ಬೆಳ್ತಂಗಡಿ ಮಾರಿಗುಡಿ ಬಳಿ ಸೊಳ್ಳೆ ಉತ್ಪಾದನಾ ಕೇಂದ್ರ
ಸಾಂಕ್ರಾಮಿಕ ರೋಗದ ಕಾರ್ಖಾನೆಗೆ ಕಡಿವಾಣ ಬಿದ್ದೀತೇ ಜನತೆಯ ಚಿತ್ತ ಕರ್ತವ್ಯನಿಷ್ಠ ತಹಶೀಲ್ದಾರರತ್ತ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮುಖ್ಯರಸ್ತೆ ಬಳಿ ಭಕ್ತರು ಅನೇಕ ವರ್ಷಗಳಿಂದ ಆರಾಧಿಸಿಕೊಂಡು ಬರುವ ಮಾರಿಯಮ್ಮನ ದೇಗುಲವಿದೆ. ಈ ದೇಗುಲದ ಪಕ್ಕದಲ್ಲಿರುವ ಮುಖ್ಯರಸ್ತೆ ಬದಿಯ ಚರಂಡಿಯಲ್ಲಿ ಹರಿಯುವ ಪರಿಸರದ ಹೊಟೇಲುಗಳ ಹಾಗೂ ವಾಣಿಜ್ಯ ಸಂಕೀರ್ಣ-ವಸತಿ ಸಮುಚ್ಛಯಗಳ ತ್ಯಾಜ್ಯ ನೀರಿನಿಂದ ಮಾರಿಯಮ್ಮ ದೇವರೇ ಮೂಗು ಮುಚ್ಚಿ ಕೋರಬೇಕಾದ ದುರ್ಗತಿ ಬಂದೊದಗಿದೆ.ಇಲ್ಲಿ ಹರಿಯುತ್ತಿರುವ ಕೊಳಚೆ ತ್ಯಾಜ್ಯ ನೀರು ದುರ್ನಾತ ಬೀರುವುದರ ಜೊತೆಗೆ ಸಾಂಕ್ರಾಮಿಕ ರೋಗಗಳ ಕಾರ್ಖಾನೆಯಂತಿದೆ. ಈಗಾಗಲೇ […]
ರೋಗ ನಿರೋಧಕ ಶಕ್ತಿ ಹೆಚ್ಚಳದಿಂದ ಕೊರೊನಾಗೆ ತಡೆ
ಪ್ರತಿಯೊಬ್ಬ ವ್ಯಕ್ತಿಯು ತನ್ನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಳ ಮಾಡುವುದೇ ಕೊರೊನಾ ಸೋಂಕು ತಡೆಗೆ ಪರಿಹಾರ. ಈ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಶೀಲರಾದಾಗ ಖಂಡಿತಾ ಕೊರೊನಾ ನಿಯಂತ್ರಣ ಸಾಧ್ಯವಿದೆ ಎಂದು ಇಂಡಿಯಾನ್ ಹೋಮಿಯೋಪಥಿ ಮೆಡಿಕಲ್ ಅಸೋಸಿಯೇಷನ್ ಅವಿಭಜಿತ ದ.ಕ. ಜಿಲ್ಲಾ ಅಧ್ಯಕ್ಷ ಡಾ. ಪ್ರವೀಣ್ ಕುಮಾರ್ ರೈ ಹೇಳಿದರು.ಮಂಗಳೂರಿನ ಪತ್ರಿಕಾಭವನದಲ್ಲಿ ಕೊರೊನಾ ಜಾಗೃತಿ ಅಂಗವಾಗಿ ನಡೆದ ಸಂವಾದ ಹಾಗೂ ಉಚಿತ ರೋಗ ನಿರೋಧಕ ಔಷಧಿ ವಿತರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರೀಯ […]
ಮಾಸ್ಕ್ ಇಲ್ಲ-ವೈಯಕ್ತಿಕ ಅಂತರ ಗೊತ್ತೇ ಇಲ್ಲ
ಇದನ್ನು ಕಂಡಾಗ ನಮ್ಮ ನಿಮ್ಮಲ್ಲಿ ಮೂಡುವ ಪ್ರಶ್ನೆ ‘ಹೀಗೂ ಉಂಟೇ’ ಇವರಲ್ಲಿ ಮಾಸ್ಕ್ ಇಲ್ಲ; ಒಂದಿಬ್ಬರಲ್ಲಿ ಇದ್ದರೂ ಅದು ಮುಖದ ಮೇಲಿರದೇ, ಕತ್ತಿಗೆ ನೆಕ್ಲೆಸ್ ಆಗಿದೆ. ಇವರೆಲ್ಲರಿಗೂ ವೈಯಕ್ತಿಕ ಅಂತರ ಏನೆಂದೇ ಗೊತ್ತಿಲ್ಲದವರಂತಿದ್ದಾರೆ. ಅಥವಾ ಮಾಸ್ಕ್ ಧರಿಸದಿದ್ದರೆ, ವೈಯಕ್ತಿಕ ಅಂತರ ಕಾಪಾಡದಿದ್ದರೆ ಏನಾಗ್ತದೆ ಎಂದು ವ್ಯವಸ್ಥೆಗೇ ಸವಾಲು ಹಾಕ ಹೊರಟಿದ್ದಾರೆ. ಇವರು ನಮ್ಮ ರಾಜಕೀಯ ನಾಯಕರು; ಶಾಸಕರ ಸಹಿತ ಜನಪ್ರತಿನಿಧಿಗಳು. ಒಂದರ್ಥದಲ್ಲಿ ಬೇಲಿಯೇ ಎದ್ದು ಹೊಲ ಮೆದ್ದಂತಿದೆ. ಮೇ 19ರಂದು ಬೆಳ್ತಂಗಡಿಯ ಬಿಜೆಪಿ ಮಂಡಲ ಕಛೇರಿಯಲ್ಲಿ ನಡೆದ […]
ಕಾರ್ಮಿಕ ವಿರೋಧಿ ನೀತಿ ಕೈಬಿಡಲು ಒತ್ತಾಯಿಸಿ ಮನವಿ
ಕೊರೋನಾ ವೈರಸ್ ಲಾಕ್ ಡೌನ್ ನ ಸಂದಿಗ್ಧತೆಯ ನಡುವೆ ನಮ್ಮನಾಳುವ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳನ್ನು ರೂಪಿಸಲು ಹೊರಟಿರುವುದನ್ನು ಕೈಬಿಡಲು ಒತ್ತಾಯಿಸಿ ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು) ನೀಡಿದ ಕರೆಯಂತೆ ಇಂದು ಬೆಳ್ತಂಗಡಿ ತಹಶಿಲ್ದಾರರ ಮೂಲಕ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ರಾಜ್ಯ, ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಕೆಲಸದ ಅವಧಿ ಹೆಚ್ಚಳ ,ಕಾರ್ಖಾನೆ ಪರಿಭಾಷೆಗೆ ತಿದ್ದುಪಡಿ, ಕಾರ್ಮಿಕ ಕಾನೂನುಗಳ ತಿದ್ದುಪಡಿ ಮಸೂದೆ ಯನ್ನು ವಿರೋಧಿಸಿ ಜೆಸಿಟಿಯು ಇಡೀ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಈ […]
ಕೂಕ್ರಬೆಟ್ಟು ಶಾಲೆಯಲ್ಲಿ ಕ್ವಾರಂಟೈನ್ ನಿಯಮ ಉಲ್ಲಂಘನೆ
ಮುಂಬೈಯಿಂದ ಬಂದು ಮರೋಡಿ ಕೂಕ್ರಬೆಟ್ಟು ಶಾಲೆಯಲ್ಲಿ ಕ್ವಾರಂಟೈನಿನಲ್ಲಿರುವ ಒಂದಷ್ಟು ಮಂದಿ ಶಾಲಾ ಕೊಠಡಿಯಲ್ಲಿ ಕುಳಿತು ಕ್ವಾರಂಟೈನ್ ನಿಯಮ ಪಾಲಿಸುವ ಬದಲಾಗಿ, ಶ್ರಮದಾನದ ಹೆಸರಲ್ಲಿ ಶಾಲಾ ಆವರಣದಲ್ಲಿ ಸುತ್ತಾಡುತ್ತಾ ಕ್ವಾರಂಟೈನ್ ನಿಯಮವನ್ನು ಉಲ್ಲಂಘಿಸಿ, ಸ್ಥಳೀಯರಲ್ಲಿ ಭೀತಿಯನ್ನು ಹುಟ್ಟಿಸುತ್ತಿದ್ದಾರೆ. ಮುಂಬೈಯವರ ಈ ವರ್ತನೆಯಿಂದ ಕೂಕ್ರಬೆಟ್ಟು ಶಾಲೆ ಕ್ವಾರಂಟೈನ್ ಕೇಂದ್ರದ ಮಾಹಿತಿ ಬಹಿರಂಗವಾಗಿದೆ.ಹೇಳಿಕೇಳಿ ಮುಂಬೈ ಹಾಗೂ ಹೊರ ರಾಜ್ಯಗಳಿಂದ ಬಂದವರಿಂದ ರಾಜ್ಯದಲ್ಲಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ […]
ಖಾಸಗಿ ಬಸ್ ಗಳು ರಸ್ತೆಗಿಳಿಯಲ್ಲ-ನಷ್ಟಕ್ಕೆ ಯಾರು ಹೊಣೆ?
6ತಿಂಗಳ ರಸ್ತೆ ತೆರಿಗೆ ಮನ್ನಾ ಮಾಡಿ; ಅಥವಾ ಪ್ರತೀ ಬಸ್ಸಿಗೆ 1ಲಕ್ಷ ರೂಪಾಯಿ ಪರಿಹಾರ ನೀಡಲು ಒತ್ತಾಯ ಮೇ 19ರಿಂದ ಸರಕಾರಿ ಮತ್ತು ಖಾಸಗಿ ಬಸ್ಸುಗಳ ಓಡಾಟಕ್ಕೆ ರಾಜ್ಯ ಸರಕಾರ ಅವಕಾಶ ಕಲ್ಪಿಸಿದ್ದರೂ ಖಾಸಗಿ ಬಸ್ಸುಗಳು ಮೇ ತಿಂಗಳ ಅಂತ್ಯ ದವರೆಗೂ ರಸ್ತೆಗಿಳಿಯುವುದಿಲ್ಲಎಂದು ಖಾಸಗಿ ಬಸ್ಸು ಮಾಲಕರು ಖಚಿತ ಪಡಿಸಿದ್ದಾರೆ.ದ.ಕ. ಜಿಲ್ಲೆಯ ಮೂಡುಬಿದಿರೆ ಮತ್ತು ಮಂಗಳೂರು, ಅಂತೆಯೇ ಉಡುಪಿ ಜಿಲ್ಲೆಯ ಬಹುತೇಕ ಎಲ್ಲಾ ಭಾಗ ಮತ್ತು ರಾಜ್ಯದ ಇತರ ಕೆಲವು ಜಿಲ್ಲೆಗಳಲ್ಲಿ ಸಾರ್ವಜನಿಕ ಸಾರಿಗೆ ಸಂಪೂರ್ಣ ಖಾಸಗಿ […]
ಮಾಸ್ಕ್ ಧರಿಸಿದರೂ ಹಸಿವು ವೈಯಕ್ತಿಕ ಅಂತರ ಮರೆಸಿತು.
ಮೇ 17ರಂದು ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕರಾವಳಿ ಡ್ಯಾನ್ಸ್ ಯೂನಿಯನ್ನಿನ ಸದಸ್ಯರಿಗೆ ಲಾಕ್ ಡೌನ್ ಸಂದರ್ಭದ ‘ಶ್ರಮಿಕ ನೆರವು’ ಆಹಾರದ ಕಿಟ್ ವಿತರಿಸಿದರು.ಕೊರೋನಾ ಸೋಂಕು ಹರಡದಂತೆ ದೇಶದ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ಸೂಚಿಸಿದ ಮಾರ್ಗಸೂಚಿಗಳಲ್ಲಿ ಮಾಸ್ಕ್ ಧಾರಣೆಯನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಶಿಸ್ತಿನಿಂದ ಪಾಲಿಸಿದರೂ, ವೈಯಕ್ತಿಕ ಅಂತರ ಪಾಲಿಸಲು ಮರೆತಂತಿತ್ತು. ಪ್ರಾಯಶಃ ಲಾಕ್ ಡೌನ್ ಸಂದರ್ಭದ ಹಸಿವು ಆಹಾರದ ಕಿಟ್ ಸ್ವೀಕರಿಸುವಾಗ ಆತುರದಲ್ಲಿ ವೈಯಕ್ತಿಕ ಅಂತರವನ್ನು ಮರೆಸಿದಂತಿತ್ತು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಿ.ಡಿ ವಿತರಣೆ
ಕಲ್ಮಂಜ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಕಲ್ಮಂಜದ ಶ್ರೀ ಸದಾಶಿವೇಶ್ವರ ದೇವಸ್ಥಾನ ಪಜಿರಡ್ಕ ಇದರ ಅಭಿವೃದ್ಧಿ ಕಾಮಗಾರಿಗೆ ಮಂಜೂರಾದ ₹50000/(ಐವತ್ತು ಸಾವಿರದ) ಡಿ.ಡಿಯನ್ನು ಇಂದು ಹಸ್ತಾಂತರಿಸಲಾಯಿತು..ಈ ಸಂದರ್ಭದಲ್ಲಿ ಯೋಜನೆಯ ಪ್ರತಿನಿಧಿಗಳಾದ ಪ್ರಶಾಂತ್, ಸುಧಾ ಹಾಳೆದಡಿ, ಸುಂದರ ಗೌಡ ಬಜಿಲ, ಸ್ವಸ್ತಿಕ್ ಕನ್ಯಾಡಿ ಉಪಸ್ಥಿತರಿದ್ದರು. ದೇವಸ್ಥಾನದ ಪರವಾಗಿ ಆಡಳಿತ ಮಂಡಳಿಯ ಅಧ್ಯಕ್ಷ ತುಕಾರಾಮ್ ಸಾಲ್ಯಾನ್ ಆರ್ಲ, ದೇವಸ್ಥಾನದ ಅರ್ಚಕರು ಡಿ.ಡಿ ಸ್ವೀಕರಿಸಿದರು.
ಕಾರ್ಮಿಕ ವಿರೋಧಿಯಾಗಿ ಕಾರ್ಮಿಕ ಕಾಯಿದೆ ತಿದ್ದುಪಡಿಗೆ ವಿರೋಧ-ಪ್ರತಿಭಟನೆ
ಪ್ರತಿಭಟನೆಯಲ್ಲೂ ಮಾಸ್ಕ್ ಧರಿಸಿ-ವೈಯಕ್ತಿಕ ಅಂತರದ ಜಾಗೃತಿ ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತರುವ ನೆಪದಲ್ಲಿ ಕಾರ್ಮಿಕರ ವಿರೋದವಾಗಿ ತಿದ್ದುಪಡಿ ಮಾಡಲು ಸುಗ್ರಿವಾಜ್ಞೆ ಮಾಡ ಹೊರಟ ರಾಜ್ಯದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ದ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ನಾಯಕತ್ವದಲ್ಲಿ ಮೇ 16ರಂದು ಪ್ರತಿಭಟನೆ ನಡೆಯಿತು. ಕೆಲಸದ ಅವಧಿ ಹೆಚ್ಚಳ, ಸವಲತ್ತುಗಳ ಕಡಿತ ಇತ್ಯಾದಿ ತಿದ್ದುಪಡಿಯನ್ನ ವಿರೋದಿಸಿದ್ದಲ್ಲದೇ; ಎಲ್ಲಾ ವಿಭಾಗದ ದುಡಿಯುವ ಜನರಿಗೆ ಪ್ಯಾಕೇಜು ನೀಡಲು ಹಾಗೂ ಬಡ ಮಹಿಳೆಯರ ಸಾಲ ಮನ್ನಾ […]
ಜವುಳಿ ವರ್ತಕರ ಸಂಘದಿಂದ ರಕ್ತದಾನ ಶಿಬಿರ
ಮಾಸ್ಕ್ ಧರಿಸಿ- ವೈಯಕ್ತಿಕ ಅಂತರ ಕಾಪಾಡಿದ ಮಾದರಿ ಕಾರ್ಯಕ್ರಮ ಮೂಡುಬಿದಿರೆಯ ಜವುಳಿ ವರ್ತಕರ ಸಂಘದ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಮತ್ತು ಸಮಾಜಮಂದಿರ ಸಭಾ ಮೂಡುಬಿದಿರೆ ಇವರ ಸಹಯೋಗದೊಂದಿಗೆ ರೆಡ್ ಕ್ರಾಸ್ ಸೊಸೈಟಿಯವರ ಬೇಡಿಕೆಯ ಮೇರೆಗೆ ಇಲ್ಲಿನ ಸಮಾಜ ಮಂದಿರ ಸಭಾದ ಸ್ವರ್ಣಮಂದಿರದಲ್ಲಿ ತುರ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ಬಳಸಿ ಅತ್ಯಂತ ವ್ಯವಸ್ಥಿತವಾಗಿ ಈ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಕೊರೋನಾ ಜಾಗೃತಿಯನ್ನು ಮೂಡಿಸಿದ್ದು ಮಾದರಿಯಾಗಿತ್ತು.ಇಲ್ಲಿನ ಜವುಳಿ […]