ಕೊರೋನಾ ವಾರಿಯರ್ಸ್‌ಗೆ ಅಭಿನಂದನೆ

ಬೆಳ್ತಂಗಡಿ: ವಿಶ್ವದಾದ್ಯಂತ ಪಸರಿಸಿ ಲಕ್ಷಾಂತರ ಮಂದಿಯ ಸಾವು-ನೋವುಗಳಿಗೆ ಕಾರಣವಾದ ಕೊರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಅವಿರತವಾಗಿ ಹೋರಾಡಿ ಕೊರೋನಾ ಮಹಾಮಾರಿಯನ್ನು ಬೆಳ್ತಂಗಡಿ ತಾಲೂಕಿನಲ್ಲಿ ನಿಯಂತ್ರಿಸುವಲ್ಲಿ ಶ್ರಮಿಸಿದ ಕೊರೋನಾ ವಾರಿಯರ್ಸ್‌ಗೆ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬೆಳ್ತಂಗಡಿ ತಾಲೂಕು ಶಾಖೆಯು ವಿಶೇಷವಾಗಿ ಅಭಿನಂದನೆಯನ್ನು ಸಲ್ಲಿಸುತ್ತದೆ ಎಂದು ಸಂಘದ ಅಧ್ಯಕ್ಷ ಜಯಕೀರ್ತಿ ಜೈನ್ ಪ್ರಕಟಣೆಯೊಂದರಲ್ಲಿ ತಿಳಿಸಿದ್ದಾರೆ.ಬೆಳ್ತಂಗಡಿಯ ತಹಶೀಲ್ದಾರ್ ನೇತೃತ್ವದ ತಂಡ, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು, ಪೊಲೀಸ್ ವೃತ್ತ ನಿರೀಕ್ಷಕರು, ಉಪನಿರೀಕ್ಷಕರುಗಳು ಹಾಗೂ ಪೊಲೀಸ್ ಸಿಬ್ಬಂದಿವರ್ಗ, ತಾಲೂಕು ಪಂಚಾಯತ್ […]

ಮರಳು ಸಾಗಾಟ ವಾಹನ ತಡೆಹಿಡಿದು ಮತ್ತೆ ಪ್ರತಿಭಟನೆ

ಮುಂಡಾಜೆ: ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಫರ್ಲಾಣಿಯಲ್ಲಿ ಜೂನ್ 12ರಂದು ರಾತ್ರಿ ಮರಳು ಸಾಗಾಟದ ಲಾರಿಗಳನ್ನು ಹಾಗೂ ಮರಳು ಸಾಗಾಟಗಾರರ ವಾಹನಗಳನ್ನು ತಡೆಹಿಡಿದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಜೂ.9ರಂದು ಇದೇ ರೀತಿ ಪ್ರತಿಭಟನೆ ನಡೆದಾಗ ತಾಲೂಕು ಭೇಟಿಗೆ ಬಂದಿದ್ದ ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ತೆರಳಿ, ರಸ್ತೆ ಸರಿಪಡಿಸಿದ ಬಳಿಕ ಮರಳು ಸಾಗಾಟ ನಡೆಸುವಂತೆ ಗಣಿದಣಿಗಳಿಗೆ ಸೂಚಿಸಿದ್ದರು.ಜಿಲ್ಲಾಧಿಕಾರಿಗಳಲ್ಲಿ ರಸ್ತೆ ದುರಸ್ತಿಗೆ ಒಪ್ಪಿ ಕಾಮಗಾರಿ ಆರಂಭಿಸಿದ್ದ ಮರಳು ಗಣಿದಣಿಗಳು, ದುರಸ್ತಿ ಕಾಮಗಾರಿ ಯನ್ನು ಅರ್ಧದಲ್ಲೇ ನಿಲ್ಲಿಸಿ, ಮತ್ತೆ ಮರಳು […]

ಥರ್ಮಲ್ ಸ್ಯಾನರ್ ಕೊಡುಗೆ

ಬೆಳ್ತಂಗಡಿ: ಲಾಯ್ಲದ ಕಪುಚಿನ್ ಕೃಷಿಕ ಸೇವಾ ಕೇಂದ್ರ ಹಾಗೂ ವಿಮುಕ್ತಿ ಸಂಸ್ಥೆಯ ವತಿಯಿಂದ ಚೈಲ್ಡ್ ಫಂಡ್ ಇಂಡಿಯಾದ ಸಹಕಾರದಲ್ಲಿ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಗೆ 10ಥರ್ಮಲ್ ಸ್ಯಾನರನ್ನು‌ ಕೊಡುಗೆಯಾಗಿ ನೀಡಿ, ಕೊರೋನಾ ವಾರಿಯರ್ಸ್‌ಗಳ ಸೇವೆಗೆ ಸಹಕರಿಸಲಾಯಿತು. ವಿಮುಕ್ತಿ ಸಂಸ್ಥೆಯ ನಿರ್ದೇಶಕ ವಂದನೀಯ ವಿನೋದ್ ಮಸ್ಕರೇನ್ಹಸ್, ತಾಲೂಕು ವೈದ್ಯಾಧಿಕಾರಿ ಡಾl ಕಲಾಮಧು ಮತ್ತಿತರರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯವರೇ ಸರಿಯಾಗಿ ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರ‌ ಮರೆತು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಮಾಜಕ್ಕೆ ಕೊರೋನಾ ಸೋಂಕು ಹರಡದಂತೆ ಪಾಲಿಸಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ […]

ಬೈಕ್ ಢಿಕ್ಕಿ – ಕಾರ್ಮಿಕ ಅಪಮೃತ್ಯು

ಬೆಳ್ತಂಗಡಿ: ಉಜಿರೆ ಪೇಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಅಮಾಯಕ ಕೂಲಿ ಕಾರ್ಮಿಕ ಮೂಲತಃ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಎನ್ನಲಾದ ನಿಡಿಗಲ್ ನಿವಾಸಿ ಬೀರೇಶ್ ಆಲಿಯಾಸ್ ಫಕೀರಪ್ಪ(48) ಎಂಬಾತನಿಗೆ ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು, ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯುವ ಮಧ್ಯೆ ದಾರಿಯಲ್ಲೇ ಅಪಮೃತ್ಯುವಿಗೀಡಾದ ಘಟನೆ ಜೂನ್ 11ರಂದು ರಾತ್ರಿ ವರದಿಯಾಗಿದೆ.ಇಂದಬೆಟ್ಟು ನಿವಾಸಿ ಕಾರ್ತಿಕ್ (22) ಎಂಬಾತ ತನ್ನ ಬೈಕಿನಲ್ಲಿ ಬೆಳ್ತಂಗಡಿಯಿಂದ ಚಾರ್ಮಾಡಿ ಮಾರ್ಗದಲ್ಲಿ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಕಾರ್ತಿಕ್‌‌ಗೂ […]

ಸುಳಿಗಾಳಿ ಮಳೆಗೆ ಧರೆಗುರುಳಿದ ಅಡಿಕೆ ಮರಗಳು

ಬೆಳ್ತಂಗಡಿ: ಜೂನ್ 11ರಂದು ವಿಪರೀತ ಸುಳಿಗಾಳಿ ಬೀಸಿ‌ ಸುರಿದ ಭಾರೀ ಮಳೆಗೆ ಕುಪ್ಪೆಟ್ಟಿ ಪರಿಸರದ ನರ್ಸಪಾಲು, ಮಾಲ್ದಡ್ಕ, ಬರೆಮೇಲು ಪ್ರದೇಶದಲ್ಲಿ 800 ಅಡಿಕೆ ಮರಗಳು, ಗೇರು ಮರಗಳು ಧರಾಶಾಹಿಯಾಗಿದೆ. ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಕುಪ್ಪೆಟ್ಟಿ ಸಮೀಪ ಬೃಹದಾಕಾರದ ಮರ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾಯಿತು. ಬಳಿಕ ಸ್ಥಳೀಯರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗಾಳಿಯ ರಭಸಕ್ಕೆ ಬಾರ್ಯ ಸಮೀಪ ಸುಂದರಿ ಎಂಬುವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಪುತ್ತಿಲ ಸಮೀಪ ಆದಮ್ ಎಂಬುವವರ ಮನೆಯ ಮಾಡಿನ ಹೆಂಚುಗಳು […]

ನಾವೂರು ಗ್ರಾ. ಪಂ. ಕಟ್ಟಡಕ್ಕೆ ಶಿಲಾನ್ಯಾಸ

ಮಾಸ್ಕ್ ಧಾರಣೆ ಇಲ್ಲ-ವೈಯಕ್ತಿಕ ಅಂತರವೂ ಇಲ್ಲದ ಕಾರ್ಯಕ್ರಮ ಬೆಳ್ತಂಗಡಿ: ಕೊರೋನಾ ಸೋಂಕು ಹರಡದಂತೆ ಮುನ್ನಚ್ಛರಿಕಾ ಕ್ರಮವಾಗಿ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರ ಕಾಪಾಡುವಿಕೆ..ಎರಡನ್ನೂ ಮರೆತು ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯಲು ಸರಕಾರ ಹೇಳಿದ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೇ, ಸರಕಾರಿ ಕಾರ್ಯಕ್ರಮವೊಂದು ಬೆಳ್ತಂಗಡಿ ತಾಲೂಕಿನ ನಾವೂರಿನಲ್ಲಿ ನಡೆಯಿತು.ಜೂನ್ 10ರಂದು ನಡೆದ ನಾವೂರು ಗ್ರಾಮ‌ ಪಂಚಾಯತ್‌ನ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ […]

ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯರ ಖೆಡ್ಡಾಗೆ ಬಿದ್ದ ವೇಣೂರು ಗ್ರಾ. ಪಂ‌. ಅಧ್ಯಕ್ಷೆ

ವೇಣೂರು: ವೇಣೂರು ಗ್ರಾಮ ಪಂಚಾಯತಿನ ಅಧ್ಯಕ್ಷೆ ಬಿಜೆಪಿ ಬೆಂಬಲಿತ ಮೋಹಿನಿ ಶೆಟ್ಟಿಯವರ ವಿರುದ್ಧ ಬಿಜೆಪಿ ಬೆಂಬಲಿತ ಹಾಗೂ ಕಾಂಗ್ರೇಸ್ ಬೆಂಬಲಿತ ಒಂದು ಬಣದ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯವು ಜೂನ್ 9ರಂದು ವೇಣೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಿರ್ಣಾಯಕ ಹಂತ ತಲುಪಿತ್ತು. ಪುತ್ತೂರಿನ ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ಯತೀಶ್ ಉಲ್ಲಾಳರ ಉಪಸ್ಥಿತಿಯಲ್ಲಿ ಇಂದು ನಡೆದ ಅವಿಶ್ವಾಸ ನಿರ್ಣಯದ ಮೇಲಿನ ಮತದಾನ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ 14ಸದಸ್ಯರ ಪೈಕಿ 13ಮಂದಿ ಹಾಗೂ ಕಾಂಗ್ರೇಸ್ ಬೆಂಬಲಿತ 10ಸದಸ್ಯರ ಪೈಕಿ […]

ಗೃಹ ಸಚಿವ ಬೊಮ್ಮಾಯಿ ಧರ್ಮಸ್ಥಳಕ್ಕೆ

ಧರ್ಮಸ್ಥಳ: ಜೂನ್ 9ರಂದು ಬೆಳಿಗ್ಗೆ 11-30ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಸರಕಾರದ ಗೃಹಸಚಿವ ಬಸವರಾಜ್ ಬೊಮ್ಮಾಯಿ, ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಧರ್ಮಸ್ಥಳದ ಬೀಡಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಈ ಸಂದರ್ಭದಲ್ಲಿ ಸಚಿವರ ಜೊತೆಗಿದ್ದರು. ಬಳಿಕ ಸಚಿವ ಬೊಮ್ಮಾಯಿ ದೇಗುಲಕ್ಕೆ ತೆರಳಿ ಶ್ರೀ […]

ಕಕ್ಕಿಂಜೆ ಸೈಂಟ್ ಜೋಸೆಫ್ ಆಶ್ರಮದ ಧರ್ಮಗುರು ವಂ. ಫ್ರಾನ್ಸಿಸ್ ಚಿರಕ್ಕಲ್ ರಿಗೆ ಡಾಕ್ಟರೇಟ್

ಬೆಳ್ತಂಗಡಿ; ಕಕ್ಕಿಂಜೆ ಸೈಂಟ್ ಜೋಸೆಫ್ ಆಶ್ರಮದ ಧರ್ಮಗುರು ವಂ. ಫ್ರಾನ್ಸಿಸ್ ಚಿರಕ್ಕಲ್ ಅವರು ಮಂಡಿಸಿದ ವಿಶೇಷ ಪ್ರಬಂಧಕ್ಕೆ ಕ್ರೈಸ್ಟ್ (ಡೀಮ್ಡ್ ಟು ಬಿ ಯುನಿವರ್ಸಿಟಿ) ಬೆಂಗಳೂರು ಡಾಕ್ಟರೇಟ್ ಪದವಿ ನೀಡಿದೆ. “ಕೊಲೆಬರೇಶನ್ ಬಿಟ್ವೀನ್ ಗ್ರಾಮ ಪಂಚಾಯತ್ ಏಂಡ್ ವಿಮೆನ್ ಸೆಲ್ಪ್ ಹೆಲ್ಪ್ ಗ್ರೂಪ್ ಆಫ್ ರೂರಲ್ ಡೆವಲಪ್ಮೆಂಟ್ ಇನ್ ಕರ್ನಾಟಕ” ಮಹಾ ಪ್ರಬಂಧಕ್ಕೆ ಈ ಪದವಿ ಲಭಿಸಿದೆ.ವಂ..‌ಫ್ರಾನ್ಸಿಸ್ ಅವರು ಕ್ರೈಸ್ಟ್ (ಡೀಮ್ಡ್ ಟು‌ ಬಿ ಯುನಿವರ್ಸಿಟಿ) ಯ ಸೋಷಿಯಲ್ ವರ್ಕ್ ಏಂಡ್ ಸೋಷಿಯಾಲಜಿ ವಿಭಾಗ ಮುಖ್ಯಸ್ಥ ಡಾ.‌ […]

ನನ್ನೆರಡು ಗಿಡಗಳು ನಾಳೆಗಾಗಿ

ಬೆಳ್ತಂಗಡಿ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ವಿಶ್ವ ಪರಿಸರ ದಿನವನ್ನು ಗಿಡ ನೆಡುವುದರ ಮೂಲಕ ಆಚರಿಸಲಾಯಿತು.‘ನನ್ನೆರಡು ಗಿಡಗಳು ನಾಳೆಗಾಗಿ’ ಎಂಬ ಯೋಜನೆಯ ಮೂಲಕ ಪ್ರತೀ ಸ್ವಯಂಸೇವಕರು ಕನಿಷ್ಟ 2 ಗಿಡಗಳನ್ನು ತಮ್ಮ ಮನೆಯಲ್ಲೇ ನೆಟ್ಟು ಅದರ ದಾಖಲೀಕರಣ ಮಾಡಿದರು.ಹತ್ತಕ್ಕೂ ಹೆಚ್ಚು ಸ್ವಯಂಸೇವಕರು ಮಾವು, ಹಲಸು, ನಿಂಬೆ, ತೆಂಗು, ಹುಣಸೆ, ತುಂಬೆ, ಕನಕಾಂಬರ  ಮುಂತಾದ 30 ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದರು.ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಪ್ರೊ. ಆಶಾಕಿರಣ್ ಹಾಗೂ ಡಾ. […]