ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಲಾಯ್ಲ ಗ್ರಾಮದ ಲಾಯ್ಲ ಟಿ. ಬಿ. ಕ್ರಾಸ್ ಎಂಬಲ್ಲಿ ಅಕ್ರಮವಾಗಿ ಕಸ ಎಸೆದ ಬಗ್ಗೆ ಮಾಹಿತಿ ಪಡೆದು, ಗ್ರಾಮ ಪಂಚಾಯತ್‌ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಾರಾನಾಥ ನಾಯ್ಕ ಪಂಚಾಯತ್ ಲೆಕ್ಕ ಸಹಾಯಕರಾದ ಸುಪ್ರಿತಾ ಶೆಟ್ಟಿ ಗ್ರಾಮ ಪಂಚಾಯತ್ ಸಿಬ್ಬಂದಿಗಳೊಂದಿಗೆ ಹಾಗೂ ಸ್ವಚ್ಛತಾ ಸಿಬ್ಬಂದಿವರ್ಗದವರೊಂದಿಗೆ ದಿಢೀರ್ ಸ್ಥಳಕ್ಕೆ ಬೇಟಿ ನೀಡಿ; ಅಕ್ರಮವಾಗಿ ಕಸ ಎಸೆದವರ ಮಾಹಿತಿ ಪಡೆದುಕೊಂಡು; ಕಸ ರಸ್ತೆ ಬದಿ ಎಸಗಿದವರಿಗೆ ತಕ್ಷಣ ದೂರವಾಣಿ ಕರೆಯ ಮೂಲಕ ಸ್ಥಳಕ್ಕೆ ಬರಲು ಹೇಳಿ ಸೂಕ್ತ ಮಾಹಿತಿಯೊಂದಿಗೆ ರೂಪಾಯಿ 2,000/- ದಂಡನೆಯನ್ನು ವಸೂಲಿ ಮಾಡಿ ಕಸ ಬಿಸಾಡದಂತೆ ಎಚ್ಚರಿಕೆ ನೀಡಲಾಯಿತು








