ಓಡೀಲು ದೇಗುಲದಲ್ಲಿ ದೃಢಕಲಶಾಭಿಷೇಕ

ಓಡೀಲು ದೇಗುಲದಲ್ಲಿ ದೃಢಕಲಶಾಭಿಷೇಕ
Facebook
Twitter
LinkedIn
WhatsApp

ಬೆಳ್ತಂಗಡಿ: ಪಡಂಗಡಿ ಗ್ರಾಮದ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮೇ 30ರಂದು ದೃಢಕಲಶಾಭಿಷೇಕ ಹಾಗೂ ಚಂಡಿಕಾಯಾಗವು ಪ್ರಧಾನ ಅರ್ಚಕ ರಘುರಾಮ ಭಟ್ ಮಠ ಅವರ ಉಪಸ್ಥಿತಿಯಲ್ಲಿ ತಂತ್ರಿಗಳಾದ ಉದಯ ಪಾಂಗಾಣ್ಣಯರ ನೇತೃತ್ವದಲ್ಲಿ ವಿವಿಧ ವೈಧಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.ಮೇ 29ರಂದು ಸಂಜೆ ಗಂಟೆ 5 ರಿಂದ ರಾಕ್ಷೋಘ್ನ ಹೋಮ ಹಾಗೂ ವಾಸ್ತು ಹೋಮ ನಡೆಯಿತು. ಮೇ 30ರಂದು ಕಲಶಾಧಿವಾಸ, ಅಧಿವಾಸ ಹೋಮ, ಚಂಡಿಕಾಯಾಗ, ಮಹಾ ಪೂಜೆ ಜರಗಿತು. ಬ್ರಹ್ಮಕಲಶೋತ್ಸವ ಸಮಿತಿ ಪಧಾದಿಕಾರಿಗಳು; ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರುಗಳು; ಪಡಂಗಡಿ, ಕುವೆಟ್ಟು’ ಸೊಣಂದೂರು ಹಾಗೂ ಓಡಿಲ್ನಾಳ ಗ್ರಾಮದ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು

Latest News

Related Posts