ಪಿಲಿಗೂಡು ಶಾಲೆಗೆ ಮಿಕ್ಸಿ, ಗ್ಯಾಸ್ ಸಿಲಿಂಡರ್ ಹಸ್ತಾಂತರ

ಪಿಲಿಗೂಡು ಶಾಲೆಗೆ ಮಿಕ್ಸಿ, ಗ್ಯಾಸ್ ಸಿಲಿಂಡರ್ ಹಸ್ತಾಂತರ
Facebook
Twitter
LinkedIn
WhatsApp

ಬೆಳ್ತಂಗಡಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಿಲಿಗೂಡಿನಿಂದ ಜೂನ್ 5ರ ರಾತ್ರಿ ಮಿಕ್ಸಿ, ಗ್ಯಾಸ್ ಸಿಲಿಂಡರ್ ಸೇರಿದಂತೆ ಇನ್ನಿತರ ವಸ್ತುಗಳು ಕಳವಾಗಿದ್ದು; ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಸಾಧ್ಯವಾಗದೆ ಸಮಸ್ಯೆಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ತಂಡದ ಸಂಚಾಲಕರಾದ ಮೋಹನ್ ಕುಮಾರ್ ಶಾಲಾ ಮಕ್ಕಳಿಗೆ ಬಿಸಿಯೂಟಕ್ಕೆ ತೊಂದರೆಯಾಗಬಾರದು ಎಂಬ ನಿಟ್ಟಿನಲ್ಲಿ ತಕ್ಷಣ ಶಾಲೆಗೆ ಮಿಕ್ಸಿ ಹಾಗೂ ಗ್ಯಾಸ್ ಸಿಲಿಂಡರ್ ನೀಡಲು ಮುಂದಾಗಿದ್ದರು‌.ಅದರಂತೆ ಜೂ 7 ರಂದು‌ ಬೆಳಗ್ಗೆ 11 ಗಂಟೆಗೆ ಲಕ್ಷ್ಮೀ ಇಂಡಸ್ಟ್ರೀಸ್ ‘ಕನಸಿನ ಮನೆ’ ಮಾಲೀಕರು ಹಾಗೂ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ಉಜಿರೆಯ ಸಂಚಾಲಕರಾದ ಮೋಹನ್ ಕುಮಾರ್ ಅವರು ಶಾಲೆಗೆ ತೆರಳಿ ಹೊಸದಾಗಿ ಮಿಕ್ಸಿ ಹಾಗೂ ಗ್ಯಾಸ್ ಸಿಲಿಂಡರನ್ನು ಶಾಲೆಗೆ ಹಸ್ತಾಂತರ ಮಾಡಿದರು.ಕಾರ್ಯಕ್ರಮದಲ್ಲಿ ಉಜಿರೆ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ (ರಿ) ಸಂಚಾಲಕರಾದ ಮೋಹನ್ ಕುಮಾರ್ , ಪತ್ರಕರ್ತ ಪ್ರಸಾದ್ ಶೆಟ್ಟಿ ಎಣಿಂಜೆ, ಪಿಲಿಗೂಡು ಶಾಲೆಯ ಮುಖ್ಯ ಶಿಕ್ಷಕಿ ಫ್ಲೇವಿಯಾ ಡಿ’ಸೋಜಾ, ಸಹ ಶಿಕ್ಷಕಿಯರಾದ ಚಂದ್ರಾ ಕೆ‌., ಶಿಲ್ಪಾ, ಉಷಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಇಸ್ಮಾಯಿಲ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭುವನೇಶ್, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಬಾಲಕೃಷ್ಣ ಹಾಗೂ ವನಿತಾ ಮತ್ತು ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.

Latest News

Related Posts