ಬೆಳ್ತಂಗಡಿ: ಉಜಿರೆ ಶ್ರೀ ಶಾರದಾ ಪೂಜಾ ಸಮಿತಿ ವತಿಯಿಂದ 44ನೇ ವರ್ಷದ 4 ದಿನಗಳ ಶ್ರೀ ಶಾರದಾ ಪೂಜೋತ್ಸವ ಹಾಗೂ ತದಂಗವಾಗಿ ನಡೆಯಲಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಉಜಿರೆಯ ಶ್ರೀ ಶಾರದಾ ಮಂಟಪದಲ್ಲಿ ಅಕ್ಟೋಬರ್ 9ರಂದು ವಿದ್ಯುಕ್ತವಾಗಿ ಆರಂಭಗೊಂಡಿತು. ಬೆಳಿಗ್ಗೆ ಶ್ರೀ ಜನಾರ್ದನ ಸ್ವಾಮಿ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿದ ಬಳಿಕ ಶ್ರೀ ಶಾರದಾ ಮಂಟಪದಲ್ಲಿ ಶ್ರೀ ಗಣಪತಿ ಹವನ ಹಾಗೂ ಶ್ರೀ ಶಾರದಾ ಮೂರ್ತಿ ಪ್ರತಿಷ್ಠಾ ಕಾರ್ಯ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರ ಪೌರೋಹಿತ್ಯದಲ್ಲಿ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ಣಾಯರ ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಶಾರದಾಮೂರ್ತಿಯ ಸೇವಾಕರ್ತ ಪ್ರಭಾತ್ ಭಟ್, ಜ್ಯೋತಿ ಪ್ರಭಾತ್ ಪ್ರಭು, ಗೀತಾ ವಾಮನ ಬೆಂಡೆ, ಅಪ್ಪಿ ಕುಮಾರಸ್ವಾಮಿ, ಸಮಿತಿ ಅಧ್ಯಕ್ಷ ಎನ್. ಮಾಧವ ಹೊಳ್ಳ, ಕಾರ್ಯದರ್ಶಿ ಅಜೇಯ ಶೆಟ್ಟಿ, ಕೋಶಾಧಿಕಾರಿ ಶಿವಪ್ರಸಾದ್ ಸುರ್ಯ, ಪ್ರಮುಖರಾದ ರಾಘವೇಂದ್ರ ಬೈಪಾಡಿತ್ತಾಯ, ಭರತ್ ಕುಮಾರ್, ಪ್ರಶಾಂತ್ ಶೆಟ್ಟಿಗಾರ್, ಉಪಾಧ್ಯಕ್ಷರಾದ ಹುಕುಂ ರಾಮ್ ಪಟೇಲ್,ಲಕ್ಷ್ಮಣ ಸಫಲ್ಯ, ಪ್ರಕಾಶ್ ಗೌಡ ಇಜ್ಜಲ, ವನಿತಾ ವಿಶ್ವನಾಥ ಶೆಟ್ಟಿ, ಕಿರಣ್ ರಾಜ್ ಅತ್ತಾಜೆ, ಮೋಹನ ಶೆಟ್ಟಿಗಾರ್, ಪದ್ಮನಾಭ ಶೆಟ್ಟಿಗಾರ್, ಸಂಜೀವ ಶೆಟ್ಟಿ ಕುಂಟಿನಿ, ಪರಾರಿ ವೆಂಕಟ್ರಮಣ ಹೆಬ್ಬಾರ್, ವಿನಯಚಂದ್ರ ಮತ್ತಿತರರು ಉಪಸ್ಥಿತರಿದ್ದರು. ದಿಶಾ ಸಮೂಹ ಸಂಸ್ಥೆಯ ಅರುಣಕುಮಾರ್ ಉಜಿರೆಯ ಛತ್ರಪತಿ ಶಿವಾಜಿ ಭಜನಾ ಮಂಡಳಿಯ ಕುಣಿತ ಭಜನೆ ಉದ್ಘಾಟಿಸಿ ಚಾಲನೆ ನೀಡಿದರು. ಮದ್ಯಾಹ್ನ ಉಜಿರೆಯ ಶ್ರೀ ಮಹಮ್ಮಾಯಿ ಭಜನಾ ಮಂಡಳಿ ಮತ್ತು ಶ್ರೀ ಜನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ ಚಿಬಿದ್ರೆಯ ಪ್ರಿಯಾ ಸತೀಶ್ ಮತ್ತು ತಂಡದವರಿಂದ ನೃತ್ಯ ವೈವಿಧ್ಯ ನಡೆಯಿತು. ಅಕ್ಟೋಬರ್ 12ರ ವರೆಗೆ ಶ್ರೀ ಶಾರದಾ ಮಂಟಪದಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಬಳಿಕ ಶ್ರೀ ಶಾರದಾಮೂರ್ತಿಯ ಭವ್ಯ ಶೋಭಾಯಾತ್ರೆ ನಡೆದು ಮೂರ್ತಿಯ ವಿಸರ್ಜನೆ ನಡೆಯಲಿದೆ.







