ಧರ್ಮಸ್ಥಳ ಸೊಸೈಟಿ ಸಿಇಒ ಅಸಹಜ ಸಾವಿನ ಪ್ರಕರಣ;ತನಿಖೆಗೆ ಸಂಪೂರ್ಣ ಸಹಕಾರ-ಅಧ್ಯಕ್ಷ ಗಾಂಭೀರ್

Facebook
Twitter
LinkedIn
WhatsApp

ಬೆಳ್ತಂಗಡಿ: ಮೇ 3ರಂದು ಸಂಘದ ಸಭಾಂಗಣದಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನ್‌ರ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್, ಮೃತ ರವೀಂದ್ರನ್‌ರ ಆತ್ಮಕ್ಕೆ ಚಿರಶಾಂತಿಯನ್ನು ಕೋರುವುದರ ಜೊತೆಗೆ ಅವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಸರ್ವಶಕ್ತ ಅವರ ಕುಟುಂಬಿಕರಿಗೆ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.ಇದೊಂದು ನಂಬಲಾಗದ ದುರ್ದೈವ ಸಂಗತಿ ಎಂದಿರುವ ಸಂಘದ ಅಧ್ಯಕ್ಷ ಹರಿದಾಸ್ ಗಾಂಭೀರ್, ಮೃತ ರವೀಂದ್ರನ್‌ರ ಕುಟುಂಬಕ್ಕೆ ಸಂಘದಿಂದ ಸಾಧ್ಯವಿರುವ ಸರ್ವರೀತಿಯ ನೆರವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ. ರವೀಂದ್ರನ್‌ರ ಅಸಹಜ ಸಾವಿನ ಕಾರಣದ ಬಗ್ಗೆ ಸಾಕಷ್ಟು ಊಹಾಪೋಹಗಳಿದ್ದು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಡೆಸುವ ತನಿಖೆಗೆ ನಾವು ಸಂಪೂರ್ಣ ಸಹಕಾರ ನೀಡಲಿದ್ದೇವೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Latest News

Related Posts