ಸಿ.ಎ. ಪರೀಕ್ಷೆ ಉತ್ತೀರ್ಣ

ಸಿ.ಎ. ಪರೀಕ್ಷೆ ಉತ್ತೀರ್ಣ
Facebook
Twitter
LinkedIn
WhatsApp

ಬೆಳ್ತಂಗಡಿ: ಉಜಿರೆ ಗ್ರಾಮ ಪಂಚಾಯತ್ ಸದಸ್ಯ ಓಡಲ ಯು. ಮಹಮ್ಮದ್ ಶರೀಫ್ ಹಾಗೂ ಹಸೀನಾ ಬಾನು ದಂಪತಿಗಳ ಪುತ್ರ ಶೇಕ್ ಮಹಮ್ಮದ್ ಆರಿಫ್ ರವರು ಜನವರಿ 2026ರಲ್ಲಿ ಜರಗಿದ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ.) ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಿ.ಕಾಂ. ಪದವಿಯನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು. ತಮ್ಮ ಸಿ.ಎ. ಆರ್ಟಿಕಲ್ ಶಿಪ್ ತರಬೇತಿಯನ್ನು ಬೆಂಗಳೂರಿನ ಆರ್. ನಟರಾಜನ್ ಅಂಡ್ ಕೋ ಸಂಸ್ಥೆಯಲ್ಲಿ ಪೂರೈಸಿ ಸಿ.ಎ. ಪದವಿಯನ್ನು ಪ್ರಥಮ ಪರೀಕ್ಷೆಯಲ್ಲೇ ಪೂರೈಸಿರುತ್ತಾರೆ. ಪ್ರಸ್ತುತ ಇವರು ಬೆಂಗಳೂರಿನ ಖ್ಯಾತ ಬಿಗ್ ಫೋರ್ ಕಂಪನಿಯ ಒಂದು ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

Latest News

Related Posts