ಪಟ್ರಮೆಯ ಅಶಕ್ತ ಕುಟುಂಬಕ್ಕೆ ಚಾವಣಿ ಕೊಡುಗೆ.
ಪಟ್ರಮೆಯ ವಾರ್ಡ್ -2 ರ ಬಡಕುಟುಂಬವೊಂದರ ಮನೆಯ ಮಾಡು ತೀರಾ ಕುಸಿದ ಸ್ಥಿತಿಯಲ್ಲಿದ್ದಾಗ ಸದ್ರಿ ಮಾಡನ್ನು ಸಂಪೂರ್ಣ ಹೊಸದಾಗಿ ನಿರ್ಮಿಸಲು ಅಗತ್ಯ ನೆರವು ನೀಡುವುದಾಗಿ ಈ ಹಿಂದೆ ಪಟ್ರಮೆಯ ಭಗತ್ ಸಿಂಗ್ ಯುವ ಕೇಂದ್ರ ಭರವಸೆ ಕೊಟ್ಟಿತ್ತು . ಈ ಹಿನ್ನೆಲೆಯಲ್ಲಿ ಇದೀಗ ಸದ್ರಿ ಮಾಡನ್ನು ಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಯಿತು. ಭಗತ್ ಸಿಂಗ್ ಯುವ ಕೇಂದ್ರದಿಂದ ಶ್ರಮನೆರವು ಹಾಗೂ ಧನನೆರವುಗಳನ್ನು ಒದಗಿಸಿದ್ದರು.ಪಟ್ರಮೆ ಗ್ರಾಮ ಪಂಚಾಯತ್ ಸದಸ್ಯ ಶ್ಯಾಮರಾಜ್ ಪಟ್ರಮೆ ಭಗತ್ ಸಿಂಗ್ ಯುವ ಕೇಂದ್ರದ ಕಾರ್ಯಕ್ಕೆ ಅಭಿನಂದನೆ […]
ಕೊಣಾಜೆ ಕಲ್ಲು ಸಿದ್ಧಾಶ್ರಮಕ್ಕೆ ಮಹಿಳಾ ತಂಡದಿಂದ ಗ್ಯಾಸ್ ಸಿಲಿಂಡರ್ ಕೊಡುಗೆ
ಮಾಸ್ಕ್ ಹಾಗೂ ವೈಯಕ್ತಿಕ ಅಂತರ ಮಾಯ ಮೂಡುಬಿದಿರೆ : ಇಲ್ಲಿನ ಕೊಣಾಜೆಕಲ್ಲು ಸಿದ್ಧಾಶ್ರಮ ಚಾರಣಪ್ರಿಯ ಭಕ್ತರ ಪ್ರವಾಸಿ ತಾಣವೂ ಹೌದು. ಪ್ರತಿನಿತ್ಯ ಇಲ್ಲಿಗೆ ಭಕ್ತರು ಆಗಮಿಸಿ ದರುಶನ ಪಡೆದು ಅನ್ನಪ್ರಸಾದವನ್ನೂ ಸ್ವೀಕರಿಸುತ್ತಾರೆ.ಸಿದ್ಧಾಶ್ರಮಕ್ಕೆ ಗ್ಯಾಸ್ ಸಿಲಿಂಡರ್ ಮತ್ತು ಬಯೋಗ್ಯಾಸ್ ಸಲಕರಣೆಯನ್ನು ಒದಗಿಸುವಂತೆ ಇಲ್ಲಿನ ಮುಖ್ಯಸ್ಥರು ಮೂಡುಬಿದಿರೆಯ ಮಹಿಳಾ ಸಂಘಟನೆಗೆ ಬೇಡಿಕೆ ಸಲ್ಲಿಸಿದ್ದರು.ಮಾನವ ಹಕ್ಕುಮತ್ತು ಭೃಷ್ಟಾಚಾರ ವಿರೋಧಿ ಸಂಸ್ಥೆಯ ಮಹಿಳಾ ಘಟಕದ ಸದಸ್ಯರು ದಾನಿಗಳ ಸಹಕಾರದಿಂದ ಎರಡು ಗ್ಯಾಸ್ ಸಿಲಿಂಡರ್ ಗಳನ್ನು ಕೊಣಾಜೆಕಲ್ಲು ಸಿದ್ಧಾಶ್ರಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಆದರೆ ಈ […]
ನಿಯಮ ಪಾಲಿಸಿ ನಾವು ಬದುಕಿ ಇತರರನ್ನೂ ಬದುಕಿಸೋಣಾ
ತಾಲೂಕು ಬಿಲ್ಲವ ಸಂಘದಿಂದ 2,500 ಆಹಾರ ಧಾನ್ಯ ಕಿಟ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಸಂತ ಬಂಗೇರ ಪ್ರಪಂಚದಲ್ಲಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿಪಡೆದಿರುವ ಕೊರೋನಾ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಂಡು ಇತರರನ್ನೂ ಬದುಕಲು ಬಿಡಬೇಕಾಗಿದೆ. ಅದಕ್ಕಾಗಿ ಸರಕಾರ ಹೇಳಿದ ನಿಯಮಗಳನ್ನು ಪಾಲಿಸೋಣಾ. ನಾವು ಬದುಕಿ ಇತರರಿಗೋ ಬದುಕಲು ಅವಕಾಶ ಕಲ್ಪಿಸೋಣಾ. ಮಾಸ್ಕ್ ಧಾರಣೆ ಮತ್ತು ವೈಯಕ್ತಿಕ ಅಂತರ ಕಾಪಾಡಲು ಹೆಚ್ಚು ಆಧ್ಯತೆ ನೀಡೋಣಾ. ತೀರಾ ಅಗತ್ಯ ಕೆಸಲ ಹೊರತುಪಡಿಸಿ, ಅನಗತ್ಯ ಮನೆಯಿಂದ ಹೊರಬಂದು ತಿರುಗಾಡಬೇಡಿ. […]
ಕೋವಿಡ್ ವಾರಿಯರ್ಸ್ ರಿಗೆ ಆಹಾರದ ಕಿಟ್ ವಿತರಣೆ
ಬೆಳ್ತಂಗಡಿ ರೋಟರಿ ಕ್ಲಬ್ಬಿನ ಸದಸ್ಯ ಡಾl ಪ್ರದೀಪ್ ಮೇ 12ರಂದು ಇಂದಬೆಟ್ಟುವಿನಲ್ಲಿ ಕೋವಿಡ್ ವಾರಿಯರ್ಸ್ ಎಂದು ಗುರುತಿಸಿಕೊಂಡ ಆಶಾ ಕಾರ್ಯಕರ್ತೆಯರನ್ನು ಆಹಾರ ಧಾನ್ಯದ ಕಿಟ್ ನೀಡಿ ಗೌರವಿಸುವ ಮೂಲಕ ದಾದಿಯರ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಟ್ರಸ್ಟಿನ ಅಧ್ಯಕ್ಷ ಎ. ಬಿ. ಉಮೇಶ್, ಸದಸ್ಯ ಧರ್ಣಪ್ಪ, ನಾವೂರು ಹಾಲಿನ ಸೊಸೈಟಿಯ ಅಧ್ಯಕ್ಷ ಉಮೇಶ್ ಪ್ರಭು ಮತ್ತಿತರರು ಹಾಜರಿದ್ದರು.
ರೋಟರಿ ಕ್ಲಬ್ಬಿನಿಂದ ತಾಲೂಕಿನ 50 ದಾದಿಯರಿಗೆ ಗೌರವಾರ್ಪಣೆ
50ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರು ವಿಶ್ವ ದಾದಿಯರ ದಿನವಾದ ಮೇ 12ರಂದು ತಾಲೂಕಿನ ವಿವಿಧ ಆಸ್ಪತ್ರೆಗಳ 50ಮಂದಿ ದಾದಿಯರನ್ನು ಗುರುತಿಸಿ, ಗೌರವಿಸುವ ಮೂಲಕ ತಮ್ಮ ಕ್ಲಬ್ಬಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಕಾರ್ಯಕ್ರವೊಂದನ್ನು ಸ್ಮರಣೀಯವಾಗಿಸಿದರು.ಕೊರೋನಾ ಸೋಂಕಿನ ಭೀತಿಯಿರುವ ಇಂದಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ಕೊರೋನಾ ವಿರುದ್ಧ ಸಮರ ಸಾರಿರುವ ವಾರಿಯರ್ಸ್ ಎಂದು ಗುರುತಿಸಲಾಗುತ್ತಿದ್ದು; ಇಂತಹ ಕಠಿಣ ದುಡಿಮೆಯ ದಾದಿಯರನ್ನು ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಗುರುತಿಸಿ, ಗೌರವಿಸಿದ ಈ […]
ಸರ್ವಿಸ್ ಟೆಂಪೋ ಚಾಲಕ- ಮಾಲಕರಿಗೆ ಆಹಾರದ ಕಿಟ್ ವಿತರಣೆ
ಮಾಸ್ಕ್ ಧರಿಸಿ ವೈಯಕ್ತಿಕ ಅಂತರದ ಬಗ್ಗೆ ಎಚ್ಚರಿಕೆ ವಹಿಸಿದ ಕಾರ್ಯಕ್ರಮ ಬೆಳ್ತಂಗಡಿ ತಾಲೂಕಿನಿಂದ ಊರುಗಳಿಗೆ ಹೋಗುವ ಪ್ರಯಾಣಿಕರನ್ನು ಕರೆದೊಯ್ಯುವ ಟೂರಿಸ್ಟ್ ಟೆಂಪೋ ಚಾಲಕ-ಮಾಲಕರು ಕೊರೊನಾ ಲಾಕ್ ಡೌನ್ ನಿಂದಾಗಿ ಬಾಡಿಗೆ ಮಾಡಲಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಟೂರಿಸ್ಟ್ ವಾಹನ ಚಾಲಕ ಮಾಲಕ ಸಂಘದ ಸದಸ್ಯರಿಗೆ ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್ಆಹಾರದ ಕಿಟ್ ಗಳನ್ನು ವಿತರಿಸಿದರು. ಎಲ್ಲರೂ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರದ ಬಗ್ಗೆ ಎಚ್ಚರವಹಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಬೆಳ್ತಂಗಡಿ ಸಂತೆಕಟ್ಟೆಯ ಬಳಿಯಿರುವ ಪ್ರಿಯದರ್ಶಿನಿ […]
ತಾಲೂಕು ಮುಸ್ಲಿಂ ಜಮಾಅತ್‌ನಿಂದ 250 ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ
ಮಾಸ್ಕ್ ಧಾರಣೆಯಲ್ಲಿ ಪರ್ಫೆಕ್ಟ್-ವೈಯಕ್ತಿಕ ಅಂತರ ಪಾಲನೆಯಲ್ಲಿ ಎಡವಟ್ಟು ಬೆಳ್ತಂಗಡಿ: ಕರ್ನಾಟಕ ಮುಸ್ಲಿಂ ಜಮಾಅತ್ (ಕೆ.ಎಮ್.ಜೆ.ಸಿ) ಇದರ ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ತಾಲೂಕಿನ ಬ್ಲಾಕ್ ಸಮಿತಿ ಗಳ ಮೂಲಕ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಒಟ್ಟು 250 ಆಯ್ದ ಕುಟುಂಬಗಳಿಗೆ ಆಹಾರ ವಸ್ತುಗಳ ಕಿಟ್ ಗಳನ್ನು ಮೇ.11 ರಂದು ವಿತರಿಸ ಲಾಯಿತು. ಸಂಘಟನೆಯ ಎಲ್ಲ ಪ್ರಮುಖರೂ ಸರಿಯಾಗಿ ಮಾಸ್ಕ್ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೂ; ವೈಯಕ್ತಿಕ ಅಂತರ ಪಾಲಿಸದೇ ಎಡವಟ್ಟು ಮಾಡಿಕೊಂಡದ್ದರಿಂದ ಕೊರೋನಾ ಸೋಂಕು ಹರಡುವಿಕೆಯ ವಿರುದ್ಧ ಜಾಗೃತಿ ಮೂಡಿಸುವಲ್ಲಿ […]
ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆಯ ವಿರುದ್ಧ ಅವಿಶ್ವಾಸ
ಗ್ರಾಮ ಪಂಚಾಯತಿನ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ವಿಫಲರಾಗಿ ಪ್ರತಿಪಕ್ಷ ಕಾಂಗ್ರೇಸ್ ಮಾತ್ರವಲ್ಲ; ಸ್ವಪಕ್ಷೀಯರಾದ ಬಿಜೆಪಿ ಸದಸ್ಯರ ಅಸಮಾಧಾನಕ್ಕೆ ಗುರಿಯಾಗಿದ್ದ ವೇಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ವಿ. ಶೆಟ್ಟರ ಮೇಲೆ ಎಲ್ಲ ಸದಸ್ಯರೂ ಭ್ರಷ್ಟಾಚಾರದ ಆರೋಪವನ್ನೂ ಈ ಹಿಂದೆ ಹೊರಿಸಿ ತನಿಖೆಗೆ ಆಗ್ರಹಿಸಿದ್ದರು. ಇದೀಗ ಮೇ 11ರಂದು ಗ್ರಾಮ ಪಂಚಾಯತಿನ ಎಲ್ಲ 23ಮಂದಿ ಸದಸ್ಯರು ಒಗ್ಗಟ್ಟಾಗಿ ಪಕ್ಷಭೇದ ಮರೆತು ಅಧ್ಯಕ್ಷೆ ಮೋಹಿನಿ ವಿ. ಶೆಟ್ಟಿಯವರ ವಿರುದ್ಧ ಅವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಪುತ್ತೂರಿನ ಸಹಾಯಕ ಕಮಿಷನರರಿಗೆ ಲಿಖಿತವಾಗಿ […]
ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಗಳಿಗೆ ಆಹಾರದ ಕಿಟ್ ವಿತರಣೆ
ಮಾಸ್ಕ್ ಧರಿಸಿ ವೈಯಕ್ತಿಕ ಅಂತರದ ಬಗ್ಗೆ ಎಚ್ಚರಿಕೆ ವಹಿಸಿದ ಕಾರ್ಯಕ್ರಮ ರಸ್ತೆ ಅಪಘಾತ ಮತ್ತು ತುರ್ತು ಸಂಧರ್ಭದಲ್ಲಿ ರೋಗಿಯ ಜೀವ ಉಳಿಸಬೇಕೆಂಬ ಉದ್ದೇಶದಿಂದಸೇವಾ ಮನೋಭಾವದಿಂದ ಮಾಡುವ ಕರ್ತವ್ಯ ನಿರ್ವಹಿಸುವ ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಗಳ ಕಾರ್ಯವೈಖರಿಯನ್ನು ಶ್ಲಾಘಿಸಿದ ವಿಧಾನ ಪರಿಷತ್ ಶಾಸಕರಾದ ಕೆ.ಹರೀಶ್ ಕುಮಾರ್ ರವರು ಕೊರೋನಾ ಲಾಕ್ ಡೌನಿನ ಈ ಸಂಧರ್ಭದಲ್ಲಿ ಸರ್ಕಾರಿ ಮತ್ತು ಖಾಸಗಿ ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಗಳು ತನ್ನ ಜೀವದ ಹಂಗು ತೊರೆದು ದಿನದ 24 ಗಂಟೆಯೂ ಸೇವೆ ಸಲ್ಲಿಸುತ್ತಿದ್ದು; ಇಂತಹ […]
ಬೀದಿ ಬದಿ ವ್ಯಾಪಾರಿಗಳು ಬೀದಿಪಾಲು
ರಕ್ಷಣೆಗೆ ಧಾವಿಸಿದ ಕಾಂಗ್ರೇಸಿಗರಿಂದ ಧರಣಿ ಮೇ 10ರ ರಾತ್ರಿ ಬೆಳ್ತಂಗಡಿಯ ಪಟ್ಟಣ ಪಂಚಾಯತು ಅಧಿಕಾರಿಗಳು ತಮ್ಮ ಸಿಬ್ಬಂದಿಗಳನ್ನು ಬಳಸಿ, ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಹೆದ್ದಾರಿ ಬದಿಯಲ್ಲಿರುವ ಬೀದಿಬದಿಯ ಹಣ್ಣು-ತರಕಾರಿ ವ್ಯಾಪಾರಿಗಳ ತಾತ್ಕಾಲಿಕ ಶೆಡ್ ಗಳನ್ನು ಕೆಡವಿ, ಬೀದಿಬದಿಯ ವ್ಯಾಪಾರಿಗಳನ್ನು ಬೀದಿಪಾಲು ಮಾಡಿದ್ದಾರೆ ಎಂದು ಆರೋಪಿಸಿರುವ ಬೆಳ್ತಂಗಡಿ ತಾಲೂಕು ಕಾಂಗ್ರೇಸ್ ನಾಯಕರು ಪಕ್ಷದ ಕಾರ್ಯಕರ್ತರು ಹಾಗೂ ಬೆಳ್ತಂಗಡಿಯ ಬೀದಿಬದಿ ವ್ಯಾಪಾರಸ್ಥರೊಂದಿಗೆ ಸೇರಿ ಮೇ 11ರಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ಎದುರು ಧರಣಿ ನಡೆಸಿದರು.ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, […]