ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್‌ನ ಅಧ್ಯಕ್ಷರಾಗಿ ಲ್ಯಾನ್ಸಿ ಎ. ಪಿರೇರಾ

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್‌ನ ಅಧ್ಯಕ್ಷರಾಗಿ ಲ್ಯಾನ್ಸಿ ಎ. ಪಿರೇರಾ
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇಂಬರ್‌ನ 2021-22ನೇ ಸಾಲಿನ ಅಧ್ಯಕ್ಷರಾಗಿ ಬೆಳ್ತಂಗಡಿಯ ಉದ್ಯಮಿ, ಹಿಮಾಲಯ ಫೈನಾನ್ಸ್‌ನ ಮಾಲಕ ಹಾಗೂ ಬೆಳ್ತಂಗಡಿಯ ಪ್ರೇರಣಾ ಸೌಹಾರ್ದ ಸಹಕಾರಿಯ ಅಧ್ಯಕ್ಷರೂ ಆಗಿರುವ ಲ್ಯಾನ್ಸಿ ಎ. ಪಿರೇರಾ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಜುಲೈ 18ರಂದು ಬೆಳ್ತಂಗಡಿಯಲ್ಲಿ ಮಂಜುಶ್ರೀ ಸೀನಿಯರ್ ಛೇಂಬರ್‌ನ ಅಧ್ಯಕ್ಷ ವಿಶ್ವನಾಥ್ ಶೆಟ್ಟರ ಅಧ್ಯಕ್ಷತೆಯಲ್ಲಿ ಸ್ಥಾಪಕಾಧ್ಯಕ್ಷ ಪ್ರಮೋದ್ ಆರ್. ನಾಯಕ್‌ರ ಉಪಸ್ಥಿತಿಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಛೇಂಬರ್‌ನ ಕಾರ್ಯದರ್ಶಿಯಾಗಿ ಲೋಕೋಪಯೋಗಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಹರೀಶ್ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ಲಕ್ಷ್ಮಿ ಫ್ಯಾನ್ಸಿ ಸ್ಟೋರ್‌ನ ಮಾಲಕ ಗೋಪಾಲಕೃಷ್ಣ ಭಟ್, ಉಪಾಧ್ಯಕ್ಷರಾಗಿ ವಿಶ್ವನಾಥ ಲಾಯ್ಲ, ರಾಧಾಕೃಷ್ಣ, ಜಗದೀಶ್ ಡಿ., ಜ್ಹೋನ್ ಅರ್ವಿನ್ ಡಿ’ಸೋಜಾ, ಪುಷ್ಪರಾಜ್ ಶೆಟ್ಟಿ, ಮಂಜುನಾಥ ರೈ, ಭರತ್ ಕುಮಾರ್, ಸಂತೋಷ್ ಹೆಗ್ಡೆ, ದಯಾನಂದ, ಅಶೋಕ್ ಬಿ., ಜಯಾನಂದ ಗೌಡ ಸರ್ವಾನುಮತದಿಂದ ಆಯ್ಕೆಯಾದರು. ನೂತನ ಕಾರ್ಯದರ್ಶಿ ಹರೀಶ್ ಶೆಟ್ಟಿ ವಂದಿಸಿದರು.

Latest News

Related Posts