ಮರಾಠಿ ಆರೋಗ್ಯ ನಿಧಿ ಹಸ್ತಾಂತರ

ಮರಾಠಿ ಆರೋಗ್ಯ ನಿಧಿ ಹಸ್ತಾಂತರ
Facebook
Twitter
LinkedIn
WhatsApp

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದಿಂದ ಮರಾಟಿ ಆರೋಗ್ಯ ನಿಧಿ‌ ಹಸ್ತಾಂತರ ನಡೆಯಿತು. ಸಂಘದ ಸದಸ್ಯ ಕಣಿಯೂರು ಗ್ರಾಮದ ಪೈರೊಟ್ಟು ಸುಂದರ ನಾಯ್ಕ ಅವರ ಪತ್ನಿ ರೇವತಿ ಅವರ ಚಿಕಿತ್ಸೆಗೆ ದಾನಿಗಳಿಂದ ಸಂಗ್ರಹಿಸಿದ ಮರಾಟಿ ಆರೋಗ್ಯ ನಿಧಿ 34 ಸಾವಿರ ರೂಪಾಯಿಯನ್ನು ಹಸ್ತಾಂತರಿಸಲಾಯಿತು.ಸಂಘದ ಅಧ್ಯಕ್ಷ ಉಮೇಶ್ ಕೆ., ಗೌರವ ಸಲಹೆಗಾರರಾದ ಸಂತೋಷ್ ಕುಮಾರ್ ಲಾಯ್ಲ, ಉಪಾಧ್ಯಕ್ಷ ಸತೀಶ್ ಎಚ್.ಎಲ್., ಕಾರ್ಯದರ್ಶಿ ಪ್ರಸಾದ್, ಕೋಶಾಧಿಕಾರಿ ಪ್ರಜ್ವಲ್, ಪತ್ರಿಕಾ ಮಾಧ್ಯಮ ಜತೆ ಕಾರ್ಯದರ್ಶಿ ಶರತ್ ಕಣಿಯೂರು, ಕಣಿಯೂರು ಗ್ರಾಮ ಸಮಿತಿಯ ಕ್ರೀಡಾ ಕಾರ್ಯದರ್ಶಿ ಯಾದವ, ಸದಸ್ಯರಾದ ಶರತ್ ಗೇರುಕಟ್ಟೆ, ಶಿವರಾಮ ಕೊಳಚ್ಚಾವು, ಕಾರ್ತಿಕ್ ಕಣಿಯೂರು ಹಾಜರಿದ್ದರು. ರೇವತಿ ಅವರ ಸಂಕಷ್ಟಕ್ಕೆ ಸ್ಪಂದಿಸಿಧನಸಹಾಯ ನೀಡಿದ ಸಮುದಾಯದವರಿಗೆ ಸಂಘದಿಂದ ಧನ್ಯವಾದ ಸಲ್ಲಿಸಲಾಯಿತು.

Latest News

Related Posts