ಪರಿಸರ ದಿನಾಚರಣೆ

ಪರಿಸರ ದಿನಾಚರಣೆ
Facebook
Twitter
LinkedIn
WhatsApp

ಬೆಳ್ತಂಗಡಿ: ನಾಗರಿಕ ಸೇವಾ ಟ್ರಸ್ಟ್‌ನ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಪ್ರತಿ ವರ್ಷದಂತೆ ಟ್ರಸ್ಟ್ ಕಚೇರಿಯಲ್ಲಿ ಜೂನ್ 6ರಂದು ಆಚರಿಸಲಾಯಿತು. ದಕ್ಷಿಣ ಕನ್ನಡ ಪರಿಸರಾಸ್ತಕರ ಒಕ್ಕೂಟದ ಮಾಜಿ ಅಧ್ಯಕ್ಷ ನಾಟಿ ವೈದ್ಯ ಐ. ಕುಶಾಲಪ್ಪ ಗೌಡ ಗಿಡಮೂಲಿಕೆಗಳ ಔಷಧೀಯ ಗುಣಗಳ ಕುರಿತು ಮಾಹಿತಿ ನೀಡಿ, ಮನೆಗೆ ಬೇಕಾದ ತರಕಾರಿಯನ್ನು ಮನೆಯ ಸುತ್ತ ಕಡಿಮೆ ಸ್ಥಳದಲ್ಲಿ ಬೆಳೆಸುವ ಸರಳ ವಿಧಾನ ವಿವರಿಸಿದರು. ಟ್ರಸ್ಟ್ ಉಪಾಧ್ಯಕ್ಷೆ, ಕರಾವಳಿ ಮಹಿಳಾ ಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷೆ ವಿದ್ಯಾ ನಾಯಕ್ ವಿಶ್ವ ಪರಿಸರ ದಿನಾಚರಣೆಯ ಈ ವರ್ಷದ ಥೀಮ್ ‘ಭೂಮಿ ಪುನಃ ಸ್ಥಾಪನೆ, ಮರುಭೂಮಿ ಮತ್ತು ಬರ ಸ್ಥಿತಿ ಸ್ಥಾಪಕತ್ವ’ ಇದರ ಬಗ್ಗೆ ಮಾತಾಡಿದರು. ಟ್ರಸ್ಟ್ ಅಧ್ಯಕ್ಷ ಕೆ. ಸೋಮನಾಥ ನಾಯಕ್ ಸಭಾಧ್ಯಕ್ಷತೆ ವಹಿಸಿದ್ದರು. ಟ್ರಸ್ಟಿ ಸದಾಶಿವ ಹೆಗ್ಡೆ ಸ್ವಾಗತಿಸಿ, ದಲಿತ ಮುಖಂಡ ಎಂ.ಬಿ. ಕರಿಯ ವಂದಿಸಿದರು. ಟ್ರಸ್ಟ್‌ನ ಕಛೇರಿ ಮೆನೇಜರ್ ಬಾಬು ಎ. ಕಾರ್ಯಕ್ರಮ ನಿರೂಪಿಸಿದರು.

Latest News

Related Posts