಲೂಕಿನ ವಿವಿಧ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸಹಿತ ವಿವಿಧ ಸಾರ್ವಜನಿಕ ಉತ್ಸವ ಸಮಿತಿಗಳ ಪದಾಧಿಕಾರಿಗಳ ಸಭೆಯು ಜುಲೈ 15ರಂದು ಬೆಳ್ತಂಗಡಿಯ ಶ್ರೀ ಮಂಜುನಾಥಸ್ವಾಮಿ ಸಭಾಭವನದಲ್ಲಿ ಶಾಸಕ ಹರೀಶ್ ಪೂಂಜರ ಅಧ್ಯಕ್ಷತೆಯಲ್ಲಿ ನಡೆಯಿತು. […]

ವೀರಕೇಸರಿ ತಂಡ ಅನಾರು ಇದರ ನೇತೃತ್ವದಲ್ಲಿ ಬಡ ಕುಟುಂಬಕ್ಕೆ ಮನೆ ನಿರ್ಮಾಣ: ಮಾದರಿಯಾದ ಯುವಕರ ತಂಡ:

ಕೊಕ್ಕಡ, ಜು. 15: ಪಟ್ರಮೆ ಗ್ರಾಮದ ಅನಾರು ಮೈಕೆ ಎಂಬಲ್ಲಿ ಗಿರಿಜಾ ಗೌಡ ರವರು ಸಣ್ಣ ಮಕ್ಕಳೊಂದಿಗೆ ಗುಡಿಸಲಿನಂತಿದ್ದ ಮನೆಯಲ್ಲಿ ವಾಸ ಮಾಡುತ್ತಿದ್ದುದನ್ನು ಗಮನಿಸಿ ಪಟ್ರಮೆ ಗ್ರಾಮದ ಅನಾರು ವೀರಕೇಸರಿ ತಂಡವು ಸ್ಥಳೀಯ ಬಿಜೆಪಿ ಗ್ರಾಮಸಮಿತಿ ಪಟ್ರಮೆ, ಸ್ಪಂದನಾ ಸೇವಾ ಸಂಘ ಬೆಳ್ತಂಗಡಿ ಹಾಗೂ ಊರವರ ಸಹಕಾರದಿಂದ ನೂತನವಾಗಿ ನಿರ್ಮಾಣ ಮಾಡಿದ ಮನೆಯನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಗಿರಿಜಾ ಗೌಡ ರಿಗೆ ಕೀ ಹಸ್ತಾಂತರಿಸಿದರು. ಈ ಸಂದರ್ಬದಲ್ಲಿ ಮಾತನಾಡಿದ ಹರೀಶ್ ಪೂಂಜಾರವರು ಸುಸಜ್ಜಿತವಾದ ಮನೆಯನ್ನು ನಿರ್ಮಾಣ […]

ತಹಶೀಲ್ದಾರ್ ಹತ್ಯೆಗೆ ಖಂಡನೆ;ಸರಕಾರಿ ನೌಕರರಿಗೆ ರಕ್ಷಣೆಗೆ ಆಗ್ರಹಿಸಿ ಮನವಿ

ಬೆಳ್ತಂಗಡಿ: ಕೋಲಾರ ಜಿಲ್ಲೆಯ ಬಂಗಾರ್‌ಪೇಟೆ ತಾಲೂಕು ತಹಶೀಲ್ದಾರಾಗಿದ್ದ ಬಿ. ಕೆ. ಚಂದ್ರಮೌಳೇಶ್ವರವರ ಹತ್ಯೆಯನ್ನು ಖಂಡಿಸುವುದರ ಜೊತೆಗೆ ಸರಕಾರಿ ಅಧಿಕಾರಿಗಳು ಹಾಗೂ ನೌಕರರಿಗೆ ಕರ್ತವ್ಯದ ವೇಳೆ ಅಗತ್ಯ ರಕ್ಷಣೆ ನೀಡುವಂತೆ ಆಗ್ರಹಿಸಿ, ಜುಲೈ 10ರಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯ ವತಿಯಿಂದ ಬೆಳ್ತಂಗಡಿಯ ತಹಶೀಲ್ದಾರ್‌ರ ಮೂಲಕ ಮುಖ್ಯಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಇವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಹತ್ಯೆಯಾದ ಬಂಗಾರ್‌ಪೇಟೆಯ ತಹಶೀಲ್ದಾರ್ ಚಂದ್ರಮೌಳೇಶ್ವರರ ಅವರ ಆತ್ಮಕ್ಕೆ ಶಾಂತಿ ಕೋರಿ […]

ಆಡಳಿತ ವ್ಯವಸ್ಥೆ ಗುಲಾಮಗಿರಿಯತ್ತ!

ಸೀಲ್‌ಡೌನ್-ಕ್ವಾರಂಟೈನ್ ನಿಯಮ ಗಾಳಿಗೆ; ಇಲ್ಲಿ ಕೊರೋನಾ ಮುಕ್ತಮುಕ್ತ ಬೆಳ್ತಂಗಡಿ ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಿರಿವಂತರ ಗುಲಾಮನಂತೆ ಕೆಲಸ ಮಾಡುತ್ತಿದೆ. ಕೊರೋನಾ ಸೋಂಕು ತಾಲೂಕಿನಲ್ಲಿ ಕೇಕೆ ಹಾಕಿ ಮೆರೆಯಲಾರಂಭಿಸಿದರೂ, ಇಲ್ಲಿ ಮುಂಜಾಗ್ರತಾ ಕ್ರಮಗಳಾದ ಯಾವುದೇ ಸೀಲ್‌ಡೌನ್ ಅಥವಾ ಕ್ವಾರಂಟೈನ್ ನಿಯಮಗಳ ಪಾಲನೆ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಉಳ್ಳವರ ಪ್ರಭಾವಕ್ಕೆ ದಾಸರಾದ ತಾಲೂಕು ಆಡಳಿತ ವ್ಯವಸ್ಥೆ; ಕೊರೋನಾ ಸೋಂಕನ್ನು ಡೆಂಗ್ಯೂ ಎಂದು ಬದಲಿಸಿ, ಸೋಂಕಿತೆ ಕೆಲಸ ಮಾಡುತ್ತಿದ್ದ ಪೆಟ್ರೋಲ್ ಬಂಕನ್ನು ಓಪನ್ ಮಾಡಿದರೂ ಬಂಕ್ ಮಾಲೀಕರ ವಿರುದ್ಧ ಯಾವುದೇ ಕಾನೂನು ಕ್ರಮ […]

ಬೈಕ್ ಕಳ್ಳರು ಪೊಲೀಸ್ ಬಲೆಗೆ

ಬೆಳ್ತಂಗಡಿ : ಬೆಳ್ತಂಗಡಿ ಪರಿಸರದಲ್ಲಿ ಕಳೆದ ನಾಲ್ಕಾರು ತಿಂಗಳಿಂದ ನಿರಂತರವಾಗಿ ಬೈಕ್ ಕಳವು ಪ್ರಕರಣ ದಾಖಲಾಗುತ್ತಿದ್ದುದು ಬೆಳ್ತಂಗಡಿ ಪೊಲೀಸರ ನಿದ್ದೆ ಕೆಡಿಸಿತ್ತು. ಬೈಕ್ ಕಳ್ಳರನ್ನು ಪತ್ತೆಹಚ್ಚಿ ಕಾನೂನಿನ ಬೇಡಿ ತೊಡಿಸಲು ಸಂಚು ರೂಪಿಸುತ್ತಿದ್ದ ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್‌ಇನ್ಸ್ಪೆಕ್ಟರ್ ನಂದಕುಮಾರ್ ಎಂ. ಎಂ. ತನ್ನ ಠಾಣೆಯ ಸಿಬ್ಬಂದಿಯವರೊಂದಿಗೆ ಜುಲೈ 4ರಂದು ಜೈನ್ ಪೇಟೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ, ಎರಡು ಬೈಕಲ್ಲಿ ಬಂದ ಮೂವರನ್ನು ತಡೆದು ನಿಲ್ಲಿಸಿ ಪರಿಶೀಲಿಸಿ ವಿಚಾರಣೆಗೊಳಪಡಿಸಿದರು. ಈ ಬೈಕ್‌ಗಳ ದಾಖಲೆ ಪರಿಶೀಲಿಸಿದಾಗ ಇದು […]