ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಹೇರ ನಿವಾಸಿ ಹಾಗೂ ಕನ್ಯಾಡಿ ಸೇವಾಭಾರತಿ ಸಂಸ್ಥೆಯ ಸಿಬ್ಬಂದಿಯಾದ ಕುಸುಮಾಧರ ಹಾಗೂ ಪೂರ್ಣಿಮಾರವರ ಶುಭವಿವಾಹವು ಕೊರಿಂಜ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ಎಪ್ರಿಲ್ 20ರಂದು ನೆರವೇರಿತು. ಈ ಸಂದರ್ಭದಲ್ಲಿ ಕನ್ಯಾಡಿಯಲ್ಲಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾoಗರಿಗೆ ನಿರ್ಮಾಣವಾಗುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡಕ್ಕೆ ರೂಪಾಯಿ 15,000/- ಹಾಗೂ ಮೊಗ್ರು ಗ್ರಾಮ ಮುಗೇರಡ್ಕ ಅಲೆಕ್ಕಿ ಜೈ ಶ್ರೀರಾಮ್ ಸೇವಾ ಟ್ರಸ್ಟ್ (ರಿ.) ಶ್ರೀ ರಾಮ ಶಿಶುಮಂದಿರದ ಮಕ್ಕಳ ಶಿಕ್ಷಣ ಮತ್ತು ಅನ್ನಯಜ್ಞ ಯೋಜನೆಗೆ ರೂಪಾಯಿ 5,000/- ದೇಣಿಗೆಯನ್ನು ನೀಡಿ ಸಹಕರಿಸಿದ್ದಾರೆ. ಕನ್ಯಾಡಿ ಸೇವಾಭಾರತಿ ಕೇಂದ್ರದ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಕೆ. ವಿನಾಯಕ ರಾವ್, ಖಜಾoಚಿ ಎ. ಜೈರಾಜ್ ಸಾಲ್ಯಾನ್ ಹಾಗೂ ಸಿಬ್ಬಂದಿ ವರ್ಗ; ಮೊಗ್ರು ಗ್ರಾಮ ಅಲೆಕ್ಕಿ ಶಿಶುಮಂದಿರ ಸೇವಾ ಟ್ರಸ್ಟ್ನ ಪದಾಧಿಕಾರಿಗಳು ಸಂಸ್ಥೆಯ ಪರವಾಗಿ ದೇಣಿಗೆಯನ್ನು ಸ್ವೀಕರಿಸಿ ನವ ಜೋಡಿಗಳಿಗೆ ಶುಭ ಹಾರೈಸಿ, ಕೃತಜ್ಞತೆ ಸಲ್ಲಿಸಿದರು.









