ಡಿಕೆಆರ್‌ಡಿಎಸ್ ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

ಡಿಕೆಆರ್‌ಡಿಎಸ್  ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ
Facebook
Twitter
LinkedIn
WhatsApp

ಬೆಳ್ತಂಗಡಿ: ಡಿಕೆಆರ್‌ಡಿಎಸ್ ಬೆಳ್ತಂಗಡಿಯ ಆಶ್ರಯದಲ್ಲಿ ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರದ ನೇತೃತ್ವದಲ್ಲಿ ಅಕ್ಟೋಬರ್ 19 ರಂದು ಹೆಚ್‌ಐವಿ/ಏಡ್ಸ್ ಸೋಂಕಿತ ಹಾಗೂ ಬಾಧಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಮತ್ತು ಮಾಹಿತಿ ಕಾರ್ಯಕ್ರಮವು ಬೆಳ್ತಂಗಡಿಯಸಾಂತೋಮ್ ಟವರ್ ನಲ್ಲಿ ನಡೆಯಿತು.ಬಂಗಾಡಿ ಮರಿಯಾಂಬಿಕಾ ಚರ್ಚ್‌ನ ಧರ್ಮಗುರು ವಂದನೀಯ ಸೆಬಾಸ್ಟಿಯನ್ ಚೆಲಕ್ಕಪಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ; ಯಾವುದೇ ಸರಕಾರದ ಅನುದಾನವಿಲ್ಲದೆ ಈ ಕಾರ್ಯಕ್ರಮ ನಡೆಯುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಕ್ಕೆ ನಾವೆಲ್ಲರೂ ಕೈಜೋಡಿಸೋಣ ಎಂದು ಸಲಹೆ ನೀಡಿ, ಪೌಷ್ಟಿಕ ಆಹಾರದ ಕಿಟ್ ವಿತರಿಸಿದರು.ಕಾಂಚಾಲ್ ಅರ್ಚನಾ ಸ್ವಸಹಾಯ ಸಂಘದ ಅಧ್ಯಕ್ಷೆ ಏಲಿಯ ಜೋಸ್ ಹಾಗೂ ಸಂಘದ ಸದಸ್ಯರ ನೇತೃತ್ವದಲ್ಲಿ ಪೌಷ್ಟಿಕ ಆಹಾರದ ಕಿಟ್ ವಿತರಿಸಿದರಲ್ಲದೇ; ರೂಪಾಯಿ 10,000/- ವನ್ನು ನವಜೀವನ ಆರೈಕೆ ಹಾಗೂ ಬೆಂಬಲ ಕಾರ್ಯಕ್ರಮಕ್ಕೆ ನೀಡಿದರು.ಅರ್ಚನಾ ಸ್ವಸಹಾಯ ಸಂಘದ ಸದಸ್ಯೆ ಜಾನೆಟ್ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಪುಷ್ಪರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಿಕೆಆರ್‌ಡಿಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಬಿನೋಯಿ ಎ.ಜೆ. ಪ್ರಾಸ್ತಾವಿಕವಾಗಿ ಮಾತನಾಡಿ; ದೇವಾಲಯಕ್ಕೆ ಹೋದರೆ ಕಣ್ಣು ಮುಚ್ಚಿ ನಿಲ್ಲಬೇಕು; ಗ್ರಂಥಾಲಯಕ್ಕೆ ಹೋದರೆ ಕಣ್ಣು ತೆರೆದು ನಿಲ್ಲಬೇಕುಎಂದರಲ್ಲದೇ, ಈ ಕಾರ್ಯಕ್ರಮದ ಮೂಲಕ ಉತ್ತಮ ಅರಿವನ್ನು ಪಡೆದು ಮುನ್ನಡೆಯೋಣ ಎಂದರು. ನವ ಜೀವನ ಬೆಂಬಲ ಕಾರ್ಯಕ್ರಮದ ಸದಸ್ಯೆ ಪುಷ್ಪ ಪ್ರಾರ್ಥಿಸಿದರು. ಡಿಕೆಆರ್‌ಡಿಎಸ್ ಸಂಸ್ಥೆಯ ಸoಯೋಜಕಿ ಶ್ರೇಯಾ ಸ್ವಾಗತಿಸಿದರು. ಕಾರ್ಯಕರ್ತ ಜೋನ್ಸನ್ ವಂದಿಸಿದರು.ಕಾರ್ಯಕರ್ತ ಮಾರ್ಕ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾತು.

Latest News

Related Posts