ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಗೌರವ

ಬೆಳ್ತಂಗಡಿ: ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮನೆಮನೆಗಳಿಗೆ ತೆರಳಿ ಜಾಗೃತಿ ಮೂಡಿಸುವುದರ ಜೊತೆಗೆ ಪರಿಸರದಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಸಂಕಷ್ಟದ ಸಮಯದ ಸವಾಲಿನ ಕೆಲಸವನ್ನು ನಿಭಾಯಿಸುತ್ತಿರುವ ನಡ, ಲಾಯ್ಲ, ಸವಣಾಲು ಹಾಗೂ ಮುಂಡೂರು ಗ್ರಾಮಗಳ 12 ಮಂದಿ ಆಶಾ ಕಾರ್ಯಕರ್ತೆಯರ ಕರ್ತವ್ಯಕ್ಕೆ ಗೌರವ ಸಲ್ಲಿಸಿ ಪ್ರತಿಯೊಬ್ಬರಿಗೆ 2,000ರೂಪಾಯಿ ಪ್ರೋತ್ಸಾಹಧನ ನೀಡುವ ಕಾರ್ಯಕ್ರಮವು ಬೆಳ್ತಂಗಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಜೂನ್ 30ರಂದು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಮುನಿರಾಜ ಅಜ್ರಿಯವರ […]
ಅಳಕ್ಕೆ ಆಟೋ ರಿಕ್ಷಾ ತಂಗುದಾಣ ಉದ್ಘಾಟನೆ

ತಣ್ಣೀರುಪಂತ: ತಣ್ಣೀರುಪಂತ ಗ್ರಾಮ ಪಂಚಾಯತ್‌ನ ಅಳಕ್ಕೆಯ ರಿಕ್ಷಾ ಚಾಲಕರ ಹಾಗೂ ನಾಗರಿಕರ ಬಹುಕಾಲದ ಬೇಡಿಕೆಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮರ ಕೋರಿಕೆಯ ಮೇರೆಗೆ ಸ್ಪಂದಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿ, ಸೋಜಾ ಅವರು ತಮ್ಮ ಪ್ರದೇಶಾಭಿವೃದ್ದಿ ನಿಧಿಯಿಂದ ನೀಡಿದ ರೂಪಾಯಿ 2.5ಲಕ್ಷ ಅನುದಾನದಲ್ಲಿ ಅಳಕ್ಕೆಯಲ್ಲಿ ನಿರ್ಮಿಸಲಾದ ರಿಕ್ಷಾ ತಂಗುದಾಣವನ್ನು ಜುಲೈ 4ರಂದು ಬೆಳ್ತಂಗಡಿಯ ಮಾಜಿ ಶಾಸಕ ಕೆ ವಸಂತ ಬಂಗೇರಉದ್ಘಾಟನೆ ಮಾಡಿ ಲೋಕಾರ್ಪಣೆಗೊಳಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ. ಸೋಜಾ, ಹಾಲಿ ಸದಸ್ಯ […]
ಪತ್ರಿಕಾ ದಿನಾಚರಣೆ ಉದ್ಘಾಟನೆ

ಬೆಳ್ತಂಗಡಿ: ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಬೆಳ್ತಂಗಡಿಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜುಲೈ 4ರಂದು ನಡೆದ ಪತ್ರಿಕಾ ದಿನಾಚರಣೆಯನ್ನು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್; ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿ ಭುವನೇಶ್, ತಾಲೂಕು ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕೊರೋನಾ ಸೋಂಕು ಹರಡುವಿಕೆ ಭೀತಿಯ ನಡುವೆ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಗಳು ಹಾಗೂ ತಾಲೂಕಿನ ಪತ್ರಕರ್ತರೆಲ್ಲರೂ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡೇ […]
ಕಳಿಯ ಗ್ರಾ. ಪಂ.ಗೆ ಎಸಿಬಿ ಪೊಲೀಸರ ದಾಳಿ

ಗೇರುಕಟ್ಟೆ: 94ಸಿ ಮನೆ ನಿವೇಶನ ಹಕ್ಕುಪತ್ರ ನೀಡಲು ಗ್ರಾಮ ಪಂಚಾಯತ್‌ನ ದೃಢೀಕರಣ ಅಗತ್ಯವಿದ್ದು, ಈ ದೃಢೀಕರಣ ನೀಡಲು ಗ್ರಾಮ ಪಂಚಾಯತ್‌ನಲ್ಲಿ ಅವ್ಯವಹಾರ-ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಕಳಿಯ ಗ್ರಾಮದ ಪರಪ್ಪು ನಿವಾಸಿ ಆದಂ ಶಾಫಿ ಎಂಬವರು ಮಂಗಳೂರಿನ ಎಸಿಬಿಗೆ ದೂರು ನೀಡಿದ್ದು, ದೂರು ಸ್ವೀಕರಿಸಿದ ಎಸಿಬಿ ಅಧಿಕಾರಿಗಳು ಜುಲೈ 4ರಂದು ಕಳಿಯ ಗ್ರಾಮ ಪಂಚಾಯತ್ ಕಛೇರಿಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ.ಸುಮಾರು 40ಮಂದಿ ಫಲಾನುಭವಿಗಳಿಗೆ 94ಸಿ ಯೋಜನೆಯಡಿ ಹಕ್ಕುಪತ್ರ ನೀಡಲು ಪಂಚಾಯತ್‌ನಲ್ಲಿ ಅವ್ಯವಹಾರ ನಡೆಸಲಾಗಿದೆ ಎಂದು […]
ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚಿದ ಕೊರೋನಾ ಭೀತಿ

ನಿಷ್ಕ್ರೀಯ ಆಡಳಿತ-ಸೀಲ್‌ಡೌನ್ ನಿಯಮ ಗಾಳಿಗೆ ಬೆಳ್ತಂಗಡಿ: ನಾಲ್ಕು ದಿನಗಳ ಹಿಂದೆ ಉಜಿರೆಯ ಪೆಟ್ರೋಲ್ ಪಂಪಿನ ಮಹಿಳಾ ಸಿಬ್ಬಂದಿಗೆ ಕೊರೋನಾ ಸೋಂಕು; ಮಾರನೆಯ ದಿನ ಇಂದಬೆಟ್ಟುವಿನ ವೃದ್ಧನೋರ್ವನಿಗೆ ಕೊರೋನಾ ಪಾಸಿಟಿವ್ ಎಂದ ಆರೋಗ್ಯ ಇಲಾಖೆ; ಮರುದಿನ ಮಡಂತ್ಯಾರಿನ ಮೀನು ಮಾರಾಟಗಾರನಿಗೆ ಕೊರೋನಾ; ನಿನ್ನೆ ಸೋಣಂದೂರಿನ ವ್ಯಕ್ತಿಗೆ ಪಾಸಿಟೀವ್; ಇಂದು ಕೊಯ್ಯೂರಿನ ಯುವತಿಗೆ ಮಾತ್ರವಲ್ಲ, ಉಜಿರೆಯ ನಿವಾಸಿಯೋರ್ವನಿಗೆ ಕೊರೋನಾ ಪಾಸಿಟಿವ್…. ಇದರೊಂದಿಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿರುವ ವಿಚಾರಣಾಧೀನ ಕೈದಿಗೂ ಕೊರೋನಾ ಪಾಸಿಟಿವ್….. ಹೀಗೆ ಬೆಳ್ತಂಗಡಿ ತಾಲೂಕಿನಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ […]
ಬಿಗ್ ಬ್ರೇಕಿಂಗ್ ನ್ಯೂಸ್ ದ.ಕ. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷರ ಕಾರು ಅಪಘಾತ ಸುದೈವವಶಾತ್ ಸುದರ್ಶನ್ ಅಪಾಯದಿಂದ ಪಾರು

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುದರ್ಶನ್‌ರ ಕಾರು ಅಪಘಾತಗೊಂಡ ಘಟನೆ ಮೂಡಬಿದ್ರೆಯಿಂದ ವರದಿಯಾಗಿದೆ.ಜುಲೈ 1ರಂದು ಮೀಜಾರ್ ಸಮೀಪ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನವನ್ನು ತಪ್ಪಿಸಲು ಹೋದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಪಯಣಿಸುತ್ತಿದ್ದ ಇನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ, ಕೆಸರಿನಲ್ಲಿ ಕಾರು ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಇನ್ನೋವಾ ಕಾರು ಸಂಪೂರ್ಣ ಜಖಂಗೊಂಡಿದೆ.ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ರಿಗೆ ಯಾವುದೇ ಗಾಯಗಳಾಗದೇ ಸುದೈವವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಕೊರೋನಾ ಹಾಟ್‌ಸ್ಪಾಟ್ ಆಗುವ ಭೀತಿಯಲ್ಲಿ ಎಟಿಎಂಗಳು

ಬೆಳ್ತಂಗಡಿ: ಮುಖ್ಯವಾಗಿ ತಾಲೂಕು ಕೇಂದ್ರವಾದ ಬೆಳ್ತಂಗಡಿಯ ಬಸ್ ನಿಲ್ದಾಣದ ಬಳಿ ದೊಡ್ಡ ವಾಣಿಜ್ಯ ಸಂಕೀರ್ಣಗಳಲ್ಲಿ ಸಿಂಡಿಕೇಟ್ ಯಾನೆ ಕೆನರಾ ಬ್ಯಾಂಕ್ ಹಾಗೂ ವಿಶ್ವ ವಿಖ್ಯಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕೌಂಟರ್‌ಗಳಿವೆ. ಊರ-ಪರವೂರ ಗ್ರಾಹಕರನ್ನು ಸೆಳೆಯುವ ಈ ಎಟಿಎಂಗಳು ತಾಲೂಕು ಕೇಂದ್ರದ ಕೊರೋನಾ ಹಾಟ್‌ಸ್ಪಾಟ್ ಆಗುವ ಎಲ್ಲ ಲಕ್ಷಣವನ್ನೂ ಹೊಂದಿದಂತಿದೆ.ಈ ಎಟಿಎಂಗಳಿಗೆ ನಿತ್ಯ ಕರ್ತವ್ಯ ನಿರ್ವಹಿಸಬೇಕಾದ ಸೆಕ್ಯೂರಿಟಿ ಗಾರ್ಡ್‌ಗಳಿಲ್ಲ. ಇಲ್ಲಿಗೆ ಹಣ ತೆಗೆಯಲು ಬರುವ ಗ್ರಾಹಕರನೇಕರು ತಮ್ಮ ವಾಹನದ ಇಂಜಿನ್ ಬಂದ್ ಮಾಡದೇ ಬರುವವರು; ಅಷ್ಟೊಂದು […]
ನಾಳ ದೇಗುಲದಲ್ಲಿ ಭಕ್ತಾದಿಗಳ ಸಭೆ

ಬಹುತೇಕ ಭಕ್ತರು ಮಾಸ್ಕ್ ಮರೆತು ಬಂದರೂ, ವೈಯಕ್ತಿಕ ಅಂತರ ಕಾಪಾಡಲು ಮರೆಯಲಿಲ್ಲ ಬೆಳ್ತಂಗಡಿ ತಾಲೂಕಿನ ಪ್ರಖ್ಯಾತ ದೇಗುಲಗಳಲ್ಲೊಂದಾದ ನಾಳ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಯ ಬಗ್ಗೆ ಭಕ್ತರ ಸಮಾಲೋಚನಾ ಸಭೆ ಜೂ.28 ರಂದು ದೇವಸ್ಥಾನದ ಆನ್ನ ಛತ್ರ ಸಭಾಂಗಣದಲ್ಲಿ ನಡೆಯಿತು.ಸಮಾಲೋಚನಾ ಸಭೆಯ ಅಧ್ಯಕ್ಷತೆಯನ್ನು ಹಾಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಸಂತ ಮಜಲು ವಹಿಸಿದ್ದರು. ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ರಚನೆಗೆ ಸರಕಾರದಿಂದ ಬಂದಿರುವ ಸುತ್ತೋಲೆಯನ್ನು ದೇವಸ್ಥಾನದ ವ್ಯವಸ್ಥಾಪಕ ಗಿರೀಶ್ ಶೆಟ್ಟಿ ಸಭೆಯಲ್ಲಿ ವಾಚಿಸಿದರು. […]
ಹುತಾತ್ಮ ಯೋಧರಿಗೆ ವಿನೂತನ ರೀತಿಯಲ್ಲಿ ಶ್ರದ್ದಾಂಜಲಿ

ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲಾ ಎಂಬಂತೆ ಮಾಸ್ಕ್ ಧಾರಣೆಯಲ್ಲಿ ರಾಜಕೀಯ ನಾಯಕರನ್ನು ಅನುಸರಿಸುತ್ತಿರುವ ಸಮಾಜ ಸೇವಕರಲ್ಲೂ ಇಲ್ಲದ ಮಾಸ್ಕ್ ಮುಂಗಾರಿನ ಆಷಾಢ ಮಾಸದ ಮಳೆರಾಯ ಆರ್ಭಟಿಸುವ ದಿನಗಳಲ್ಲಿ ಬೆಳ್ತಂಗಡಿ ತಾಲೂಕಿನ ಕಾಡಂಚಿನ ಗ್ರಾಮವಾದ ಶಿಶಿಲದ ಸಮಾನ ಮನಸ್ಕ ಗ್ರಾಮಸ್ಥರು ವಿನೂತನ ರೀತಿಯಲ್ಲಿ ಇತ್ತೀಚೆಗೆ ಚೀನಾ ಗಡಿಯಲ್ಲಿ ಹುತಾತ್ಮರಾದ ನಮ್ಮ ಯೋಧರಿಗೆ ಶ್ರಧ್ಧಾಂಜಲಿಯನ್ನು ಅರ್ಪಿಸುವುದರೊಂದಿಗೆ ನಮ್ಮ ದೇಶದ ಗಡಿಗಳನ್ನು ಕಾಯುವ ಯೋಧರಿಗೆ ಗೌರವ ನೀಡಿದ್ದಾರೆ. ಗ್ರಾಮಗಳು ಸ್ವಾವಲಂಬಿಗಳಾಗಿ ಶಕ್ತಿಯುತವಾದಾಗ ಮಾತ್ರ ದೇಶ ಬಲಿಷ್ಠವಾಗಲು ಸಾಧ್ಯ ಎಂಬ ಮಾತನ್ನು ಗಮನದಲ್ಲಿರಿಸಿ, ತಮ್ಮ […]
ಬೆಳ್ತಂಗಡಿಗೂ ಬಡಿದಪ್ಪಳಿಸಿದ ಕೊರೋನಾ

ಬೆಳ್ತಂಗಡಿ: ಕೊರೋನಾ ನಮ್ಮೂರಲ್ಲಿ ಇಲ್ಲ, ನಮಗೆ ಮಾಸ್ಕ್ ಬೇಡ, ವೈಯಕ್ತಿಕ ಅಂತರ ಯಾಕೆ ಎನ್ನುತ್ತಾ ಮಾಸ್ಕ್ ಧರಿಸದೇ ವೈಯಕ್ತಿಕ ಅಂತರ ಕಾಪಾಡದೇ ಅತಿ ಬುದ್ಧಿವಂತಿಕೆ ತೋರುತ್ತಿದ್ದ ವಿದ್ಯಾವಂತ ಅನಾಗರಿಕರ ದರ್ಪಕ್ಕೆ ಉತ್ತರ ನೀಡಿದ ಕೊರೋನಾ ಇದೀಗ ಸುರಕ್ಷತಾ ಕ್ರಮಗಳನ್ನು ಪಾಲಿಸುವವರ ನಿದ್ದೆಯನ್ನೂ ಕೆಡಿಸಿದೆ. ಕೊರೋನಾ ಬೆಳ್ತಂಗಡಿ ತಾಲೂಕಿಗೂ ಬಡಿದಪ್ಪಳಿಸಿದೆ.ಉಜಿರೆಯ ಆಸ್ಪತ್ರೆಗಳು, ಹೊಟೇಲ್‌ಗಳು ಹಾಗೂ ಪೆಟ್ರೋಲ್ ಪಂಪ್‌ಗಳಲ್ಲಿ ಕೆಲಸ ಮಾಡುವ ಸುಮಾರು 52 ಮಂದಿಯ ಗಂಟಲು ದ್ರವವನ್ನು ಕಳೆದ ಕೆಲ ದಿನಗಳ ಹಿಂದೆ ಕೊರೋನಾ ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರ […]